ICICI Bank iMobile Pay: ಐಸಿಐಸಿಐ ಬ್ಯಾಂಕ್ ಐಮೊಬೈಲ್​ ಪೇ ಮೂಲಕ ಯಾವುದೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಿ

| Updated By: Srinivas Mata

Updated on: Sep 06, 2021 | 1:25 PM

ಐಸಿಐಸಿಐ ಬ್ಯಾಂಕ್​ನ ಐಮೊಬೈಲ್ ಆ್ಯಪ್ ಮೂಲಕ ಯಾವುದೇ ಬ್ಯಾಂಕ್​ನ ಕ್ರೆಡಿಟ್ ಕಾರ್ಡ್ ಪಾವತಿ ಮಾಡಬಹುದು. ಆ ಬಗ್ಗೆ ವಿವರ ಇಲ್ಲಿದೆ.

ICICI Bank iMobile Pay: ಐಸಿಐಸಿಐ ಬ್ಯಾಂಕ್ ಐಮೊಬೈಲ್​ ಪೇ ಮೂಲಕ ಯಾವುದೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಿ
ಸಾಂದರ್ಭಿಕ ಚಿತ್ರ
Follow us on

ಬ್ಯಾಂಕ್​ನ ಮೊಬೈಲ್ ಅಪ್ಲಿಕೇಶನ್ ‘iMobile Pay’ ಬಳಸಿಕೊಂಡು ಯಾವುದೇ ಬ್ಯಾಂಕ್​ನ ಕ್ರೆಡಿಟ್ ಕಾರ್ಡ್ ಬಾಕಿ ಪಾವತಿಸಲು ಮತ್ತು ನಿರ್ವಹಿಸಲು ಐಸಿಐಸಿಐ ಬ್ಯಾಂಕ್​ನಿಂದ (ICICI Bank) ತನ್ನ ಲಕ್ಷಾಂತರ ಸಂಖ್ಯೆಯ ಉಳಿತಾಯ ಖಾತೆ (Savings Account) ಗ್ರಾಹಕರಿಗೆ ಅನುವು ಮಾಡಿಕೊಟ್ಟಿದೆ ಎಂದು ಇಂದು (ಸೋಮವಾರ, ಸೆಪ್ಟೆಂಬರ್ 6, 2021) ಘೋಷಿಸಿದೆ. ಕೆಲವೇ ಸೆಕೆಂಡ್​ಗಳಲ್ಲಿ ಗ್ರಾಹಕರು ಯಾವುದೇ ಬ್ಯಾಂಕ್​ನ ಕ್ರೆಡಿಟ್ ಕಾರ್ಡ್‌ಗಳನ್ನು ಆ್ಯಪ್‌ಗೆ ಸೇರ್ಪಡೆ ಮಾಡಿಕೊಳ್ಳಬಹುದು. ಮತ್ತು ನಂತರ ಅದೇ ಆ್ಯಪ್‌ನಿಂದ ಬಾಕಿಯನ್ನು ಪಾವತಿಸಬಹುದು ಮತ್ತು ನಿರ್ವಹಿಸಬಹುದು. ಇದು ಗ್ರಾಹಕರಿಗೆ ಇನ್ನಷ್ಟು ಅನುಕೂಲವನ್ನು ನೀಡುತ್ತದೆ. ಇದರಲ್ಲಿ ಸಾಮಾನ್ಯವಾಗಿ ಅನೇಕ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬಹುದು. ಎಲ್ಲ ಕಾರ್ಡ್‌ಗಳನ್ನು ಸುಲಭವಾಗಿ, ಸುರಕ್ಷಿತ ಮತ್ತು ಭದ್ರತೆಯಿಂದ ನಿರ್ವಹಿಸಲು ಒಂದೇ ಕಡೆ ಎಲ್ಲಕ್ಕೂ ಪರಿಹಾರ ಒದಗಿಸುತ್ತದೆ.

ಈ ಹೊಸ ವೈಶಿಷ್ಟ್ಯ ಮೂಲಕ ಗ್ರಾಹಕರು ಹಲವಾರು ಕಾರ್ಡ್‌ಗಳ ನಿರ್ವಹಣೆಯನ್ನು ಒಂದೇ ಕಡೆ ಮಾಡಲು ಅಥವಾ ಬಾಕಿ ಪಾವತಿಸಲು ಹಲ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ತೊಂದರೆಯನ್ನು ತಪ್ಪಿಸುತ್ತದೆ. ಇದರ ಜತೆಗೆ ಗ್ರಾಹಕರು ಬಿಲ್ ಪಾವತಿ ಜ್ಞಾಪನೆಗಳನ್ನು ಸೆಟ್​ ಮಾಡಬಹುದು, ಎಲ್ಲ ಕಾರ್ಡ್‌ಗಳ ಪಾವತಿ ಹಿಸ್ಟರಿಯನ್ನು ವೀಕ್ಷಿಸಬಹುದು, ವಾಟ್ಸಾಪ್ ಮೂಲಕ ಪಾವತಿ ದೃಢೀಕರಣವನ್ನು ಹಂಚಿಕೊಳ್ಳಬಹುದು ಮತ್ತು ಕಾರ್ಡ್‌ಗಳ ಬಿಲ್ಲಿಂಗ್ ಸೈಕಲ್‌ಗೆ ಅನುಗುಣವಾಗಿ ನಿಗದಿತ ದಿನಾಂಕಗಳನ್ನು ನಿರ್ವಹಿಸಬಹುದು ಹಾಗೂ ಬದಲಾಯಿಸಬಹುದು.

