ಒಂದು ದಿನ ಮೊದಲೇ ಬೆಳಗಾವಿ ಚಳಿಗಾಲ ಅಧಿವೇಶನ ಅಂತ್ಯ: 13 ವಿಧೇಯಕ ಮಂಡನೆ, 9 ಅಂಗೀಕಾರ

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲ ಅಧಿವೇಶ 9 ದಿನಗಳ ಕಾಲ ಯಶಸ್ವಿಯಾಗಿ ನಡೆದಿದೆ. ಒಟ್ಟು 41 ಗಂಟೆ 20 ನಿಮಿಷಗಳ ಕಾಲ ಸದನ ನಡೆದಿದೆ ಎಂದು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರೆ ಹೇಳಿದ್ದಾರೆ.

ಒಂದು ದಿನ ಮೊದಲೇ ಬೆಳಗಾವಿ ಚಳಿಗಾಲ ಅಧಿವೇಶನ ಅಂತ್ಯ: 13 ವಿಧೇಯಕ ಮಂಡನೆ, 9 ಅಂಗೀಕಾರ
ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರೆ
Follow us
| Updated By: ವಿವೇಕ ಬಿರಾದಾರ

Updated on:Dec 30, 2022 | 2:41 PM

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ (Suvarna Soudha) ನಡೆದ ಚಳಿಗಾಲ ಅಧಿವೇಶನ (Assembly Winter Session) ನಿನ್ನೆ (ಡಿ.29) ರಂದು ಮುಕ್ತಾಯವಾಯಿತು. ನಿಗದಿತ ದಿನಾಂಕಕ್ಕಿಂತ ಒಂದು ದಿನದ ಮುಂಚಯೇ ಅಧಿವೇಶನವನ್ನು ಅಂತ್ಯ ಮಾಡಲಾಗಿದೆ. ಇನ್ನೂ ಅಧಿವೇಶನದ ಕುರಿತು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರೆ (Vishweshwar Hegde Kageri) ಮಾತನಾಡಿ 9 ದಿನಗಳ ಕಾಲ ಚಳಿಗಾಲದ ಅಧಿವೇಶನ ಯಶಸ್ವಿಯಾಗಿ ನಡೆದಿದೆ. ಒಟ್ಟು 41 ಗಂಟೆ 20 ನಿಮಿಷಗಳ ಕಾಲ ಸದನ ನಡೆದಿದೆ. ಆಡಳಿತ ಪಕ್ಷದವರು ಹಾಗೂ ವಿಪಕ್ಷದವರು ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಸರ್ಕಾರದಲ್ಲಿ ಈವರೆಗೆ ಬೆಳಗಾವಿಯಲ್ಲಿ 29 ದಿನ ಸದನ ನಡೆದಿದೆ. ಈ ವರ್ಷ ವಿಧಾನ ಸೌಧ ಮತ್ತು ಸುವರ್ಣಸೌಧ ಎರಡು ಸೇರಿ ಒಟ್ಟು 45 ದಿನಗಳ ಕಾಲ ಅಧಿವೇಶನ ನಡೆದಿದೆ. ಚಳಿಗಾಲದ ಅಧಿವೇಶನದಲ್ಲಿ 13 ವಿಧೇಯಕಗಳನ್ನು ಮಂಡಿಸಿದ್ದೇವೆ. 9 ವಿಧೇಯಕಗಳನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಕರ್ನಾಟಕ ಸರ್ಕಾರದ ಸಾಲ ಹೆಚ್ಚಳ, ಮೀಸಲಾತಿ ಘೋಷಣೆಯಲ್ಲಿ ಲೋಪ: ಜೆಡಿಎಸ್​ ನಾಯಕ ಎಚ್​ಡಿ ಕುಮಾರಸ್ವಾಮಿ ಕಳವಳ

ಈ ಬಾರಿ ಸದನದಲ್ಲಿ ಆರ್.ವಿ.ದೇಶಪಾಂಡೆಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲಾಗಿದೆ. ಸದನದಲ್ಲಿ ಮಹಾರಾಷ್ಟ್ರ-ಕರ್ನಾಟಕದ ಗಡಿ ಬಗ್ಗೆ ಚರ್ಚೆಯಾಗಿ ಸದನದಲ್ಲಿ ನಿರ್ಣಯ ಕೈಗೊಂಡಿದ್ದೇವೆ. ಅಧಿವೇಶನಕ್ಕೆ ಕೆಲವು ಶಾಸಕರು ಅನುಮತಿ ಪಡೆದು ಗೈರಾಗಿದ್ದರು. ಕೆಲವರು ಸದನಕ್ಕೆ ಹಾಜರಾಗದಿದ್ದದ್ದು ಶೋಭೆ ತರುವಂತಹದಲ್ಲ. ಕೊನೆಯ 2 ದಿನ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗಿತ್ತು ಎಂದು ಹೇಳಿದ್ದಾರೆ.

80 ಸಂಘಟನೆಗಳು ಪ್ರತಿಭಟನೆ ಮಾಡಿ ಹಲವು ಬೇಡಿಕೆಗಳನ್ನ ಇಟ್ಟಿವೆ. ಸದನ ನೋಡಲು 20 ಸಾವಿರ ಜನರು ಆಗಮಿಸಿದ್ದು ವಿಶೇಷವಾಗಿದೆ. ಸದನದಲ್ಲಿ ಮಹಾರಾಷ್ಟ್ರ-ಕರ್ನಾಟಕದ ಗಡಿ ಬಗ್ಗೆ ಚರ್ಚೆಯಾಗಿ ಸದನದಲ್ಲಿ ನಿರ್ಣಯ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಆರಂಭದಲ್ಲೆ ಉತ್ತರ ಕರ್ನಾಟಕದ ವಿಷಯಗಳ ಚರ್ಚೆಗೆ ಅವಕಾಶ ಕಲ್ಪಸಲು ಕ್ರಮ‌ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ನೀಡಿರುವುದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಪರಿಕಲ್ಪನೆಗೆ ಪೂರಕ: ಪ್ರಲ್ಹಾದ್ ಜೋಶಿ

700 ಜನ ಸಿಬ್ಬಂದಿಗಳು. 40 ಶಾಸಕರು ಈ ಅಧಿವೇಶನದಲ್ಲಿ ಬೂಸ್ಟರ್ ಡೋಸ್ ಪಡೆದಿದ್ದಾರೆ. ಸದನದಲ್ಲಿ ಶಾಸಕರ ಗೈರು ಹಾಜರಿ ನೋವಿನ ಸಂಗತಿ. ಆಯ್ಕೆಯಾಗಿ ಬಂದ ಶಾಸಕರು ಅವರೇ ಅರ್ಥ ಮಾಡಿಕೊಳ್ಳಬೇಕು. ಆ ಪಕ್ಷಗಳೇ ಜವಾಬ್ದಾರಿ ತಗೆದುಕೊಳ್ಳಬೇಕು  ಎಂದು ವಿಷಾದ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:37 pm, Fri, 30 December 22