ಮುಂಬೈ, ಸೆಪ್ಟೆಂಬರ್ 27: ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಟಿ+0 ಸೆಟಲ್ಮೆಂಟ್ ಸಿಸ್ಟಂನಲ್ಲಿ ಟ್ರೇಡಿಂಗ್ ಮಾಡುವುದನ್ನು ಮುಂದಕ್ಕೆ ಹಾಕಿದೆ. ಎನ್ಎಸ್ಇ ಇಂದು ಶುಕ್ರವಾರ ಟಿ+0 ವ್ಯವಸ್ಥೆ ಮುಂದೂಡಲಾಗಿರುವುದನ್ನು ತಿಳಿಸಿ ಸುತ್ತೋಲೆ ಹೊರಡಿಸಿದೆ. ‘ಕ್ಯಾಪಿಟಲ್ ಮಾರ್ಕೆಟ್ ಸೆಗ್ಮೆಂಟ್ ಗೋ ಲೈವ್ನಲ್ಲಿ ಟಿ+0 ಸೆಟಲ್ಮೆಂಟ್ ಸೈಕಲ್ನಲ್ಲಿ ಟ್ರೇಡಿಂಗ್ ಮಾಡುವುದನ್ನು ಮುಂದೂಡಲಾಗಿದೆ’ ಎಂದು ಎನ್ಎಸ್ಇ ತನ್ನ ಹೊಸ ಸರ್ಕ್ಯುಲಾರ್ನಲ್ಲಿ ತಿಳಿಸಿದೆ. ಇದರೊಂದಿಗೆ, ಟ್ರೇಡಿಂಗ್ ಮಾಡಿದ ದಿನವೇ ಹಣ ಪಡೆಯುವ ಟಿ+0 ಸೆಟಲ್ಮೆಂಟ್ ಅವಕಾಶವನ್ನು ಎನ್ಎಸ್ಐ ತಾತ್ಕಾಲಿಕವಾಗಿ ಕೈಬಿಟ್ಟಿದೆ. ಮುಂದಿನ ಸೂಚನೆ ಬರುವವರೆಗೂ ಟಿ+0 ಇರಲ್ಲ.
ಟಿ+0 ಸಿಸ್ಟಂನಲ್ಲಿ ಟಿ ಎಂದರೆ ಟ್ರೇಡಿಂಗ್. ನೀವು ಷೇರನ್ನು ಖರೀದಿಸಿದಾಗ ಅದೇ ದಿನ ನಿಮ್ಮ ಡೀಮ್ಯಾಟ್ ಖಾತೆಗೆ ಷೇರು ವರ್ಗಾವಣೆ ಆಗುತ್ತದೆ. ನೀವು ಷೇರು ಮಾರಿದಾಗ ಅದರ ಹಣವು ನಿಮ್ಮ ಖಾತೆಗೆ ಅದೇ ದಿನದಂದು ತಲುಪುತ್ತದೆ.
ಷೇರು ವಿನಿಮಯ ಕೇಂದ್ರಗಳಲ್ಲಿ ಮೊದಮೊದಲು ಟಿ+5 ಸೆಟಲ್ಮೆಂಟ್ ವ್ಯವಸ್ಥೆ ಇತ್ತು. ಅಂದರೆ, ಇವತ್ತು ನೀವು ಷೇರು ಮಾರಿದರೆ ಅದರ ಹಣ ಸಿಗಲು ಐದು ದಿನ ಕಾಯಬೇಕಿತ್ತು. 2002ರಲ್ಲಿ ಟಿ+3 ಸಿಸ್ಟಂಗೆ ಬದಲಾಯಿಸಲಾಯಿತು. 2003ರಲ್ಲಿ ಟಿ+2 ಸಿಸ್ಟಂ ಬಂದಿತು. 2023ರಲ್ಲಿ ಟಿ+1 ಸಿಸ್ಟಂ ಚಾಲೂ ಇದೆ.
ಟಿ+0 ಸಿಸ್ಟಂ ಅನ್ನು ಮಾರ್ಚ್ ತಿಂಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಯಿತು. ಬಿಎಸ್ಇ ಮತ್ತು ಎನ್ಎಸ್ಇ ಆಯ್ದ 25 ಷೇರುಗಳಿಗೆ ಟಿ+0 ಸೆಟಲ್ಮೆಂಟ್ ಸೌಲಭ್ಯ ತರಲಾಯಿತು. ಎಸ್ಬಿಐ, ಎಂಆರ್ಎಫ್, ಹಿಂಡಾಲ್ಕೋ, ವೇದಾಂತ, ಅಂಬುಜಾ ಸಿಮೆಂಟ್ಸ್, ಅಶೋಕ್ ಲೀಲ್ಯಾಂಡ್, ಬಜಾಜ್ ಆಟೊ, ಬ್ಯಾಂಕ್ ಆಫ್ ಬರೋಡಾ, ನೆಸ್ಲೆ, ಬಿಪಿಸಿಎಲ್ ಇತ್ಯಾದಿ ಷೇರುಗಳಿಗೆ ಟಿ+0 ಸೆಟಲ್ಮೆಂಟ್ ಸಿಸ್ಟಂ ಅಳವಡಿಸಲಾಗಿತ್ತು.
ಇದನ್ನೂ ಓದಿ: 15,000 ಕೋಟಿ ರೂ ಮೊತ್ತದ ಸಾಲವನ್ನೇ ಮಾರಿಬಿಟ್ಟ ಎಚ್ಡಿಎಫ್ಸಿ ಬ್ಯಾಂಕ್; ಏನು ಕಾರಣ?
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ತನ್ನ ಡಿಸಾಸ್ಟರ್ ರಿಕವರಿ ಸೈಟ್ನಿಂದ (ವಿಪತ್ತು ಪರಿಹಾರ ತಾಣ) ಲೈವ್ ಟ್ರೇಡಿಂಗ್ ಮಾಡಲಿದೆ. ಸೆಪ್ಟೆಂಬರ್ 30ಕ್ಕೆ ಆರಂಭವಾಗಿ ಅಕ್ಟೋಬರ್ 1ರವರೆಗೆ, ಎರಡು ದಿನ, ಅಂದರೆ ಶನಿವಾರ ಮತ್ತು ಭಾನುವಾರ ಪ್ರಾಯೋಗಿಕ ಲೈವ್ ಟ್ರೇಡಿಂಗ್ ಸೆಷನ್ಸ್ ನಡೆಯಲಿವೆ.
ಶನಿವಾರ ಮಧ್ಯಾಹ್ನದ 12ಗಂಟೆಯಿಂದ 1 ಗಂಟೆಯವರೆಗೆ ಎಕ್ಸ್ಚೇಂಜ್ ಕಂಟಿಜೆನ್ಸಿ ಟೆಸ್ಟ್ಗಳು ನಡೆಯಲಿವೆ ಎಂದು ಎನ್ಎಸ್ಇ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