ಐಐಎಫ್‌ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ಬಿಡುಗಡೆಯಾಗಿದ್ದು, ಬ್ಯೂಟಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನೈಕಾ ಸಂಸ್ಥಾಪಕಿ ಫಲ್ಗುಣಿ ನಾಯರ್ ಅವರು ಬುಧವಾರ ಬಿಡುಗಡೆಯಾದ ಐಐಎಫ್‌ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022ರ ಪಟ್ಟಿಯ ಪ್ರಕಾರ ಭಾರತ ಶ್ರೀಮಂತ ಮಹಿಳಾ ಉದ್ಯಮಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಸೌಂದರ್ಯ ಮತ್ತು ಕ್ಷೇಮ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನೈಕಾದ ಯಶಸ್ವಿ ಪಟ್ಟಿಯಲ್ಲಿ ಫಲ್ಗುಣಿ ನಾಯರ್ ಅವರು ಬಯೋಟೆಕ್ ಕ್ವೀನ್ ಕಿರಣ್ ಮಜುಂದಾರ್-ಶಾ ಅವರನ್ನು ಹಿಂದಿಕ್ಕಿ IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022ರಲ್ಲಿ ಶ್ರೀಮಂತ ಸ್ವಯಂ ನಿರ್ಮಿತ ಭಾರತೀಯ ಮಹಿಳೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ನಾಯರ್ ಅವರು ದೇಶದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದು, ರೇಖಾ ಜುನ್‌ಜುನ್‌ವಾಲಾ ಅವರ ಪತಿ ಮತ್ತು ದಿವಂಗತ ಹಿರಿಯ ಹೂಡಿಕೆದಾರ ರಾಕೇಶ್ ಜುನ್‌ಜುನ್‌ವಾಲಾ ಅವರ ರೇರ್ ಎಂಟರ್‌ಪ್ರೈಸಸ್‌ನ ನಂತರದ ಸ್ಥಾನದಲ್ಲಿದ್ದಾರೆ. ಫಲ್ಗುಣಿ ನಾಯರ್ ಮತ್ತು ಕುಟುಂಬದ ಸಂಪತ್ತು ವರ್ಷದಲ್ಲಿ 30,000 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ ಮತ್ತು ಅವರ ಸಂಪತ್ತು ಶೇಕಡಾ 345 ರಷ್ಟು ಹೆಚ್ಚಾಗಿದೆ ಮತ್ತು ಸುಮಾರು 38,700 ಕೋಟಿ ರೂ.ಗೆ ಏರಿಕೆಯಾಗಿದೆ.
ಟಾಪ್ 10 ಗೇನರ್‌ಗಳಲ್ಲಿ, ನಾಯರ್ ಐದನೇ ಸ್ಥಾನದಲ್ಲಿದ್ದಾರೆ ಮತ್ತು ದೇಶದ ಏಕೈಕ ಶ್ರೀಮಂತ ಮಹಿಳೆಯಾಗಿದ್ದಾರೆ. ಅವರು ಗೌತಮ್ ಅದಾನಿ, ಮುಖೇಶ್ ಅಂಬಾನಿ, ಮತ್ತು ಸೈರಸ್ ಎಸ್ ಪೂನಾವಾಲಾ ಅವರ ಪಟ್ಟಿಯಲ್ಲಿ ಸೇರಲಿದ್ದಾರೆ.
ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ಅಭೂತಪೂರ್ವ ಸಂಪತ್ತನ್ನು ಇವರು ಸಂಪಾದಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಇವರ ಆಸ್ತಿ 60% ಹೆಚ್ಚಾಗಿದೆ.
ಮಹಿಳಾ ಉದ್ಯಮಿಗಳಿಗೆ ಸ್ಪೂರ್ತಿ ಫಲ್ಗುಣಿ ನಾಯರ್
ಭಾರತದಲ್ಲೇ ಹುಟ್ಟಿ, ಭಾರತೀಯ ಮಾಲೀಕತ್ವದ ಭಾರತೀಯ-ನಿರ್ವಹಣೆಯ ಕನಸು-ನನಸಾಗುವ ನೈಕಾ (Nykaa) ಉದ್ಯಮ ಪ್ರಯಾಣವು ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ಪ್ರೇರೇಪಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಲಿಸ್ಟಿಂಗ್ ಕಾರ್ಯಕ್ರಮದಲ್ಲಿ ನಾಯರ್ ತಿಳಿಸಿದ್ದಾರೆ.
