AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಇವಿ ಟೆಸ್ಟಿಂಗ್ ಲ್ಯಾಬ್; ದಕ್ಷಿಣ ಭಾರತದಲ್ಲಿ ಎನ್​ಟಿಎಚ್​ನ ಮೊದಲ ಪರೀಕ್ಷಾ ಕೇಂದ್ರ

EV testing lab at Jakkur: ಬೆಂಗಳೂರಿನ ಜಕ್ಕೂರಿನ ಆರ್​ಆರ್​ಎಸ್​ಎಲ್ ಕ್ಯಾಂಪ್​ನಲ್ಲಿರುವ ನ್ಯಾಷನಲ್ ಟೆಸ್ಟ್ ಹೌಸ್​ನಿಂದ ಇವಿ ಟೆಸ್ಟಿಂಗ್ ಲ್ಯಾಬ್ ನಿರ್ಮಾಣವಾಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಇಂದು ಲ್ಯಾಬ್ ಉದ್ಘಾಟನೆ ಮಾಡುತ್ತಿದ್ದಾರೆ. ದೇಶದ ವಿವಿಧೆಡೆ ಇವಿ ಪರೀಕ್ಷಾ ಲ್ಯಾಬ್​ಗಳನ್ನು ಹೊಂದಿರುವ ಎನ್​ಟಿಎಚ್ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅದನ್ನು ಸ್ಥಾಪಿಸಿದೆ.

ಬೆಂಗಳೂರಿನಲ್ಲಿ ಇವಿ ಟೆಸ್ಟಿಂಗ್ ಲ್ಯಾಬ್; ದಕ್ಷಿಣ ಭಾರತದಲ್ಲಿ ಎನ್​ಟಿಎಚ್​ನ ಮೊದಲ ಪರೀಕ್ಷಾ ಕೇಂದ್ರ
ಪ್ರಹ್ಲಾದ್ ಜೋಷಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 22, 2024 | 10:39 AM

Share

ಬೆಂಗಳೂರು, ಆಗಸ್ಟ್ 22: ಸಿಲಿಕಾನ್ ಸಿಟಿಯಲ್ಲಿ ಉತ್ಕೃಷ್ಟ ಇವಿ ಪರೀಕ್ಷಾ ಕೇಂದ್ರ ಆರಂಭವಾಗುತ್ತಿದೆ. ಜಕ್ಕೂರಿನ ಆರ್​ಆರ್​ಎಸ್​ಎಲ್ ಕ್ಯಾಂಪ್​ನ ನ್ಯಾಷನಲ್ ಟೆಸ್ಟ್ ಹೌಸ್​ನ ಇವಿ ಪರೀಕ್ಷಾ ಕೇಂದ್ರವನ್ನು ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಉದ್ಘಾಟನೆ ಮಾಡುತ್ತಿದ್ದಾರೆ. ಎನ್​ಟಿಎಚ್​ನ ಇವಿ ಟೆಸ್ಟಿಂಗ್ ಫೆಸಿಲಿಟಿ ಈಗ ದಕ್ಷಿಣ ಭಾರತದಲ್ಲೂ ಹೆಚ್ಚಾಗಲಿದೆ. ಎಲೆಕ್ಟ್ರಿಕ್ ವಾಹನ ಉದ್ಯಮದ ಬೆಳವಣಿಗೆಗೆ ಈ ಟೆಸ್ಟಿಂಗ್ ಸರ್ವಿಸ್ ಬಹಳ ಅಗತ್ಯ.

ಜಕ್ಕೂರಿನ ರೀಜನಲ್ ರೆಫರೆನ್ಸ್ ಸ್ಟ್ಯಾಂಡರ್ಡ್ ಲ್ಯಾಬೊರೇಟರಿಯ ಕ್ಯಾಂಪ್​ನಲ್ಲಿ ನಿರ್ಮಾಣವಾಗಿರುವ ಟೆಸ್ಟಿಂಗ್ ಲ್ಯಾಬೊರೇಟರಿಯಲ್ಲಿ ಇವಿ ಬ್ಯಾಟರಿ ಟೆಸ್ಟ್ ಮಾಡುವ ಉಪಕರಣ ಇರುತ್ತದೆ. ಎಲೆಕ್ಟ್ರಿಕಲ್ ಸೇಫ್ಟಿ, ಇಎಂಸಿ, ಇಎಂಎಫ್, ಎಫ್​ಸಿಸಿ, ಐಎಸ್​ಇಡಿ, ಫಂಕ್ಷನಲ್ ಸೇಫ್ಟಿ, ಡ್ಯೂರಬಿಲಿ ಇತ್ಯಾದಿ ನಾನಾ ರೀತಿಯ ಪರೀಕ್ಷೆಗಳನ್ನು ಈ ಉಪಕರಣ ಮಾಡಬಲ್ಲುದು.

