Money Double: 90 ದಿನದಲ್ಲಿ ಹಣ ಡಬಲ್; ರಿಲಾಯನ್ಸ್ ಬೆಂಬಲಿತ ಬಾಲಾಜಿ ಟೆಲಿಫಿಲಂಸ್​ನ ಷೇರು ಮ್ಯಾಜಿಕ್

|

Updated on: Feb 28, 2024 | 11:31 AM

Balaji Telefilms Share Price Rise In 3 Months: ಏಕ್ತಾ ಕಪೂರ್ ಒಡೆತನದ ಬಾಲಾಜಿ ಟೆಲಿಫಿಲಂಸ್ ಕಳೆದ 3 ತಿಂಗಳಲ್ಲಿ ಮಲ್ಟಿಬ್ಯಾಗರ್ ಷೇರು ಎನಿಸುವ ಸೂಚನೆ ನೀಡಿದೆ. ನವೆಂಬರ್ 28ರಂದು 66 ರೂ ಇದ್ದ ಅದರ ಷೇರುಬೆಲೆ ಫೆಬ್ರುವರಿ 28ಕ್ಕೆ 132 ರೂ ಆಗಿದೆ. ಎರಡುಪಟ್ಟು ಹೆಚ್ಚಳ ಕಂಡಿದೆ. ಬಾಲಾಜಿ ಟೆಲಿಫಿಲಂಸ್​ನಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಸುಮಾರು 24.9ರಷ್ಟು ಷೇರುಪಾಲು ಹೊಂದಿದೆ.

Money Double: 90 ದಿನದಲ್ಲಿ ಹಣ ಡಬಲ್; ರಿಲಾಯನ್ಸ್ ಬೆಂಬಲಿತ ಬಾಲಾಜಿ ಟೆಲಿಫಿಲಂಸ್​ನ ಷೇರು ಮ್ಯಾಜಿಕ್
ಷೇರು ಮಾರುಕಟ್ಟೆ
Follow us on

ಬಾಲಾಜಿ ಟೆಲಿಫಿಲಂಸ್ (Balaji Telefilms) ಹೆಸರು ನೀವು ಕೇಳಿರಬಹುದು. ಸಾಕಷ್ಟು ಫ್ಯಾಮಿಲಿ ಸೆಂಟಿಮೆಂಟ್​ನ ಟಿವಿ ಧಾರಾವಾಹಿಗಳನ್ನು ಇದು ನಿರ್ಮಿಸುವುದರಲ್ಲಿ ಖ್ಯಾತಿ ಎನಿಸಿದೆ. ಒಂದು ಕಾಲದಲ್ಲಿ ದೇಶದ ಅತಿದೊಡ್ಡ ಕಿರುತೆರೆ ನಿರ್ಮಾಣ ಸಂಸ್ಥೆ ಎನಿಸಿದ್ದ ಬಾಲಾಜಿ ಟೆಲಿಫಿಲಂಸ್ ಈಗ ರಿಲಾಯನ್ಸ್ ಇಂಡಸ್ಟ್ರೀಸ್ ಬೆಂಬಲ ಕೂಡ ಪಡೆದು ಮಿಂಚುತ್ತಿದೆ. ಬಾಲಾಜಿ ಟೆಲಿಫಿಲಂಸ್​ನ ಷೇರುಬೆಲೆ ಇತ್ತೀಚಿನ ದಿನಗಳಲ್ಲಿ ಏರಿಕೆ (multibagger stock) ಕಾಣತೊಡಗಿದೆ. ಇಂದು ಬುಧವಾರ ಬೆಳಗಿನ ವಹಿವಾಟಿನಲ್ಲಿ 132 ರೂ ಬೆಲೆ ಪಡೆದಿದೆ. ಸೋಮವಾರ (ಫೆ. 26) ಅದರ ಷೇರುಬೆಲೆ 143 ರೂವರೆಗೂ ಹೋಗಿತ್ತು.

