Windfall Tax: ದೇಶೀಯ ಕಚ್ಛಾ ತೈಲಕ್ಕೆ 6,400 ರೂ ವಿಂಡ್​ಫಾಲ್ ಟ್ಯಾಕ್ಸ್ ಹೇರಿಕೆ; ಡೀಸೆಲ್ ರಫ್ತು ಸುಂಕ ರದ್ದು; ಸರ್ಕಾರದ ಈ ಕ್ರಮದಿಂದ ಪ್ರಯೋಜನಗಳೇನು?

Export Duty and Windfall Tax: ಒಂದೆಡೆ ದೇಶೀಯವಾಗಿ ಉತ್ಪಾದನೆಯಾಗುವ ಕಚ್ಛಾ ತೈಲಕ್ಕೆ ಸರ್ಕಾರ ವಿಂಡ್​ಫಾಲ್ ತೆರಿಗೆಯನ್ನು ಸೊನ್ನೆಯಿಂದ 6,400 ರೂಗೆ ಹೆಚ್ಚಿಸಿದೆ. ಹಾಗೆಯೇ, ಡೀಸೆಲ್ ರಫ್ತು ಸುಂಕವನ್ನು ಶೇ. 0.5ರಿಂದ ಸೊನ್ನೆಗೆ ಇಳಿಸಿದೆ.

Windfall Tax: ದೇಶೀಯ ಕಚ್ಛಾ ತೈಲಕ್ಕೆ 6,400 ರೂ ವಿಂಡ್​ಫಾಲ್ ಟ್ಯಾಕ್ಸ್ ಹೇರಿಕೆ; ಡೀಸೆಲ್ ರಫ್ತು ಸುಂಕ ರದ್ದು; ಸರ್ಕಾರದ ಈ ಕ್ರಮದಿಂದ ಪ್ರಯೋಜನಗಳೇನು?
ಕಚ್ಛಾ ತೈಲ
Follow us
|

Updated on:Apr 19, 2023 | 11:04 AM

ನವದೆಹಲಿ: ಪೆಟ್ರೋಲಿಯಂ ಕ್ಷೇತ್ರದಲ್ಲಿನ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಮತ್ತು ಈ ಉದ್ಯಮದಲ್ಲಿ ಹೂಡಿಕೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೆಲವೊಂದಿಷ್ಟು ತೆರಿಗೆ ಬದಲಾವಣೆ ಮಾಡಿದೆ. ದೇಶೀಯವಾಗಿ ಉತ್ಪಾದನೆ ಆಗುವ ಕಚ್ಛಾ ತೈಲದ ಮೇಲಿನ ವಿಂಡ್​ಫಾಲ್ ಟ್ಯಾಕ್ಸ್ (ಲಾಭ ತೆರಿಗೆ) ಅನ್ನು ಪರಿಷ್ಕರಿಸಿದೆ. ವಿಂಡ್​ಫಾಲ್ ಟ್ಯಾಕ್ಸ್ ಅಥವಾ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (SAED) ಒಂದು ಟನ್ ಕಚ್ಛಾ ತೈಲಕ್ಕೆ 6,400 ರುಪಾಯಿಯಷ್ಟು ವಿಧಿಸಿದೆ. ಈ ಮುಂಚೆ ಇದಕ್ಕೆ ವಿಂಡ್​ಫಾಲ್ ತೆರಿಗೆ ಹಾಕುತ್ತಿರಲಿಲ್ಲ. ಇದು ದೇಶೀಯವಾಗಿ ಉತ್ಪಾದನೆ ಆಗುವ ಕಚ್ಛಾ ತೈಲಕ್ಕೆ ಮಾತ್ರ. ಆದರೆ, ಪೆಟ್ರೋಲಿಯಂ ಮತ್ತು ಏವಿಯೇಶನ್ ಟರ್ಬೈನ್ ಫುಯೆಲ್ (ATF) ಅಥವಾ ಜೆಟ್ ಇಂಧನಕ್ಕೆ ಈ ತೆರಿಗೆ ದರ ಪರಿಷ್ಕರಣೆ ಇರುವುದಿಲ್ಲ. ಅಂದರೆ ಪೆಟ್ರೋಲಿಯಂ ಮತ್ತು ಜೆಟ್ ಇಂಧನಗಳಿಗೆ ಎಸ್​ಎಇಡಿ (ವಿಂಡ್​ಫಾಲ್ ಟ್ಯಾಕ್ಸ್) ತೆರಿಗೆ ಇರುವುದಿಲ್ಲ. ದೇಶೀಯ ಕಚ್ಛಾ ತೈಲಕ್ಕೆ ವಿಂಡ್​ಫಾಲ್ ಟ್ಯಾಕ್ಸ್ ಇವತ್ತಿನಿಂದಲೇ (ಏಪ್ರಿಲ್ 19) ಜಾರಿಗೆ ಬರುತ್ತದೆ. ಈ ತೆರಿಗೆಯನ್ನು ಪ್ರತೀ 15 ದಿನಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ.