ಸಂಸ್ಥೆಯ ಸ್ವಯಂ ನಿರ್ಮಾಣದ ಬ್ರ್ಯಾಂಡ್ ಉತ್ಪನ್ನಗಳನ್ನು ಒಳಗೊಂಡಂತೆ ತನ್ನೆರಡು ಬ್ಯುಸಿನೆಸ್ ವಿಭಾಗಗಳಾದ Nykaa ಹಾಗೂ Nykaa Fashion ಅಡಿಯಲ್ಲಿ ಸೌಂದರ್ಯ, ವೈಯಕ್ತಿಕ ಆರೈಕೆ ಮತ್ತು ಫ್ಯಾಷನ್ ಉತ್ಪನ್ನಗಳ ವೈವಿಧ್ಯಮಯ ಪೋರ್ಟ್‌ಫೋಲಿಯೋ ಹೊಂದಿದೆ. ಭಾರತದ ಸೌಂದರ್ಯ ಹಾಗೂ ವೈಯಕ್ತಿಕ ಕಾಳಜಿ ಮಾರುಕಟ್ಟೆಯು 2020 ಹಾಗೂ 2025ರ ನಡುವೆ 2 ಟ್ರಿಲಿಯನ್ ರೂ. ಅಂದಾಜು ಗಳಿಕೆಯೊಂದಿಗೆ ತನ್ನ ಗಾತ್ರ ದುಪ್ಪಟ್ಟುಗೊಳಿಸಲಿದೆ ಎಂದು ಅಂದಾಜಿಸಲಾಗಿದೆ.
ಫಲ್ಗುಣಿ ನಾಯರ್ ಗುಜರಾತಿನ ಮಹಿಳೆ
ಫಲ್ಗುಣಿ ನಾಯರ್ ಅವರು ಗುಜರಾತಿನಲ್ಲಿ ಹುಟ್ಟಿ ಬೆಳೆದವರು. ಇವರು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವೀಧವನ್ನು ಪಡೆದು. ಇವರ ತಂದೆ ಸಣ್ಣ ಬೇರಿಂಗ್ಸ್ ಕಂಪನಿಯನ್ನು ನಡೆಸುತ್ತಿದ್ದರು. ನೈಕಾವನ್ನು ಪ್ರಾರಂಭಿಸುವ ಮೊದಲು, ಫಲ್ಗುಣಿ ನಾಯರ್ ಕೋಟಕ್ ಮಹೀಂದ್ರಾ ಕ್ಯಾಪಿಟಲ್‌ನೊಂದಿಗೆ ಕೆಲಸ ಮಾಡಿದರು, ಅಲ್ಲಿ ಅವರು ಅದರ ಸಾಂಸ್ಥಿಕ ಇಕ್ವಿಟಿ ವ್ಯವಹಾರದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಮತ್ತು ಮುಖ್ಯಸ್ಥರಾಗಿದ್ದರು.
ಫಾಲ್ಗಣಿ ನಾಯರ್ ಅವರು ಮಾಜಿ ಬ್ಯಾಂಕ್ ಅಧಿಕಾರಿಯಾಗಿದ್ದರು, 50ರ ಹರೆಯಕ್ಕೆ ಕಾಲಿಡುವ ಮೊದಲೇ ಉದ್ಯಮಿಯಾಗಿ ಹೊರಹೊಮ್ಮಿದರು. 2012ರಲ್ಲಿ ಇ-ಕಾಮರ್ಸ್ ಉದ್ಯಮ ಆರಂಭಿಸಿದ ನಾಯರ್ ಮೊಬೈಲ್ ಆ್ಯಪ್ ಹಾಗೂ ವೆಬ್‌ಸೈಟ್‌ನ ಮೂಲಕ ಸೌಂದರ್ಯ ಹಾಗೂ ವೈಯಕ್ತಿಕ ಆರೈಕೆ ಉತ್ಪನ್ನಗಳ ಮಾರಾಟ ನಡೆಸಿದರು.
Published On - 4:20 pm, Wed, 21 September 22