AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Apple: ಅ್ಯಪಲ್ ಕಾರ್ಡ್​ನಲ್ಲಿ ಸೇವಿಂಗ್ಸ್ ಅಕೌಂಟ್; 10 ಪಟ್ಟು ಹೆಚ್ಚು ಬಡ್ಡಿ; ಅಮೆರಿಕದ ಹಣಕಾಸು ಕ್ಷೇತ್ರದಲ್ಲಿ ಸಂಚಲನ?

Apple Wallet App SB Account: ಆ್ಯಪಲ್​ನ ವ್ಯಾಲಟ್ ಆ್ಯಪ್​ನಲ್ಲಿ ಆ್ಯಪಲ್ ಕಾರ್ಡ್​ದಾರರು ಸೇವಿಂಗ್ಸ್ ಅಕೌಂಟ್ ತೆರೆಯಬಹುದಾಗಿದ್ದು, ಇದರಲ್ಲಿನ ಹಣಕ್ಕೆ ಅಮೆರಿಕದ ರಾಷ್ಟ್ರೀಯ ಸರಾಸರಿಗಿಂತ 10 ಪಟ್ಟು ಹೆಚ್ಚು ಬಡ್ಡಿ ಕೊಡಲಾಗುತ್ತದೆ.

Apple: ಅ್ಯಪಲ್ ಕಾರ್ಡ್​ನಲ್ಲಿ ಸೇವಿಂಗ್ಸ್ ಅಕೌಂಟ್; 10 ಪಟ್ಟು ಹೆಚ್ಚು ಬಡ್ಡಿ; ಅಮೆರಿಕದ ಹಣಕಾಸು ಕ್ಷೇತ್ರದಲ್ಲಿ ಸಂಚಲನ?
ಅ್ಯಪಲ್ ಕಾರ್ಡ್​ನಲ್ಲಿ ಸೇವಿಂಗ್ಸ್ ಅಕೌಂಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 18, 2023 | 4:32 PM

Share

ಕ್ಯಾಲಿಫೋರ್ನಿಯಾ: ಭಾರತದಲ್ಲಿ ಮೊದಲ ಬಾರಿಗೆ ಸ್ಟೋರ್​ಗಳನ್ನು ತೆರೆದಿರುವ ಆ್ಯಪಲ್ ಸಂಸ್ಥೆ (Apple) ಇದೀಗ ಅಮೆರಿಕದಲ್ಲಿ ಹಣಕಾಸು ಸೇವಾ ಉದ್ಯಮದಲ್ಲಿ ಇನ್ನಷ್ಟು ಸಂಚಲನ ಸೃಷ್ಟಿಸಲು ಸಿದ್ಧವಾಗಿದೆ. ಅಮೆರಿಕದಲ್ಲಿನ ಆ್ಯಪಲ್ ಕಾರ್ಡ್ ಬಳಕೆದಾರರಿಗೆ ಅಧಿಕ ಬಡ್ಡಿ ತರುವ ಹೊಸ ಉಳಿತಾಯ ಖಾತೆ (Savings Bank Account) ತೆರೆಯುವ ಯೋಜನೆಯನ್ನು ಆ್ಯಪಲ್ ಹಾಕಿಕೊಂಡಿದೆ. ಈ ಉಳಿತಾಯ ಖಾತೆಯಲ್ಲಿ ಜಮೆಯಾಗುವ ಹಣಕ್ಕೆ ವಾರ್ಷಿಕ ಶೇ. 4.15ರಷ್ಟು ಬಡ್ಡಿ ಕೊಡಲು ಆ್ಯಪಲ್ ನಿರ್ಧರಿಸಿದೆ. ಇದಕ್ಕಾಗಿ ಜಾಗತಿಕ ಹಣಕಾಸು ದೈತ್ಯ ಗೋಲ್ಡಮನ್ ಸ್ಯಾಕ್ಸ್ ಗ್ರೂಪ್ (Goldman Sachs Group) ಜೊತೆ ಆ್ಯಪಲ್ ಒಪ್ಪಂದ ಮಾಡಿಕೊಂಡಿದೆ.

