Charlie Secrets: ಹಣ, ಹೆಣ್ಣು, ಹೆಂಡ… ಬೇಡ ಬೇಡ ಬೇಡ; ಬುದ್ಧಿವಂತರಿಗೆ ಬುದ್ಧಿಮಾತು ಹೇಳಿದ್ದ ಚಾರ್ಲೀ ಮುಂಗರ್

|

Updated on: Dec 04, 2023 | 4:05 PM

Charlie Munger's Secrets of Longevity: ದಿವಂಗತ ಚಾರ್ಲೀ ಮುಂಗರ್ 99 ವರ್ಷ ಬದುಕಿದ್ದ ದೀರ್ಘಾಯುಷಿ. ಹಣಕಾಸು ವಿಚಾರದಲ್ಲಿ ಸಾಕಷ್ಟು ಯಶಸ್ವಿಯೂ ಹೌದು. ಒಬ್ಬ ಬುದ್ಧಿವಂತನಾದವನು ಕುಸಿದು ಬೀಳಲು ಹೆಣ್ಣು, ಹೆಂಡ ಮತ್ತು ಸಾಲ ಪ್ರಮುಖ ಕಾರಣ ಎಂದು ಚಾರ್ಲೀ ಮುಂಗರ್ ಯಾವಾಗಲೂ ಹೇಳುತ್ತಿದ್ದರು. ತಮ್ಮ ವೈಯಕ್ತಿಕ ಜೀವನದಲ್ಲಿ ಅಥವಾ ವೃತ್ತಿ ಜೀವನದಲ್ಲಿ ನಿಶ್ಚಿತ ಎನಿಸುವ ಅಪಾಯಗಳನ್ನು ಮೈಮೇಲೆ ಎಳೆದುಕೊಂಡಿಲ್ಲ ಎಂದು ಚಾರ್ಲೀ ತಮ್ಮ ದೀರ್ಘಾಯುಷ್ಯದ ಒಂದು ಗುಟ್ಟನ್ನು ಬಿಟ್ಟುಕೊಟ್ಟಿದ್ದರು.

Charlie Secrets: ಹಣ, ಹೆಣ್ಣು, ಹೆಂಡ... ಬೇಡ ಬೇಡ ಬೇಡ; ಬುದ್ಧಿವಂತರಿಗೆ ಬುದ್ಧಿಮಾತು ಹೇಳಿದ್ದ ಚಾರ್ಲೀ ಮುಂಗರ್
ಚಾರ್ಲೀ ಮುಂಗರ್
Follow us on

ಚಾರ್ಲೀ ಮುಂಗರ್ (Charlie Munger) ಇತ್ತೀಚೆಗೆ ನಿಧನರಾದ ಅಮೆರಿಕದ ಹೂಡಿಕೆ ತಜ್ಞ. ವಾರನ್ ಬಫೆಟ್ ಅವರ ದೀರ್ಘಕಾಲದ ಸ್ನೇಹಿತ, ಸಹವರ್ತಿ, ಸಹೋದ್ಯೋಗಿ. ವಾರನ್ ಬಫೆಟ್ (Warren Buffett) ಅವರ ಯಶೋಗಾಥೆಯ ಹಿಂದಿನ ಪ್ರಮುಖ ಸೂತ್ರಧಾರನೂ ಹೌದು. ಸಾವಿರಾರು ಕೋಟಿ ರೂ ಹಣ ಸಂಪಾದಿಸಿದವರು. ಹೆಚ್ಚೂಕಡಿಮೆ ನೂರು ವರ್ಷ ಬದುಕಿದವರು. ಅವರ ಜೀವನದ ಅನುಭವ ಅಮೋಘ, ಅನನ್ಯ. ಬದುಕನ್ನು ಮತ್ತು ವ್ಯವಹಾರವನ್ನು ಅವರು ನೋಡುತ್ತಿದ್ದ ರೀತಿ ವಿಭಿನ್ನವಾಗಿತ್ತು. ಅವರ ಕೆಲವೊಂದಿಷ್ಟು ಸಲಹೆಗಳು ಬಹಳ ಉಪಯುಕ್ತ ಎನಿಸುತ್ತವೆ.

ಹುಚ್ಚಾಟಗಳನ್ನು (crazy) ಬಿಡಿ ಎನ್ನುತ್ತಿದ್ದ ಚಾರ್ಲೀ ಮುಂಗರ್; ಏನಿದು ಹುಚ್ಚಾಟ?

