ಬೆಂಗಳೂರು, ಡಿಸೆಂಬರ್ 10: ಭಾರತದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಐಟಿ ಕ್ಷೇತ್ರದಲ್ಲಿ ಹೊಸ ನೇಮಕಾತಿಗಳಲ್ಲಿ ಗಣನೀಯ ಏರಿಕೆ ಆಗಿಲ್ಲ. ಆದರೆ, ಐಟಿ ಅಲ್ಲದ ಪ್ರಮುಖ ಕ್ಷೇತ್ರಗಳಲ್ಲಿ (non-IT sectors) ಸಾಕಷ್ಟು ನೇಮಕಾತಿ ಆಗಿರುವುದು ತಿಳಿದುಬಂದಿದೆ. ನೌಕ್ರಿ ಡಾಟ್ ಕಾಮ್ನ ಜಾಬ್ಸ್ಪೀಕ್ ಇಂಡೆಕ್ಸ್ (JobSpeak Index) ಪ್ರಕಾರ ಆಯಿಲ್ ಮತ್ತು ಗ್ಯಾಸ್, ಫಾರ್ಮಾ, ಇನ್ಷೂರೆನ್ಸ್ ವಲಯಗಳಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಹೈರಿಂಗ್ ಉತ್ತಮವಾಗಿ ನಡೆದಿದೆ.
ತೈಲ ಮತ್ತು ಅನಿಲ ಕ್ಷೇತ್ರ
ಆಯಿಲ್ ಅಂಡ್ ಗ್ಯಾಸ್ ವಲಯದಲ್ಲಿ ವಿವಿಧ ಸಂಸ್ಥೆಗಳು ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 9ರಷ್ಟು ನೇಮಕಾತಿ ಹೆಚ್ಚಳವಾಗಿದೆ. ಮೆಷೀನ್ ಆಪರೇಟರ್, ಇನ್ಸ್ಟ್ರುಮೆಂಟೇಶನ್ ಎಂಜಿನಿಯರ್ ಮತ್ತು ಮೈಂಟೆನೆನ್ಸ್ ಹೆಡ್ ಉದ್ಯೋಗಗಳಿಗೆ ಹೆಚ್ಚಿನ ನೇಮಕಾತಿ ಆಗಿದೆ.
ಇದನ್ನೂ ಓದಿ: Gold Income: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ಗೆ ನಿಮ್ಮ ಒಡವೆ ಬಳಸುವ ಮುನ್ನ ಈ ಸಂಗತಿಗಳನ್ನು ತಿಳಿದಿರಿ
ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಫಾರ್ಮಾ ವಲಯದಲ್ಲಿ ಶೇ. 6ರಷ್ಟು ಹೊಸ ಉದ್ಯೋಗಗಳಿಗೆ ನೇಮಕಾತಿ ಆಗಿದೆ. ಲ್ಯಾಬ್ ಟೆಕ್ನೀಶಿಯನ್, ಕ್ಲಿನಿಕಲ್ ಅಸಿಸ್ಟೆಂಟ್ ಮತ್ತು ಸ್ಟೋರ್ ಕೀಪರ್ ಕೆಲಸಗಳಿಗೆ ಹೆಚ್ಚಿನ ನೇಮಕಾತಿ ಆಗಿದೆ
ನೇಮಕಾತಿಯಲ್ಲಿ ಮಿಂಚುತ್ತಿರುವ ಇನ್ನೊಂದು ವಲಯ ಇನ್ಷೂರೆನ್ಸ್ನದ್ದು. ಕಳೆದ ಎರಡು ತಿಂಗಳಲ್ಲಿ ಶೇ. 5ರಷ್ಟು ನೇಮಕಾತಿ ಹೆಚ್ಚಳವಾಗಿದೆ. ಬ್ರ್ಯಾಂಚ್ ಸೇಲ್ಸ್ ಎಕ್ಸಿಕ್ಯೂಟಿವ್, ಏರಿಯಾ ಸೇಲ್ಸ್ ಮ್ಯಾನೇಜರ್, ಬ್ರ್ಯಾಂಚ್ ಸೇಲ್ಸ್ ಮ್ಯಾನೇಜರ್ ಪೋಸ್ಟ್ಗಳಿಗೆ ಹೆಚ್ಚಿನ ನೇಮಕಾತಿ ಆಗಿದೆ.
ಇದನ್ನೂ ಓದಿ: ಐಟಿ ದಾಳಿ ನಡೆಯುವ ಮುನ್ನ ಇಲಾಖೆ ತಯಾರಿ ಹೇಗಿರುತ್ತೆ? ಸುಳ್ಳು ಕೇಸ್ ದಾಖಲಿಸುವುದಿಲ್ಲವಾ ಇಲಾಖೆ?
ಸಾಫ್ಟ್ವೇರ್, ಹಾರ್ಡ್ವೇರ್ ಒಳಗೊಂಡ ಐಟಿ ಉದ್ಯಮದಲ್ಲಿ ಅಕ್ಟೋಬರ್, ನವೆಂಬರ್ನಲ್ಲಿ ನೇಮಕಾತಿ ಶೇ. 22ರಷ್ಟು ಕಡಿಮೆ ಆಗಿದೆ.
ಇನ್ನು, ನಗರಗಳ ವಿಷಯಕ್ಕೆ ಬಂದರೆ ನೇಮಕಾತಿ ಕಡಿಮೆ ಆಗಿರುವ ನಗರಗಳಲ್ಲಿ ಬೆಂಗಳೂರು ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