ಶೇ. 4.15ರ ಬಡ್ಡಿ ದರ ಕಡಿಮೆ ಏನಲ್ಲ. ಅಮೆರಿಕದ ವಿವಿಧ ಕಂಪನಿಗಳು ತಮ್ಮ ಉಳಿತಾಯ ಖಾತೆಗಳಿಗೆ ನೀಡುವ ಬಡ್ಡಿ ದರ ಸರಾಸರಿಯಾಗಿ ಶೇ. 0.37 ಮಾತ್ರ. ಅಂದರೆ ಈ ರಾಷ್ಟ್ರೀಯ ಸರಾಸರಿ ಬಡ್ಡಿ ದರಕ್ಕಿಂತ 10 ಪಟ್ಟು ಹೆಚ್ಚು ಬಡ್ಡಿಯನ್ನು ಆ್ಯಪಲ್ ಕಾರ್ಡ್ ಬಳಕೆದಾರರು ತಮ್ಮ ಉಳಿತಾಯ ಖಾತೆಯ ಹಣಕ್ಕೆ ಪಡೆಯುತ್ತಾರೆ. ಭಾರತದಲ್ಲಿ ವಿವಿಧ ಬ್ಯಾಂಕುಗಳು ಗ್ರಾಹಕರ ಎಸ್​ಬಿ ಖಾತೆಗಳಿಗೆ ನೀಡುವ ಬಡ್ಡಿ ಶೇ. 2-3 ಮಾತ್ರ. ಇದಕ್ಕೆ ಹೋಲಿಸಿದರೂ ಆ್ಯಪಲ್​ನ ಸೇವಿಂಗ್ಸ್ ಅಕೌಂಟ್​ನಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ ಎಂಬುದು ಗಮನಾರ್ಹ.

ಇದನ್ನೂ ಓದಿApple Store: ಒಂದು ಆ್ಯಪಲ್ ಸ್ಟೋರ್ ಉದ್ಘಾಟನೆಗೆ ಇಷ್ಟೊಂದು ಬಿಲ್ಡಪ್ಪಾ? ಭಾರತಕ್ಕೆ ಬಂದಿರುವ ಸಿಇಒ ಟಿಮ್ ಕುಕ್ ತಲೆಯಲ್ಲಿ ಬೇರಿನ್ನೇನಾದರೂ ಇದೆಯಾ?

ಆ್ಯಪಲ್​ನ ಸೇವಿಂಗ್ಸ್ ಅಕೌಂಟ್​ನ ಹಣಕ್ಕೆ ಹೆಚ್ಚು ಬಡ್ಡಿ ಕೊಡಲಾಗುತ್ತದೆ ಎಂಬ ಸುದ್ದಿ ಮತ್ತು ನಿರೀಕ್ಷೆ ಬಹಳ ದಿನಗಳಿಂದ ಇತ್ತು. 2022 ಅಕ್ಟೋಬರ್​ನಲ್ಲಿ ಆ್ಯಪಲ್ ಕಂಪನಿ ತನ್ನ ಆ್ಯಪ್​ನಲ್ಲಿ ಸೇವಿಂಗ್ಸ್ ಅಕೌಂಟ್ ತೆರೆಯಲು ಜನರಿಗೆ ಅವಕಾಶ ಕೊಡುವ ಮೂಲಕ ಹಣಕಾಸು ಸೇವಾ ಕ್ಷೇತ್ರಕ್ಕೆ ಕಾಲಿಟ್ಟಿತ್ತು. ಆ್ಯಪಲ್ ಪೈಪೋಟಿಗೆ ಬರುತ್ತಿರುವುದು ಕಂಡು ಅಮೆರಿಕದ ವಿವಿಧ ಬ್ಯಾಂಕುಗಳು ಬಡ್ಡಿ ಜಿದ್ದಿಗೆ ಬಿದ್ದಿವೆ. ಹೊಸ ಗ್ರಾಹಕರನ್ನು ಸೆಳೆಯಲು ಮತ್ತು ಇರುವ ಗ್ರಾಹಕರನ್ನು ಉಳಿಸಿಕೊಳ್ಳಲು ಕ್ಯಾಷ್ ಬೋನಸ್, ಅಧಿಕ ಬಡ್ಡಿ ದರ ಸೇರಿದಂತೆ ವಿವಿಧ ರೀತಿಯ ಕಸರತ್ತು ನಡೆಸುತ್ತಿವೆ.

