Indian Railway: ಭಾರತೀಯ ರೈಲ್ವೆಯ 1 ರೂ. ವಿಮೆಗೆ ಸಿಗಲಿದೆ 10 ಲಕ್ಷ ಕವರೇಜ್!

| Updated By: Ganapathi Sharma

Updated on: Nov 03, 2022 | 3:30 PM

Indian Railway Insurance; ರೈಲು ಪ್ರಯಾಣದ ವೇಳೆ ಅಪಘಾತ ಸಂಭವಿಸಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೆ ಅಥವಾ ಗಾಯಗೊಂಡು ಆಸ್ಪತ್ರೆಗೆ ಸೇರಿದರೆ ಅದರ ಖರ್ಚನ್ನು ಭರಿಸಲು ಪ್ರಯಾಣಿರಿಗೆ ನೆರವಾಗುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ 1 ರೂ. ವಿಮೆ ಪರಿಚಯಿಸಿದ್ದು, 10 ಲಕ್ಷ ರೂ. ಕವರೇಜ್ ಘೋಷಿಸಿದೆ.

Indian Railway: ಭಾರತೀಯ ರೈಲ್ವೆಯ 1 ರೂ. ವಿಮೆಗೆ ಸಿಗಲಿದೆ 10 ಲಕ್ಷ ಕವರೇಜ್!
ಭಾರತೀಯ ರೈಲ್ವೆ
Follow us on

ನವದೆಹಲಿ: ರೈಲು ಪ್ರಯಾಣದ ವೇಳೆ ಅಪಘಾತ ಸಂಭವಿಸಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೆ ಅಥವಾ ಗಾಯಗೊಂಡು ಆಸ್ಪತ್ರೆಗೆ ಸೇರಿದರೆ ಅದರ ಖರ್ಚನ್ನು ಭರಿಸಲು ಪ್ರಯಾಣಿರಿಗೆ ನೆರವಾಗುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ (Indian Railways) ಹೊಸ ವಿಮೆ (insurance) ಯೋಜನೆಯನ್ನು ಇತ್ತಿಚೆಗೆ ಪರಿಚಯಿಸಿದೆ. ಒಂದು ವೇಳೆ, ಅಪಘಾತಗಳಲ್ಲಿ ಪ್ರಯಾಣಿಕರು ಮರಣ ಹೊಂದಿದರೆ ಅವರನ್ನು ಅವಲಂಬಿಸಿರುವವರು ಅಥವಾ ಕುಟುಂಬದವರು ಮತ್ತಷ್ಟು ಸಂಕಷ್ಟಕ್ಕೀಡಾಗುವುದನ್ನು ತಡೆಯುವ, ಅವರನ್ನು ಆರ್ಥಿಕವಾಗಿ ತುಸು ಸಬಲರನ್ನಾಗಿಸುವ ಉದ್ದೇಶದೊಂದಿಗೆ ಇಲಾಖೆಯು 1 ರೂ. ವಿಮೆ ಪರಿಚಯಿಸಿದ್ದು, 10 ಲಕ್ಷ ರೂ. ಕವರೇಜ್ ಘೋಷಿಸಿದೆ. ರೈಲ್ವೆಯ ಕಾರ್ಯಾಚರಣೆ ವಿಮೆ ಯೋಜನೆಯಡಿ ಈ ವಿಮೆಯನ್ನು ರೈಲ್ವೆ ಇಲಾಖೆ ಘೋಷಿಸಿದೆ. ಈ ವಿಮೆ ಸೇವೆ ಒದಗಿಸುವ ಕಂಪನಿಗಳ ಪಟ್ಟಿಯನ್ನೂ ಇಲಾಖೆ ಅಂತಿಮಗೊಳಿಸಿದೆ.

ಯಾವೆಲ್ಲ ಕಂಪನಿಗಳಿಂದ ವಿಮೆ ಸೇವೆ?

