ತಿಂಗಳಲ್ಲಿ ಮಹದಾಯಿ, ಕಳಸಾ ಬಂಡೂರಿ ಜಾರಿ ಮಾಡ್ತೀವಿ ಎಂದು ಯಡಿಯೂರಪ್ಪ ಸುಳ್ಳು ಭರವಸೆ ನೀಡಿದರು -M.B.ಪಾಟೀಲ್ ಟೀಕೆ
ನಾವೂ ಯಾರು ಟೀಕೆ ಮಾಡ್ತಿದ್ದಾರೋ ಅವರ ಬಗ್ಗೆ ಮಾತಾಡೋಕೆ ಹೋಗಲ್ಲ. ಗೋವಾ ರಾಜ್ಯದ ಹಿತ ಕಾಪಾಡಲು ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಗೋವಾದಲ್ಲಿ ಅಧಿಕಾರಕ್ಕೆ ಬಂದರೇ ನಾವೂ ಮಾಡ್ತಿವಿ ಅಂದಿದ್ದಾರೆ. ಹೋದ ಸಲವೇ ನಾವೂ 17 ಸೀಟ್ ಬಂದಿದ್ವಿ. -M.B.ಪಾಟೀಲ್
ಬೆಂಗಳೂರು: ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಮಹದಾಯಿ(Mahadayi) ಮತ್ತು ಕಳಾಸ ಬಂಡೂರಿ(Kalasa Banduri Project) ಜಾರಿ ಮಾಡ್ತೀವಿ ಎಂದು ಯಡಿಯೂರಪ್ಪ(BS Yediyurappa) ಹೇಳಿದ್ರು. ಯಡಿಯೂರಪ್ಪ ಏನು ಮಾಡಲಿಲ್ಲ. ಬಿಎಸ್ವೈ ಬರೀ ಸುಳ್ಳು ಭರವಸೆ ನೀಡಿದರು ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ M.B.ಪಾಟೀಲ್(MB Patil) ಟೀಕಿಸಿದ್ದಾರೆ. ಮಹಾದಾಯಿ ವಿಚಾರದಲ್ಲಿ ಗೋವಾ ಪರ ರಾಹುಲ್ ಗಾಂಧಿ ಪ್ರಣಾಳಿಕೆ ಹೊರಡಿಸಿದ್ದಾರೆ ಅಂತಾ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಸಂಬಂಧಿಸಿ MBP ಪ್ರತಿಕ್ರಿಯೆ ನೀಡಿದ್ದಾರೆ.
ನಾವೂ ಯಾರು ಟೀಕೆ ಮಾಡ್ತಿದ್ದಾರೋ ಅವರ ಬಗ್ಗೆ ಮಾತಾಡೋಕೆ ಹೋಗಲ್ಲ. ಗೋವಾ ರಾಜ್ಯದ ಹಿತ ಕಾಪಾಡಲು ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಗೋವಾದಲ್ಲಿ ಅಧಿಕಾರಕ್ಕೆ ಬಂದರೇ ನಾವೂ ಮಾಡ್ತಿವಿ ಅಂದಿದ್ದಾರೆ. ಹೋದ ಸಲವೇ ನಾವೂ 17 ಸೀಟ್ ಬಂದಿದ್ವಿ. ಆದ್ರೆ ಹಣದ ಬಲದಿಂದ ನಮ್ಮಿಂದ ಕಸಿದುಕೊಂಡು ಬಿಜೆಪಿಯವರು ಅಧಿಕಾರ ತೆಗೆದುಕೊಂಡರು. ಗೋವಾದಲ್ಲಿ ಇವತ್ತು ಮಹಿಳೆಯರು ಯುವಕರಿಗೆ ಸೇರಿದಂತೆ ಬಹಳಷ್ಟು ಸಮಸ್ಯೆಗಳಿವೆ. ಈ ಬಾರಿ 27 ರಿಂದ 28 ಸೀಟ್ ಗೆಲ್ಲುತ್ತೇವೆ ಅನ್ನೋ ವಿಶ್ವಾಸವಿದೆ. ಅಂತರ್ ಜಲ ವಿವಾದಕ್ಕೆ ಸಂಬಂಧಿಸಿದಂತೆ ನಮಗೆ ಸಮಸ್ಯೆ ಇದ್ದಂಗೆ ಆ ರಾಜ್ಯದ ಸಮಸ್ಯೆಯೂ ಇರುತ್ತದೆ. ಆದ್ರೆ ನೀರಿನ ವಿಚಾರದಲ್ಲಿ ನಮ್ಮ ರಾಜ್ಯದ ಹಿತ ಬಿಟ್ಟುಕೊಟ್ಟಿಲ್ಲ. ಅದೇ ರೀತಿ ಆ ರಾಜ್ಯದ ನಿಲುವು ಇರುತ್ತದೆ. ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯಲು ನೀರು ಕೇಳ್ತಿರೋದು. ಗೋವಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತುಕತೆ ಮೂಲಕ ಚರ್ಚಿಸಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ. ಕುಡಿಯುವ ನೀರು ನಮ್ಮ ಹಕ್ಕು ಅದನ್ನ ಕೇಳೇ ಕೇಳ್ತೇವೆ ಎಂದು KPCC ಪ್ರಚಾರ ಸಮಿತಿ ಅಧ್ಯಕ್ಷ M.B.ಪಾಟೀಲ್ ತಿಳಿಸಿದ್ರು.
ಅದು ಹೈಕಮಾಂಡ್ ನಿರ್ಧಾರ, ನಾನೇನು ಹೇಳಲು ಆಗಲ್ಲ ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿ ಘೋಷಿಸುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಎಂ.ಬಿ.ಪಾಟೀಲ್, ಅದು ಹೈಕಮಾಂಡ್ ನಿರ್ಧಾರ, ನಾನೇನು ಹೇಳಲು ಆಗಲ್ಲ. ಪಂಜಾಬ್‌ನಲ್ಲಿ ಮೊದಲ ಬಾರಿ ಸಿಎಂ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲೂ ಈ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು.
ಇನ್ನು ಇದೇ ವೇಳೆ ಸರ್ಕಾರ ವೈಫಲ್ಯಗಳನ್ನ ಮುಚ್ಚಿಕೊಳ್ಳಲು ಹಿಜಾಬ್ ವಿವಾದ ತಂದಿದೆ. ಸರ್ಕಾರ ಸಮವಸ್ತ್ರ ನೀತಿಯನ್ನ ಜಾರಿಗೆ ತರಬಾರದಿತ್ತು. ವಿವಾದಕ್ಕೂ ಮೊದಲು ಇದ್ದ ನೀತಿಯನ್ನ ಮುಂದೂವರೆಸಿ ಎಂದು ಹೇಳಿದ್ರು. ಪಕ್ಷಗಳು ಹಿಜಾಬ್ ವಿವಾದದಲ್ಲಿ ರಾಜಕೀಯ ಮಾಡಬಾರ್ದು. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ನಾವು ಮತ್ತೆ ಅಧಿಕಾರಕ್ಕೆ ಬಂದು ಮಾಧರಿ ಸರ್ಕಾರ ನೀಡ್ತೇವೆ. ಅಧಿಕಾರಕ್ಕೆ ಬಂದು ಜನರಿಗೆ ಉತ್ತಮ ಆಡಳಿತವನ್ನ ನೀಡ್ತ್ತೇವೆ ಎಂದರು.
ಇದನ್ನೂ ಓದಿ: Passenger Vehicle Sales: 2022ರ ಜನವರಿಯಲ್ಲಿ ಪ್ರಯಾಣಿಕರ ವಾಹನಗಳ ಮಾರಾಟ ಶೇ 10ರಷ್ಟು ಕುಸಿತ