Passenger Vehicle Sales: 2022ರ ಜನವರಿಯಲ್ಲಿ ಪ್ರಯಾಣಿಕರ ವಾಹನಗಳ ಮಾರಾಟ ಶೇ 10ರಷ್ಟು ಕುಸಿತ
2022r ಜನವರಿಯಲ್ಲಿ ಪ್ರಯಾಣಿಕರ ವಾಹನಗಳ ಮಾರಾಟ ಸಂಖ್ಯೆಯು ಶೇ 10ರಷ್ಟು ಇಳಿಕೆ ಆಗಿದೆ. ಇದರ ಹಿಂದಿನ ಕಾರಣಗಳೇನು ಎಂಬುದರ ವಿವರ ಇಲ್ಲಿದೆ.
ಪ್ರಯಾಣಿಕರ ವಾಹನಗಳ ಮಾರಾಟವು ಕಳೆದ ವರ್ಷದ ಜನವರಿಗೆ ಹೋಲಿಸಿದರೆ 2022ರ ಜನವರಿಯಲ್ಲಿ ಶೇ 10ರಷ್ಟು ಇಳಿಕೆ ಆಗಿದೆ. ಸೆಮಿಕಂಡಕ್ಟರ್ ಕೊರತೆಯ (Semiconductor Shortage) ಕಾರಣಕ್ಕೆ ಈ ಕಂಪೆನಿಗಳ ಉತ್ಪಾದನೆ ಕುಸಿತವಾಗಿದೆ, ಎಂದು ಆಟೋಮೊಬೈಲ್ ಡೀಲರ್ಗಳ ಒಕ್ಕೂಟವಾದ FADA ಸೋಮವಾರ ತಿಳಿಸಿದೆ. ಪ್ರಯಾಣಿಕರ ವಾಹನಗಳ (Passenger Vehicle) ಮಾರಾಟ ಕಳೆದ ತಿಂಗಳು 2,58,329ಕ್ಕೆ ಕುಸಿತವಾಗಿದೆ. 2021ರ ಜನವರಿಯಲ್ಲಿ ಮಾರಾಟವಾಗಿದ್ದ 2,87,424 ಯೂನಿಟ್‌ಗೆ ಹೋಲಿಸಿದಲ್ಲಿ ಶೇ 10.12ರಷ್ಟು ಇಳಿಕೆ ಆಗಿದೆ. “ಬೇಡಿಕೆ ಹೊರತಾಗಿಯೂ ಪ್ರಯಾಣಿಕರ ವಾಹನಗಳು ಸೆಮಿಕೊಂಡಕ್ಟರ್ ಕೊರತೆಯನ್ನು ಎದುರಿಸಿದವು. ಅದರ ಪರಿಣಾಮವಾಗಿ ಆರೋಗ್ಯಕರ ದಾಸ್ತಾನು ಇರಲಿಲ್ಲ,” ಎಂದು FADA ಅಧ್ಯಕ್ಷರಾದ ವಿಂಕೇಶ್ ಗುಲಾಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ತಿಂಗಳು ದ್ವಿಚಕ್ರ ವಾಹನಗಳ ಮಾರಾಟ ಶೇ 13.44ರಷ್ಟು ಕುಸಿದು, 10,17,785 ಯೂನಿಟ್‌ಗೆ ತಲುಪಿದೆ. 2021ರ ಜನವರಿಯಲ್ಲಿ 11,75,832 ಯೂನಿಟ್ ಮಾರಾಟವಾಗಿತ್ತು.
