ಎನ್​ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಹಗರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್; ಚೀನಾದ ಗೂಢಚಾರಿಣಿ ಮತ್ತಾಕೆಯ ಪತಿ ಮತ್ತು ಕಾರ್ಪೊರೇಟ್ ನೆಟ್ವರ್ಕ್

ಎನ್‌ವಿಡಿಯಾ (Nvidia) ಮುಖ್ಯಸ್ಥ ಜೆನ್ಸನ್ ಹುವಾಂಗ್ ಮತ್ತು ಚೀನಾದ ಮಹಿಳೆ ಅಲೈಸ್ ಹುವಾಂಗ್ (Alice Huang) ನಡುವೆ ವಿವಾಹೇತರ ಸಂಬಂಧ ಇತ್ತೆನ್ನುವ ವಿವಾದ ಇದೆ. ಇದರ ಬೆನ್ನಲ್ಲೇ, ಅಮೆರಿಕದ ನಿರ್ಬಂಧಗಳನ್ನು ಮೀರಿ ಸುಮಾರು 7.5 ಬಿಲಿಯನ್ ಡಾಲರ್ ಮೌಲ್ಯದ ಅತ್ಯಾಧುನಿಕ AI ಚಿಪ್ಸ್‌ಗಳು ಚೀನಾವನ್ನು ತಲುಪಲು ಈ ನಂಟು ಹೇಗೆ ಕಾರಣವಾಯಿತು ಎಂಬುದರ ಸಂಪೂರ್ಣ ವರದಿ ಇಲ್ಲಿದೆ.

ಎನ್​ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಹಗರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್; ಚೀನಾದ ಗೂಢಚಾರಿಣಿ ಮತ್ತಾಕೆಯ ಪತಿ ಮತ್ತು ಕಾರ್ಪೊರೇಟ್ ನೆಟ್ವರ್ಕ್
ಜೆನ್ಸನ್ ಹುವಾಂಗ್
Image Credit source: AP

Updated on: Nov 11, 2026 | 1:44 PM

ವಾಷಿಂಗ್ಟನ್, ನವೆಂಬರ್ 11: ಅಮೆರಿಕದ ಕಾರ್ಪೊರೇಟ್ ಲೋಕವನ್ನು ಬೆಚ್ಚಿಬೀಳಿಸಿರುವ ಎನ್​ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್​ಗೆ ಸಂಬಂಧಿಸಿದ ಸೆಕ್ಸ್ ಮತ್ತು ಸ್ಪೈ ಹಗರಣದಲ್ಲಿ ಒಂದೊಂದೇ ಟ್ವಿಸ್ಟ್​ಗಳು ಬೆಳಕಿಗೆ ಬರುತ್ತಿವೆ. ಚೀನಾದ ಗುಪ್ತಚರ ನೆಟ್ವರ್ಕ್​ನಲ್ಲಿದ್ದಾಳೆಂದು ಹೇಳಲಾದ ಅಲೈಸ್ ಹುವಾಂಗ್ ಎನ್ನುವ ಮಹಿಳೆ ಎನ್​ವಿಡಿಯ ಸಿಇಒ ಜೊತೆಗಿನ ತನ್ನ ಆಪ್ತತೆಯನ್ನು ಬಳಸಿಕೊಂಡು ಸಾಕಷ್ಟು ಎಐ ಚಿಪ್​ಗಳನ್ನು ಚೀನಾಗೆ ಅಕ್ರಮವಾಗಿ ಸಾಗಿಸಿರುವುದು ಗೊತ್ತಾಗಿದೆ.

ಎನ್​ವಿಡಿಯಾ ಕಂಪನಿಯ ಹೆಸರು ಕೇಳದೇ ಇರುವವರ ಗಮನಕ್ಕೆ. ಎನ್​ವಿಡಿಯಾ ಕಂಪನಿ ಕೃತಕ ಬುದ್ಧಿಮತ್ತೆಯನ್ನು ಚಲಾಯಿಸುವ ಸಿಸ್ಟಂಗಳಿಗೆ ಬೇಕಾದ ಪ್ರಬಲ ಚಿಪ್​ಗಳನ್ನು ತಯಾರಿಸುತ್ತದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಎಐ ಮೆಷೀನ್​ಗಳಿಗೆ ಬೇಕಾಗುವ ಚಿಪ್​ಗಳನ್ನು ತಯಾರಿಸಲು ಎನ್​ವಿಡಿಯಾಗೆ ಸರಿಸಾಟಿ ಯಾವ ಕಂಪನಿಯೂ ಇಲ್ಲ. ಐಬಿಎಂ, ಕ್ವಾಲ್​ಕಾಮ್, ಇಂಟೆಲ್ ಇತ್ಯಾದಿ ದಿಗ್ಗಜ ಚಿಪ್ ಕಂಪನಿಗಳೂ ಕೂಡ ಎನ್​ವಿಡಿಯಾದಷ್ಟು ಪ್ರಬಲ ಚಿಪ್ ತಯಾರಿಸುವುದಿಲ್ಲ.

