ಒಂದು ತಿಂಗಳಲ್ಲಿ ಫೋನ್​ಪೇನಲ್ಲಿ 1,000 ಕೋಟಿ ಟ್ರಾನ್ಸಾಕ್ಷನ್ಸ್; ಈ ಮೈಲಿಗಲ್ಲು ಮುಟ್ಟಿದ ಮೊದಲ ಯುಪಿಐ ಆ್ಯಪ್

UPI transactions data in 2026 March: 2026ರ ಮಾರ್ಚ್ ತಿಂಗಳಲ್ಲಿ ಯುಪಿಐ ಪೇಮೆಂಟ್ ವಹಿವಾಟುಗಳ ಸಂಖ್ಯೆ 2,260 ಕೋಟಿ ದಾಟಿದೆ. ಇದರಲ್ಲಿ ಫೋನ್ ಪೇವೊಂದರಲ್ಲೇ 1,000 ಕೋಟಿಗೂ ಅಧಿಕ ಟ್ರಾನ್ಸಾಕ್ಷನ್​ಗಳಾಗಿವೆ. ಒಂದೇ ತಿಂಗಳಲ್ಲಿ ಯಾವುದೇ ಯುಪಿಐ ಆ್ಯಪ್​ನಲ್ಲಿ 1,000 ಕೋಟಿ ಟ್ರಾನ್ಸಾಕ್ಷನ್​ಗಳಾಗಿದ್ದು ಇದೇ ಮೊದಲು. ಇದು ಫೋನ್ ಪೇ ದಾಖಲೆಯಾಗಿದೆ.

ಒಂದು ತಿಂಗಳಲ್ಲಿ ಫೋನ್​ಪೇನಲ್ಲಿ 1,000 ಕೋಟಿ ಟ್ರಾನ್ಸಾಕ್ಷನ್ಸ್; ಈ ಮೈಲಿಗಲ್ಲು ಮುಟ್ಟಿದ ಮೊದಲ ಯುಪಿಐ ಆ್ಯಪ್
ಯುಪಿಐ
Image Credit source: Shutterstock

Updated on: Apr 23, 2026 | 2:57 PM

ನವದೆಹಲಿ, ಏಪ್ರಿಲ್ 23: ಭಾರತದ ಅತಿದೊಡ್ಡ ಯುಪಿಐ ಆ್ಯಪ್ ಎನಿಸಿರುವ ಫೋನ್​ಪೇ (PhonePe) ಮಾರ್ಚ್ ತಿಂಗಳಲ್ಲಿ ಹೊಸ ದಾಖಲೆ ಬರೆದಿದೆ. 2026ರ ಮಾರ್ಚ್​ನಲ್ಲಿ ಫೋನ್​ಪೇ ಪ್ಲಾಟ್​ಫಾರ್ಮ್​ನಲ್ಲಿ 10 ಬಿಲಿಯನ್​ಗೂ ಹೆಚ್ಚು ಟ್ರಾನ್ಸಾಕ್ಷನ್​ಗಳು ಆಗಿವೆ. ಅಂದರೆ, ಒಂದು ತಿಂಗಳಲ್ಲಿ 1,000 ಕೋಟಿಗೂ ಹೆಚ್ಚು ಹಣ ವಹಿವಾಟುಗಳು ಫೋನ್ ಪೇನಿಂದ ಆಗಿವೆ. ಈ ಮೈಲಿಗಲ್ಲು ಮುಟ್ಟಿದ ಮೊದಲ ಯುಪಿಐ ಆ್ಯಪ್ ಎನ್ನುವ ದಾಖಲೆ ಫೋನ್​ಪೇನದ್ದು.

ಯುಪಿಐ ಮಾರುಕಟ್ಟೆಯಲ್ಲಿ ಫೋನ್​ಪೇ ಮತ್ತು ಗೂಗಲ್ ಪೇ ಪಾರಮ್ಯ

ಯುಪಿಐ ಪೇಮೆಂಟ್ ವಿಚಾರದಲ್ಲಿ ಫೋನ್ ಪೇ ನಂಬರ್ ಸ್ಥಾನದಲ್ಲಿ ಮುಂದುವರಿದಿದೆ. ಗೂಗಲ್ ಪೇ ಎರಡನೇ ಸ್ಥಾನದಲ್ಲಿ ಸಮೀಪದಲ್ಲೇ ಇದೆ. ಪೇಟಿಎಂ ಮೂರನೇ ಸ್ಥಾನದಲ್ಲಿ ಬಹಳ ಹಿಂದಿದೆ. ಫೋನ್​ಪೇ 1,000 ಕೋಟಿ ಟ್ರಾನ್ಸಾಕ್ಷನ್​ಗಳಾದರೆ, ಗೂಗಲ್ ಪೇ 750 ಕೋಟಿ ವಹಿವಾಟುಗಳನ್ನು ಕಂಡಿದೆ. ಪೇಟಿಎಂನಲ್ಲಿ ಆದ ಟ್ರಾನ್ಸಾಕ್ಷನ್​ಗಳ ಸಂಖ್ಯೆ 170 ಕೋಟಿ ದಾಟಿದೆ.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಏರಿಕೆ ಸಾಧ್ಯತೆಯನ್ನು ತಳ್ಳಿ ಹಾಕಿದ ಸರ್ಕಾರ

