AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ಎಸ್​ಇ ಸೋಷಿಯಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಎನ್​ಎಸ್​ಡಿಸಿ ಪದಾರ್ಪಣೆ; ಹೊಸ ಕೌಶಲ್ಯಾಭಿವೃದ್ಧಿ ಯೋಜನೆ; ನಬಾರ್ಡ್​ನಿಂದ 4 ಕೋಟಿ ರೂ

ಮುಂಬೈನ ಎನ್‌ಎಸ್‌ಇ ಉಪವಿಭಾಗವಾದ ಸೋಶಿಯಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು (NSDC) ಯಶಸ್ವಿಯಾಗಿ ಪದಾರ್ಪಣೆ ಮಾಡಿದೆ. ಜಪಾನ್ ಮತ್ತು ಜರ್ಮನಿ ದೇಶಗಳಲ್ಲಿ ಉದ್ಯೋಗ ಅವಕಾಶಕ್ಕಾಗಿ ಗ್ರಾಮೀಣ ಯುವಕರಿಗೆ ತರಬೇತಿ ನೀಡುವ ವಿನೂತನ ಉಪಕ್ರಮ ಜಾರಿ ಮಾಡುತ್ತಿದೆ. ಅದಕ್ಕಾಗಿ 11.25 ಕೋಟಿ ರೂ ಯೋಜನೆಗೆ ZCZP ವಿತರಣೆ ಮಾಡಿದೆ. ನಬಾರ್ಡ್ ಸಂಸ್ಥೆ 4 ಕೋಟಿ ರೂಗಳಷ್ಟು ಸಬ್​ಸ್ಕ್ರೈಬ್ ಮಾಡಿದೆ.

ಎನ್​ಎಸ್​ಇ ಸೋಷಿಯಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಎನ್​ಎಸ್​ಡಿಸಿ ಪದಾರ್ಪಣೆ; ಹೊಸ ಕೌಶಲ್ಯಾಭಿವೃದ್ಧಿ ಯೋಜನೆ; ನಬಾರ್ಡ್​ನಿಂದ 4 ಕೋಟಿ ರೂ
ಎನ್​ಎಸ್​ಡಿಸಿ ವೆಬ್​ಸೈಟ್Image Credit source: NSDC website
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 23, 2026 | 6:50 PM

Share

ನವದೆಹಲಿ, ಅಕ್ಟೋಬರ್ 23: ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು (NSDC) ಮುಂಬೈನ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ (NSE) ಸೋಶಿಯಲ್ ಸ್ಟಾಕ್ ಎಕ್ಸ್‌ಚೇಂಜ್‌ (SSE) ಪ್ಲಾಟ್​ಫಾರ್ಮ್​ನಲ್ಲಿ ಯಶಸ್ವಿಯಾಗಿ ಪದಾರ್ಪಣೆ ಮಾಡಿದೆ. ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಜಯಂತ್ ಚೌಧರಿ ಅವರು ಎನ್‌ಎಸ್‌ಇಯ ಸಾಂಪ್ರದಾಯಿಕ ಗಂಟೆ ಬಾರಿಸುವ ಸಮಾರಂಭದಲ್ಲಿ (Bell-ringing ceremony) ಭಾಗವಹಿಸಿ ಈ ಐತಿಹಾಸಿಕ ಹೆಜ್ಜೆಗೆ ಚಾಲನೆ ನೀಡಿದರು.

ನಾಬಾರ್ಡ್‌ನಿಂದ ₹4 ಕೋಟಿ ಹೂಡಿಕೆ

ಎನ್‌ಎಸ್‌ಡಿಸಿಯ ಮೊದಲ ‘ಝೀರೋ ಕೂಪನ್ ಝೀರೋ ಪ್ರಿನ್ಸಿಪಾಲ್’ (ZCZP) ಸಾಧನಗಳ ವಿತರಣೆಯಡಿ, ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ (NABARD) ಸಂಸ್ಥೆಯು ₹4 ಕೋಟಿಗಳನ್ನು ಸಬ್​ಸ್ಕ್ರೈಬ್ ಮಾಡಿದೆ. ಮಧ್ಯಪ್ರದೇಶದ ಆರ್ಥಿಕವಾಗಿ ಹಿಂದುಳಿದ ವರ್ಗಗಳ (OBC) 600 ಯುವಕರಿಗೆ ಜಪಾನ್ ಮತ್ತು ಜರ್ಮನಿ ದೇಶಗಳಲ್ಲಿ ಅಂತರರಾಷ್ಟ್ರೀಯ ಉದ್ಯೋಗಾವಕಾಶಗಳಿಗೆ ತರಬೇತಿ ನೀಡಲು ಈ ಹಣವನ್ನು ಬಳಸಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪಾರ್ಟ್ನರ್ ಆಗಲು ಪೋಲೆಂಡ್​ಗೆ ಸಿಎಂ ಆಹ್ವಾನ

