Hurun Global Unicorn Index 2023: ಬೈಜುಸ್, ಸ್ವಿಗ್ಗಿ, ಡ್ರೀಮ್11 ಅಗ್ರಮಾನ್ಯ ಭಾರತೀಯ ಯೂನಿಕಾರ್ನ್ಸ್; ಗ್ಯಾಜೆಲೆಸ್ ಸ್ಟಾರ್ಟಪ್ಗಳೂ ಭಾರತದಲ್ಲಿ ಹೆಚ್ಚಿವೆ
Indian Unicorns and Gazelles Startups: ಭಾರತದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಯೂನಿಕಾರ್ನ್ ಕಂಪನಿಗಳಿವೆ. ಹುರೂನ್ಸ್ ಪಟ್ಟಿ ಪ್ರಕಾರ ವಿಶ್ವದಲ್ಲೇ ಅತಿಹೆಚ್ಚು ಯೂನಿಕಾರ್ನ್ ಕಂಪನಿಗಳಿರುವ ದೇಶಗಳಲ್ಲಿ ಭಾರತ 3ನೇ ಸ್ಥಾನ ಪಡೆದಿದೆ. ಅಮೆರಿಕ ಮತ್ತು ಚೀನಾದಲ್ಲಿ ಅತಿಹೆಚ್ಚು ಯೂನಿಕಾರ್ನ್ ಕಂಪನಿಗಳು ಸೃಷ್ಟಿಯಾಗಿವೆ.
ನವದೆಹಲಿ: ಸ್ವಿಗ್ಗಿ, ಡ್ರೀಮ್11 ಮತ್ತು ಬೈಜುಸ್ ಕಂಪನಿಗಳು ಭಾರತದ ಅಗ್ರಮಾನ್ಯ ಯೂನಿಕಾರ್ನ್ಗಳೆನಿಸಿವೆ. ಹುರೂನ್ಸ್ ಯೂನಿಕಾರ್ನ್ ಪಟ್ಟಿಯಲ್ಲಿ ಈ 3 ಕಂಪನಿಗಳು ಸ್ಥಾನ ಪಡೆದಿವೆ. ಜಾಗತಿಕ ರೀಸರ್ಚ್ ಹಾಗು ಲಕ್ಷುರಿ ಪಬ್ಲಿಷಿಂಗ್ ಸಂಸ್ಥೆ ಹುರೂನ್ ರಿಪೋರ್ಟ್ನ ಜಾಗತಿಕ ಯೂನಿಕಾರ್ನ್ ಇಂಡೆಕ್ಸ್ 2023 ಪಟ್ಟಿ (Hurun’s Global Unicorn Index 2023) ಬಿಡುಗಡೆ ಆಗಿದೆ. ಇದರ ಪ್ರಕಾರ ಆನ್ಲೈನ್ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಸ್ವಿಗ್ಗಿ, ಫ್ಯಾಂಟಸಿ ಗೇಮಿಂಗ್ನ ಡ್ರೀಮ್ ಇಲವೆನ್ ಹಾಗೂ ಶಿಕ್ಷಣ ತಂತ್ರಜ್ಞಾನ ಕ್ಷೇತ್ರದ ಬೈಜುಸ್ ಕಂಪನಿಗಳು ಭಾರತದ ಟಾಪ್ ಯೂನಿಕಾರ್ನ್ಗಳಾಗಿವೆ.
ಭಾರತದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಯೂನಿಕಾರ್ನ್ ಕಂಪನಿಗಳಿವೆ. ಹುರೂನ್ಸ್ ಪಟ್ಟಿ ಪ್ರಕಾರ ವಿಶ್ವದಲ್ಲೇ ಅತಿಹೆಚ್ಚು ಯೂನಿಕಾರ್ನ್ ಕಂಪನಿಗಳಿರುವ (Unicorn Startups) ದೇಶಗಳಲ್ಲಿ ಭಾರತ 3ನೇ ಸ್ಥಾನ ಪಡೆದಿದೆ. ಅಮೆರಿಕ ಮತ್ತು ಚೀನಾದಲ್ಲಿ ಅತಿಹೆಚ್ಚು ಯೂನಿಕಾರ್ನ್ ಕಂಪನಿಗಳು ಸೃಷ್ಟಿಯಾಗಿವೆ.