ಟಾಪ್-6 ಯುಪಿಐ ಆ್ಯಪ್​ಗಳು

  1. ಫೋನ್​ಪೇ: 1,000 ಕೋಟಿ ಟ್ರಾನ್ಸಾಕ್ಷನ್
  2. ಗೂಗಲ್ ಪೇ: 750 ಕೋಟಿ ಟ್ರಾನ್ಸಾಕ್ಷನ್
  3. ಪೇಟಿಎಂ: 170 ಕೋಟಿ ಟ್ರಾನ್ಸಾಕ್ಷನ್ಸ್
  4. ನವಿ: 80 ಕೋಟಿ ಟ್ರಾನ್ಸಾಕ್ಷನ್
  5. ಸೂಪರ್ ಡಾಟ್ ಮನಿ: 34 ಕೋಟಿ ಟ್ರಾನ್ಸಾಕ್ಷನ್ಸ್
  6. ಭೀಮ್: 20 ಕೋಟಿ ಟ್ರಾನ್ಸಾಕ್ಷನ್ಸ್

ಎನ್​ಪಿಸಿಐ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶದ ಪ್ರಕಾರ, ಮಾರ್ಚ್ ತಿಂಗಳಲ್ಲಿ ಒಟ್ಟಾರೆ ಯುಪಿಐ ಟ್ರಾನ್ಷಾಕ್ಷನ್ಸ್ ಸಂಖ್ಯೆ 22.6 ಬಿಲಿಯನ್ ಆಗಿದೆ. ಹಣದ ಮೌಲ್ಯ 29.6 ಲಕ್ಷ ಕೋಟಿ ರೂ. ಫೋನ್ ಪೇ ಪ್ಲಾಟ್​ಫಾರ್ಮ್​ನಲ್ಲಿ ಮಾರ್ಚ್ ತಿಂಗಳಲ್ಲಿ 1,000 ಕೋಟಿ ವಹಿವಾಟುಗಳ ಮೂಲಕ 14.48 ಲಕ್ಷ ಕೋಟಿ ರೂ ಮೌಲ್ಯದ ಹಣದ ಟ್ರಾನ್ಸಾಕ್ಷನ್ ಆಗಿದೆ. ಗೂಗಲ್ ಪೇನಲ್ಲಿ ವಹಿವಾಟು ಆದ ಹಣದ ಮೊತ್ತ 10 ಲಕ್ಷ ಕೋಟಿ ರೂ ದಾಟಿದೆ.

ಇದನ್ನೂ ಓದಿ: ಮೇ 1ರಿಂದ ಹೊಸ ಗೇಮಿಂಗ್ ರೂಲ್ಸ್; ಆಟಗಾರರಿಗೆ ಬದಲಾವಣೆಗಳೇನು? ಇಲ್ಲಿದೆ ಡೀಟೇಲ್ಸ್

ಯುಪಿಐ ಮಾರುಕಟ್ಟೆಯಲ್ಲಿ ಫೋನ್ ಪೇ ಮತ್ತು ಗೂಗಲ್ ಪೇ ಪ್ರಾಬಲ್ಯ ಹೆಚ್ಚಿದೆ. ಫೋನ್ ಪೇ ಶೇ. 45ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದರೆ, ಗೂಗಲ್ ಪೇ ಶೇ. 33ರಷ್ಟು ಪಾಲು ಹೊಂದಿದೆ. ಇವೆರಡು ಆ್ಯಪ್​ಗಳು ಹೊಂದಿರುವ ಒಟ್ಟು ಮಾರುಕಟ್ಟೆ ಪಾಲು ಶೇ. 78 ದಾಟುತ್ತದೆ. ಯಾವುದೇ ಒಂದು ಆ್ಯಪ್ ಶೇ. 30ಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲು ಹೊಂದಿರದಂತೆ ನೋಡಿಕೊಳ್ಳುವುದು ಎನ್​ಪಿಸಿಐನ ಗುರಿಗಳಲ್ಲಿ ಒಂದು ಎಂಬುದನ್ನು ಗಮನಿಸಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us