ಆ್ಯಪಲ್ ಕಾರ್ಡ್ ಹೊಂದಿರುವವರು ವ್ಯಾಲಟ್ ಆ್ಯಪ್​ನಲ್ಲಿ ಸೇವಿಂಗ್ಸ್ ಅಕೌಂಟ್ ತೆರೆಯಬಹುದು. ಇದಕ್ಕೆ ಯಾವ ಶುಲ್ಕವಾಗಲೀ, ಕನಿಷ್ಠ ಮೊತ್ತವೆಂಬುದಾಗಲೀ ಅಥವಾ ಮಿನಿಮಮ್ ಬ್ಯಾಲನ್ಸ್ ಇಡಬೇಕೆಂದಾಗಲೀ ಇಲ್ಲ. ವ್ಯಾಲಟ್ ಆ್ಯಪ್​ನಲ್ಲಿ ಬಹಳ ಸುಲಭವಾಗಿ ಉಳಿತಾಯ ಖಾತೆಯನ್ನು ತೆರೆಯಬಹುದು.

ಇದನ್ನೂ ಓದಿCoca Cola: ಸ್ವಿಗ್ಗಿ, ಜೊಮಾಟೋಗೆ ಸೆಡ್ಡು ಹೊಡೆಯಲು ಬರುತ್ತಿದೆಯಾ ಕೋಕಾ ಕೋಲ? ಥ್ರೈವ್ ಜೊತೆ ನಿಂತ ಕೋಲಾ

ಈ ಆ್ಯಪಲ್ ಉಳಿತಾಯ ಖಾತೆಯಲ್ಲಿ 2.5ಲಕ್ಷ ಡಾಲರ್​ವರೆಗಿನ (2 ಕೋಟಿ ರೂ) ಮೊತ್ತವನ್ನು ಇರಿಸಬಹುದು. ಈ ಸೇವಿಂಗ್ಸ್ ಅಕೌಂಟ್​ನಿಂದಾಗಿ ಜನರಿಗೆ ಹಣ ಉಳಿಸಲು ನೆರವಾಗುತ್ತದೆ. ನಿತ್ಯವೂ ಜನರು ಹಣ ಉಳಿಸಲು ಅನುವಾಗುವ ರೀತಿಯಲ್ಲಿ ಟೂಲ್​ಗಳನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಆ್ಯಪಲ್​ನ ಅಧಿಕಾರಿಗಳು ಹೇಳುತ್ತಾರೆ.

ಕಳೆದ ವರ್ಷ ಹಣಕಾಸು ಸೇವೆ ಆರಂಭಿಸಿದ ಆ್ಯಪಲ್​ಗೆ ಉತ್ತಮ ಆದಾಯಕ್ಕೆ ಎಡೆಯಾಗಿದೆಯಂತೆ. ಸೇವಿಂಗ್ಸ್ ಅಕೌಂಟ್ ಖಾತೆ ಜೊತೆಗೆ ಬಯ್ ನೌ ಪೇ ಲೇಟರ್ ಎಂಬ ಆಫರ್ ಅನ್ನೂ ಮಾರ್ಚ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹೊಸ ಫೀಚರ್ ಬಳಸಿ ಜನರು ಕ್ರೆಡಿಟ್ ಕಾರ್ಡ್​ನಂತೆ ಕಂತುಗಳಲ್ಲಿ ಹಣ ಕಟ್ಟಲು ಸಾಧ್ಯವಾಗಿಸುತ್ತದೆ. ಇದಕ್ಕೆ ಯಾವುದೇ ಹೆಚ್ಚುವರಿ ವೆಚ್ಚವಾಗಲೀ, ಶುಲ್ಕವಾಗಲೀ, ಬಡ್ಡಿಯಾಗಲೀ ಇಲ್ಲ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