ಜಾಗತಿಕ ಟಾಪ್10 ಯೂನಿಕಾರ್ನ್ ಸ್ಟಾರ್ಟಪ್ಗಳ ಪೈಕಿ ಬೈಜುಸ್
ಹುರೂನ್ಸ್ ಪಟ್ಟಿ ಪ್ರಕಾರ, ವಿಶ್ವದ 10 ಅಗ್ರಮಾನ್ಯ ಯೂನಿಕಾರ್ನ್ ಸ್ಟಾರ್ಟಪ್ಗಳಲ್ಲಿ ಬೈಜುಸ್ ಇದೆ. ಈ ಕಂಪನಿಯ ಮೌಲ್ಯ 22 ಬಿಲಿಯನ್ ಡಾಲರ್ನಷ್ಟಾಗಿದೆ. ಅಂದರೆ, 1.81 ಲಕ್ಷ ಕೋಟಿ ರೂ ಮೌಲ್ಯದ ಕಂಪನಿಯಾಗಿ ಬೈಜುಸ್ ಬೆಳೆದಿದೆ.
ಇನ್ನು, ಸ್ವಿಗ್ಗಿ ಮತ್ತು ಡ್ರೀಮ್11 ಕಂಪನಿಗಳ ಮೌಲ್ಯ 8 ಬಿಲಿಯನ್ ಡಾಲರ್ (65,000 ಕೋಟಿ ರೂ) ಎಂದು ಹುರೂನ್ಸ್ ರಿಸರ್ಚ್ ಸಂಸ್ಥೆ ಅಂದಾಜು ಮಾಡಿದೆ.
ಭಾರತದ ಹೊರಗೆ ಮುಖ್ಯಕಚೇರಿ ಹೊಂದಿರುವ ಭಾರತೀಯ ಯೂನಿಕಾರ್ನ್ಗಳ ಸಂಖ್ಯೆ ಹೆಚ್ಚು
ಹುರೂನ್ಸ್ ಪಟ್ಟಿಯಲ್ಲಿ ಒಂದು ಕುತೂಹಲಕಾರಿ ಸಂಗತಿಯನ್ನು ಗುರುತಿಸಬಹುದು. ಈ ಪಟ್ಟಿ ಪ್ರಕಾರ ಭಾರತೀಯ ಯೂನಿಕಾರ್ನ್ ಸ್ಟಾರ್ಟಪ್ಗಳು ಬಹಳ ದೊಡ್ಡ ಸಂಖ್ಯೆಯಲ್ಲಿ ಬೆಳೆದಿವೆಯಾದರೂ ಇವುಗಳಲ್ಲಿ ಹೆಚ್ಚಿನವರು ಭಾರತದ ಹೊರಗೆ ನೆಲೆಗೊಂಡಿವೆ. ತೆರಿಗೆ, ಉದ್ಯಮಸ್ನೇಹ ವಾತಾವರಣ ಇತ್ಯಾದಿ ಕಾರಣಗಳಿಗೆ ಸಿಂಗಾಪುರ ಮೊದಲಾದ ಕಡೆ ಭಾರತೀಯ ಯೂನಿಕಾರ್ನ್ಗಳು ವಲಸೆ ಹೋಗಿರಬಹುದು.
ಹುರೂನ್ಸ್ ಪಟ್ಟಿ ಪ್ರಕಾರ ಭಾರತದಲ್ಲಿ 138 ಯೂನಿಕಾರ್ನ್ಗಳಿವೆ. ಇದರಲ್ಲಿ 70 ಯೂನಿಕಾರ್ನ್ಗಳು ಭಾರತದ ಹೊರಗೆ ಮುಖ್ಯಕಚೇರಿ ಹೊಂದಿದರೆ, 68 ಯೂನಿಕಾರ್ನ್ಗಳು ಭಾರತದಲ್ಲೇ ನೆಲಸಿರುವುದು ತಿಳಿದುಬಂದಿದೆ.
ಯೂನಿಕಾರ್ನ್ಗಳೆಂದರೆ ಏನು?
ಒಂದು ಸ್ಟಾರ್ಟಪ್ ಕಂಪನಿ ಷೇರುಪೇಟೆಯಲ್ಲಿ ಲಿಸ್ಟ್ ಆಗದೆಯೇ 1 ಬಿಲಿಯನ್ ಡಾಲರ್ (ಸುಮಾರು 800 ಕೋಟಿ ರುಪಾಯಿ) ವ್ಯಾಲ್ಯುಯೇಶನ್ ಪಡೆದರೆ ಅದು ಯೂನಿಕಾರ್ನ್ ಕಂಪನಿ ಎಂದು ಪರಿಗಣಿಸಬಹುದು. ಯೂನಿಕಾರ್ನ್ ಎನಿಸಿದ ಒಂದು ಕಂಪನಿ ಒಮ್ಮೆ ಷೇರುಪೇಟೆಗೆ ಲಿಸ್ಟ್ ಆಗಿಹೋದರೆ ಅದು ಯೂನಿಕಾರ್ನ್ ಎನಿಸುವುದಿಲ್ಲ.
