Hindenburg Saga: ಅದಾನಿ ಬಗ್ಗೆ ಹಿಂಡನ್ಬರ್ಗ್ ವರದಿ ಹುಲಿ ಹೋಯ್ತು ಕಥೆ ಆಯ್ತಾ? ಜರ್ಮನ್ ಉದ್ಯಮಿ ಮಾರ್ಕ್ ಮೋಬಿಯಸ್ ಹೇಳಿದ್ದೇನು?

Mark Mobius On Hindenburg Report: ಜರ್ಮನಿಯ ಉದ್ಯಮಿ ಮತ್ತು ಹೂಡಿಕೆದಾರ ಮಾರ್ಕ್ ಮೋಬಿಯಸ್ ಇದೀಗ ಹಿಂಡನ್ಬರ್ಗ್ ರಿಸರ್ಚ್ ವರದಿಯಲ್ಲಿ ಹೊಸದೇನೂ ವಿಚಾರಗಳಿಲ್ಲ. ಸುಮ್ಮನೆ ವರದಿ ಬಿಡುಗಡೆ ಮಾಡಿ ಹುಯಿಲೆಬ್ಬಿಸಲಾಗಿದೆ ಎಂದು ಹೇಳಿದ್ದಾರೆ.

Hindenburg Saga: ಅದಾನಿ ಬಗ್ಗೆ ಹಿಂಡನ್ಬರ್ಗ್ ವರದಿ ಹುಲಿ ಹೋಯ್ತು ಕಥೆ ಆಯ್ತಾ? ಜರ್ಮನ್ ಉದ್ಯಮಿ ಮಾರ್ಕ್ ