Rice Price Hike: ಅಕ್ಕಿ ರಫ್ತನ್ನು ನಿರ್ಬಂಧಿಸುವ ಆತಂಕದಲ್ಲಿ ಬೇಡಿಕೆ, ಬೆಲೆ ಹೆಚ್ಚಳದ ಲೆಕ್ಕಾಚಾರ
ಭಾರತದ ಅಕ್ಕಿಯ ರಫ್ತು ಬೆಲೆಗಳು ಈ ವಾರ ಇನ್ನೂ ಹೆಚ್ಚಾದವು. ಪ್ರಬಲ ಬೇಡಿಕೆ ಮತ್ತು ವಿಶ್ವದ ಅಗ್ರ ಧಾನ್ಯದ ರಫ್ತುದಾರ ದೇಶ ಸಾಗಣೆಯನ್ನು ನಿರ್ಬಂಧಿಸಬಹುದು ಎಂಬ ಕಳವಳಗಳಿಂದ ಹೀಗಾಗಿದೆ.
ಭಾರತದ ಅಕ್ಕಿಯ (Rice) ರಫ್ತು ಬೆಲೆಗಳು ಈ ವಾರ ಮತ್ತಷ್ಟು ಏರಿಕೆ ಕಂಡವು. ಬಲವಾದ ಬೇಡಿಕೆ ಮತ್ತು ವಿಶ್ವದ ಧಾನ್ಯದ ಅಗ್ರ ರಫ್ತುದಾರ ದೇಶ ಸಾಗಣೆಯನ್ನು ನಿರ್ಬಂಧಿಸಬಹುದು ಎಂಬ ಕಳವಳಗಳಿಂದ ಹೀಗಾಗಿದೆ. ಭಾರತದ ಶೇ 5ರಷ್ಟು ಅಕ್ಕಿಯನ್ನು ಈ ವಾರ ಪ್ರತಿ ಟನ್‌ಗೆ 357 ಯುಎಸ್ಡಿಯಿಂದ 362 ಯುಎಸ್ಡಿಗೆ ಮಾರಾಟ ಮಾಡಲಾಯಿತು. ಹಿಂದಿನ ವಾರದಲ್ಲಿ ಈ ದರ 355 ಡಾಲರ್ನಿಂದ 360 ಡಾಲರ್ ಇತ್ತು. “ಶೇ 100 ಸಣ್ಣ ಅಕ್ಕಿಗೆ ಮತ್ತು ಶೇ 5 ಮುರಿದ ಅಕ್ಕಿಗೆ ಭಾರಿ ಬೇಡಿಕೆಯಿದೆ. ಭಾರತವು ರಫ್ತಿನ ಮೇಲೆ ನಿರ್ಬಂಧಗಳನ್ನು ಹಾಕಬಹುದು ಎಂದು ವ್ಯಾಪಾರಿಗಳು ಅಂದಾಜಿಸುತ್ತಿದ್ದಾರೆ,” ಎಂದು ದಕ್ಷಿಣ ಆಂಧ್ರಪ್ರದೇಶದ ಕಾಕಿನಾಡ ಮೂಲದ ರಫ್ತುದಾರರೊಬ್ಬರು ಹೇಳಿದ್ದಾರೆ. ಗೋಧಿ ರಫ್ತಿನ ಮೇಲೆ ಭಾರತದ ಅನಿರೀಕ್ಷಿತ ನಿಷೇಧವು ಅಕ್ಕಿ ವ್ಯಾಪಾರಿಗಳನ್ನು ಖರೀದಿಗಳನ್ನು ಹೆಚ್ಚಿಸಲು ಮತ್ತು ದೀರ್ಘಾವಧಿಯ ವಿತರಣೆಗಳಿಗೆ ಭಾರೀ ಆರ್ಡರ್ ನೀಡುವಂತೆ ಮಾಡಿದೆ.
ಆದರೆ, ವ್ಯಾಪಾರ ಮತ್ತು ಸರ್ಕಾರಿ ಮೂಲಗಳು ದೇಶವು ಧಾನ್ಯದ ರಫ್ತುಗಳನ್ನು ನಿಗ್ರಹಿಸಲು ಯೋಜಿಸುವುದಿಲ್ಲ ಎಂದು ಹೇಳಿವೆ. ಏಕೆಂದರೆ ಸಾಕಷ್ಟು ದಾಸ್ತಾನುಗಳು ಮತ್ತು ಸ್ಥಳೀಯ ದರಗಳು ರಾಜ್ಯ ನಿಗದಿಪಡಿಸಿದ ಬೆಂಬಲ ಬೆಲೆಗಳಿಗಿಂತ ಕಡಿಮೆಯಾಗಿದೆ. ಈ ಮಧ್ಯೆ ಉತ್ತಮ ಬೆಳೆಗಳು ಮತ್ತು ಮೀಸಲುಗಳ ಹೊರತಾಗಿಯೂ ದೇಶೀಯ ಬೆಲೆಗಳು ಒಂದು ವಾರದಲ್ಲಿ ಶೇ 5ಕ್ಕಿಂತ ಹೆಚ್ಚು ಜಿಗಿದಿರುವುದರಿಂದ ಖಾಸಗಿ ವ್ಯಾಪಾರಿಗಳಿಗೆ ಅಕ್ಕಿ ಆಮದು ಮಾಡಿಕೊಳ್ಳಲು ನೆರೆಯ ಬಾಂಗ್ಲಾದೇಶವು ಅವಕಾಶ ನೀಡುತ್ತಿದೆ. ದಾಸ್ತಾನು ಸಂಗ್ರಹಣೆಗೂ ಸರ್ಕಾರ ಕಡಿವಾಣ ಹಾಕುತ್ತಿದೆ.
