AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Electric Scooters: ಭಾರತದಲ್ಲಿ ಇವಿ ಭರಾಟೆ; ಒಂದು ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಎಷ್ಟು? ಓಲಾ ಎಲೆಕ್ಟ್ರಿಕ್ ನಂ. 1

Demand For Evs in India Rise: ಹಿಂದಿನ ಹಣಕಾಸು ವರ್ಷಕ್ಕಿಂತ ಈ ಬಾರಿ ಎವಿ ಸ್ಕೂಟರ್​ಗಳು 3 ಪಟ್ಟು ಹೆಚ್ಚು ಸೇಲ್ ಆಗಿವೆ. ರೆಡ್​ಸೀರ್ ಎಂಬ ಸ್ಟ್ರಾಟಿಜಿಕ್ ಕನ್ಸಲ್ಟನ್ಸಿ ಸಂಸ್ಥೆ ಬಿಡುಗಡೆ ಮಾಡಿದ ಇತ್ತೀಚಿನ ವರದಿಯೊಂದರಲ್ಲಿ ಈ ಮಾಹಿತಿ ಇದೆ.

Electric Scooters: ಭಾರತದಲ್ಲಿ ಇವಿ ಭರಾಟೆ; ಒಂದು ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಎಷ್ಟು? ಓಲಾ ಎಲೆಕ್ಟ್ರಿಕ್ ನಂ. 1
ಓಲಾ ಎಲೆಕ್ಟ್ರಿಕ್ ಸ್ಕೂಟರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 14, 2023 | 6:21 PM

Share

ಮುಖ್ಯಾಂಶಗಳು

  • 2021-22ರ ವರ್ಷಕ್ಕೆ ಹೋಲಿಸಿದರೆ 2022-23ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್​ಗಳ ಮಾರಾಟ 3 ಪಟ್ಟು ಹೆಚ್ಚಿದೆ. ಈ ವರ್ಷ 7.3 ಲಕ್ಷ ಇವಿ ಸ್ಕೂಟರ್ಸ್ ಮಾರಾಟವಾಗಿವೆ.
  • ರೆಡ್​ಸೀರ್ ಕನ್ಸಲ್ಟಿಂಗ್ ಸಂಸ್ಥೆಯ ವರದಿ ಪ್ರಕಾರ 2030ರಷ್ಟರಲ್ಲಿ ಭಾರತದಲ್ಲಿ ವರ್ಷಕ್ಕೆ ಮಾರಾಟವಾಗುವ ವಾಹನಗಳಲ್ಲಿ ಶೇ. 75ರಷ್ಟು ಎಲೆಕ್ಟ್ರಿಕ್ ಗಾಡಿಗಳೇ ಇರಲಿವೆ.
  • ಸರ್ಕಾರದ ಉತ್ತೇಜನ, ವಾಹನಗಳ ಆಕರ್ಷಕ ವಿನ್ಯಾಸ, ಪರಿಸರಸ್ನೇಹಿ, ಇಂಧನ ಉಳಿತಾಯ ಇತ್ಯಾದಿ ಕಾರಣಗಳಿಗೆ ಇವಿಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ನವದೆಹಲಿ: ಭಾರತದಲ್ಲಿ ಸರ್ಕಾರದ ನಿರೀಕ್ಷೆಯಂತೆ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ (EV Market) ದಿನೇ ದಿನೇ ಪ್ರಬಲಗೊಳ್ಳುತ್ತಿದೆ. ಹೆಚ್ಚೆಚ್ಚು ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ ಮಾರಾಟ ಆಗುತ್ತಿವೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್​​ಗಳಂತೂ (Electric 2-Wheelers) ಮಾರಾಟದಲ್ಲಿ ಟ್ರೆಂಡಿಂಗ್​ನಲ್ಲಿವೆ. 2022-23ರ ಹಣಕಾಸು ವರ್ಷದಲ್ಲಿ 7.2 ಲಕ್ಷಕ್ಕಿಂತ ಹೆಚ್ಚು ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳು ಭಾರತದಲ್ಲಿ ಮಾರಾಟ ಆಗಿವೆ. ಹಿಂದಿನ ಹಣಕಾಸು ವರ್ಷಕ್ಕಿಂತ ಈ ಬಾರಿ ಇವಿ ಸ್ಕೂಟರ್​ಗಳು 3 ಪಟ್ಟು ಹೆಚ್ಚು ಸೇಲ್ ಆಗಿವೆ. ರೆಡ್​ಸೀರ್ ಎಂಬ ಸ್ಟ್ರಾಟಿಜಿಕ್ ಕನ್ಸಲ್ಟನ್ಸಿ ಸಂಸ್ಥೆ ಬಿಡುಗಡೆ ಮಾಡಿದ ಇತ್ತೀಚಿನ ವರದಿಯೊಂದರಲ್ಲಿ ಈ ಮಾಹಿತಿ ಇದೆ. ಈ ವರದಿ ಪ್ರಕಾರ ಒಲಾ ಎಲೆಕ್ಟ್ರಿಕ್ ಸಂಸ್ಥೆ ಇವಿ ಸ್ಕೂಟರ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದೆ. ಅದರಲ್ಲೂ ಜನವರಿಯಿಂದೀಚೆ ಒಲಾ ಎಲೆಕ್ಟ್ರಿಕ್ ಸ್ಕೂಟರ್​ಗಳು ಅತಿಹೆಚ್ಚು ಮಾರಾಟ ಕಂಡಿವೆ. 2022-23 ರ ಹಣಕಾಸು ವರ್ಷದಲ್ಲಿ ಮಾರಾಟವಾದ 7.3 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಓಲಾ ಎಲೆಕ್ಟ್ರಿಕ್ ಪಾಲು ಶೇ. 22ರಷ್ಟು ಇದೆ. ಜನವರಿಯಿಂದ ಮಾರ್ಚ್​ವರೆಗಿನ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಒಲಾದ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿನ ಪಾರಮ್ಯ ಶೇ. 30ಕ್ಕೆ ಹೆಚ್ಚಾಗಿದೆ.

