ನವದೆಹಲಿ, ನವೆಂಬರ್ 20: ಟಿವಿ9 ನೆಟ್ವರ್ಕ್ ವತಿಯಿಂದ ಆಯೋಜಿಸಲಾಗಿರುವ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮ ಮಾಧ್ಯಮ ಇತಿಹಾಸದಲ್ಲೇ ಹೊಸ ದಾಖಲೆ ಮಾಡಿದೆ. ಜರ್ಮನಿಯ ಸ್ಟುಟ್ಗಾಟ್ ನಗರದಲ್ಲಿ (Stuttgart) ನವೆಂಬರ್ 21ರಿಂದ 23ರವರೆಗೂ ನಡೆಯಲಿರುವ ಈ ಕಾರ್ಯಕ್ರಮವನ್ನು ನ್ಯೂಸ್9 ಜೊತೆ ವಿಎಫ್ಬಿ ಸ್ಟುಟ್ಗಾಟ್ ಫುಟ್ಬಾಲ್ ಕ್ಲಬ್ ಜಂಟಿಯಾಗಿ ಆಯೋಜಿಸಿದೆ. ಅಲ್ಲಿನ ಸ್ಥಳೀಯ ರಾಜ್ಯ ಸರ್ಕಾರ ಕೂಡ ಕಾರ್ಯಕ್ರಮಕ್ಕೆ ಬೆಂಬಲ ನೀಡಿದೆ. ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾರತ ಮತ್ತು ಜರ್ಮನಿ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಯಲಿದೆ. ಹಲವು ಚರ್ಚೆ, ಉಪನ್ಯಾಸ ಇತ್ಯಾದಿ ಸಾಕಷ್ಟು ಸರಣಿ ಕಾರ್ಯಕ್ರಮಗಳು ಆಯೋಜನೆಯಾಗುತ್ತಿವೆ. ಮೂರು ದಿನಗಳಲ್ಲಿ ಚರ್ಚೆಯಾಗಲಿರುವ ಗಹನ ವಿಚಾರಗಳಲ್ಲಿ ಭಾರತದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಬೆಳವಣಿಗೆಯೂ ಸೇರಿದೆ. ‘ಈ ವಿಶ್ವದ ಮುಂದಿನ ಫ್ಯಾಕ್ಟರಿ’ ಎನ್ನುವ ವಿಷಯದ ಮೇಲೆ ಒಂದು ಸೆಷನ್ ಇರಲಿದೆ.
ಕಳೆದ ಏಳೆಂಟು ವರ್ಷಗಳಿಂದ ಭಾರತ ಸರ್ಕಾರ ತಯಾರಿಕಾ ಕ್ಷೇತ್ರದ ಮೇಲೆ ಗಮನ ನೆಟ್ಟಿದೆ. ಅದರಲ್ಲೂ ಮುಖ್ಯವಾಗಿ ಹತ್ತಕ್ಕೂ ಹೆಚ್ಚು ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ಗಳ ಮೇಲೆ ಹೆಚ್ಚಿನ ಗಮನ ಕೊಡುತ್ತಿದೆ. ಪರಿಣಾಮವಾಗಿ, ಇವತ್ತು ಭಾರತದ ರಫ್ತು ಕ್ರಮೇಣವಾಗಿ ಹೆಚ್ಚುತ್ತಿದೆ. ಇದೇ ಹಂತದಲ್ಲಿ ಜರ್ಮನಿಯ ಹೊಸ ತಂತ್ರಜ್ಞಾನ ಆವಿಷ್ಕಾರ ಸಾಮರ್ಥ್ಯವು ಭಾರತದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಇನ್ನಷ್ಟು ಬಲಗೊಳಿಸುವ ಸಾಧ್ಯತೆ ಇದೆ. ಹೀಗಾಗಿ, ಜರ್ಮನಿ ಜೊತೆ ಭಾರತದ ವ್ಯಾವಹಾರಿಕ ಬಾಂಧವ್ಯ ಇನ್ನಷ್ಟು ಬಲಗೊಳ್ಳುವುದು ಬಹಳ ಮುಖ್ಯ ಎನಿಸುತ್ತದೆ.
‘ದಿ ನೆಕ್ಸ್ಟ್ ಫ್ಯಾಕ್ಟರಿ ಆಫ್ ದಿ ವರ್ಲ್ಡ್’ ಅಥವಾ ‘ವಿಶ್ವದ ಮುಂದಿನ ಕಾರ್ಖಾನೆ’ ಹೆಸರಿನಲ್ಲಿ ನಡೆಯುವ ಸೆಷನ್ನಲ್ಲಿ ಭಾರತದ ಪ್ರಬಲ ತಯಾರಕಾ ವ್ಯವಸ್ಥೆಯು ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಯೊಂದಿಗೆ ಹೇಗೆ ಮಿಳಿತಗೊಳ್ಳಬಹುದು, ಈ ಸಪ್ಲೈ ಚೈನ್ಗೆ ಸೇರಲು ಇರುವ ಸವಾಲುಗಳನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ತಜ್ಞರು ಚರ್ಚಿಸಲಿದ್ದಾರೆ.
ಇದನ್ನೂ ಓದಿ: ಇಂಧನ ಕ್ಷೇತ್ರದಲ್ಲಿ ಭಾರತ-ಜರ್ಮನಿ ಸಹಭಾಗಿತ್ವ ಅಗತ್ಯ: ನ್ಯೂಸ್9 ಗ್ಲೋಬಲ್ ಸಮಿಟ್ನಲ್ಲಿ ಈ ವಿಚಾರ ಚರ್ಚೆ
ಭಾರತದ ಔದ್ಯಮಿಕ ಸಂಘಟನೆಯಾದ ಅಸೋಚಾಮ್ (ASSOCHAM) ಅಧ್ಯಕ್ಷ ಸಂಜಯ್ ನಾಯರ್, ಜರ್ಮನಿಯ ಮರ್ಸಿಡಿಸ್ ಬೆಂಜ್ ಗ್ರೂಪ್ ಎಜಿ ಜಾರ್ಗ್ ಬುರ್ಜರ್, ಇಂಡೋ ಜರ್ಮನ್ ಚೇಂಬರ್ ಆಫ್ ಕಾಮರ್ಸ್ನ ಡೈರೆಕ್ಟರ್ ಜನರಲ್ ಸ್ಟೀಫನ್ ಹಲುಸಾ, ಭಾರತ್ ಫೋರ್ಜ್ ಸಂಸ್ಥೆಯ ಮುಖ್ಯಸ್ಥ ಬಾಬಾ ಕಲ್ಯಾಣಿ, ಮಾರುತಿ ಸುಜುಕಿಯ ಹಿರಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪಾರ್ಥೋ ಬ್ಯಾನರ್ಜಿ ಅವರು ವಿವಿಧ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