ಸಾಂಪ್ರದಾಯಿಕವಾಗಿ ವಿಶ್ವದ ಮೂರನೇ ಅತಿದೊಡ್ಡ ಅಕ್ಕಿ ಉತ್ಪಾದಕ ದೇಶವಾದ ಬಾಂಗ್ಲಾದೇಶವು ಪ್ರವಾಹಗಳು ಮತ್ತು ಬರಗಾಲದ ನಂತರ ಕೊರತೆಯನ್ನು ನಿವಾರಿಸಲು ಧಾನ್ಯವನ್ನು ಆಮದು ಮಾಡಿಕೊಳ್ಳುತ್ತಿದೆ. ಥಾಯ್ಲೆಂಡ್‌ನ ಬೆಂಚ್‌ಮಾರ್ಕ್ ಶೇ 5ರಷ್ಟು ಸಣ್ಣ ಅಕ್ಕಿಯನ್ನು ಪ್ರತಿ ಟನ್‌ಗೆ ಯುಎಸ್ಡಿ 450 ರಿಂದ ಯುಎಸ್ಡಿ 460 ನಿಗದಿ ಮಾಡಿದೆ. ಕಳೆದ ವಾರ ಇದು 455 ರಿಂದ 460 ಡಾಲರ್ ಇತ್ತು. ಸಣ್ಣ ಬದಲಾವಣೆಯು ಕರೆನ್ಸಿ ಏರಿಳಿತಗಳಿಗೆ ಕಾರಣವಾಗಿದೆ. “ರಫ್ತಿಗೆ ಸ್ವಲ್ಪ ಬೇಡಿಕೆಯಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಮುಖ ವ್ಯವಹಾರಗಳಿಲ್ಲ,” ಎಂದು ಬ್ಯಾಂಕಾಕ್ ಮೂಲದ ವ್ಯಾಪಾರಿ ಹೇಳಿದ್ದಾರೆ.
ಜುಲೈ-ಆಗಸ್ಟ್‌ನಲ್ಲಿ ಹೊಸ ಬೆಳೆಗಳನ್ನು ನಿರೀಕ್ಷಿತವಾಗಿ ಸರಬರಾಜು ಮಾಡಲಾಗುವುದು ಎಂದು ಇನ್ನೊಬ್ಬ ವ್ಯಾಪಾರಿ ಹೇಳಿದ್ದಾರೆ. ವಿಯೆಟ್ನಾಂನ ಶೇ 5ರಷ್ಟು ನುಚ್ಚಿನ ಅಕ್ಕಿ ಬೆಲೆಗಳು ಪ್ರತಿ ಟನ್‌ಗೆ ಯುಎಸ್ಡಿ 420- ಯುಎಸ್ಡಿ 425ರಲ್ಲಿ ಸ್ಥಿರವಾಗಿವೆ. “ಬೇಸಿಗೆ-ಶರತ್ಕಾಲದ ಸುಗ್ಗಿಯ ಉತ್ಪಾದನೆಯೊಂದಿಗೆ ದೇಶೀಯ ಸರಬರಾಜುಗಳನ್ನು ರೂಪಿಸಲಾಗುತ್ತಿದೆ,” ಎಂದು ಹೋ ಚಿ ಮಿನ್ಹ್ ಸಿಟಿಯ ವ್ಯಾಪಾರಿ ಹೇಳಿದ್ದಾರೆ. “ಆದರೆ ಬೇಡಿಕೆಯು ವಿಶೇಷವಾಗಿ ಏಷ್ಯನ್ ಮತ್ತು ಆಫ್ರಿಕನ್ ಖರೀದಿದಾರರಿಂದ ಕೂಡ ಹೆಚ್ಚುತ್ತಿದೆ.” ಈ ವರ್ಷದ ಮೊದಲ ಐದು ತಿಂಗಳಲ್ಲಿ ವಿಯೆಟ್ನಾಂ ರಫ್ತು ಕಳೆದ ವರ್ಷಕ್ಕಿಂತ ಶೇ 6.5ರಷ್ಟು ಹೆಚ್ಚಾಗಿದೆ.
“ಈ ವಾರದ ಆರಂಭದಲ್ಲಿ ಅಕ್ಕಿ ಮೇಲಿನ ಆಮದು ತೆರಿಗೆಯಲ್ಲಿ ಕಡಿತವನ್ನು ವಿಸ್ತರಿಸಲು ಫಿಲಿಪೈನ್ಸ್‌ನ ಕ್ರಮವು ರಫ್ತುದಾರರಿಗೆ ಸಕಾರಾತ್ಮಕ ಸಂಕೇತವಾಗಿದೆ,” ಎಂದು ಇನ್ನೊಬ್ಬ ವ್ಯಾಪಾರಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