Bank Holidays September 2024: ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬ ಸೇರಿ 2024ರ ಸೆಪ್ಟಂಬರ್ ತಿಂಗಳಲ್ಲಿ 14 ದಿನ ರಜೆ; ಇಲ್ಲಿದೆ ಪಟ್ಟಿ

2024 September Bank Holidays list: 2024ರ ಸೆಪ್ಟಂಬರ್ ತಿಂಗಳಲ್ಲಿ ದೇಶದ ವಿವಿಧೆಡೆ ಬ್ಯಾಂಕುಗಳಿಗೆ ಒಟ್ಟು 14 ದಿನ ರಜೆ ಇದೆ. ವಿನಾಯಕ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬ ಸಾರ್ವತ್ರಿಕವಾಗಿ ಎಲ್ಲರಿಗೂ ಲಭ್ಯ ಇರುವ ರಜೆಗಳಾಗಿವೆ. ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರ ರಜೆಗಳೂ ಈ 14 ದಿನಗಳ ಪಟ್ಟಿಯಲ್ಲಿವೆ. ಇವು ಬಿಟ್ಟರೆ ಉಳಿದ ರಜೆಗಳು ಪ್ರಾದೇಶಿಕವಾಗಿ ಜಾರಿಯಲ್ಲಿವೆ.

Bank Holidays September 2024: ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬ ಸೇರಿ 2024ರ ಸೆಪ್ಟಂಬರ್ ತಿಂಗಳಲ್ಲಿ 14 ದಿನ ರಜೆ; ಇಲ್ಲಿದೆ ಪಟ್ಟಿ
ಬ್ಯಾಂಕ್ ರಜಾದಿನಗಳು
Follow us
| Updated By: Digi Tech Desk

Updated on:Aug 22, 2024 | 1:58 PM

ನವದೆಹಲಿ, ಆಗಸ್ಟ್ 22: ಆರ್​ಬಿಐ ಕ್ಯಾಲಂಡರ್ ಪ್ರಕಾರ ಸೆಪ್ಟಂಬರ್ ತಿಂಗಳಲ್ಲಿ ಒಟ್ಟು 14 ರಜಾ ದಿನಗಳಿವೆ. ಇದರಲ್ಲಿ ಶನಿವಾರ ಮತ್ತು ಭಾನುವಾರ ರಜೆಗಳೂ ಒಳಗೊಂಡಿವೆ. ವಿನಾಯಕ ಚತುರ್ಥಿ, ಈದ್ ಮಿಲಾದ್ ಹಬ್ಬಗಳೂ ರಜಾ ಪಟ್ಟಿಯಲ್ಲಿ ಒಳಗೊಂಡಿವೆ. ಕೇರಳದಲ್ಲಿ ಆಚರಿಸಲಾಗುವ ಓಣಂ ಮತ್ತು ತಿರುವೋಣಂ ಹಬ್ಬ ಶನಿವಾರ ಮತ್ತು ಭಾನುವಾರ ರಜಾದಿನಗಳಂದೇ ಇವೆ. ಅದರ ಬದಲು ಸೆಪ್ಟಂಬರ್ 18 ಮತ್ತು 21ರಂದು ನಾರಾಯಣಗುರು ಜಯಂತಿ ಅಂಗವಾಗಿ ಕೇರಳದಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತವೆ.