7 ವರ್ಷದಲ್ಲಿ ಭಾರತದಲ್ಲಿ ಶೇ. 75ರಷ್ಟು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದ ಅಂದಾಜು

ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ವಿಶ್ವದ ಎರಡನೇ ಅತಿದೊಡ್ಡ ಮಾರುಕಟ್ಟೆ ಆದ ಭಾರತದಲ್ಲಿ 2022-23ರ ಹಣಕಾಸು ವರ್ಷದಲ್ಲಿ ಸುಮಾರು 1.6 ಕೋಟಿ ವಾಹನಗಳು ಮಾರಾಟ ಕಂಡಿವೆ. ಇದರಲ್ಲಿ ಎಲೆಕ್ಟ್ರಿಕ್ ಸ್ಕೂಟರ್​ಗಳ ಸಂಖ್ಯೆ 7.3 ಲಕ್ಷ. ಅಂದರೆ ಎವಿ ಪಾಲು ಶೇ. 5 ಕೂಡ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಬಹಳ ವೇಗ ಪಡೆದುಕೊಳ್ಳುವ ನಿರೀಕ್ಷೆ ಇದೆ. ಕಳೆದ ಹಣಕಾಸು ವರ್ಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್​ಗಳು 3 ಪಟ್ಟು ಹೆಚ್ಚು ಮಾರಾಟವಾಗಿದೆ. ಪ್ರತೀ ತಿಂಗಳೂ ಸುಮಾರು 60 ಸಾವಿರ ಎಲೆಕ್ಟ್ರಿಕ್ ಸ್ಕೂಟರ್​ಗಳು ಸೇಲ್ ಆಗಿವೆ. ಇದೇ ಟ್ರೆಂಡ್ ಮುಂಬರುವ ವರ್ಷಗಳಲ್ಲಿ ಮುಂದುವರಿಯಲಿದ್ದು, ಮುಂದಿನ 3 ವರ್ಷದಲ್ಲಿ ಒಟ್ಟು ವಾಹನಗಳ ಮಾರಾಟದಲ್ಲಿ ಎಲೆಕ್ಟ್ರಿಕ್ ಗಾಡಿ ಪಾಲು ಶೇ. 30 ಇರಲಿದೆ. 2030ರಷ್ಟರಲ್ಲಿ ಇದು ಶೇ. 75ಕ್ಕೆ ಏರಲಿದೆ ಎಂಬುದು ರೆಡ್​ಸೀರ್ ಸಂಸ್ಥೆಯ ಅಂದಾಜು.

ಇದನ್ನೂ ಓದಿTata Motors: ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್ ಹೊಸ ದಾಖಲೆ

ಸರ್ಕಾರದ ಉತ್ತೇಜನ ಮತ್ತು ಸ್ಕೂಟರ್​ಗಳ ವಿನ್ಯಾಸ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಳಕ್ಕೆ ಕಾರಣವಾ?

ಪೆಟ್ರೋಲ್ ಬೆಲೆ ಹೆಚ್ಚಿನ ಮಟ್ಟದಲ್ಲಿರುವುದು, ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ಕೊಡುತ್ತಿರುವುದು, ಎಲೆಕ್ಟ್ರಿಕ್ ವಾಹನಗಳು ಪರಿಸರಸ್ನೇಹಿ ಎಂಬ ಭಾವನೆ ಹರಡಿರುವುದು ಹಾಗೂ ಎಲೆಕ್ಟ್ರಿಕ್ ಸ್ಕೂಟರ್​ಗಳ ವಿನ್ಯಾಸ ಆಕರ್ಷಕವಾಗಿರುವುದು ಇವೆಲ್ಲವೂ ಎಲೆಕ್ಟ್ರಿಕ್ ವಾಹನಗಳತ್ತ ಜನರು ಆಕರ್ಷಿತವಾಗುವಂತೆ ಮಾಡಿವೆ ಎಂದು ರೆಡ್​ಸೀರ್ ಸಂಸ್ಥೆ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಮೂಲ ಉಪಕರಣ ತಯಾರಕರು (ಒಇಎಂ), ಅಂದರೆ ವಾಹನ ತಯಾರಕರು ತಮ್ಮ ಉತ್ಪನ್ನಗಳ ಗುಣಮಟ್ಟಕ್ಕೆ ಆದ್ಯತೆ ಕೊಡುತ್ತಿದ್ದಾರೆ. ಜೊತೆಗೆ ಜನರಿಗೆ ಕಡಿಮೆ ಬಜೆಟ್​ನಲ್ಲಿ ವಾಹನ ಕೊಡುವತ್ತ ಗಮನ ಹರಿಸುತ್ತಿದ್ದಾರೆ. ಇದರಿಂದ ಎಲೆಕ್ಟ್ರಿಕ್ ಸ್ಕೂಟರ್​ಗಳು ಕಡಿಮೆ ಬೆಲೆಗೆ ಆಕರ್ಷಕ ವಿನ್ಯಾಸ ಹಾಗೂ ಉತ್ತಮ ಗುಣಮಟ್ಟದಲ್ಲಿ ಜನರಿಗೆ ಲಭ್ಯ ಇವೆ. ಇದು ಜನರನ್ನು ಸೆಳೆಯುವ ಅಂಶವಾಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು