
ನವದೆಹಲಿ, ಜುಲೈ 10: ಬ್ರಿಟನ್ ದೇಶದ ಮಾಜಿ ಪ್ರಧಾನಿ ಹಾಗೂ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ (Rishi Sunak) ಅವರು ಗೋಲ್ಡ್ಮ್ಯಾನ್ ಸ್ಯಾಕ್ಸ್ ಕಂಪನಿಗೆ ಕೆಲಸಕ್ಕೆ ಸೇರಿದ್ದಾರೆ. ನ್ಯೂಯಾರ್ಕ್ ಮೂಲದ ಈ ಕಂಪನಿಯಲ್ಲಿ ಸೀನಿಯರ್ ಅಡ್ವೈಸರ್ ಆಗಿ ಅವರು ಕೆಲಸ ಮಾಡಲಿದ್ದಾರೆ. ಗೋಲ್ಡ್ಮ್ಯಾನ್ ಸ್ಯಾಕ್ಸ್ ಕಂಪನಿಯ ಕ್ಲೈಂಟ್ಗಳಿಗೆ ಸ್ಥೂಲ ಆರ್ಥಿಕತೆ (ಮ್ಯಾಕ್ರೊ ಎಕನಾಮಿಕ್) ಮತ್ತು ಜಾಗತಿಕ ರಾಜಕೀಯ ಅಂಶಗಳ ಕುರಿತು ಸಲಹೆಗಳನ್ನು ನೀಡುವ ಕಾಯಕ ಅವರದ್ದು.
ಮೂಲತಃ ಹಣಕಾಸು ಕ್ಷೇತ್ರದಿಂದಲೇ ಬಂದಿದ್ದ ರಿಷಿ ಸುನಕ್ 2020ರ ಫೆಬ್ರುವರಿಯಿಂದ 2022ರ ಜುಲೈವರೆಗೆ ಬ್ರಿಟನ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು. 2022ರ ಅಕ್ಟೋಬರ್ನಿಂದ 2024ರ ಜುಲೈವರೆಗೆ ಪ್ರಧಾನಿಯಾಗಿಯೂ ಕೆಲಸ ಮಾಡಿದ್ದಾರೆ. ನಂತರ ನಡೆದ ಚುನಾವಣೆಯಲ್ಲಿ ಅವರ ಪಕ್ಷ ಅಧಿಕಾರ ಕಳೆದುಕೊಂಡಿತು.
ಇದನ್ನೂ ಓದಿ: US Student Visa: ಅಮೆರಿಕದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತೀಯರಿಗೆ ಗುಡ್ ನ್ಯೂಸ್, US ವೀಸಾ ಪ್ರಕ್ರಿಯೆ ಪುನರಾರಂಭ
ಕುತೂಹಲ ಎಂದರೆ, ರಿಷಿ ಸುನಕ್ ಅವರು ಮೊದಲು ವೃತ್ತಿಜೀವನ ಆರಂಭಿಸಿದ್ದು ಗೋಲ್ಡ್ಮ್ಯಾನ್ ಸ್ಯಾಕ್ಸ್ ಕಂಪನಿಯಿಂದಲೇ. ಈಗ ಮರಳಿ ಗೂಡಿಗೆ ಎಂಬಂತೆ ಅದೇ ಕಂಪನಿಗೆ ಸೀನಿಯರ್ ಅಡ್ವೈಸರ್ ಆಗಿ ಮರಳಿದ್ದಾರೆ.
ರಿಷಿ ಸುನಕ್ ಅವರು ಕಾರ್ಪೊರೇಟ್ ಕೆಲಸಕ್ಕೆ ಮರುಸೇರ್ಪಡೆಯಾಗಿರುವುದು ಹಲವು ಮೀಮ್ಸ್ ಸೃಷ್ಟಿಗೆ ಕಾರಣವಾಗಿದೆ. ಸುನಕ್ ಅವರ ಮಾವ ಇನ್ಫೋಸಿಸ್ ಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ ಅಂಶವನ್ನೇ ಇಟ್ಟುಕೊಂಡು ನಾನಾ ರೀತಿಯ ತಮಾಷೆಗಳನ್ನು ಜನರು ಮಾಡುತ್ತಿದ್ದಾರೆ.
Rishi sunak first day at goldman sachs pic.twitter.com/V6GCn9p5Fl
— SwatKat💃 (@swatic12) July 9, 2025
‘ನಿಮ್ಮ ಮಾವ ವಾರಕ್ಕೆ 70 ಗಂಟೆ ಕೆಲಸ ಮಾಡಲು ನಿಮ್ಮನ್ನು ಬಲವಂತಪಡಿಸಿರಬಹುದೆ’ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ‘ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆನ್ನುವ ನಿಯಮ ಪಾಲಿಸಲು ರಿಷಿ ಸುನಕ್ ಗೋಲ್ಡ್ಮ್ಯಾನ್ ಸ್ಯಾಕ್ಸ್ಗೆ ಸೇರಿದ್ದಾರೆ’ ಎಂದು ಮತ್ತೊಬ್ಬರು ಕುಚೋದ್ಯ ಮಾಡಿದ್ದಾರೆ.
ಇದನ್ನೂ ಓದಿ: ಸ್ನೇಹಿತನಿಗೆ ಕಾನೂನು ತೊಂದರೆ; ಇಡೀ ದೇಶಕ್ಕೆ ಟ್ಯಾರಿಫ್ ಕಟ್ಟಳೆ ಹಾಕಿದ ಡೊನಾಲ್ಡ್ ಟ್ರಂಪ್
ರಿಷಿ ಸುನಕ್ ಇನ್ಫೋಸಿಸ್ಗೆ ಯಾಕೆ ಸೇರಲಿಲ್ಲ? ನಾರಾಯಣಮೂರ್ತಿ ಅವರ ಕೆಲಸದ ಅವಧಿ ಬಗ್ಗೆ ಭಯದಿಂದ ಸೇರಲಿಲ್ಲವಾ? ಎಂದು ಮತ್ತೊಬ್ಬ ಸೋಷಿಯಲ್ ಮೀಡಿಯಾ ಬಳಕೆದಾರ ತಮಾಷೆ ಮಾಡಿದ್ದಾರೆ.
Rishi Sunak has joined Goldman Sachs to complete the quota of 70 hours of work per week.
— Aditya Singh (@Aditya_Singh_45) July 9, 2025
ವಾರಕ್ಕೆ 100 ಗಂಟೆ ಕೆಲಸ ಮಾಡಬೇಕು ಎಂದು ಮಾವನ ನಾರಾಯಣ ಮೂರ್ತಿ ಅವರ ಷರತ್ತನ್ನು ಪೂರ್ಣಗೊಳಿಸಲು ರಾಜಕಾರಣಿಯಾಗಿ ಸಾಧ್ಯವಿಲ್ಲದ್ದರಿಂದ ಕೆಲಸಕ್ಕೆ ಸೇರಿದ್ದಾರೆ ಸುನಕ್ ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Thu, 10 July 25