ನಾಗಸಂದ್ರ-ಗೊರಗುಂಟೆಪಾಳ್ಯ ಮೇಲ್ಸೇತುವೆಯಲ್ಲಿ ಲೋಡ್ ಟೆಸ್ಟ್; ಸರ್ವಿಸ್ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ

ಲೋಡ್ ಟೆಸ್ಟ್ ಹಿನ್ನೆಲೆ ಫ್ಲೈಓವರ್ ಕೆಳಗಿನ 2 ರಸ್ತೆಯೂ ಬಂದ್ ಮಾಡಲಾಗಿದೆ. ಸರ್ವಿಸ್ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ನಾಗಸಂದ್ರ-ಗೊರಗುಂಟೆಪಾಳ್ಯ ಮೇಲ್ಸೇತುವೆಯಲ್ಲಿ ಲೋಡ್ ಟೆಸ್ಟ್; ಸರ್ವಿಸ್ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Feb 07, 2022 | 11:23 AM

ಬೆಂಗಳೂರು: ನಾಗಸಂದ್ರ-ಗೊರಗುಂಟೆಪಾಳ್ಯ ಮೇಲ್ಸೇತುವೆಯಲ್ಲಿ(Nagasandra and Goraguntepalya Flyover) ಲೋಡ್ ಟೆಸ್ಟ್ ನಡೆಯುತ್ತಿದೆ. 48 ಗಂಟೆ ಕಾಲ ಭಾರವಾದ ವಸ್ತು ತುಂಬಿದ ಟಿಪ್ಪರ್ ನಿಲ್ಲಿಸಿ ಮೇಲ್ಸೇತುವೆಯಲ್ಲಿ ಲೋಡ್ ಟೆಸ್ಟ್ ಮಾಡಲಾಗುತ್ತಿದೆ. ಲೋಡ್ ಟೆಸ್ಟ್ ಹಿನ್ನೆಲೆ ಫ್ಲೈಓವರ್ ಕೆಳಗಿನ 2 ರಸ್ತೆಯೂ ಬಂದ್ ಮಾಡಲಾಗಿದೆ. ಸರ್ವಿಸ್ ರಸ್ತೆಯಲ್ಲಿ(Service Road) ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ದೆಹಲಿಯಿಂದ ಬಂದ ಇಂಜಿನಿಯರ್ ಟೀಮ್‌ನಿಂದ ಟೆಸ್ಟಿಂಗ್ ನಡೆಯುತ್ತಿದ್ದು ಇಂಜಿನಿಯರ್ ಟೀಮ್ ಒಪ್ಪಿಗೆ ಬಳಿಕ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗುತ್ತೆ.

ಇನ್ನು ಪೀಣ್ಯ ಮೇಲ್ಸೇತುವೆಯಲ್ಲಿ ಲೋಡ್ ಟೆಸ್ಟಿಂಗ್ ಆರಂಭವಾದ ಹಿನ್ನೆಲೆ ನಾಳೆಯಿಂದ ತುಮಕೂರು ರಸ್ತೆಯಲ್ಲಿ ಮತ್ತಷ್ಟು ಟ್ರಾಫಿಕ್ ಜಾಮ್ ಉಂಟಾಗಲಿದೆ. ಇಷ್ಟು ದಿನದವರೆಗೆ ಮೇಲ್ಸೇತುವೆಯಷ್ಟೇ ಬಂದ್ ಮಾಡಲಾಗಿತ್ತು. ಇಂದಿನಿಂದ ಮುಖ್ಯರಸ್ತೆ ಕೂಡ ಬಂದ್ ಆಗಲಿದೆ. ಹೀಗಾಗಿ ನಾಳೆಯಿಂದ ತುಮಕೂರು ರಸ್ತೆಯಲ್ಲಿ ಮತ್ತಷ್ಟು ಟ್ರಾಫಿಕ್ ಹೆಚ್ಚಾಗಲಿದೆ. ಕೇವಲ ಸರ್ವಿಸ್ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು ಪೀಣ್ಯ ಫ್ಲೈಓವರ್ನಲ್ಲಿ ಈ ವಾರಾಂತ್ಯಕ್ಕೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: IND vs WI: ಮೈದಾನದಲ್ಲಿ ಕೊಹ್ಲಿ-ರೋಹಿತ್ ನಡುವೆ ನಡೆದ ಆ ಘಟನೆ ಕಂಡು ಶಾಕ್ ಆದ ಫ್ಯಾನ್ಸ್

ನಟಿ ಮೇಲೆ ದೌರ್ಜನ್ಯ ಪ್ರಕರಣದ ತನಿಖಾಧಿಕಾರಿಗಳ ವಿರುದ್ಧ ಸಂಚು: ಮಲಯಾಳಂ ನಟ ದಿಲೀಪ್‌ಗೆ ನಿರೀಕ್ಷಣಾ ಜಾಮೀನು