ಗ್ರಾಮೀಣ ಭಾಗದಲ್ಲಿನ ಸಮಸ್ಯೆಗಳು, ಬೆಲೆ ಏರಿಕೆ ಮತ್ತು ಒಮಿಕ್ರಾನ್ ಅಲೆಯ ಹಿನ್ನೆಲೆಯಲ್ಲಿ ಈ ಸೆಗ್ಮೆಂಟ್ನ ಮಾರಾಟ ಕುಸಿತವಾಗಿದೆ. ಟ್ರ್ಯಾಕ್ಟರ್ ಮಾರಾಟ ಕಳೆದ ತಿಂಗಳು 55,421 ಯೂನಿಟ್ ಟ್ರ್ಯಾಕ್ಟರ್ ಮಾರಾಟ ಆಗಿದೆ. 2021ರ ಜನವರಿಯಲ್ಲಿ ಆಗಿದ್ದ 61,485 ಯೂನಿಟ್‌ಗೆ ಹೋಲಿಸಿದಲ್ಲಿ ಶೇ 9.86ರಷ್ಟು ಇಳಿಕೆ ಆಗಿದೆ. ಆದರೆ ವಾಣಿಜ್ಯ ವಾಹನಗಳ ಮಾರಾಟವು ಕಳೆದ ತಿಂಗಳು 67,363 ಯೂನಿಟ್ಗಳಷ್ಟಾಗಿದ್ದು, ಒಂದು ವರ್ಷದ ಹಿಂದಿನ ಇದೇ ಅವಧಿಗೆ ಹೋಲಿಸಿದಲ್ಲಿ ಶೇ 20.52ರಷ್ಟು ಮಾರಾಟದಲ್ಲಿ ಬೆಳವಣಿಗೆ ಆಗಿದೆ.
ವಾಣಿಜ್ಯ ವಾಹನ ಮಾರಾಟದಲ್ಲಿ ಹೆಚ್ಚಳ “ಆರ್ಥಿಕತೆ ಪುನಶ್ಚೇತನ ಆಗುತ್ತಿದ್ದಂತೆ ವಾಣಿಜ್ಯ ವಾಹನಗಳ ಸೆಗ್ಮೆಂಟ್ ವರ್ಷದಿಂದ ವರ್ಷಕ್ಕೆ ಬೆಳವಣಿಗೆ ತೋರಿಸಿದ್ದು, ಅದರಲ್ಲೂ ಎಚ್ಸಿವಿ ಕೆಟಗರಿ ಒಳ್ಳೆ ಬೆಳವಣಿಗೆ ಕಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮೂಲಸೌಕರ್ಯ ವೆಚ್ಚದ ಹೆಚ್ಚಳದ ಹಿನ್ನೆಲೆಯಲ್ಲಿ ಒಟ್ಟಾರೆಯಾಗಿ ವಾಣಿಜ್ಯ ವಾಹನಗಳ ಸೆಗ್ಮೆಂಟ್ನಲ್ಲಿ ಚಲನೆ ಕಂಡುಬಂದಿದೆ,” ಎಂದು ಗುಲಾಟಿ ಹೇಳಿದ್ದಾರೆ. ತ್ರಿಚಕ್ರ ವಾಹನಗಳ ರೀಟೇಲ್ ಮಾರಾಟವು 2022ರ 40,449 ಯೂನಿಟ್ಸ್ಗಳಾಗಿವೆ. 2021ರಲ್ಲಿ ಆಗಿದ್ದ 31,162 ಯೂನಿಟ್ಸ್ ಮಾರಾಟಕ್ಕೆ ಹೋಲಿಸಿದಲ್ಲಿ ಶೇ 29.8ರಷ್ಟು ಬೆಳವಣಿಗೆ ಆಗಿದೆ.
ಎಲ್ಲ ಸೆಗ್ಮೆಂಟ್ಗಳಿಂದ ಸೇರಿ 2021ರ ಜನವರಿಯಲ್ಲಿ ಆಗಿದ್ದ 16,12,130 ಯೂನಿಟ್‌ಗಳ ಮಾರಾಟಕ್ಕೆ ಹೋಲಿಸಿದಲ್ಲಿ ಕಳೆದ ತಿಂಗಳು, ಅಂದರೆ 2022ರ ಜನವರಿಯಲ್ಲಿ ಶೇ 10.69ರಷ್ಟು ಕುಸಿದು, 14,39,747 ಯೂನಿಟ್‌ಗೆ ಮಾರಾಟ ಕುಸಿತ ಕಂಡಿದೆ. ಒಮಿಕ್ರಾನ್ ಅಲೆಯು ದುರ್ಬಲವಾ ಆಗುವುದರೊಂದಿಗೆ ಚಿಲ್ಲರೆ ಮಾರಾಟವು ನಿಧಾನವಾಗಿ ಪಾಸಿಟಿವ್ ಆಗಿ ಬದಲಾಗಲಿದೆ ಎಂದು ಗುಲಾಟಿ ಗಮನ ಸೆಳೆದಿದ್ದಾರೆ.
25,000 ಕಿ.ಮೀ. ಹೊಸ ಹೆದ್ದಾರಿಗಳ ಅಭಿವೃದ್ಧಿ “ಅನೇಕ ಪ್ರಯಾಣಿಕರ ವಾಹನಗಳ OEMಗಳು ರವಾನೆ ಉತ್ತಗೊಳ್ಳುವ ಬಗ್ಗೆ ಭರವಸೆ ನೀಡುವುದರಿಂದ ಸೆಮಿಕಂಡಕ್ಟರ್ ಕೊರತೆಯು ಸರಾಗಗೊಳಿಸುವ ಕೆಲವು ಲಕ್ಷಣಗಳನ್ನು ತೋರಿಸುತ್ತಿದೆ. ಹಾಗಾಗಿ ವಾಹನದ ಲಭ್ಯತೆಯು ಮತ್ತಷ್ಟು ಸುಧಾರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ,” ಎಂಬುದಾಗಿ ಅವರು ಗಮನಿಸಿದ್ದಾರೆ. 25,000 ಕಿಲೋಮೀಟರ್‌ಗಳ ಹೊಸ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಬಜೆಟ್ ಒತ್ತು ನೀಡುವುದರೊಂದಿಗೆ ಇದು ಮೂಲಸೌಕರ್ಯ ವೆಚ್ಚವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೀಗಾಗಿ ವಾಣಿಜ್ಯ ವಾಹನಗಳ ಮಾರಾಟವನ್ನು ಹೆಚ್ಚಿಸುತ್ತದೆ ಎಂದು ಗುಲಾಟಿ ಹೇಳಿದ್ದಾರೆ.
“ಗ್ರಾಮೀಣ ಭಾರತವು ಸಾಮಾನ್ಯವಾಗಿ ದ್ವಿಚಕ್ರ ವಾಹನ ಮತ್ತು ಎಂಟ್ರಿ ಲೆವೆಲ್ ಪ್ರಯಾಣಿಕ ವಾಹನ ವಿಭಾಗಕ್ಕೆ ಪ್ರಮುಖ ಚಾಲನೆ ನೀಡುತ್ತದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆಯಾಗಿ (MSP)ಯಾಗಿ 2.3 ಲಕ್ಷ ಕೋಟಿ ನೇರ ಪಾವತಿಗೆ ಸರ್ಕಾರದ ಯೋಜನೆಯೊಂದಿಗೆ, ಇದು ದ್ವಿಚಕ್ರ ವಾಹನಗಳು, ಎಂಟ್ರಿ ಮಟ್ಟದ ಪ್ರಯಾಣಿಕ ವಾಹನಗಳು ಮತ್ತು ಟ್ರ್ಯಾಕ್ಟರ್ ಮಾರಾಟಕ್ಕೆ ಉತ್ತೇಜಕವಾಗಿ ಕೆಲಸ ಮಾಡಬಹುದು,” ಎಂದು ಅವರು ಸೇರಿಸಿದ್ದಾರೆ. ಮುಂಬರುವ ಮದುವೆ ಋತುವು ದ್ವಿಚಕ್ರ ವಾಹನ ವಿಭಾಗಕ್ಕೆ ಕೆಲವು ಬೇಡಿಕೆ ಪುನಶ್ಚೇತನಕ್ಕೆ ಉತ್ತೇಜಿಸುತ್ತದೆ ಎಂದು ಗುಲಾಟಿ ತಿಳಿಸಿದ್ದಾರೆ ಎಂದು ಮನಿಕಂಟ್ರೋಲ್ನಲ್ಲಿ ವರದಿ ಆಗಿದೆ.
ಇದನ್ನೂ ಓದಿ: Tata Motors: ಟಾಟಾ ಪ್ರಯಾಣಿಕರ ವಾಹನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಜ. 19ರಿಂದ ಜಾರಿಗೆ