1 ರೂ. ವಿಮೆ ಸೇವೆ ಒದಗಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಕೆಲವು ತಿಂಗಳುಗಳ ಹಿಂದೆ ಬಿಡ್ಡಿಂಗ್ ಪ್ರಕ್ರಿಯೆ ನಡೆಸಿತ್ತು. ಸುಮಾರು 19 ವಿಮಾ ಕಂಪನಿಗಳು ಬಿಡ್ಡಿಂಗ್​ನಲ್ಲಿ ಪಾಲ್ಗೊಂಡಿದ್ದವು. ಈ ಪೈಕಿ ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಡೆಟ್, ರಾಯಲ್ ಸುಂದರಂ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಡೆಟ್, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಡೆಟ್ ಕಂಪನಿಗಳನ್ನು ವಿಮೆ ಯೋಜನೆ ಸೇವೆ ಒದಗಿಸುವುದಕ್ಕಾಗಿ ರೈಲ್ವೆ ಇಲಾಖೆ ಅಂತಿಮಗೊಳಿಸಿತ್ತು. ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾದ ಉಳಿದ ಕಂಪನಿಗಳು ಬಿಡ್ಡಿಂಗ್​ ಪ್ರಕ್ರಿಯೆಯಿಂದ ಹೊರಬಿದ್ದಿದ್ದವು.

ಇದನ್ನೂ ಓದಿ
Air Asia: ಏರ್​ ಏಷಿಯಾ ಸಂಪೂರ್ಣ ಒಡೆತನ ಟಾಟಾ ಕಂಪನಿಯ ತೆಕ್ಕೆಗೆ
Invest Karnataka 2022: ಹೂಡಿಕೆ ಸಮಾವೇಶದ ಮೊದಲ ದಿನವೇ ಹರಿದು ಬಂತು 3.61 ಲಕ್ಷ ಕೋಟಿ ರೂ.
Airtel 5G: ಕೇವಲ 30 ದಿನಗಳಲ್ಲಿ 10 ಲಕ್ಷ ಗ್ರಾಹಕರ ಸಂಪಾದಿಸಿದ ಏರ್ಟೆಲ್ 5ಜಿ
ಪಿಂಚಣಿದಾರು ಆನ್​ಲೈನ್​ನಲ್ಲಿ ಜೀವನ ಪ್ರಮಾಣಪತ್ರ ಪುರಾವೆ ಸಲ್ಲಿಸಲು ಇಲ್ಲಿದೆ 5 ಸುಲಭ ವಿಧಾನ

ಪ್ರಯಾಣದ ವಿಮೆ ಕಡ್ಡಾಯವಲ್ಲ

ಪ್ರಯಾಣದ ವಿಮೆಗಾಗಿ 20 ರೂ. ನಿಗದಿಪಡಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ ಎಂದು ಹಿಂದೆ ವರದಿಯಾಗಿತ್ತು. ಆದರೆ, ಅಂತಿಮವಾಗಿ 1 ರೂ. ನಿಗದಿಪಡಿಸಿದೆ. ಈ ವಿಮೆಯನ್ನು ಇಲಾಖೆ ಕಡ್ಡಾಯಗೊಳಿಸಿಲ್ಲ. ಪ್ರಯಾಣಿಕರು ಬೇಕಿದ್ದಲ್ಲಿ ವಿಮೆ ಆಯ್ಕೆ ಮಾಡಿಕೊಳ್ಳಬಹುದು, ಇಲ್ಲವಾದಲ್ಲಿ ಬಿಟ್ಟುಬಿಡಬಹುದು.

ಪ್ರಯೋಜನಗಳೇನು?

ರೈಲ್ವೆ ಇಲಾಖೆಯ ಈ ವಿಮೆ ಯೋಜನೆಯಿಂದ ಹಲವು ರೀತಿಯ ಪ್ರಯೋಜನಗಳಿವೆ. ಪ್ರಯಾಣದ ಸಂದರ್ಭದಲ್ಲಿ ಮರಣ ಹೊಂದಿದರೆ ಕುಟುಂಬದವರಿಗೆ 10 ಲಕ್ಷ ರೂ. ದೊರೆಯಲಿದೆ. ಒಂದು ವೇಳೆ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರೂ 10 ಲಕ್ಷ ರೂ.ವರೆಗೆ ಪರಿಹಾರ ದೊರೆಯಲಿದೆ. ಭಾಗಶಃ ಅಂಗವೈಕಲ್ಯ ಅಥವಾ ಗಾಯಕ್ಕೊಳಗಾದರೆ 7.5 ಲಕ್ಷ ರೂ., ಆಸ್ಪತ್ರೆಗೆ ದಾಖಲಾದರೆ 5 ಲಕ್ಷ ರೂ. ದೊರೆಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