AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಕುಸಿತವಾಗಿದ್ದ ಚಿನ್ನದ ಬೆಲೆ ಮತ್ತೆ ಕೊಂಚ ಏರಿಕೆ; ಬೆಳ್ಳಿ ದರ 500 ರೂ. ಹೆಚ್ಚಳ

Silver Price Today: ಬೆಳ್ಳಿ ಬೆಲೆ ಇಂದು 500 ರೂ. ಏರಿಕೆಯಾಗಿದೆ. 3 ದಿನಗಳಿಂದ 1 ಕೆಜಿ ಬೆಳ್ಳಿ ಬೆಲೆ 56,700 ರೂ. ಇದ್ದುದು ಇಂದು 57,200 ರೂ. ಆಗಿದೆ.

Gold Price Today: ಕುಸಿತವಾಗಿದ್ದ ಚಿನ್ನದ ಬೆಲೆ ಮತ್ತೆ ಕೊಂಚ ಏರಿಕೆ; ಬೆಳ್ಳಿ ದರ 500 ರೂ. ಹೆಚ್ಚಳ
ಚಿನ್ನದ ಬೆಲೆImage Credit source: Financial Express
TV9 Web
| Edited By: |

Updated on: Sep 21, 2022 | 6:10 AM

Share

Gold Price on 21st September 2022 | ಬೆಂಗಳೂರು: ಭಾರತದಲ್ಲಿ ಇಳಿಕೆಯಾಗಿದ್ದ ಚಿನ್ನದ ಬೆಲೆ (Gold Rate) ಇಂದು ಮತ್ತೆ ಏರಿಕೆಯಾಗಿದೆ. 3 ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಬೆಳ್ಳಿಯ ಬೆಲೆ (Silver Price) ಇಂದು 500 ರೂ. ಹೆಚ್ಚಳವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. 2 ದಿನಗಳಿಂದ 22 ಕ್ಯಾರೆಟ್ ಚಿನ್ನದ ಬೆಲೆ 45,850 ರೂ. ಇದ್ದುದು 45,950 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,020 ರೂ. ಇದ್ದುದು 50,130 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 46,300 ರೂ. ಮುಂಬೈ- 45,950 ರೂ, ದೆಹಲಿ- 46,100 ರೂ, ಕೊಲ್ಕತ್ತಾ- 45,950 ರೂ, ಬೆಂಗಳೂರು- 46,000 ರೂ, ಹೈದರಾಬಾದ್- 45,950 ರೂ, ಕೇರಳ- 45,950 ರೂ, ಪುಣೆ- 45,980 ರೂ, ಮಂಗಳೂರು- 46,000 ರೂ, ಮೈಸೂರು- 46,000 ರೂ. ಇದೆ.

ಇದನ್ನೂ ಓದಿ: Gold Price Today: ಸತತ 2ನೇ ದಿನವೂ ಚಿನ್ನದ ಬೆಲೆ ಹೆಚ್ಚಳ; ಬೆಳ್ಳಿ ದರ 680 ರೂ. ಏರಿಕೆ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 50,510 ರೂ, ಮುಂಬೈ- 50,130 ರೂ, ದೆಹಲಿ- 50,290 ರೂ, ಕೊಲ್ಕತ್ತಾ- 50,130 ರೂ, ಬೆಂಗಳೂರು- 50,180 ರೂ, ಹೈದರಾಬಾದ್- 50,130 ರೂ, ಕೇರಳ- 50,130 ರೂ, ಪುಣೆ- 50,130 ರೂ, ಮಂಗಳೂರು- 50,180 ರೂ, ಮೈಸೂರು- 50,180 ರೂ. ಆಗಿದೆ.

ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆ ಇಂದು 500 ರೂ. ಏರಿಕೆಯಾಗಿದೆ. 3 ದಿನಗಳಿಂದ 1 ಕೆಜಿ ಬೆಳ್ಳಿ ಬೆಲೆ 56,700 ರೂ. ಇದ್ದುದು ಇಂದು 57,200 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 61,800 ರೂ, ಮೈಸೂರು- 61,800 ರೂ., ಮಂಗಳೂರು- 61,800 ರೂ., ಮುಂಬೈ- 57,200 ರೂ, ಚೆನ್ನೈ- 61,800 ರೂ, ದೆಹಲಿ- 57,200 ರೂ, ಹೈದರಾಬಾದ್- 61,800 ರೂ, ಕೊಲ್ಕತ್ತಾ- 57,200 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More