Meta Layoffs: ವಾಟ್ಸಾಪ್, ಫೇಸ್​ಬುಕ್​ನಿಂದ 3ನೇ ಸುತ್ತಿನ ಲೇ ಆಫ್; ತಲೆ ಮೇಲೆ ಕೈಹೊತ್ತ ಮೆಟಾ ಉದ್ಯೋಗಿಗಳು

Global Tech Companies Job Cut Focus: ಜಾಗತಿಕ ದೈತ್ಯ ಕಂಪನಿಗಳು ಉದ್ಯೋಗ ಕಡಿತದ ಪೈಪೋಟಿಗೆ ಬಿದ್ದಂತಿದೆ. ಅಮೇಜಾನ್ 27,000 ಮಂದಿಗೆ ಲೇ ಆಫ್ ಮಾಡಿ ಮತ್ತೊಂದು ಸುತ್ತಿಗೆ ನಡೆದಿದೆ. ಮೆಟಾ ಪ್ಲಾಟ್​ಫಾರ್ಮ್ ಕೂಡ 21,000 ಮಂದಿಯನ್ನು ಮನೆಗೆ ಕಳುಹಿಸಿ ಈಗ ಇನ್ನಷ್ಟು ಲೇ ಆಫ್ ನಡೆಸುತ್ತಿದೆ.

Meta Layoffs: ವಾಟ್ಸಾಪ್, ಫೇಸ್​ಬುಕ್​ನಿಂದ 3ನೇ ಸುತ್ತಿನ ಲೇ ಆಫ್; ತಲೆ ಮೇಲೆ ಕೈಹೊತ್ತ ಮೆಟಾ ಉದ್ಯೋಗಿಗಳು
ಮೆಟಾ ಪ್ಲಾಟ್​ಫಾರ್ಮ್
Follow us
|

Updated on:Apr 19, 2023 | 2:33 PM

ನವದೆಹಲಿ: ಮೆಟಾ ಪ್ಲಾಟ್​ಫಾರ್ಮ್ ಸಂಸ್ಥೆಯ ಲೇ ಆಫ್ ದಾಹ ಮುಂದುವರಿದಿದೆ. ವಾಟ್ಸಾಪ್, ಫೇಸ್​ಬುಕ್, ಇನ್ಸ್​ಟಾಗ್ರಾಮ್ ಮತ್ತು ರಿಯಾಲಿಟಿ ಲ್ಯಾಬ್ಸ್ ಒಳಗೊಂಡಿರುವ ಮೆಟಾ ಪ್ಲಾಟ್​ಫಾರ್ಮ್​ನಲ್ಲಿ (Meta Platforms) ಮ್ಯಾನೇಜ್ಮೆಂಟ್ 3ನೇ ಸುತ್ತಿನ ಉದ್ಯೋಗಕಡಿತ ಕಾರ್ಯಕ್ಕೆ ಅಣಿಯಾಗಿದೆ. ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಿ ಸಂಸ್ಥೆಯನ್ನು ಇನ್ನಷ್ಟು ಬಲಯುತಗೊಳಿಸುವ ನಿಟ್ಟಿನಲ್ಲಿ ಈ ಜಾಬ್ ಕಟ್ (Layoffs) ಪ್ರಕ್ರಿಯೆಯನ್ನು ಮೆಟಾ ಮುಂದುವರಿಸುತ್ತಿದೆ. ಮಾರ್ಕ್ ಝುಕರ್​ಬರ್ಗ್ ನೇತೃತ್ವದ ಮೆಟಾ ಪ್ಲಾಟ್​ಫಾರ್ಮ್ಸ್ ಕಳೆದ ವರ್ಷದ ನವೆಂಬರ್​ನಲ್ಲಿ 11,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು. ಮಾರ್ಚ್ ತಿಂಗಳಲ್ಲಿ 10,000 ಮಂದಿಯನ್ನು ಲೇ ಆಫ್ ಮಾಡಿತ್ತು. ಹೀಗೆ ಕಳೆದ ಆರು ತಿಂಗಳಲ್ಲಿ ಒಟ್ಟು 21 ಸಾವಿರ ಮೆಟಾ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಈಗ ಅದು ಸಾಲದೆಂಬಂತೆ ಮೂರನೇ ಸುತ್ತಿನ ಲೇ ಆಫ್​ಗೆ ಮೆಟಾ ಕೈ ಹಾಕಿರುವುದು ತಿಳಿದುಬಂದಿದೆ. ಈ ಮೂರನೇ ಸುತ್ತಿನಲ್ಲಿ ಎಷ್ಟು ಮಂದಿ ಕೆಲಸ ಕಳೆದುಕೊಳ್ಳುತ್ತಾರೆ ಎಂಬುದು ಗೊತ್ತಾಗಿಲ್ಲ.

