AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big Spends: 2022ರಲ್ಲಿ ಶೇ 80ರಷ್ಟು ಕುಟುಂಬಗಳಿಗೆ ದೊಡ್ಡ ಮೊತ್ತದ ವೆಚ್ಚ ಮಾಡುವ ಯೋಜನೆಯಿಲ್ಲ

2022ರಲ್ಲಿ ಕುಟುಂಬಗಳು ವಸತಿ ಆಸ್ತಿ, ಕಾರು, ಆಭರಣಗಳಂಥ ದೊಡ್ಡ ವೆಚ್ಚಗಳನ್ನು ಮಾಡುವ ಯೋಜನೆ ಇಟ್ಟುಕೊಂಡಿಲ್ಲ ಎಂದು ಲೋಕಲ್​ಸರ್ಕಲ್ಸ್ ಸಮೀಕ್ಷೆಯಲ್ಲಿ ತಿಳಿಸುಬಂದಿದೆ.

Big Spends: 2022ರಲ್ಲಿ ಶೇ 80ರಷ್ಟು ಕುಟುಂಬಗಳಿಗೆ ದೊಡ್ಡ ಮೊತ್ತದ ವೆಚ್ಚ ಮಾಡುವ ಯೋಜನೆಯಿಲ್ಲ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 05, 2022 | 11:48 AM

Share

2022ನೇ ಇಸವಿಯ ಬಗ್ಗೆ ಆಸಕ್ತಿಕರವಾದ ಸಮೀಕ್ಷೆಯೊಂದು ಈ ಲೇಖನದ ಮೂಲಕ ನಿಮ್ಮೆದುರು ಇದೆ. ಲೋಕಲ್​ಸರ್ಕಲ್ಸ್​ (LocalCircles) ನಡೆಸಿರುವ ಈ ಸಮೀಕ್ಷೆಯಲ್ಲಿ 47 ಸಾವಿರ ಕುಟುಂಬಗಳು ಭಾಗೀ ಆಗಿದ್ದವು. ಆ ಪೈಕಿ ಶೇ 78ರಷ್ಟು ಮಂದಿ ನೀಡಿರುವ ಉತ್ತರ ಈ ವರ್ಷ ಹೇಗಿರಬಹುದು ಎಂಬುದಕ್ಕೆ ಸುಳಿವು ಎನಿಸುತ್ತದೆ. ಅಷ್ಟಕ್ಕೂ ಅಷ್ಟು ಮಂದಿ ಹೇಳಿದ್ದು ಏನು ಅಂತೀರಾ? ಪ್ರತಿ ಐದು ಕುಟುಂಬಗಳಲ್ಲಿ ನಾಲ್ಕು ಕುಟುಂಬ ಹೇಳಿರುವಂತೆ, 2022ರಲ್ಲಿ ಯಾವುದೇ ಆಸ್ತಿ ಅಥವಾ ಕಾರಿನಂಥದ್ದನ್ನು ಖರೀದಿ ಮಾಡುವ ಆಲೋಚನೆ ಇಲ್ಲ ಎಂದಿದ್ದಾರೆ. ಆ ಪ್ರಮಾಣ ಶೇ 78ರಷ್ಟಾಗುತ್ತದೆ. ಇನ್ನು ಶೇ 7ರಷ್ಟು ಮಂದಿ ಖರೀದಿ ಮಾಡುತ್ತೇವೋ ಅಥವಾ ಇಲ್ಲವೋ ಎಂಬ ಬಗ್ಗೆ ಖಾತ್ರಿ ಇಲ್ಲ ಎಂಬ ಉತ್ತರ ನೀಡಿರುವವರು. ಕೇವಲ ಶೇ 15ರಷ್ಟು ಕುಟುಂಬಗಳು ಮಾತ್ರ ಆಸ್ತಿ, ಕಾರು ಅಥವಾ ಆಭರಣ ಖರೀದಿಸುವ ಬಗ್ಗೆ ಹೇಳಿದ್ದಾರೆ. ಇದನ್ನು ಸಂಖ್ಯೆಗಳಿಗೆ ಬದಲಾಯಿಸಿದರೆ 4 ಕೋಟಿ ಕುಟುಂಬಗಳು ದೊಡ್ಡ ಮೊತ್ತದ ಖರೀದಿ ವ್ಯವಹಾರ ಮಾಡುವ ಆಲೋಚನೆ ಹೊಂದಿವೆ ಎಂದಾಗುತ್ತದೆ.

ಆದರೂ ಬೇಡಿಕೆ ಮರುಕಳಿಸಿದೆ ಎನ್ನುತ್ತಾರೆ ಲೋಕಲ್​ಸರ್ಕಲ್ಸ್​ನ ಸ್ಥಾಪಕರಾದ ಸಚಿನ್ ತಾಪರಿಯ. ಏಳರಲ್ಲಿ ಒಂದು ಕುಟುಂಬ ವಸತಿ ಆಸ್ತಿ, ಆರರಲ್ಲಿ ಒಂದು ಕುಟುಂಬ ಕಾರು ಖರೀದಿಸುವುದಾಗಿ ಹೇಳಿವೆ. “ಒಮಿಕ್ರಾನ್ ಕಾರಣಕ್ಕೆ ಆತಂಕ ಸೃಷ್ಟಿಸಿರುವ ಮೂರನೇ ಅಲೆಯ ಹೊರತಾಗಿಯೂ ಆರ್ಥಿಕ ಅಡೆತಡೆಗಳು ತಾತ್ಕಾಲಿಕ,” ಎನ್ನಲಾಗಿದೆ. ಹಾಗಿದ್ದರೆ ಸಮೀಕ್ಷೆಯಲ್ಲಿ ಕಂಡುಬಂದಿದ್ದೇನು ಎಂಬುದರ ಅಂಕಿ- ಅಂಶದ ವಿವರ ಇಲ್ಲಿದೆ.