ಬಾಲಾಜಿ ಟೆಲಿಫಿಲಂಸ್ ಸಂಸ್ಥೆಯ ಷೇರು ಕಳೆದ ಕೆಲ ತಿಂಗಳಿಂದ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಸರಿಯಾಗಿ ಮೂರು ತಿಂಗಳ ಹಿಂದೆ, ಅಂದರೆ 2023ರ ನವೆಂಬರ್ 28ರಂದು ಅದರ ಷೇರುಬೆಲೆ 66 ರೂ ಇತ್ತು. ಇದೀಗ 132 ರೂ ಆಗಿದೆ. ಅಂದರೆ ಬೆಲೆ ಎರಡು ಪಟ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಶಿವರಾತ್ರಿ, ಹೋಳಿ, ಗುಡ್​ಫ್ರೈಡೆಗೆ ಬ್ಯಾಂಕ್ ರಜೆ ಇದೆಯಾ? ಮಾರ್ಚ್ ತಿಂಗಳ 14 ದಿನ ರಜಾ ಪಟ್ಟಿ

ಒಂದು ವೇಳೆ ಈ ಷೇರಿನ ಮೇಲೆ ಮೂರು ತಿಂಗಳ ಹಿಂದೆ ಯಾರಾದರೂ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ, ಇವತ್ತು ಅವರ ಷೇರುಸಂಪತ್ತು 2 ಲಕ್ಷ ರೂ ಆಗಿರುತ್ತಿತ್ತು.

ಏಕ್ತಾ ಕಪೂರ್ ಮಾಲಕತ್ವದ ಬಾಲಾಜಿ ಟೆಲಿಫಿಲಂಸ್ ಸಂಸ್ಥೆ 2007ರವರೆಗೂ ಷೇರು ಮಾರುಕಟ್ಟೆಯ ಸ್ಟಾರ್ ಷೇರ್ ಎನಿಸಿತ್ತು. ಅದರ ಷೇರುಬೆಲೆ 2007ರ ಒಂದು ಘಟ್ಟದಲ್ಲಿ 354 ರೂಗೂ ಹೆಚ್ಚು ಮಟ್ಟಕ್ಕೆ ಹೋಗಿತ್ತು. ಅದಾದ ಬಳಿಕ ಅದು ನಿರಂತರವಾಗಿ ಕುಸಿಯುತ್ತಾ ಬಂದಿದೆ. ಕಿರು ತೆರೆ ನಿರ್ಮಾಣಕ್ಕೆ ಸ್ಪರ್ಧೆಗಳು ಹೆಚ್ಚುತ್ತಾ ಬಂದು ಅದು ಕಳೆಗುಂದುತ್ತಾ ಬಂದಿದೆ.

ಇದನ್ನೂ ಓದಿ: ಕ್ವಾಲ್​ಕಾಮ್, ಜಿಯೋದಿಂದ ಕೇವಲ 99 ಡಾಲರ್​ಗೆ 5ಜಿ ಸ್ಮಾರ್ಟ್​ಫೋನ್?; ಕಡಿಮೆ ಬೆಲೆಗೆ ಚಿಪ್​ಸೆಟ್ ಕೊಡಲಿರುವ ಅಮೆರಿಕನ್ ಕಂಪನಿ

ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಾಣುತ್ತಿರುವ ಬಾಲಾಜಿ ಟೆಲಿಫಿಲಂಸ್ ಇದೀಗ ರಿಲಾಯನ್ಸ್ ಬೆಂಬಲದೊಂದಿಗೆ ತಿರುಗಿ ನಿಂತಿದೆ. ಅದರ ಮಾರುಕಟ್ಟೆ ಬಂಡವಾಳ ಸದ್ಯ 1.28 ಲಕ್ಷ ಕೋಟಿ ರೂ ಇದೆ. ಈ ಸಂಸ್ಥೆಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಶೇ. 24.9ರಷ್ಟು ಷೇರುಪಾಲು ಹೊಂದಿದೆ. ಇದೇ ವೇಳೆ ಬಾಲಾಜಿ ಟೆಲಿಫಿಲಂಸ್ ಸುಮಾರು 214 ಕೋಟಿ ರೂ ಮೊತ್ತದ 2.38 ಕೋಟಿ ವಾರಂಟ್​ಗಳನ್ನು ವಿತರಿಸಲು ಮುಂದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