ಸೆಪ್ಟಂಬರ್ 14ರಿಂದ 16ರವರೆಗೆ ದೇಶಾದ್ಯಂತ ಬ್ಯಾಂಕುಗಳಿಗೆ ಮೂರು ದಿನ ರಜೆ ಇರುತ್ತದೆ. ಇದರಲ್ಲಿ 16ರಂದು ಇರುವ ಈದ್ ಮಿಲಾದ್ ಸೇರಿದೆ. ರಾಜಸ್ಥಾನದಲ್ಲಿ ಬ್ಯಾಂಕುಗಳಿಗೆ ಸೆಪ್ಟೆಂಬರ್ 13ರಿಂದ 16ರವರೆಗೆ ಸತತ ನಾಲ್ಕು ದಿನ ರಜೆ ಇರುತ್ತದೆ. ಸಿಕ್ಕಿಂನಲ್ಲಿ 14ರಿಂದ 17ರವರೆಗೆ ನಾಲ್ಕು ದಿನ ರಜೆ ಇದೆ. ಕರ್ನಾಟಕದಲ್ಲಿ ಸೆ. 7ಕ್ಕೆ ವಿನಾಯಕ ಚತುರ್ಥಿ ಮತ್ತು ಸೆ. 16ಕ್ಕೆ ಈದ್ ಮಿಲಾದ್ ಬಿಟ್ಟರೆ ರಜೆ ಇರುವುದು ಶನಿವಾರ ಮತ್ತು ಭಾನುವಾರದ ರಜೆಗಳು ಮಾತ್ರವೇ. ಒಟ್ಟು ಎಂಟು ರಜಾದಿನಗಳಿವೆ ಕರ್ನಾಟಕದಲ್ಲಿ.

ಇದನ್ನೂ ಓದಿ: ನಾಯಿಕೊಡೆಗಳಂತೆ ಹೆಚ್ಚುತ್ತಿರುವ ಇಕಾಮರ್ಸ್ ಕಂಪನಿಗಳು; ಇದು ಖುಷಿಪಡುವ ಸಂಗತಿ ಅಲ್ಲ ಎಂತಾರೆ ಪೀಯುಶ್ ಗೋಯಲ್; ಅಮೇಜಾನ್​ಗೂ ತಿವಿದ ಸಚಿವ

ಭಾರತದಲ್ಲಿ 2024ರ ಸೆಪ್ಟಂಬರ್​ನಲ್ಲಿರುವ ಬ್ಯಾಂಕ್ ರಜಾದಿನಗಳ ಪಟ್ಟಿ

  • ಸೆಪ್ಟಂಬರ್ 5, ಗುರುವಾರ: ಶ್ರೀಮಂತ ಶಂಕರದೇವ ತಿಥಿ (ಅಸ್ಸಾಮ್​ನಲ್ಲಿ ರಜೆ)
  • ಸೆಪ್ಟಂಬರ್ 7, ಶನಿವಾರ: ವಿನಾಯಕ ಚತುರ್ಥಿ
  • ಸೆಪ್ಟಂಬರ್ 8: ಭಾನುವಾರದ ರಜೆ (ಒಡಿಶಾದಲ್ಲಿ ನೌಕಾಯ್ ಹಬ್ಬ)
  • ಸೆಪ್ಟಂಬರ್ 13, ಶುಕ್ರವಾರ: ರಾಮದೇವ್ ಜಯಂತಿ, ತೇಜ ದಶಮಿ (ರಾಜಸ್ಥಾನದಲ್ಲಿ ರಜೆ)
  • ಸೆಪ್ಟಂಬರ್ 14: ಎರಡನೇ ಶನಿವಾರ (ಕೇರಳದಲ್ಲಿ ಓಣಂ)
  • ಸೆಪ್ಟಂಬರ್ 15: ಭಾನುವಾರದ ರಜೆ (ಕೇರಳದಲ್ಲಿ ತಿರುವೋಣಂ)
  • ಸೆಪ್ಟಂಬರ್ 16, ಸೋಮವಾರ: ಈದ್ ಮಿಲಾದ್
  • ಸೆಪ್ಟಂಬರ್ 17, ಮಂಗಳವಾರ: ಇಂದ್ರ ಜಾತ್ರ (ಸಿಕ್ಕಿಂನಲ್ಲಿ ರಜೆ)
  • ಸೆಪ್ಟಂಬರ್ 18, ಬುಧವಾರ: ಶ್ರೀ ನಾರಾಯಣಗುರು ಜಯಂತಿ (ಕೇರಳದಲ್ಲಿ ರಜೆ)
  • ಸೆಪ್ಟಂಬರ್ 21, ಶನಿವಾರ: ಶ್ರೀ ನಾರಾಯಣಗುರು ಸಮಾಧಿ (ಕೇರಳದಲ್ಲಿ ರಜೆ)
  • ಸೆಪ್ಟಂಬರ್ 22: ಭಾನುವಾರದ ರಜೆ
  • ಸೆಪ್ಟಂಬರ್ 23, ಸೋಮವಾರ: ಬಲಿದಾನ ದಿನ (ಹರ್ಯಾಣದಲ್ಲಿ ರಜೆ)
  • ಸೆಪ್ಟಂಬರ್ 28: ನಾಲ್ಕನೇ ಶನಿವಾರ
  • ಸೆಪ್ಟಂಬರ್ 29: ಭಾನುವಾರದ ರಜೆ