ಇದನ್ನೂ ಓದಿ: Smart Investments: ಶೇ. 18ರಿಂದ 33ರವರೆಗೂ ರಿಟರ್ನ್ ಕೊಡಬಲ್ಲ 5 ಷೇರುಗಳು; ಈಗಲೇ ಖರೀದಿಸಿ ಎಂದು ಅನಾಲಿಸ್ಟ್ಗಳ ಶಿಫಾರಸು
ಅಮೆರಿಕದಲ್ಲಿ 600ಕ್ಕೂ ಹೆಚ್ಚು ಯೂನಿಕಾರ್ನ್ ಕಂಪನಿಗಳಿವೆ. ಚೀನಾದಲ್ಲಿ ಇವುಗಳ ಸಂಖ್ಯೆ 300ಕ್ಕೂ ಹೆಚ್ಚಿದೆ. ಭಾರತದಲ್ಲಿ ಇಂಥ 138 ಯೂನಿಕಾರ್ನ್ಗಳಿವೆ. ಸಿಂಗಾಪುರದಂಥ ದೇಶಗಳಲ್ಲಿ ಯೂನಿಕಾರ್ನ್ಗಳು ಕಡಿಮೆ ಇವೆಯಾದರೂ ಬೇರೆ ದೇಶಗಳ ಯೂನಿಕಾರ್ನ್ಗಳಿಗೆ ಅವು ವೇದಿಕೆ ಆಗಿರುವುದು ಗಮನಾರ್ಹ.
ಭಾರತದಲ್ಲಿ ಹೆಚ್ಚುತ್ತಿವೆ ಗ್ಯಾಜಿಲೆಸ್ ಸ್ಟಾರ್ಟಪ್ಗಳು
ಇನ್ನು, ಯೂನಿಕಾರ್ನ್ನಂತೆ ಗ್ಯಾಜೆಲೆಸ್ (Gazelles Startups) ಎಂದೂ ಸ್ಟಾರ್ಟಪ್ಗಳನ್ನು ವರ್ಗೀಕರಣ ಮಾಡಲಾಗುತ್ತದೆ. ಯೂನಿಕಾರ್ನ್ ಕನಿಷ್ಠ ವ್ಯಾಲ್ಯುಯೇಶ್ 1 ಬಿಲಿಯನ್ ಡಾಲರ್ ಇದ್ದರೆ, ಗ್ಯಾಜೆಲೆಸ್ ಅದರ ಅರ್ಧದಷ್ಟು ವ್ಯಾಲ್ಯುವೇಶನ್ ಇರಬೇಕು. ಅಂದರೆ 500 ಮಿಲಿಯನ್ ಡಾಲರ್ (4,000 ಕೋಟಿ ರೂ) ವ್ಯಾಲುವೇಶನ್ ಇರುವ ಹಾಗೂ ಷೇರುಪೇಟೆಗೆ ಇನ್ನೂ ಎಂಟ್ರಿ ಕೊಡದ ಕಂಪನಿಗಳನ್ನು ಗ್ಯಾಜೆಲೆಸ್ ಎಂದು ಪರಿಗಣಿಸಲಾಗುತ್ತದೆ.
ಅತಿಹೆಚ್ಚು ಗ್ಯಾಜೆಲೆಸ್ ಸ್ಟಾರ್ಟಪ್ಗಳನ್ನು ಹೊಂದಿರುವ ದೇಶಗಳಲ್ಲಿ ಭಾರತ ಮೂರನೆ ಸ್ಥಾನದಲ್ಲಿದೆ. ಈ ಗ್ಯಾಜಿಲೆಸ್ ಕಂಪನಿಗಳಲ್ಲಿ ಹೆಚ್ಚಿನವು 3 ವರ್ಷಗಳಲ್ಲಿ ಯೂನಿಕಾರ್ನ್ ಹಂತಕ್ಕೆ ಬೆಳೆಯುವ ಸಾಧ್ಯತೆ ಇದೆ ಎಂದು ಹುರೂನ್ಸ್ ಪಟ್ಟಿಯಲ್ಲಿ ಅಭಿಪ್ರಾಯಪಡಲಾಗಿದೆ.
ಭಾರತದಲ್ಲಿ ಯೂನಿಕಾರ್ನ್ ಮತ್ತು ಗ್ಯಾಜೆಲೆಸ್ ಸ್ಟಾರ್ಟಪ್ಗಳು ಹೆಚ್ಚು ಸಂಖ್ಯೆಯಲ್ಲಿರುವುದರಿಂದ ಮುಂದಿನ 5 ವರ್ಷಗಳಲ್ಲಿ ಹುರೂನ್ ಗ್ಲೋಬಲ್ 500 ಕಂಪನಿಗಳ ಪಟ್ಟಿಯಲ್ಲಿ ಭಾರತೀಯ ಕಂಪನಿಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯನ್ನು ಹುರೂನ್ಸ್ ಗುರುತಿಸಿದೆ.