ಕಚ್ಛಾ ತೈಲಕ್ಕೆ ವಿಂಡ್​ಫಾಲ್ ತೆರಿಗೆ: ಸರ್ಕಾರಕ್ಕೇನು ಲಾಭ?

ದೇಶೀಯವಾಗಿ ಉತ್ಪಾದನೆಯಾಗುವ ಕಚ್ಛಾ ತೈಲಕ್ಕೆ ಟನ್​ಗೆ 6,400 ರೂನಷ್ಟು ವಿಂಡ್​ಫಾಲ್ ಟ್ಯಾಕ್ಸ್ ವಿಧಿಸುವುದರಿಂದ ಸರ್ಕಾರಕ್ಕೆ ಸಹಜವಾಗಿ ಹೆಚ್ಚುವರಿ ಆದಾಯ ಹರಿದುಬರುತ್ತದೆ. ಆದರೆ, ದೇಶೀಯವಾಗಿ ತೈಲ ಉತ್ಪಾದನೆ ಮಾಡುವ ಕಂಪನಿಗಳು ಹೆಚ್ಚು ತೆರಿಗೆ ಪಾವತಿಸಬೇಕಿರುವುದರಿಂದ ಅವುಗಳಿಗೆ ಕಷ್ಟ ತರಬಹುದು.

ವಿಂಡ್​ಫಾಲ್ ಟ್ಯಾಕ್ಸ್ ಎಂದರೇನು?

ಒಂದು ವಸ್ತುವನ್ನು ಮಾರಿದಾಗ ಅತಿಯಾದ ಮತ್ತು ಅನಿರೀಕ್ಷಿತವಾದ ಅಧಿಕ ಲಾಭ ಸಿಕ್ಕರೆ ಆ ಹೆಚ್ಚುವರಿ ಲಾಭದ ಹಣಕ್ಕೆ ವಿಶೇಷ ತೆರಿಗೆ ವಿಧಿಸಲಾಗುತ್ತದೆ. ಈ ವಿಶೇಷ ತೆರಿಗೆಯೇ ವಿಂಡ್​ಫಾಲ್ ಟ್ಯಾಕ್ಸ್. ದಿಢೀರ್ ಮಾರುಕಟ್ಟೆ ಸ್ಥಿತಿಯಲ್ಲಿ ಅಸಹಜ ಬದಲಾವಣೆ ಇತ್ಯಾದಿ ಕಾರಣಕ್ಕೆ ಕೆಲವೊಮ್ಮೆ ನಿರೀಕ್ಷೆಮೀರಿ ಬಹಳ ಹೆಚ್ಚು ಲಾಭ ಸಿಗುತ್ತದೆ. ಆದರೆ, ಮಾಮೂಲಿಯಾಗಿ ಸಿಗುವ ತುಸು ಹೆಚ್ಚು ಲಾಭಕ್ಕೆ ಈ ತೆರಿಗೆ ಅನ್ವಯ ಆಗುವುದಿಲ್ಲ.

ಇದನ್ನೂ ಓದಿSmart Investments: ಶೇ. 18ರಿಂದ 33ರವರೆಗೂ ರಿಟರ್ನ್ ಕೊಡಬಲ್ಲ 5 ಷೇರುಗಳು; ಈಗಲೇ ಖರೀದಿಸಿ ಎಂದು ಅನಾಲಿಸ್ಟ್​ಗಳ ಶಿಫಾರಸು

ಸರ್ಕಾರ ವಿಧಿಸಿರುವ ವಿಂಡ್​ಫಾಲ್ ಟ್ಯಾಕ್ಸ್ ವಿಚಾರಕ್ಕೆ ಬರುವುದಾದರೆ, ಅಂತಾರಾಷ್ಟ್ರೀಯ ಕಚ್ಛಾ ತೈಲ ಮಾರುಕಟ್ಟೆ ದಿಢೀರ್ ಬೆಲೆ ಏರಿಕೆ ಕಂಡರೆ ದೇಶೀಯ ಕಚ್ಛಾ ತೈಲ ಉತ್ಪಾದಕರಿಗೆ ಭರ್ಜರಿ ಲಾಭ ಮಾಡಿಕೊಳ್ಳಬಹುದು. ಈ ಹೆಚ್ಚುವರಿ ಲಾಭಕ್ಕೆ ಸರ್ಕಾರ ವಿಶೇಷ ತೆರಿಗೆ ಹಾಕಿದೆ.