ಕರ್ನಾಟಕದಲ್ಲಿ ಬ್ಯಾಂಕ್ ರಜಾ ದಿನಗಳು

  • ಸೆಪ್ಟಂಬರ್ 7, ಶನಿವಾರ: ವಿನಾಯಕ ಚತುರ್ಥಿ
  • ಸೆಪ್ಟಂಬರ್ 8: ಭಾನುವಾರದ ರಜೆ
  • ಸೆಪ್ಟಂಬರ್ 14: ಎರಡನೇ ಶನಿವಾರ
  • ಸೆಪ್ಟಂಬರ್ 15: ಭಾನುವಾರದ ರಜೆ
  • ಸೆಪ್ಟಂಬರ್ 16, ಸೋಮವಾರ: ಈದ್ ಮಿಲಾದ್
  • ಸೆಪ್ಟಂಬರ್ 22: ಭಾನುವಾರದ ರಜೆ
  • ಸೆಪ್ಟಂಬರ್ 28: ನಾಲ್ಕನೇ ಶನಿವಾರ
  • ಸೆಪ್ಟಂಬರ್ 29: ಭಾನುವಾರದ ರಜೆ

ಇದನ್ನೂ ಓದಿ: 30,000 ರೂ ಸಂಬಳ ಪಡೆಯುತ್ತಿರುವವರು ಇಪಿಎಫ್​ನಲ್ಲಿ 1 ಕೋಟಿ ಕೂಡಿಡಲು ಎಷ್ಟು ವರ್ಷ ಬೇಕು?

ಅಕ್ಟೋಬರ್, ನವೆಂಬರ್, ಡಿಸೆಂಬರ್​ನಲ್ಲಿರುವ ರಜಾದಿನಗಳು

  • ಅ. 1, ಮಂಗಳವಾರ: ಬ್ಯಾಂಕ್ ಖಾತೆಗಳ ಅರ್ಧವಾರ್ಷಿಕ ಮುಕ್ತಾಯ
  • ಅ. 2, ಬುಧವಾರ: ಗಾಂಧಿ ಜಯಂತಿ
  • ಅ. 11, ಶುಕ್ರವಾರ: ಆಯುಧ ಪೂಜೆ, ಸರಸ್ವತಿ ಪೂಜೆ
  • ಅ. 21, ಗುರುವಾರ: ದೀಪಾವಳಿ
  • ನ. 1, ಶುಕ್ರವಾರ: ಧನಲಕ್ಷ್ಮೀ ಪೂಜೆ, ಕನ್ನಡ ರಾಜ್ಯೋತ್ಸವ
  • ನ. 2, ಶನಿವಾರ: ಗೋವರ್ಧನ ಪೂಜೆ
  • ನ. 7, ಗುರುವಾರ: ಛಾತ ಪೂಜೆ
  • ನ. 15, ಶುಕ್ರವಾರ: ಗುರುನಾನಕ್ ಜಯಂತಿ
  • ನ. 18, ಸೋಮವಾರ: ಕನಕದಾಸ ಜಯಂತಿ
  • ಡಿ. 3, ಶನಿವಾರ: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬ
  • ಡಿ. 25, ಬುಧವಾರ: ಕ್ರಿಸ್ಮಸ್ ಹಬ್ಬ
  • ಡಿ. 31, ಮಂಗಳವಾರ: ಹೊಸ ವರ್ಷದ ಪ್ರಯುಕ್ತ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:14 pm, Thu, 22 August 24

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್