ಡಿಜಿಟಲ್ ಚಾನೆಲ್‌ಗಳು ಮತ್ತು ಪಾಲುದಾರಿಕೆ ಮುಖ್ಯಸ್ಥ ಬಿಜಿತ್ ಭಾಸ್ಕರ್ ಈ ಕುರಿತು ಮಾತನಾಡಿ, “ಯಾವಾಗಲೂ ಗ್ರಾಹಕರ ಅನುಕೂಲವನ್ನು ಸುಧಾರಿಸಲು ಮತ್ತು ಬ್ಯಾಂಕಿಂಗ್ ಅನುಭವವನ್ನು ಹೆಚ್ಚಿಸಲು ಸಲ್ಯೂಷನ್​ಗಳನ್ನು ಪರಿಚಯಿಸಲು ಐಸಿಐಸಿಐ ಬ್ಯಾಂಕ್ ಶ್ರಮಿಸುತ್ತದೆ. ಬ್ಯಾಂಕ್​ನ ಅತ್ಯಾಧುನಿಕ ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ನಲ್ಲಿನ ಹೊಸ ವೈಶಿಷ್ಟ್ಯವು ಈ ಪ್ರಯತ್ನಕ್ಕೆ ಸಾಕ್ಷಿ ಆಗಿದೆ. ಹೆಚ್ಚಿನ ಸಂಖ್ಯೆ ಗ್ರಾಹಕರು ತಮ್ಮ ವಿವಿಧ ಅಗತ್ಯಗಳಿಗಾಗಿ ಹಲವು ಕಾರ್ಡ್‌ಗಳನ್ನು ಬಳಸುತ್ತಿರುವುದರಿಂದ ಈ ಹೊಸ ಸಲ್ಯೂಷನ್​ನಿಂದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳ ಪ್ರಕ್ರಿಯೆಯನ್ನು ಸಮರ್ಪಕವಾಗಿ ಮಾಡಲು ನೆರವು ನೀಡುವ ಗುರಿ ಹೊಂದಿದೆ. ಇದು ಗ್ರಾಹಕರ ಎಲ್ಲ ಕ್ರೆಡಿಟ್ ಕಾರ್ಡ್‌ಗಳಿಗೆ ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಒನ್-ಸ್ಟಾಪ್ ಪಾವತಿ ಸಲ್ಯೂಷನ್ ಅನುಕೂಲವನ್ನು ನೀಡುತ್ತದೆ. ಪಾವತಿಗಳಿಗಾಗಿ ಅನೇಕ ಪೋರ್ಟಲ್‌ಗಳಿಗೆ ತೆರಳುವ ಸಮಯವನ್ನು ಉಳಿಸುತ್ತದೆ”.

ಗ್ರಾಹಕರು ಈ ಸೌಲಭ್ಯವನ್ನು ಹೇಗೆ ಬಳಸಿಕೊಳ್ಳಬಹುದು ಎಂಬು ವಿವರ ಇಲ್ಲಿದೆ:
– iMobile Payಗೆ ಲಾಗ್​ ಇನ್ ಮಾಡಿ ಮತ್ತು ‘Cards and Forex’ ವಿಭಾಗವನ್ನು ಆಯ್ಕೆ ಮಾಡಿ
– ‘Other Bank Credit Card’ಗೆ ತೆರಳಿ
– ‘Add Card’ ಮೇಲೆ ಟ್ಯಾಪ್ ಮಾಡಿ ಮತ್ತು ಅಗತ್ಯ ವಿವರಗಳನ್ನು ನಮೂದಿಸಿ
– ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ OTPಯನ್ನು ದೃಢೀಕರಿಸಿ ಮತ್ತು ಕಾರ್ಡ್ ಅನ್ನು ತಕ್ಷಣವೇ ಸೇರ್ಪಡೆ ಮಾಡಲಾಗುತ್ತದೆ
– ಒಮ್ಮೆ ಕಾರ್ಡ್ ಅನ್ನು ಸೇರ್ಪಡೆ ಮಾಡಿದ ನಂತರ ಅದನ್ನು “Other Bank Credit Card” ಟ್ಯಾಬ್ ಅಡಿಯಲ್ಲಿ ನೋಡಬಹುದು ಮತ್ತು ನಿರ್ವಹಿಸಬಹುದು
– ‘IMobile Pay’ ಬ್ಯಾಂಕ್​ನ ಅತ್ಯಾಧುನಿಕ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಆಗಿದ್ದು, 350ಕ್ಕೂ ಹೆಚ್ಚು ಸೇವೆಗಳನ್ನು ನೀಡುತ್ತದೆ. ಯಾವುದೇ ಬ್ಯಾಂಕ್​ನ ಗ್ರಾಹಕರಿಗೆ ಪಾವತಿ ಮತ್ತು ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಬ್ಯಾಂಕ್ ‘iMobile’ ಎಂದು ಕರೆಯುವ ಆ್ಯಪ್ ಅನ್ನು ‘iMobile Pay’ ಆಗಿ 2020ರ ಡಿಸೆಂಬರ್​ನಲ್ಲಿ ಪರಿವರ್ತಿಸಿತು.

ಇದನ್ನೂ ಓದಿ: ICICI Bank: 50 ಸಾವಿರದಿಂದ 5 ಲಕ್ಷದ ತನಕ ಐಸಿಐಸಿಐ ಬ್ಯಾಂಕ್​ ಇಂಟರ್​ನೆಟ್​ ಬ್ಯಾಂಕಿಂಗ್​ನಲ್ಲಿ ಇಎಂಐ ಆಯ್ಕೆಗೆ ಅವಕಾಶ

(Now Pay All Bank Credit Card Bill Through ICICI Bank iMobile Pay App)