Petrol Diesel Rate: ಬೇಸಿಗೆಯಲ್ಲಿ ತೈಲ ದರ ಇಳಿಯುತ್ತೆ ಎಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್; ಕರ್ನಾಟಕದ ಯಾವ ನಗರದಲ್ಲಿ ಎಷ್ಟಿದೆ?
Petrol Price in Bengaluru: ಚಳಿಗಾಲ ಕಳೆದ ಮೇಲೆ ಪೆಟ್ರೋಲ್- ಡೀಸೆಲ್ ದರದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ನಿರೀಕ್ಷೆ ಮಾಡಬಹುದು ಎಂದು ಪೆಟ್ರೋಲಿಯಂ ಖಾತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಪೆಟ್ರೋಲ್- ಡೀಸೆಲ್ ದರ ಎಷ್ಟಿದೆ ಎಂಬ ವಿವರವೂ ಇಲ್ಲಿದೆ.
ವಾರಾಣಸಿ: ತೈಲ ಬೆಲೆಯಿಂದ ಆತಂಕಕ್ಕೀಡಾಗಿರುವ ಜನರಿಗೆ ಸದ್ಯದಲ್ಲೇ ಬೆಲೆ ಇಳಿಕೆಯ ಸಮಾಧಾನ ದೊರೆಯಲಿದೆ. ಆದರೆ ಈ ಚಳಿಗಾಲ ಕಳೆಯಬೇಕು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೇಳಿದ್ದಾರೆ. ‘ಅಂತರರಾಷ್ಟ್ರೀಯ ಮಾರ್ಕೆಟ್ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ಆಗಿರುವುದು ಗ್ರಾಹಕರ ಮೇಲೂ ಪರಿಣಾಮ ಬೀರಿದೆ. ಚಳಿಗಾಲ ಕಳೆಯುತ್ತಿದ್ದಂತೆ ದರವು ಅಲ್ಪ ಪ್ರಮಾಣದಲ್ಲಿ ಕಡಿಮೆ ಆಗಲಿದೆ. ಇದು ಅಂತರರಾಷ್ಟ್ರೀಯ ವಿದ್ಯಮಾನ. ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆಯೂ ಹೆಚ್ಚಾಗಿದೆ. ಚಳಿಗಾಲದಲ್ಲಿ ಹೀಗಾಗುತ್ತದೆ. ಇದು ಮುಗಿಯುತ್ತಿದ್ದಂತೆಯೇ ಬೆಲೆ ಕೆಳಗಿಳಿಯುತ್ತದೆ’ ಎಂದು ಅವರು ಹೇಳಿದ್ದಾರೆ.
ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಉಕ್ಕು ಖಾತೆ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಎಎನ್ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ದೇಶದ ತೈಲ ಮತ್ತು ಅನಿಲ ವಲಯಕ್ಕೆ ಈಶಾನ್ಯ ಭಾಗದ ರಾಜ್ಯಗಳಾದ ಅರುಣಾಚಲಪ್ರದೇಶ, ಅಸ್ಸಾಂ, ಮಣಿಪುರ್, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಸಿಕ್ಕಿಂ ಯಾವ ಕಾರಣಕ್ಕೆ ಪ್ರಮುಖ ಎಂಬುದನ್ನು ವಿವರಿಸಿದರು.
‘ದೇಶದ ಮೊದಲ ತೈಲ ನಿಕ್ಷೇಪವನ್ನು ಕಂಡುಹಿಡಿದಿದ್ದು ಅಸ್ಸಾಂನ ದಿಗ್ಬಾಯ್ ಹಾಗೂ ದುಲಿಯಾಜನ್ನಲ್ಲಿ. ಮತ್ತು ದೇಶದ ಶೇ 18ರಷ್ಟು ತೈಲ ಸಂಪನ್ಮೂಲ ಈಶಾನ್ಯ ಭಾಗದಲ್ಲಿದೆ. ಅಸ್ಸಾಂ, ಅರುಣಾಚಲಪ್ರದೇಶ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾ ಇಲ್ಲೆಲ್ಲ ತೈಲ ಮತ್ತು ಅನಿಲ ನಿಕ್ಷೇಪಗಳಿವೆ. 2014ರಲ್ಲಿ ಮೋದಿ ನೇತೃತ್ವದಲ್ಲಿ ಸರ್ಕಾರ ಬಂದಾಗ ಕಚ್ಚಾ ತೈಲ ಪೈಪ್ಲೈನ್, ಅನಿಲ ಪೈಪ್ಲೈನ್, ಸಂಸ್ಕರಣೆ ಹಾಗೂ ತೈಲ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಮೂಲಸೌಕರ್ಯ ಸೃಷ್ಟಿಸಲು ತೀರ್ಮಾನಿಸಿತು’ ಎಂದು ಅವರು ಹೇಳಿದ್ದಾರೆ.