ಒಟ್ಟು ₹11.25 ಕೋಟಿ ವೆಚ್ಚದ ಈ ಯೋಜನೆಯು ಮೂರು ಆರ್ಥಿಕ ಮೂಲಗಳನ್ನು ಹೊಂದಿದೆ. ಇದರಲ್ಲಿ ಶೇ. 15ರಷ್ಟು ಭಾಗವನ್ನು ಫಲಾನುಭವಿಗಳು ಭರಿಸಿದರೆ, ಶೇ. 35ರಷ್ಟು ಹಣವನ್ನು ಸೋಶಿಯಲ್ ಸ್ಟಾಕ್ ಎಕ್ಸ್‌ಚೇಂಜ್ ಮೂಲಕ ಸಂಗ್ರಹಿಸಲಾಗಿದೆ ಮತ್ತು ಉಳಿದ ಶೇ. 50ರಷ್ಟು ಮೊತ್ತವನ್ನು ಅಭ್ಯರ್ಥಿಗಳು ವಿದೇಶಗಳಲ್ಲಿ ಯಶಸ್ವಿಯಾಗಿ ಉದ್ಯೋಗ ಪಡೆದ ಬಳಿಕ ಮಧ್ಯಪ್ರದೇಶ ಸರ್ಕಾರವು ಒದಗಿಸಲಿದೆ.

ಎನ್​ಎಸ್​ಡಿಸಿ ಮಾಡಿದ ಟ್ವೀಟ್

ಜಪಾನ್ ಮತ್ತು ಜರ್ಮನಿಯ ಭಾಷೆ ಹಾಗೂ ಕೌಶಲ್ಯ ತರಬೇತಿ

ಎನ್‌ಎಸ್‌ಡಿಸಿಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ‘ಎನ್‌ಎಸ್‌ಡಿಸಿ ಇಂಟರ್‌ನ್ಯಾಷನಲ್ ಲಿಮಿಟೆಡ್’ ವತಿಯಿಂದ ಈ ತರಬೇತಿ ನೀಡಲಾಗುತ್ತದೆ. ಒಟ್ಟು 300 ಅಭ್ಯರ್ಥಿಗಳಿಗೆ ಜಪಾನೀ ಹಾಗೂ ಜರ್ಮನ್ ಭಾಷೆ ಮತ್ತು ಉದ್ಯೋಗ ತರಬೇತಿ ನೀಡಲಾಗುತ್ತದೆ. ಕಾಳಜಿ, ಆತಿಥ್ಯ, ಕಟ್ಟಡ ನಿರ್ಮಾಣ, ತಯಾರಿಕೆ ಕ್ಷೇತ್ರಗಳಲ್ಲಿನ ಮಂದಿಗೆ ಈ ತರಬೇತಿ ಇರುತ್ತದೆ.

ಇದನ್ನೂ ಓದಿ: ಕಸ್ಟಮರ್ ಕೇರ್ ನಂಬರ್​ಗೆ ಆನ್​ಲೈನ್​ನಲ್ಲಿ ಸರ್ಚ್ ಮಾಡುತ್ತೀರಾ? ಸೈಬರ್ ಕ್ರಿಮಿನಲ್​ಗಳ ಗಾಳಕ್ಕೆ ಬೀಳಬಹುದು, ಹುಷಾರ್..! ಎಸ್​ಬಿಐ ಅಲರ್ಟ್

ಈ ತರಬೇತಿ ಪಡೆದು ಯಶಸ್ವಿಯಾಗಿ ಜಪಾನ್ ಅಥವಾ ಜರ್ಮನ್ ದೇಶಗಳಲ್ಲಿ ಉದ್ಯೋಗಕ್ಕೆ ಸೇರುವ ಅಭ್ಯರ್ಥಿಗಳು ಜಪಾನ್‌ನಲ್ಲಿ ತಿಂಗಳಿಗೆ ಅಂದಾಜು ₹1–1.2 ಲಕ್ಷ ಹಾಗೂ ಜರ್ಮನಿಯಲ್ಲಿ ₹1.1–3.2 ಲಕ್ಷದವರೆಗೆ ವೇತನ ಗಳಿಸುವ ನಿರೀಕ್ಷೆಯಿದೆ.

ಸರ್ಕಾರಿ ನಿಧಿಗಳು, ಸಿಎಸ್‌ಆರ್ (CSR) ಹಾಗೂ ಚಿಲ್ಲರೆ ಹೂಡಿಕೆದಾರರ ಬಂಡವಾಳವನ್ನು ಒಟ್ಟಿಗೆ ತರುವ ಮೂಲಕ ಭಾರತೀಯ ಯುವಕರಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಈ ಸೋಶಿಯಲ್ ಸ್ಟಾಕ್ ಎಕ್ಸ್‌ಚೇಂಜ್ ವೇದಿಕೆಯು ಮಹತ್ವದ ಹೆಜ್ಜೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More