ಹೊಸ ಸುತ್ತಿನ ಉದ್ಯೋಗಿ ಕಡಿತಕ್ಕೆ ಎಲ್ಲಾ ಮ್ಯಾನೇಜರ್​ಗಳಿಗೂ ಸೂಚನೆ ನೀಡಲಾಗಿರುವುದು ಗೊತ್ತಾಗಿದೆ. ಕೆಲಸ ತೆಗೆಯಬಹುದಾದ ಉದ್ಯೋಗಿಗಳನ್ನು ಗುರುತಿಸಿ ಸದ್ಯ ಪಟ್ಟಿ ಮಾಡುವಂತೆ ಮ್ಯಾನೇಜರ್​ಗಳಿಗೆ ತಿಳಿಸಲಾಗಿದೆ. 5 ಸಾವಿರಕ್ಕೂ ಹೆಚ್ಚು ಮಂದಿಯಾದರೂ ಈ ಮೂರನೇ ಸುತ್ತಿನ ಲೇ ಆಫ್​ನಲ್ಲಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಟೆಕ್ ವಿಭಾಗಗಳಿಂದ ಏಪ್ರಿಲ್ ಕೊನೆಯ ವಾರದಲ್ಲಿ ಲೇ ಆಫ್ ಅಗಬಹುದು. ಮೇ ತಿಂಗಳ ಕೊನೆಯಲ್ಲಿ ಮೆಟಾ ಪ್ಲಾಟ್​ಫಾರ್ಮ್​ನ ಬ್ಯುಸಿನೆಸ್ ವಿಭಾಗಗಳಿಂದ ಉದ್ಯೋಗಿಕಡಿತ ಆಗಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿDisney Layoff: 7,000 ಸಾಲಲ್ಲ, ಇನ್ನೊಂದು ಸುತ್ತು ಉದ್ಯೋಗಿಗಳ ವಜಾ ನಿರ್ಧಾರ ಮಾಡಿದ ಡಿಸ್ನಿ; ಕೆಲಸ ಕಳೆದುಕೊಳ್ಳುವವರ ಸಂಖ್ಯೆ ಎಷ್ಟು?

ಈ ಮೂರನೇ ಸುತ್ತಿನ ಜಾಬ್ ಕಟ್ ಬಳಿಕ ಮೆಟಾ ಪ್ಲಾಟ್​ಫಾರ್ಮ್​ನ ವಿವಿಧ ಕಂಪನಿಗಳಲ್ಲಿ ಉಳಿದುಕೊಳ್ಳುವ ಉದ್ಯೋಗಿಗಳನ್ನು ಬೇರೆ ಬೇರೆ ಕಡೆ ಮರುನಿಯೋಜನೆ ಮಾಡುವ ಸಾಧ್ಯತೆ ಇದೆ. ಸದ್ಯ, ಈ ಲೇ ಆಫ್ ಪಟ್ಟಿ ಮಾಡುವ ಕಾರ್ಯ ಸುಗಮವಾಗಲೆಂದು ಅಮೆರಿಕದಲ್ಲಿರುವ ಮೆಟಾ ಕಚೇರಿಯಲ್ಲಿನ ಎಲ್ಲಾ ಉದ್ಯೋಗಿಗಳನ್ನೂ ವರ್ಕ್ ಫ್ರಂ ಹೋಮ್​ಗೆ ಕಳುಹಿಸುವ ಸಾಧ್ಯತೆಯೂ ಇದೆ.

ಅಮೇಜಾನ್​ನಲ್ಲೂ ಮತ್ತೊಂದು ಸುತ್ತಿನ ಲೇ ಆಫ್

ಜಾಗತಿಕ ಇಕಾಮರ್ಸ್ ದೈತ್ಯ ಅಮೇಜಾನ್ ಕೂಡ ಲೇ ಆಫ್ ಭರಾಟೆ ನಿಲ್ಲಿಸುತ್ತಿಲ್ಲ. ಈಗಾಗಲೇ 27,000 ಮಂದಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಿರುವ ಅಮೇಜಾನ್ ಇದೀಗ ಮತ್ತೊಂದು ಸುತ್ತಿನ ಲೇ ಆಫ್ ನಡೆಸಿದೆ. ಅಮೇಜಾನ್​ನ ಜಾಹೀರಾತು ವಿಭಾಗದಲ್ಲಿ ಜಾಬ್ ಕಟ್ ಮಾಡಲಾಗಿದೆ. ಆದರೆ, ಇಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂಬ ಸಂಖ್ಯೆ ಸಿಕ್ಕಿಲ್ಲ.

ಅಮೇಜಾನ್​ನ ರೀಟೇಲ್, ಡಿವೈಸ್, ನೇಮಕಾತಿ ಮತ್ತು ಎಚ್​ಆರ್ ವಿಭಾಗದಲ್ಲಿ ಮೊದಲ ಸುತ್ತಿನ ಲೇ ಆಫ್ ಆಗಿತ್ತು. ಎರಡನೇ ಸುತ್ತಿನಲ್ಲಿ ಜಾಹೀರಾತು, ಕ್ಲೌಡ್ ಕಂಪ್ಯೂಟಿಂಗ್, ಟ್ವಿಚ್ ಲೈವ್ ಸ್ಟ್ರೀಮಿಂಗ್ ಮತ್ತು ಎಚ್​ಅರ್ ತಂಡಗಳಲ್ಲಿ ಜಾಬ್ ಕಟ್ ಆಗಿತ್ತು. ಈ ಎರಡು ಸುತ್ತಿನಲ್ಲಿ ಒಟ್ಟು 27 ಸಾವಿರ ಮಂದಿ ಕೆಲಸ ಕಳೆದುಕೊಂಡಿದ್ದರು. ಕಾಮರ್ಸ್ ಸೆಕ್ಟರ್​ನಲ್ಲಿ ಇದು ಅತಿದೊಡ್ಡ ಲೇ ಆಫ್ ಎಂದು ದಾಖಲೆ ಬರೆದಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:33 pm, Wed, 19 April 23

ತಾಜಾ ಸುದ್ದಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