PayPal: ಬಿಟ್​ಕಾಯಿನ್​ ಸೇರಿ ಕ್ರಿಪ್ಟೋಕರೆನ್ಸಿಗಳನ್ನು ಬಾಹ್ಯ ವ್ಯಾಲೆಟ್​ಗಳಿಗೆ ವರ್ಗಾವಣೆ ಮಾಡಲು ಪೇಪಾಲ್​ ಅನುಮತಿ

| Updated By: Srinivas Mata

Updated on: Jun 10, 2022 | 3:38 PM

ಬಿಟ್​ಕಾಯಿನ್ ಒಳಗೊಂಡಂತೆ ಕ್ರಿಪ್ಟೋಕರೆನ್ಸಿಗಳನ್ನು ಬಾಹ್ಯ ವ್ಯಾಲೆಟ್​ಗಳಿಗೆ ವರ್ಗಾವಣೆ ಮಾಡುವುದಕ್ಕೆ ಪೇಪಾಲ್​ನಿಂದ ಗ್ರಾಹಕರಿಗೆ ಅವಕಾಶ ನೀಡಲಾಗಿದೆ.

PayPal: ಬಿಟ್​ಕಾಯಿನ್​ ಸೇರಿ ಕ್ರಿಪ್ಟೋಕರೆನ್ಸಿಗಳನ್ನು ಬಾಹ್ಯ ವ್ಯಾಲೆಟ್​ಗಳಿಗೆ ವರ್ಗಾವಣೆ ಮಾಡಲು ಪೇಪಾಲ್​ ಅನುಮತಿ
ಸಾಂದರ್ಭಿಕ ಚಿತ್ರ
Follow us on

ಬಿಟ್​ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿಗಳನ್ನು (Cryptocurrency) ಬಾಹ್ಯ ವ್ಯಾಲೆಟ್​ಗಳಿಗೆ ವರ್ಗಾವಣೆ ಮಾಡುವುದಕ್ಕೆ ಬಳಕೆದಾರರಿಗೆ ಅವಕಾಶ ನೀಡುವುದಾಗಿ ಪೇಪಾಲ್​ ಹೋಲ್ಡಿಂಗ್ಸ್ ಇಂಕ್ ಹೇಳಿದೆ. ಫಿನ್​ಟೆಕ್ ಕಂಪೆನಿಯಾದ ಪೇಪಾಲ್ ಡಿಜಿಟಲ್​ ಕರೆನ್ಸಿಗಳಿಗಾಗಿ ತನ್ನ ಪ್ಲಾಟ್​ಫಾರ್ಮ್​ ಶುರು ಮಾಡಿದ ಹತ್ತಿರ ಹತ್ತಿರ ಎರಡು ವರ್ಷಗಳ ನಂತರ ಈ ಕ್ರಮಕ್ಕೆ ಮುಂದಾಗಿದೆ. ಮಂಗಳವಾರದಂದು ಶುರುವಾಗುವಂತೆ ಈ ಫೀಚರ್ ಆಯ್ದ ಯುಎಸ್​ ಬಳಕೆದಾರರಿಗೆ ದೊರಕಿಸಲಾಗುವುದು ಮತ್ತು ಮುಂಬರುವ ತಿಂಗಳಲ್ಲಿ ಅಮೆರಿಕದ ಎಲ್ಲ ಅರ್ಹ ಬಳಕೆದಾರರಿಗೆ ದೊರಕಿಸಲಾಗುವುದು ಎಂದು ಕಂಪೆನಿಯಿಂದ ತಿಳಿಸಲಾಗಿದೆ.

2020ರ ಅಕ್ಟೋಬರ್‌ನಲ್ಲಿ ಬಿಟ್‌ಕಾಯಿನ್, ಎಥೆರಿಯಮ್, ಬಿಟ್‌ಕಾಯಿನ್ ನಗದು ಮತ್ತು ಲಿಟ್‌ಕಾಯಿನ್ ಅನ್ನು ಖರೀದಿಸಲು, ಮಾರಾಟ ಮಾಡಲು ಮತ್ತು ಇಟ್ಟುಕೊಳ್ಳಲು ಪೇಪಾಲ್ (PayPal) ಗ್ರಾಹಕರಿಗೆ ಅವಕಾಶ ನೀಡಲಾರಂಭಿಸಿತು. ಆದರೆ ಬಳಕೆದಾರರಿಗೆ ಕ್ರಿಪ್ಟೋ ಹೋಲ್ಡಿಂಗ್‌ಗಳನ್ನು ಅದರ ಪ್ಲಾಟ್‌ಫಾರ್ಮ್‌ನಿಂದ ಹಿಂದೆ ಸರಿಸಲು ಅನುಮತಿಸಲಾಗಲಿಲ್ಲ.

ಕ್ರಿಪ್ಟೋವನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಕಂಪೆನಿಯು ಅನುಮತಿಸಿದಾಗಿನಿಂದ ಬಳಕೆದಾರರು ಹೊಸ ಫೀಚರ್​ಗಾಗಿ ವಿನಂತಿಸುತ್ತಿದ್ದಾರೆ ಎಂದು ಪೇಪಾಲ್ ಹೇಳಿದೆ. ಕಂಪೆನಿಯ ಷೇರುಗಳು ಶೇ 0.3ರಷ್ಟು ಏರಿಕೆಯಾಗಿ ಯುಎಸ್​ಟಿ 87.08ಕ್ಕೆ ತಲುಪಿದೆ. ಕಳೆದ ವರ್ಷದಿಂದ ದೊಡ್ಡ ಹೂಡಿಕೆದಾರರು, ಸೆಲೆಬ್ರಿಟಿಗಳು ಮತ್ತು ಬ್ಲೂ-ಚಿಪ್ ಕಂಪೆನಿಗಳು ಕ್ರಿಪ್ಟೋ ಹೂಡಿಕೆಗಳನ್ನು ದ್ವಿಗುಣಗೊಳಿಸುವುದರೊಂದಿಗೆ ಕ್ರಿಪ್ಟೋ ಮಾರುಕಟ್ಟೆಯು ಹೂಡಿಕೆದಾರರ ಆಸಕ್ತಿಯಲ್ಲಿ ಭಾರೀ ಹೆಚ್ಚಳವನ್ನು ಕಂಡಿದೆ.

ಆದರೆ, ಅಂತಹ ಕರೆನ್ಸಿಗಳ ಬೆಲೆಗಳು ಅಸ್ಥಿರವಾಗಿಯೇ ಉಳಿದಿವೆ, ಹಣದುಬ್ಬರದ ವಿರುದ್ಧ ಮನವಿಯನ್ನು ನಿಧಾನಗೊಳಿಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Crypto Tax: ಏಪ್ರಿಲ್​ 1ರಿಂದ ಕ್ರಿಪ್ಟೋ ಮೇಲೆ ತೆರಿಗೆ; ಅದಕ್ಕೂ ಮುನ್ನ ಮಾರಬೇಕೋ ಹೇಗೆ?