ಬೆಂಗಳೂರು, ಆಗಸ್ಟ್ 22: ಸಿಲಿಕಾನ್ ಸಿಟಿಯಲ್ಲಿ ಉತ್ಕೃಷ್ಟ ಇವಿ ಪರೀಕ್ಷಾ ಕೇಂದ್ರ ಆರಂಭವಾಗುತ್ತಿದೆ. ಜಕ್ಕೂರಿನ ಆರ್ಆರ್ಎಸ್ಎಲ್ ಕ್ಯಾಂಪ್ನ ನ್ಯಾಷನಲ್ ಟೆಸ್ಟ್ ಹೌಸ್ನ ಇವಿ ಪರೀಕ್ಷಾ ಕೇಂದ್ರವನ್ನು ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಉದ್ಘಾಟನೆ ಮಾಡುತ್ತಿದ್ದಾರೆ. ಎನ್ಟಿಎಚ್ನ ಇವಿ ಟೆಸ್ಟಿಂಗ್ ಫೆಸಿಲಿಟಿ ಈಗ ದಕ್ಷಿಣ ಭಾರತದಲ್ಲೂ ಹೆಚ್ಚಾಗಲಿದೆ. ಎಲೆಕ್ಟ್ರಿಕ್ ವಾಹನ ಉದ್ಯಮದ ಬೆಳವಣಿಗೆಗೆ ಈ ಟೆಸ್ಟಿಂಗ್ ಸರ್ವಿಸ್ ಬಹಳ ಅಗತ್ಯ.
ಜಕ್ಕೂರಿನ ರೀಜನಲ್ ರೆಫರೆನ್ಸ್ ಸ್ಟ್ಯಾಂಡರ್ಡ್ ಲ್ಯಾಬೊರೇಟರಿಯ ಕ್ಯಾಂಪ್ನಲ್ಲಿ ನಿರ್ಮಾಣವಾಗಿರುವ ಟೆಸ್ಟಿಂಗ್ ಲ್ಯಾಬೊರೇಟರಿಯಲ್ಲಿ ಇವಿ ಬ್ಯಾಟರಿ ಟೆಸ್ಟ್ ಮಾಡುವ ಉಪಕರಣ ಇರುತ್ತದೆ. ಎಲೆಕ್ಟ್ರಿಕಲ್ ಸೇಫ್ಟಿ, ಇಎಂಸಿ, ಇಎಂಎಫ್, ಎಫ್ಸಿಸಿ, ಐಎಸ್ಇಡಿ, ಫಂಕ್ಷನಲ್ ಸೇಫ್ಟಿ, ಡ್ಯೂರಬಿಲಿ ಇತ್ಯಾದಿ ನಾನಾ ರೀತಿಯ ಪರೀಕ್ಷೆಗಳನ್ನು ಈ ಉಪಕರಣ ಮಾಡಬಲ್ಲುದು.
ಇದನ್ನೂ ಓದಿ: ಉತ್ತಮ ಆಡಳಿತಕ್ಕಾಗಿ ಪೇಟಿಎಂ ಮಹತ್ವದ ನಿರ್ಧಾರ; ಮಂಡಳಿಯ ಸದಸ್ಯರ ಸಂಬಳ ಕಡಿಮೆ ಮಾಡಲು ಪ್ರಸ್ತಾಪ
ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟಕ್ಕೆ ಇಡಲಾಗುವ ಮುನ್ನ ಈ ಪರೀಕ್ಷಾ ಕೇಂದ್ರದಲ್ಲಿ ಕಟ್ಟುನಿಟ್ಟಿನ ಪರೀಕ್ಷೆಗಳಿಗೆ ಒಳಗಾಗುತ್ತವೆ. ಸರ್ಕಾರ ನಿಗದಿ ಮಾಡಿದ ಗುಣಮಟ್ಟ ಮಾನದಂಡಗಳನ್ನು ಈ ವಾಹನಗಳು ಪೂರೈಸುತ್ತವಾ ಇಲ್ಲವಾ ಎಂಬುದನ್ನು ಇಲ್ಲಿ ದೃಢಪಡಿಸಲಾಗುತ್ತದೆ. ಈ ಹೊಸ ಇವಿ ಟೆಸ್ಟಿಂಗ್ ಸೌಲಭ್ಯ ದಕ್ಷಿಣ ಭಾರತದಲ್ಲಿ ಎಲೆಕ್ಟ್ರಿಕಲ್ ವೆಹಿಕಲ್ ಉದ್ಯಮಕ್ಕೆ ಪುಷ್ಟಿ ನೀಡಿ, ಅದರ ಬೆಳವಣಿಗೆಗೆ ಸಹಕಾರ ನೀಡುತ್ತದೆ.
ಕೇಂದ್ರ ಗ್ರಾಹಕ ವ್ಯವಹಾರ ಇಲಾಖೆಗೆ ಸೇರಿದ ನ್ಯಾಷನಲ್ ಟೆಸ್ಟ್ ಹೌಸ್ ದೇಶಾದ್ಯಂತ ಇವಿ ಟೆಸ್ಟಿಂಗ್ ಲ್ಯಾಬ್ಗಳನ್ನು ಹೊಂದಿದೆ. ಕೋಲ್ಕತಾ, ಮುಂಬೈ, ಚೆನ್ನೈ, ಘಾಜಿಯಾಬಾದ್, ಗುವಾಹತಿ, ಜೈಪುರ್ ಮತ್ತು ವಾರಾಣಸಿಯಲ್ಲಿ ಲ್ಯಾಬ್ಗಳಿವೆ. ಬೆಂಗಳೂರಿನಲ್ಲಿ ಇಂದು ಉದ್ಘಾಟನೆಯಾಗುತ್ತಿರುವುದು ಎನ್ಟಿಎಚ್ನ ದಕ್ಷಿಣ ಭಾರತದ ಮೊದಲ ಲ್ಯಾಬ್ ಆಗಿದೆ.
ಜಕ್ಕೂರಿನಲ್ಲಿರುವ ಈ ಲ್ಯಾಬ್ ಅನ್ನು ಇಂದು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಉದ್ಘಾಟಿಸುತ್ತಿದ್ದಾರೆ. ಇಲಾಖೆಯ ಜಂಟಿ ಕಾರ್ಯದರ್ಶಿ ಅನುಪಮ್ ಮಿಶ್ರಾ, ಹೆಚ್ಚುವರಿ ಕಾರ್ಯದರ್ಶಿ ಭರತ್ ಖೇರಾ, ಲೀಗಲ್ ಮೆಟ್ರೋಲಜಿಯ ನಿರ್ದೇಶಕ ಆಶುತೋಷ್ ಅಗರ್ವಾಲ್, ನ್ಯಾಷನಲ್ ಟೆಸ್ಟ್ ಹೌಸ್ನ ಮಹಾನಿರ್ದೇಶಕ ಡಾ. ಅಲೋಕ್ ಕುಮಾರ್ ಶ್ರೀವಾಸ್ತವ ಮೊದಲಾದವರು ಈ ಸಂದರ್ಭದಲ್ಲಿ ಇರಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