Zain Nadella: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಮಗ 26 ವರ್ಷದ ಝೈನ್ ನಿಧನ

| Updated By: Srinivas Mata

Updated on: Mar 01, 2022 | 12:22 PM

Satya Nadella's Son Death: ಮೈಕ್ರೋಸಾಫ್ಟ್ ಕಾರ್ಪೊರೇಷನ್​ನ ಸಿಇಒ ಸತ್ಯ ನಾಡೆಲ್ಲ ಅವರ ಮಗ 26 ವರ್ಷದ ಝೈನ್ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ಕಂಪೆನಿಯು ಇಮೇಲ್​ನಲ್ಲಿ ತಿಳಿಸಿದೆ.

Zain Nadella: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಮಗ 26 ವರ್ಷದ ಝೈನ್ ನಿಧನ
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ (ಸಂಗ್ರಹ ಚಿತ್ರ)
Follow us on

ಮೈಕ್ರೋಸಾಫ್ಟ್ ಕಾರ್ಪೊರೇಷನ್ (Microsoft Corp.) ತಿಳಿಸಿರುವ ಪ್ರಕಾರ, ಸಿಇಒ ಸತ್ಯ ಮತ್ತು ಅನು ಅವರ ಮಗ ಝೈನ್ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಅವರಿಗೆ 26 ವರ್ಷ ವಯಸ್ಸಾಗಿತ್ತು. ಹುಟ್ಟುವಾಗಲೇ ಸೆರೆಬ್ರಲ್ ಪಾಲ್ಸಿ ಸಮಸ್ಯೆ ಇತ್ತು. ತನ್ನ ಸಿಬ್ಬಂದಿಗೆ ಇಮೇಲ್​ ಮೂಲಕ ಝೈನ್​ ನಿಧನದ ಬಗ್ಗೆ ಮೈಕ್ರೋಸಾಫ್ಟ್ ಮಾಹಿತಿ ನೀಡಿದೆ. ಈ ದುಃಖವನ್ನು ಭರಿಸುವುದಕ್ಕೆ ಕುಟುಂಬದ ಆಲೋಚನೆ ಮತ್ತು ಪ್ರಾರ್ಥನೆಗೆ ಖಾಸಗಿತನದ ಅವಶ್ಯಕತೆ ಇದ್ದು, ಅದಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.

2014ರಲ್ಲಿ ಸತ್ಯ ನಾಡೆಲ್ಲ ಮೈಕ್ರೋಸಾಫ್ಟ್​ನ ಸಿಇಒ ಹುದ್ದೆಯನ್ನು ಅಲಂಕರಿಸಿದ್ದರು. ಆಗಿನಿಂದಲೂ ವೈಕಲ್ಯ ಇರುವಂಥ ಬಳಕೆದಾರರಿಗೆ ಅನುಕೂಲ ಆಗುವಂತೆ ಉತ್ಪನ್ನಗಳನ್ನು ರೂಪಿಸುವುದಕ್ಕೆ ಕಂಪೆನಿಯು ಗಮನ ಕೇಂದ್ರೀಕರಿಸಿತ್ತು. ತಮ್ಮ ಮಗ ಝೈನ್​ ಬೆಳವಣಿಗೆ ಹಾಗೂ ಅಗತ್ಯ ಇರುವ ಬೆಂಬಲವನ್ನು ನೀಡಲು ಏನು ಬೇಕೋ ಅದನ್ನು ನೀಡುವುದನ್ನು ಕಲಿತಿದ್ದರು.

ಕಳೆದ ವರ್ಷ, ಝೈನ್ ಬಹುತೇಕ ಚಿಕಿತ್ಸೆ ಪಡೆದ ಮಕ್ಕಳ ಆಸ್ಪತ್ರೆಯು ಸಿಯಾಟಲ್ ಚಿಲ್ಡ್ರನ್ಸ್ ಸೆಂಟರ್ ಫಾರ್ ಇಂಟಿಗ್ರೇಟಿವ್ ಮೆದುಳು ಸಂಶೋಧನೆ ಭಾಗವಾಗಿ ಪೀಡಿಯಾಟ್ರಿಕ್ ನ್ಯೂರೋಸೈನ್ಸ್‌ನಲ್ಲಿ ಜೈನ್ ನಾಡೆಲ್ಲಾ ಎಂಡೋವ್ಡ್ ಚೇರ್ ಅನ್ನು ಸ್ಥಾಪಿಸಲು ನಾಡೆಲ್ಲ ಜತೆಗೂಡಿತು. “ಝೈನ್ ಅವರಿಗೆ ಸಂಗೀತದಲ್ಲಿ ಇದ್ದ ಅಭಿರುಚಿ, ಅವರ ಪ್ರಕಾಶಮಾನವಾದ ನಗು ಮತ್ತು ಅವರ ಕುಟುಂಬಕ್ಕೆ ಹಾಗೂ ಅವರನ್ನು ಪ್ರೀತಿಸಿದ ಎಲ್ಲರಿಗೂ ತಂದ ಅಪಾರ ಸಂತೋಷಕ್ಕಾಗಿ ನೆನಪಿಸಿಕೊಳ್ಳುತ್ತೇವೆ,” ಎಂದು ಮಕ್ಕಳ ಆಸ್ಪತ್ರೆಯ ಸಿಇಒ ಜೆಫ್ ಸ್ಪೆರಿಂಗ್ ತಮ್ಮ ಮಂಡಳಿಗೆ ಸಂದೇಶದಲ್ಲಿ ಬರೆದಿದ್ದಾರೆ. ಅದನ್ನು ಮೈಕ್ರೋಸಾಫ್ಟ್ ಕಾರ್ಯನಿರ್ವಾಹಕರೊಂದಿಗೆ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Satya Nadella: 53 ವರ್ಷದ ಸತ್ಯ ನಾಡೆಲ್ಲಾಗೆ 143 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯದ ಮೈಕ್ರೋಸಾಫ್ಟ್ ಕಂಪೆನಿಯ ನೇತೃತ್ವ

Published On - 12:00 pm, Tue, 1 March 22