Loading...

ಎಐ ಕ್ಷೇತ್ರದಲ್ಲಿ ಅಮೆರಿಕಕ್ಕೆ ಸರಿಸಮಾನವಾಗಿ ಚೀನಾ ದಾಪುಗಾಲು ಹಾಕುತ್ತಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ಚೀನಾಗೆ ಎನ್​ವಿಡಿಯಾದ ಪ್ರಬಲ ಎಐ ಚಿಪ್​ಗಳು ರಫ್ತಾಗದಂತೆ ಅಮೆರಿಕ ನಿರ್ಬಂಧಿಸಿದೆ. ಆದರೂ ಕೂಡ ಚೀನಾ ಶಕ್ತಿಶಾಲಿ ಎಐ ಮಾಡಲ್​ಗಳನ್ನು ನಿರ್ಮಿಸುವಲ್ಲಿ ಸಫಲವಾಗಿದೆ. ಚೀನಾವೇ ಸ್ವಂತವಾಗಿ ಚಿಪ್ ತಯಾರಿಸುವ ತಂತ್ರಜ್ಞಾನ ಅಭಿವೃದ್ದಿಪಡಿಸಿದೆ ಎನ್ನುವ ವಾದ ಇದೆ. ಆದರೆ, ಬೇನಾಮಿ ಕಂಪನಿಗಳ ಮೂಲಕ ಅಕ್ರಮವಾಗಿ ಅಮೆರಿಕದಿಂದ ಚಿಪ್​ಗಳನ್ನು ಚೀನಾ ತರಿಸಿಕೊಳ್ಳುತ್ತಿದೆ ಎನ್ನುವ ಅನುಮಾನ ಇತ್ತು. ಈ ಅನುಮಾನಗಳಿಗೆ ಈಗ ಜೆನ್ಸೆನ್ ಹುವಾಂಗ್ ಪ್ರಕರಣ ಪುಷ್ಟಿ ಕೊಟ್ಟಿದೆ.

ಇದನ್ನೂ ಓದಿ: ಜೆನ್ಸೆನ್ ಸಂಪತ್ತಿಗೆ ಡಬಲ್ ಹೊಡೆತ; ಎಐ ಶಾಕ್ ಜೊತೆಗೆ ಈಗ ಲೈಂಗಿಕ ಹಗರಣದ ಆಘಾತ; ಟಾಪ್-10 ಪಟ್ಟಿಯಿಂದ ಹೊರಕ್ಕೆ

ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಅವರು ಅಲೈಸ್ ಹುವಾಂಗ್ ಜೊತೆ ಸಂಬಂಧ ಹೊಂದಿರುವ ಶಂಕೆ ಇದೆ. ಲೈಂಗಿಕ ಸಂಬಂಧ ಇತ್ತೋ ಇಲ್ಲವೋ, ಆದರೆ, ಇಬ್ಬರು ಪರಿಚಿತರಂತೂ ಆಗಿದ್ದು. ಇಬ್ಬರೂ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಚಿಪ್ ಸರಬರಾಜು ಸಾಧ್ಯವಾಗುತ್ತಿರಲಿಲ್ಲ. ಆದರೆ, ಅಲೈಸ್ ಅವರು ಒಂದು ಕಾರ್ಪೊರೇಟ್ ಜಾಲದ ಪ್ರಮುಖ ಕೊಂಡಿಯಾಗಿದ್ದರೆನ್ನಲಾಗಿದೆ. ಈ ಮೂಲಕ 7.5 ಬಿಲಿಯನ್ ಡಾಲರ್ ಮೌಲ್ಯದ ಎಐ ಚಿಪ್​ಗಳನ್ನು ಚೀನಾ ಕಂಪನಿಗಳಿಗೆ ರವಾನೆ ಮಾಡಲು ನೆರವಾಗಿದ್ದರು.

ವರದಿಗಳ ಪ್ರಕಾರ, ಅಲೈಸ್ ಅವರ ಒಡೆತನದ ಸಿಂಗಾಪುರ ಮೂಲದ ‘ಮೆಗಾಸ್ಪೀಡ್’ (Megaspeed) ಮುಂತಾದ ಸಂಸ್ಥೆಗಳ ಮೂಲಕ ಲಕ್ಷಾಂತರ H100, H200 ಮತ್ತು A100 ಚಿಪ್‌ಗಳನ್ನು ಚೀನಾಗೆ ಮರೆಮಾಚಿ ಕಳುಹಿಸಲಾಗಿದೆ ಎಂದು ಶಂಕಿಸಲಾಗಿದೆ.

