
ನವದೆಹಲಿ, ಸೆಪ್ಟೆಂಬರ್ 3: ಭಾರತೀಯ ರಿಸರ್ವ್ ಬ್ಯಾಂಕ್ (RBI) ಒಂದಷ್ಟು ಹಣಕಾಸು ಕ್ರಮ ಹಾಗೂ ನಿಯಮಾವಳಿಗಳಲ್ಲಿ ಬದಲಾವಣೆಗಳನ್ನು ತರುತ್ತಿದೆ. ಜನಸಾಮಾನ್ಯರಿಂದ ಹಿಡಿದು ಕಾರ್ಪೊರೇಟ್ ಸಂಸ್ಥೆಗಳವರೆಗೆ ಇವುಗಳ ಪರಿಣಾಮ ನಿರೀಕ್ಷಿಸಬಹುದು. ಚಿನ್ನವನ್ನು ಅಡಮಾನವಾಗಿ ಇಟ್ಟು ಪಡೆಯುವ ಸಾಲ, ಚಿನ್ನವನ್ನೇ ಸಾಲವಾಗಿ ನೀಡುವ ಕ್ರಮ ಇತ್ಯಾದಿ ಬದಲಾವಣೆಳಿವೆ. ಇವುಗಳ ಪಟ್ಟಿ ಮುಂದಿದೆ:
ಫ್ಲೋಟಿಂಗ್ ರೇಟ್ ಲೋನ್ ವಿಚಾರದಲ್ಲಿ ಮೂರು ವರ್ಷದವರೆಗೆ ಬಡ್ಡಿದರ ಬದಲಿಸಲು ಆಗುವುದಿಲ್ಲ. ಆರ್ಬಿಐ ಈಗ ಈ ನಿಯಮ ಸಡಿಲಿಸಿದೆ. ಬ್ಯಾಂಕುಗಳು ಮೂರು ವರ್ಷಕ್ಕಿಂತ ಮುನ್ನವೇ ಫ್ಲೋಟಿಂಗ್ ರೇಟ್ ಅನ್ನು ನಿರ್ಧರಿಸಲು ಸ್ವತಂತ್ರವಾಗಿರುತ್ತವೆ.
ಹಾಗೆಯೇ, ಗ್ರಾಹಕರು ಬೇಕೆಂದರೆ ಫಿಕ್ಸೆಡ್ ಇಂಟರೆಸ್ಟ್ನಿಂದ ಫ್ಲೋಟಿಂಗ್ ಇಂಟರೆಸ್ಟ್ಗೆ ಬದಲಾಯಿಸಿಕೊಳ್ಳುವ ಅವಕಾಶ ಹೊಂದಿರಬೇಕು ಎನ್ನುತ್ತಿದೆ ಆರ್ಬಿಐನ ಹೊಸ ನಿಯಮ.
ಇದನ್ನೂ ಓದಿ: ಎಲ್ಲಾ ಪೋಸ್ಟ್ ಆಫೀಸ್ ಯೋಜನೆಗಳೂ ತೆರಿಗೆಮುಕ್ತವಲ್ಲ; ಟಿಡಿಎಸ್ ಕಡಿತವಾಗುವ ಕೆಲ ಸ್ಕೀಮ್ಗಳಿವು
ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳು ಆಭರಣ ವ್ಯಾಪಾರಿಗಳಿಗೆ ಸಾಲ ನೀಡಲಾಗುವ ನಿಯಮದಲ್ಲಿ ತಿದ್ದುಪಡಿ ತರಲಾಗಿದೆ.
ಚೆಕ್ ಕ್ಲಿಯರಿಂಗ್ ಸಿಸ್ಟಂನಲ್ಲಿ ಅಕ್ಟೋಬರ್ 4ರಿಂದ ಬದಲಾವಣೆ ಆಗಲಿದೆ. ಸದ್ಯ ಬ್ಯಾಚ್ ಪ್ರಕಾರ ಚೆಕ್ ಕ್ಲಿಯರೆನ್ಸ್ ಆಗುತ್ತದೆ. ಇದರಿಂದ ಚೆಕ್ನಲ್ಲಿರುವ ಹಣ ಅಕೌಂಟ್ಗೆ ಕ್ರೆಡಿಟ್ ಆಗಲು ಹೆಚ್ಚು ಸಮಯ ಆಗುತ್ತದೆ. ಆದರೆ, ಹೊಸ ನಿಯಮದ ಪ್ರಕಾರ ನಿರಂತರ ಚೆಕ್ ಕ್ಲಿಯರೆನ್ಸ್ ಸಿಸ್ಟಂ ತರಲಾಗುತ್ತಿದೆ. ಇದರಿಂದ ಚೆಕ್ ಬೇಗ ಕ್ಲಿಯರೆನ್ಸ್ ಪಡೆದುಕೊಳ್ಳುತ್ತದೆ.
ಒಡವೆ ವ್ಯಾಪಾರಿಗಳಿಗೆ ಬ್ಯಾಂಕುಗಳು ಚಿನ್ನವನ್ನೇ ಸಾಲವಾಗಿ ನೀಡುತ್ತವೆ. ಇವುಗಳನ್ನು ಮರಳಿಸಲು 180 ದಿನ ಕಾಲಾವಕಾಶ ಇರುತ್ತದೆ. ಆರ್ಬಿಐ ಇದೀಗ ಈ ಮರುಪಾವತಿ ಅವಧಿಯನ್ನು 270 ದಿನಗಳಿಗೆ ಏರಿಸಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ನ ಈ ಸ್ಕೀಮ್ನಿಂದ ತಿಂಗಳಿಗೆ 9,250 ರೂವರೆಗೂ ನಿಯಮಿತ ಆದಾಯ ಸೃಷ್ಟಿಸಿ
ಗ್ರಾಹಕರ ಇತ್ತೀಚಿನ ಕ್ರೆಡಿಟ್ ಮಾಹಿತಿ ಸೇರ್ಪಡೆಯಾಗಲು ಸಾಧ್ಯವಾಗುವಂತೆ ವಾರದ ಕ್ರೆಡಿಟ್ ಇನ್ಫಾರ್ಮೇಶ್ ರಿಪೋರ್ಟಿಂಗ್ ಸಿಸ್ಟಂ ತರಲು ಆರ್ಬಿಐ ನಿರ್ಧರಿಸಿದೆ. ಇದರಿಂದ ಗ್ರಾಹಕರ ಕ್ರೆಡಿಟ್ ಸ್ಕೋರ್ ಮತ್ತು ರಿಪೋರ್ಟ್ ಹೆಚ್ಚು ನಿಖರವಾಗಿರುತ್ತದೆ.
ಆನ್ಲೈನ್ನಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ಅಥೆಂಟಿಕೇಶನ್ ಅವಶ್ಯಕತೆ ಇರುವ ನಿಯಮ ರೂಪಿಸಲಾಗಿದೆ. ಏಜೆಂಟ್ಗಳು ಟಿಕೆಟ್ ಬುಕಿಂಗ್ ಸಿಸ್ಟಂ ಅನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ಐಆರ್ಸಿಟಿಸಿ ಈ ಕ್ರಮ ತೆಗೆದುಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