AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಎನ್​ವಿಡಿಯಾದಂತೆ ಭಾರತದಲ್ಲೂ ಷೇರುಪೇಟೆ ಧೂಳೆಬ್ಬಿಸುತ್ತಿರುವ ಚಿಪ್ ಕಂಪನಿ ಮಾಸ್​ಚಿಪ್ ಟೆಕ್ನಾಲಜೀಸ್

Moschip Technologies shares: ಹೈದರಾಬಾದ್ ಮೂಲದ ಮೋಸ್​ಚಿಪ್ ಟೆಕ್ನಾಲಜೀಸ್ ಸಂಸ್ಥೆ ಸೆಮಿಕಂಡ್ಟರ್ ಚಿಪ್ ಡಿಸೈನ್ ಸರ್ವಿಸ್ ನೀಡುತ್ತದೆ. ಭಾರತದ ಭವಿಷ್ಯದ ಚಿಪ್ ಡಿಸೈನಿಂಗ್ ಯೋಜನೆಗಳಿಗೆ ಇದು ಮುಖ್ಯ ಭಾಗವಾಗಬಹುದು. ಈ ಹಿನ್ನೆಲೆಯಲ್ಲಿ ಮೋಸ್​ಚಿಪ್ ಸಂಸ್ಥೆಯ ಷೇರುಗಳಿಗೆ ಬಹಳವೇ ಬೇಡಿಕೆ ಬಂದಿದೆ. ಮೂರೇ ತಿಂಗಳಲ್ಲಿ ಅದರ ಷೇರುಬೆಲೆ ಮೂರು ಪಟ್ಟು ಬೆಳೆದಿದೆ.

ಅಮೆರಿಕದ ಎನ್​ವಿಡಿಯಾದಂತೆ ಭಾರತದಲ್ಲೂ ಷೇರುಪೇಟೆ ಧೂಳೆಬ್ಬಿಸುತ್ತಿರುವ ಚಿಪ್ ಕಂಪನಿ ಮಾಸ್​ಚಿಪ್ ಟೆಕ್ನಾಲಜೀಸ್
ಸೆಮಿಕಂಡಕ್ಟರ್ ಚಿಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 20, 2024 | 5:49 PM

Share

ನವದೆಹಲಿ, ಜೂನ್ 20: ನೀವು ಅಮೆರಿಕದ ಷೇರು ಮಾರುಕಟ್ಟೆ ಸೂಪರ್ ಸ್ಟಾರ್ ಎನಿಸಿರುವ ಎನ್​ವಿಡಿಯಾ ಕಂಪನಿ (Nvidia) ಹೆಸರು ಕೇಳಿರಬಹುದು. ಇದು ಪ್ರಬಲ ಸೆಮಿಕಂಡಕ್ಟರ್ ಚಿಪ್​ಗಳನ್ನು ತಯಾರಿಸುವ ಕಂಪನಿ. ಎಐ ಕ್ಷೇತ್ರದ ಬೆಳವಣಿಗೆಗೆ ಬೇಕಾದ ಶಕ್ತಿಶಾಲಿ ಚಿಪ್​​ಗಳನ್ನು ಎನ್​ವಿಡಿಯಾ ತಯಾರಿಸುತ್ತದೆ. ಅಂತೆಯೇ ಭವಿಷ್ಯದ ದಿನಗಳು ಇದೇ ಕಂಪನಿಗೆ ಸೇರಿದ್ದು. ಇದರಿಂದಾಗಿ ಅದರ ಷೇರುಗಳ ಬಾಲ ಹಿಡಿದಿದ್ದಾರೆ ಹೂಡಿಕೆದಾರರು. ನೋಡನೋಡುತ್ತಿದ್ದಂತೆಯೇ, ಎನ್​ವಿಡಿಯಾದ ಮಾರುಕಟ್ಟೆ ಬಂಡವಾಳ (Market cap) 3 ಟ್ರಿಲಿಯನ್ ಡಾಲರ್ ಗಡಿ ದಾಟಿ, ಮೈಕ್ರೋಸಾಫ್ಟ್, ಆ್ಯಪಲ್ ಅನ್ನೂ ಮೀರಿಸಿ ವಿಶ್ವದ ನಂಬರ್ ಒನ್ ಆಗಿದೆ. ಇದೇ ವೇಳೆ ಭಾರತದಲ್ಲಿ ಹೂಡಿಕೆದಾರರ ಚಿತ್ತವೂ ಸ್ಥಳೀಯವಾಗಿ ಸ್ಟಾರ್ ಕಂಪನಿಗಳತ್ತ ಹರಿದಾಡುತ್ತಿದೆ. ಈಗ ಸಿಕ್ಕಿರುವ ಲೋಕಲ್ ಸ್ಟಾರ್ ಮಾಸ್​ಚಿಪ್ ಟೆಕ್ನಾಲಜೀಸ್ (Moschip Technologies).

ಹೈದರಾಬಾದ್ ಮೂಲದ ಮಾಸ್​ಚಿಪ್ ಟೆಕ್ನಾಲಜೀಸ್ ಸಂಸ್ಥೆ ಸೆಮಿಕಂಡಕ್ಟರ್ ಚಿಪ್ ಮತ್ತು ಸಿಸ್ಟಂ ಡಿಸೈನಿಂಗ್ ಇತ್ಯಾದಿ ಸೇವೆ ಒದಗಿಸುತ್ತದೆ. ತೊಂಬತ್ತರ ದಶಕದಲ್ಲೇ ಆರಂಭವಾದರೂ ಇತ್ತೀಚೆಗೆ ಸೆಮಿಕಂಡಕ್ಟರ್ ಬೂಮ್ ಶುರುವಾದಾಗಿನಿಂದ ಈ ಕಂಪನಿ ಎಲ್ಲರ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಸಿಡಾಕ್ (ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್) 509.37 ಕೋಟಿ ರೂ ಮೌಲ್ಯದ ಆರ್ಡರ್ ಅನ್ನು ಮೋಸ್​ಚಿಪ್​ಗೆ ಕೊಟ್ಟಿದೆ.

ಇದನ್ನೂ ಓದಿ: ‘ಹಮಾಲಿ ಆಡಿದ ಆ ಒಂದು ಮಾತು ಜೀವನದ ದಿಕ್ಕನ್ನೇ ಬದಲಿಸಿತು..!’- ಎನ್​ವಿಡಿಯಾ ಸಿಇಒ ಜೆನ್ಸನ್ ಬಿಚ್ಚಿಟ್ಟ ಅಚ್ಚರಿಯ ಕಥೆ

ಅಷ್ಟೇ ಅಲ್ಲ, ಸೆಮಿಕಂಡಕ್ಟರ್ ಡಿಸೈನ್ ಜೋಡಿತ ಪ್ರೋತ್ಸಾಹ ಯೋಜನೆ (ಡಿಎಲ್​ಐ) ಅಡಿಯಲ್ಲಿ ಸ್ಮಾರ್ಟ್ ಎನರ್ಜಿ ಮೀಟರ್ ಇಂಟಿಗ್ರೇಟೆಡ್ ಸರ್ಕ್ಯುಟ್ ಅಭಿವೃದ್ಧಿಗೆ ಅದು ಸಲ್ಲಿರುವ ಅರ್ಜಿಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅನುಮೋದನೆ ಕೂಡ ಸಿಕ್ಕಿದೆ. ಈ ಡಿಎಲ್​ಐ ಸ್ಕೀಮ್​ಗೆ ಸಿ-ಡ್ಯಾಕ್ ನೋಡಲ್ ಏಜೆನ್ಸಿ ಆಗಿದೆ.

ಐದು ವರ್ಷ ಕಾಲ ಇಂಟಿಗ್ರೇಟೆಡ್ ಸರ್ಕ್ಯೂಟ್ (ಐಸಿ), ಚಿಪ್​ಸೆಟ್, ಸಿಸ್ಟಂ ಆನ್ ಚಿಪ್ಸ್ (ಎಸ್​ಒಸಿ) ಹಾಗು ಇತರ ಸೆಮಿಕಂಡಕ್ಟರ್ ಜೋಡಿತ ಡಿಸೈನ್​ ಸೇವೆಗೆ ಐದು ವರ್ಷ ಕಾಲ ಉತ್ತೇಜನ ನೀಡುವುದು ಈ ಡಿಎಲ್​ಐ ಯೋಜನೆಯ ಗುರಿಯಾಗಿದೆ. ಇದರಲ್ಲಿ ಮೋಸ್​ಚಿಪ್ ಟೆಕ್ನಾಲಜೀಸ್ ಅನ್ನು ಪ್ರಮುಖವಾಗಿ ಬಳಸಲಾಗುತ್ತಿದೆ.

ಮಾರ್ಚ್​ನಿಂದ ರಾಕೆಟ್​ನಂತೆ ಜಿಗಿಯುತ್ತಿರುವ ಮೋಸ್​ಚಿಪ್ ಟೆಕ್ನಾಲಜಿ ಷೇರು

ಮಾಸ್​ಚಿಪ್ ಟೆಕ್ನಾಲಜೀಸ್ ಸಂಸ್ಥೆಯ ಷೇರು 2001ರಿಂದಲೂ ಷೇರು ಮಾರುಕಟ್ಟೆಯಲ್ಲಿದೆ. ಆದರೆ, ಇತ್ತೀಚಿನವರೆಗೂ ಸಾಕಷ್ಟು ಏರಿಳಿತಳೊಂದಿಗೆ ಕುಂಟುತ್ತಾ ಹೋಗುತ್ತಿದ್ದ ಇದರ ಷೇರುಬೆಲೆ ಮಾರ್ಚ್ ತಿಂಗಳಿನಿಂದ ರಾಕೆಟ್​ನಂತೆ ಜಿಗಿಯುತ್ತಿದೆ.

ಇದನ್ನೂ ಓದಿ: ರಿಫೆಕ್ಸ್ ಇಂಡಸ್ಟ್ರೀಸ್, 65 ಪೈಸೆ ಇದ್ದ ಷೇರುಬೆಲೆ 10 ವರ್ಷದಲ್ಲಿ ಅದ್ಭುತ ಹೆಚ್ಚಳ; ಹೂಡಿಕೆದಾರರಿಗೆ ಎಷ್ಟು ಲಾಭ ಆಗಿರಬಹುದು ನೋಡಿ…

ಮೂರು ತಿಂಗಳ ಹಿಂದೆ, ಮಾರ್ಚ್ 20ರಂದು ಇದರ ಷೇರು ಬೆಲೆ 92 ರೂನಷ್ಟಿತ್ತು. ಇವತ್ತು ಇದರ ಬೆಲೆ ಬರೋಬ್ಬರಿ 296 ರುಪಾಯಿಗೆ ಏರಿದೆ. ಅದರಲ್ಲೂ ಮೇ 31ರ ಬಳಿಕ ಅದರ ಷೇರು ಬೆಲೆ 129 ರೂನಿಂದ ಹೈಜಂಪ್ ಮಾಡಿದೆ. ಕೇವಲ ಮೂರು ವಾರದಲ್ಲಿ ಬೆಲೆ ಡಬಲ್​ಗಿಂತ ಹೆಚ್ಚಗಿರುವುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