ಭಾರತದಲ್ಲಿ ಡೀಸೆಲ್ ರಫ್ತು ಮೇಲಿನ ಸುಂಕ ರದ್ದು

ಡೀಸೆಲ್ ಮೇಲಿನ ರಫ್ತು ಸುಂಕವನ್ನು ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ. ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಸ್​ಎಇಡಿ) ಸೊನ್ನೆಗೆ ಇಳಿಸಲಾಗುತ್ತದೆ. ಸದ್ಯ ಒಂದು ಲೀಟರ್ ಡೀಸಲ್ ರಫ್ತಿನ ಮೇಲೆ 50 ಪೈಸೆಯಷ್ಟು ಎಸ್​ಎಇಡಿ ವಿಧಿಸಲಾಗುತ್ತಿದೆ. ಈ ಹಿಂದಿನ ಪರಿಷ್ಕರಣೆಯಲ್ಲಿ ಡೀಸೆಲ್ ರಫ್ತಿನ ಮೇಲಿನ ತೆರಿಗೆಯನ್ನು 1 ರುಪಾಯಿಯಿಂದ 50 ಪೈಸೆಗೆ ಇಳಿಸಲಾಗಿತ್ತು. ಈಗ ಅದನ್ನು ಸೊನ್ನೆಗೆ ಇಳಿಸಲು ಸರ್ಕಾರ ನಿರ್ಧರಿಸಿದೆ.

ಡೀಸೆಲ್​ಗೆ ರಫ್ತು ಸುಂಕ ರದ್ದು ಮಾಡುವುದರಿಂದ ಯಾರಿಗೆ ಲಾಭ?

ರಫ್ತಾಗುವ ಡೀಸಲ್​ಗೆ ವಿಧಿಸಲಾಗುವ ಸುಂಕವನ್ನು ಸೊನ್ನೆಗೆ ಇಳಿಸಿರುವುದು ದೇಶದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ತುಸು ನಿರಾಳತೆ ತರಬಹುದು ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ, ಡೀಸೆಲ್ ರಫ್ತು ಮಾಡುವ ಕಂಪನಿಗಳಿಗೆ ಸಹಜವಾಗಿ ಅನುಕೂಲವಾಗಲಿದೆ. ಕಡಿಮೆ ಬೆಲೆಗೆ ಡೀಸೆಲ್ ರಫ್ತು ಮಾಡಿ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಅವಕಾಶ ಈ ದೇಶೀಯ ಕಂಪನಿಗಳಿಗೆ ಸಿಗಲಿದೆ.

ಇದನ್ನೂ ಓದಿApple: ಅ್ಯಪಲ್ ಕಾರ್ಡ್​ನಲ್ಲಿ ಸೇವಿಂಗ್ಸ್ ಅಕೌಂಟ್; 10 ಪಟ್ಟು ಹೆಚ್ಚು ಬಡ್ಡಿ; ಅಮೆರಿಕದ ಹಣಕಾಸು ಕ್ಷೇತ್ರದಲ್ಲಿ ಸಂಚಲನ?

ಕೇಂದ್ರ ಸರ್ಕಾರದ ಈ ತೆರಿಗೆ ನೀತಿ ಪರಿಷ್ಕರಣೆಯ ಕ್ರಮದಿಂದ ಆರ್ಥಿಕತೆಗೆ ಅನುಕೂಲತೆ ತರುವ ನಿರೀಕ್ಷೆ ಇದೆ. ಸರ್ಕಾರಕ್ಕೆ ಹೆಚ್ಚುವರಿ ಆದಾಯ ತರುವುದರ ಜೊತೆಗೆ ಪೆಟ್ರೋಲಿಯಂ ವಲಯದಲ್ಲಿ ಹೂಡಿಕೆ ಹೆಚ್ಚಲು ಅನುವು ಮಾಡಿಕೊಡಬಹುದು. ಹಾಗೆಯೇ, ಭಾರತದ ಆರ್ಥಿಕ ಅಭಿವೃದ್ಧಿಯ ಗಾಲಿಗಳಿರುವ ತಯಾರಕಾ ಕ್ಷೇತ್ರಕ್ಕೂ ತುಸು ಪುಷ್ಟಿ ಸಿಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:02 am, Wed, 19 April 23

ತಾಜಾ ಸುದ್ದಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