1) 2022ರಲ್ಲಿ ವಸತಿ ಆಸ್ತಿ ಖರೀದಿ ಮಾಡುವ ಬಗ್ಗೆ ನಿಮ್ಮ ಮತ್ತು ಕುಟುಂಬದವರ ಯೋಜನೆ ಏನು? – ಮೊದಲ ಅಥವಾ ಪ್ರಾಥಮಿಕ ವಸತಿ ಆಸ್ತಿ ಖರೀದಿಸುತ್ತಿದ್ದೇವೆ? ಶೇ 7 – ವಸತಿ ಆಸ್ತಿ ಖರೀದಿಸುವ ಯಾವುದೇ ಯೋಜನೆ ಇಲ್ಲ: ಶೇ 83 – ಎರಡನೇ ಅಥವಾ ಸೆಕೆಂಡರಿ ವಸತಿ ಆಸ್ತಿಯನ್ನು ಖರೀದಿಸುತ್ತಿದ್ದೇವೆ? ಶೇ 4 – ಹೂಡಿಕೆ ಉದ್ದೇಶಕ್ಕೆ ವಸತಿ ವಸತಿ ಆಸ್ತಿ ಖರೀದಿಸುತ್ತಿದ್ದೇವೆ? ಶೇ 4 – ಹೇಳುವುದಕ್ಕೆ ಸಾಧ್ಯವಿಲ್ಲ- ಶೇ 2

2) 2022ರಲ್ಲಿ ನಿಮ್ಮ ಮತ್ತು ಕುಟುಂಬದ ಆಭರಣ ಖರೀದಿ ಯೋಜನೆ ಇದೆಯಾ? – ಬಂಗಾರದ ಆಭರಣ ಖರೀದಿಸಲಿದ್ದೇವೆ: ಶೇ 9 – ವಜ್ರದ ಆಭರಣ ಖರೀದಿ ಮಾಡಲಿದ್ದೇವೆ: ಶೇ 0 – ಬೆಳ್ಳಿ ಆಭರಣಗಳನ್ನು ಕೊಳ್ಳಬೇಕೆಂದಿದ್ದೇವೆ: ಶೇ 0 – ಚಿನ್ನ ಹಾಗೂ ವಜ್ರದ ಆಭರಣ ಖರೀದಿಸಬೇಕು ಎಂದಿದ್ದೇವೆ: ಶೇ 2 – ಚಿನ್ನ ಹಾಗೂ ಬೆಳ್ಳಿ ಆಭರಣ ಖರೀದಿಸಬೇಕು ಎಂದಿದ್ದೇವೆ: ಶೇ 2 – ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣ ಖರೀದಿಸಬೇಕು ಎಂದಿದ್ದೇವೆ: ಶೇ 1 – ಯಾವುದೇ ಆಭರಣ ಖರೀದಿಸುವ ಯೋಜನೆ ಇಲ್ಲ: ಶೇ 78 – ಹೇಳಲು ಸಾಧ್ಯವಿಲ್ಲ: ಶೇ 8

3) 2022ರಲ್ಲಿ ನಿಮ್ಮ ಹಾಗೂ ಕುಟುಂಬದ ಅತ್ಯಂತ ಆದ್ಯತೆಯ ಆಸ್ತಿ ಯಾವುದು? – ಮ್ಯೂಚುವಲ್ ಫಂಡ್ಸ್: ಶೇ 31 – ಯಾವುದೇ ಹೊಸ ಹೂಡಿಕೆ ಮಾಡುವ ಯೋಜನೆ ಇಲ್ಲ: ಶೇ 28 – ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ಸ್: ಶೇ 22 – ಈಕ್ವಿಟೀಸ್: ಶೇ 10 – ಹೇಳಲು ಸಾಧ್ಯವಿಲ್ಲ: ಶೇ 5 – ಚಿನ್ನ: ಶೇ 4

4) 2022ರಲ್ಲಿ ನಿಮಗೆ ಮತ್ತು ಕುಟುಂಬಕ್ಕೆ ಆರೋಗ್ಯ ವಿಮೆ ಹೊಸದು ಖರೀದಿ ಅಥವಾ ಹೆಚ್ಚಳ ಮಾಡಿಸುವ ಯೋಜನೆ ಇದೆಯೇ – ಇನ್ಷೂರೆನ್ಸ್ ಕವರೇಜ್ ಮೊತ್ತವನ್ನು ಹೆಚ್ಚಿಸುತ್ತೇವೆ: ಶೇ 15 – ಈಗಿರುವ ಇನ್ಷೂರೆನ್ಸ್ ಹಾಗೇ ಉಳಿಸಿಕೊಳ್ಳುತ್ತೇವೆ: ಶೇ 67 – ಸದ್ಯಕ್ಕೆ ಯಾವುದೇ ಇನ್ಷೂರೆನ್ಸ್ ಕವರೇಜ್ ಇಲ್ಲ, ಹೊಸದನ್ನು ಖರೀದಿಸುತ್ತೇವೆ: ಶೇ 0 – ಆರೋಗ್ಯ ವಿಮೆ ಕವರೇಜ್ ಇಲ್ಲ ಹಾಗೂ ಖರೀದಿಸುವ ಯೋಜನೆ ಇಲ್ಲ: ಶೇ 18 – ಹೇಳುವುದಕ್ಕೆ ಸಾಧ್ಯವಿಲ್ಲ: ಶೇ 0

ಇದನ್ನೂ ಓದಿ: ದೇಶದ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯಲ್ಲಿ ರಾಜ್ಯದ ಭಾಗ 1/3ರಷ್ಟಿರಬೇಕು ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!