ಪತಿ ಕಾಂಗ್ ವೀ ಪಾತ್ರ

ಅಲೈಸ್ ಹುವಾಂಗ್ ಅವರ ಪತಿ ಎಂದು ಹೇಳಿಕೊಳ್ಳಲಾದ ಕಾಂಗ್ ವೀ (Kang Wei) ಅವರ ಪಾತ್ರವೂ ಹೊರಬರುತ್ತಿದೆ. ಚಿಪ್ ಪೂರೈಕೆಯ ಜಾಲದಲ್ಲಿ ಅವರೂ ಒಂದು ಭಾಗವಾಗಿದ್ದರು. ಇವರು ಚೀನಾದ ಹಣಕಾಸು ಕ್ಷೇತ್ರದಲ್ಲಿ ಬಹಳ ಕಿರಿಯ ವಯಸ್ಸಿನಲ್ಲೇ ಹೆಸರು ಮಾಡಿದ್ದವರು. ಹಾಗೆಯೇ, ಅಕ್ರಮ ವ್ಯವಹಾರಗಳಿಂದ ಹೆಸರೂ ಕೆಡಿಸಿಕೊಂಡಿದ್ದವರು. ಇವರನ್ನು ಚೀನಾದ ಗುಪ್ತಚರ ಜಾಲವು ಬಳಸುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಇದು ಹಾಲಿವುಡ್ ಸ್ಪೈ ಥ್ರಿಲ್ಲರ್​ನಂಥ ಕಥೆ; ಅಮೆರಿಕದ ಕಾರ್ಪೊರೇಟ್ ದಂತಕಥೆಯ ಬೆನ್ನಿಗೆ ಅಂಟಿದ ಚೀನೀ ಗೂಢಚಾರಿಣಿ

ಎನ್​ವಿಡಿಯಾದ ಕ್ಲೌಡ್ ಪಾರ್ಟ್ನರ್ ಆಗಿದ್ದ ಮೆಗಾಸ್ಪೀಡ್

2023ರಲ್ಲಿ ಸ್ಥಾಪಿತವಾದ ಮೆಗಾಸ್ಪೀಡ್ ಸಂಸ್ಥೆಯು ಬಹಳ ಬೇಗನೇ ಎನ್​ವಿಡಿಯಾದ ಆದ್ಯತೆಯ ಕ್ಲೌಡ್ ಪಾರ್ಟ್ನರ್ ಆಗಿತ್ತು. ಅದರ ಸಿಂಗಾಪುರ, ಇಂಡೋನೇಷ್ಯಾ ಇತ್ಯಾದಿ ವಿಭಾಗಗಳು ಹಾಗೂ ಇನ್ನೂ ಹಲವಾರು ಕಂಪನಿಗಳನ್ನು ಬಳಸಿಕೊಂಡು ಎನ್​ವಿಡಿಯಾದ ಪ್ರಬಲ ಎಐ ಚಿಪ್​ಗಳನ್ನು ಅಕ್ರಮವಾಗಿ ಪಡೆದಿತ್ತು. ಇದೆಲ್ಲವೂ ಸಾಧ್ಯವಾಗಿದ್ದು ಅಲೈಸ್ ಅವರು ಜೆನ್ಸೆನ್ ಜೊತೆ ಹೊಂದಿದ್ದ ವೈಯಕ್ತಿಕ ಆಪ್ತತೆಯಿಂದ ಎಂಬುದು ಅಮೆರಿಕದ ಗುಪ್ತಚರರ ಅನಿಸಿಕೆ.

ಅಮೆರಿಕದ ಗುಪ್ತಚರ ಸಂಸ್ಥೆಗಳ ಎಚ್ಚರಿಕೆ ಹಾಗೂ ತನಿಖೆ

ಅಮೆರಿಕದ ಗುಪ್ತಚರ ವಲಯವು ಈ ಸಂಬಂಧದ ಕುರಿತು ಮೊದಲೇ ಎಚ್ಚರಿಕೆ ನೀಡಿದ್ದು, ಚೀನಾದ ಗುಪ್ತಚರ ಇಲಾಖೆಯು (Ministry of State Security) ಎನ್‌ವಿಡಿಯಾ ಮುಖ್ಯಸ್ಥರ ಸಮೀಪ ತೆರಳಲು ಈ ಸಂಪರ್ಕವನ್ನು ಬಳಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಈ ಬೆಳವಣಿಗೆಯಿಂದಾಗಿ ಎನ್‌ವಿಡಿಯಾ ಕಂಪನಿಯ ಮಂಡಳಿಯು ಸ್ವತಂತ್ರ ತನಿಖೆಗೆ ಆದೇಶಿಸಿದ್ದು, ಜಾಗತಿಕ ತಂತ್ರಜ್ಞಾನ ಮತ್ತು ಭದ್ರತಾ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us