ಇದನ್ನೂ ಓದಿ: ಉತ್ತಮ ಆಡಳಿತಕ್ಕಾಗಿ ಪೇಟಿಎಂ ಮಹತ್ವದ ನಿರ್ಧಾರ; ಮಂಡಳಿಯ ಸದಸ್ಯರ ಸಂಬಳ ಕಡಿಮೆ ಮಾಡಲು ಪ್ರಸ್ತಾಪ

ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟಕ್ಕೆ ಇಡಲಾಗುವ ಮುನ್ನ ಈ ಪರೀಕ್ಷಾ ಕೇಂದ್ರದಲ್ಲಿ ಕಟ್ಟುನಿಟ್ಟಿನ ಪರೀಕ್ಷೆಗಳಿಗೆ ಒಳಗಾಗುತ್ತವೆ. ಸರ್ಕಾರ ನಿಗದಿ ಮಾಡಿದ ಗುಣಮಟ್ಟ ಮಾನದಂಡಗಳನ್ನು ಈ ವಾಹನಗಳು ಪೂರೈಸುತ್ತವಾ ಇಲ್ಲವಾ ಎಂಬುದನ್ನು ಇಲ್ಲಿ ದೃಢಪಡಿಸಲಾಗುತ್ತದೆ. ಈ ಹೊಸ ಇವಿ ಟೆಸ್ಟಿಂಗ್ ಸೌಲಭ್ಯ ದಕ್ಷಿಣ ಭಾರತದಲ್ಲಿ ಎಲೆಕ್ಟ್ರಿಕಲ್ ವೆಹಿಕಲ್ ಉದ್ಯಮಕ್ಕೆ ಪುಷ್ಟಿ ನೀಡಿ, ಅದರ ಬೆಳವಣಿಗೆಗೆ ಸಹಕಾರ ನೀಡುತ್ತದೆ.

ಕೇಂದ್ರ ಗ್ರಾಹಕ ವ್ಯವಹಾರ ಇಲಾಖೆಗೆ ಸೇರಿದ ನ್ಯಾಷನಲ್ ಟೆಸ್ಟ್ ಹೌಸ್ ದೇಶಾದ್ಯಂತ ಇವಿ ಟೆಸ್ಟಿಂಗ್ ಲ್ಯಾಬ್​ಗಳನ್ನು ಹೊಂದಿದೆ. ಕೋಲ್ಕತಾ, ಮುಂಬೈ, ಚೆನ್ನೈ, ಘಾಜಿಯಾಬಾದ್, ಗುವಾಹತಿ, ಜೈಪುರ್ ಮತ್ತು ವಾರಾಣಸಿಯಲ್ಲಿ ಲ್ಯಾಬ್​ಗಳಿವೆ. ಬೆಂಗಳೂರಿನಲ್ಲಿ ಇಂದು ಉದ್ಘಾಟನೆಯಾಗುತ್ತಿರುವುದು ಎನ್​ಟಿಎಚ್​ನ ದಕ್ಷಿಣ ಭಾರತದ ಮೊದಲ ಲ್ಯಾಬ್ ಆಗಿದೆ.

ಇದನ್ನೂ ಓದಿ: ನಾಯಿಕೊಡೆಗಳಂತೆ ಹೆಚ್ಚುತ್ತಿರುವ ಇಕಾಮರ್ಸ್ ಕಂಪನಿಗಳು; ಇದು ಖುಷಿಪಡುವ ಸಂಗತಿ ಅಲ್ಲ ಎಂತಾರೆ ಪೀಯುಶ್ ಗೋಯಲ್; ಅಮೇಜಾನ್​ಗೂ ತಿವಿದ ಸಚಿವ

ಜಕ್ಕೂರಿನಲ್ಲಿರುವ ಈ ಲ್ಯಾಬ್ ಅನ್ನು ಇಂದು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಉದ್ಘಾಟಿಸುತ್ತಿದ್ದಾರೆ. ಇಲಾಖೆಯ ಜಂಟಿ ಕಾರ್ಯದರ್ಶಿ ಅನುಪಮ್ ಮಿಶ್ರಾ, ಹೆಚ್ಚುವರಿ ಕಾರ್ಯದರ್ಶಿ ಭರತ್ ಖೇರಾ, ಲೀಗಲ್ ಮೆಟ್ರೋಲಜಿಯ ನಿರ್ದೇಶಕ ಆಶುತೋಷ್ ಅಗರ್ವಾಲ್, ನ್ಯಾಷನಲ್ ಟೆಸ್ಟ್ ಹೌಸ್​ನ ಮಹಾನಿರ್ದೇಶಕ ಡಾ. ಅಲೋಕ್ ಕುಮಾರ್ ಶ್ರೀವಾಸ್ತವ ಮೊದಲಾದವರು ಈ ಸಂದರ್ಭದಲ್ಲಿ ಇರಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್