ಎಲ್ಪಿಜಿ, ಪೆಟ್ರೋಲ್, ಡೀಸೆಲ್ ದರವು ದೇಶದಲ್ಲಿ ಪದೇಪದೇ ಏರಿಕೆ ಆಗುತ್ತಿದೆ. ವಿರೋಧ ಪಕ್ಷಗಳು ದೇಶದ ನಾನಾ ಭಾಗಗಳಲ್ಲಿ ಈ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿವೆ.
ಕರ್ನಾಟಕದ ಪ್ರಮುಖ ಸ್ಥಳಗಳಲ್ಲಿ ಫೆಬ್ರವರಿ 28ನೇ ತಾರೀಕಿನ ಪೆಟ್ರೋಲ್- ಡೀಸೆಲ್ ದರ ಲೀಟರ್ಗೆ ಇಂತಿದೆ:
ಬೆಂಗಳೂರು: ಪೆಟ್ರೋಲ್- 94.22, ಡೀಸೆಲ್- 86.37
ಬಾಗಲಕೋಟೆ: ಪೆಟ್ರೋಲ್- 94.79, ಡೀಸೆಲ್- 86.91
ಬೆಳಗಾವಿ: ಪೆಟ್ರೋಲ್- 94.74, ಡೀಸೆಲ್- 86.87
ಬಳ್ಳಾರಿ: ಪೆಟ್ರೋಲ್- 95.44, ಡೀಸೆಲ್- 87.50
ಬೀದರ್: ಪೆಟ್ರೋಲ್- 94.65, ಡೀಸೆಲ್- 86.78
ಚಾಮರಾಜನಗರ: ಪೆಟ್ರೋಲ್- 94.31, ಡೀಸೆಲ್- 86.45
ಚಿಕ್ಕಬಳ್ಳಾಪುರ: ಪೆಟ್ರೋಲ್- 94.63, ಡೀಸೆಲ್- 86.74
ಚಿಕ್ಕಮಗಳೂರು: ಪೆಟ್ರೋಲ್- 95.99, ಡೀಸೆಲ್- 87.90
ಚಿತ್ರದುರ್ಗ: ಪೆಟ್ರೋಲ್- 95.64, ಡೀಸೆಲ್- 87.54
ದಕ್ಷಿಣ ಕನ್ನಡ: ಪೆಟ್ರೋಲ್- 93.48, ಡೀಸೆಲ್- 85.65
ದಾವಣಗೆರೆ: ಪೆಟ್ರೋಲ್- 96.04, ಡೀಸೆಲ್- 87.91
ಧಾರವಾಡ: ಪೆಟ್ರೋಲ್- 94.07, ಡೀಸೆಲ್- 86.25
ಗದಗ: ಪೆಟ್ರೋಲ್- 94.78, ಡೀಸೆಲ್- 86.90
ಹಾಸನ: ಪೆಟ್ರೋಲ್- 94.23, ಡೀಸೆಲ್- 86.26
ಮಂಡ್ಯ: ಪೆಟ್ರೋಲ್- 94.20, ಡೀಸೆಲ್- 86.34
ಮೈಸೂರು: ಪೆಟ್ರೋಲ್- 93.83, ಡೀಸೆಲ್- 86
ಕೋಲಾರ: ಪೆಟ್ರೋಲ್- 93.96, ಡೀಸೆಲ್- 86.13
ಕಲಬುರಗಿ: ಪೆಟ್ರೋಲ್- 94.01, ಡೀಸೆಲ್- 86.20
ಶಿವಮೊಗ್ಗ: ಪೆಟ್ರೋಲ್- 94.87, ಡೀಸೆಲ್- 86.87
ಉಡುಪಿ: ಪೆಟ್ರೋಲ್- 93.82, ಡೀಸೆಲ್- 85.97
ಉತ್ತರ ಕನ್ನಡ: ಪೆಟ್ರೋಲ್- 95.70, ಡೀಸೆಲ್- 87.68
ಇದನ್ನೂ ಓದಿ: Petrol rate: ಪೆಟ್ರೋಲ್ ಮೇಲೆ ಕೇಂದ್ರ, ರಾಜ್ಯಗಳಿಗೆ ಕಟ್ಟುವ ತೆರಿಗೆ ಲೆಕ್ಕ ಇಲ್ಲಿದೆ
Published On - 1:29 pm, Sun, 28 February 21