ಚಾರ್ಲೀ ಮುಂಗರ್ 99 ವರ್ಷ ಬದುಕಿದ್ದರು. ಅವರ ದೀರ್ಘಾಯುಷ್ಯಕ್ಕೆ ಏನು ಕಾರಣ? ಮಾಧ್ಯಮ ಸಂದರ್ಶನಗಳಲ್ಲಿ ಈ ಪ್ರಶ್ನೆ ಅವರನ್ನು ಇದಿರುಗೊಳ್ಳುತ್ತಿತ್ತು. ತನಗೆ ಆ ದೀರ್ಘಾಯುಷ್ಯದ ರಹಸ್ಯ ಗೊತ್ತಿಲ್ಲ ಅನ್ನುತ್ತಲೇ ಅವರು ಒಮ್ಮೆ ಆ ರಹಸ್ಯ ಬಿಚ್ಚಿಟ್ಟಿದ್ದರು. ವೈಯಕ್ತಿಕ ಜೀವನದಲ್ಲೇ ಆಗಲೀ ವೃತ್ತಿಜೀವನದಲ್ಲೇ ಆಗಲೀ ನಿಶ್ಚಿತವೆನಿಸುವ ಅಪಾಯಗಳ ಸಮೀಪಕ್ಕೂ ಹೋಗುವುದಿಲ್ಲ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ವಾರನ್ ಬಫೆಟ್ ದೀರ್ಘಕಾಲದ ಸಹವರ್ತಿ ಚಾರ್ಲೀ ಮುಂಗರ್ 99ರ ವಯಸ್ಸಿನ ನಿಧನ

ಕ್ರೇಜಿ ಸಾವಾಸ ಬೇಡ ಬೇಡ ಬೇಡ; ಹಣ, ಹೆಂಡ, ಹೆಣ್ಣು ಹುಷಾರ್ ಎನ್ನುತ್ತಿದ್ದ ಮುಂಗರ್…

ಕ್ರೇಜಿ ಅಥವಾ ಹುಚ್ಚಾಟದ ಬಗ್ಗೆ ಚಾರ್ಲಿ ಬಹಳ ಗಂಭೀರವಾಗಿ ಮಾತನಾಡಿದ್ದರು. ಈ ಕ್ರೇಜಿ ಕಾರ್ಯಗಳ ಸಹವಾಸಕ್ಕೆ ದಯವಿಟ್ಟು ಹೋಗಬೇಡಿ ಎಂದು ಯುವಕರಿಗೆ ತಿಳಿಹೇಳುತ್ತಿದ್ದರು. ಏನಿದು ಕ್ರೇಜಿ…?

ಒಬ್ಬ ಬುದ್ಧಿವಂತ ವ್ಯಕ್ತಿ ಹಾಳಾಗಲು ಮೂರು ಕಾರಣಗಳಿರುತ್ತವೆ. ಅದೇ ಹಣ, ಹೆಣ್ಣು, ಹೆಂಡ (Ladies, Liquor and Leverage) ಎಂದು ಮುಂಗರ್ ಹೇಳುತ್ತಿದ್ದರು. ಇಲ್ಲಿ ಲೆವಿರೇಜ್ ಎನ್ನುವುದಕ್ಕೆ ಅನ್ವರ್ಥವಾಗಿ ಹಣ ಪದ ಹಾಕಿದ್ದೇವೆ. ಇಲ್ಲಿ ಹಣ ಎಂದರೆ ಹಣ ಸಂಪಾದನೆ ಅಲ್ಲ. ಹೂಡಿಕೆ ಮಾಡಲು ಸಾಲ ಪಡೆಯುವ ಪ್ರವೃತ್ತಿ ಬಗ್ಗೆ ಮುಂಗರ್ ಅವರು ಲೆವಿರೇಜ್ ಪದ ಉಪಯೋಗಿಸಿದ್ದರು.

ಇದನ್ನೂ ಓದಿ: ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಯಾವ್ಯಾವ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಬಡ್ಡಿ ಸಿಗುತ್ತದೆ, ಇಲ್ಲಿದೆ ಡೀಟೇಲ್ಸ್

ಬಹಳಷ್ಟು ಜನರು ಸಾಲ ಮಾಡಿ ಆ ಹಣವನ್ನು ಷೇರು ಮಾರುಕಟ್ಟೆಗೆ ಹೂಡಿಕೆ ಮಾಡುವುದುಂಟು. ಚಾರ್ಲಿ ಮುಂಗರ್ ಈ ಪ್ರವೃತ್ತಿಯನ್ನು ಬಹಳ ವಿರೋಧಿಸುತ್ತಾರೆ. ಇದು ಬಹಳ ದೊಡ್ಡ ಹಣಕಾಸು ತಪ್ಪು ನಿರ್ಧಾರ ಎಂದು ಬಹುತೇಕ ಎಲ್ಲಾ ಹಣಕಾಸು ತಜ್ಞರೂ ಅಭಿಪ್ರಾಯಪಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Mon, 4 December 23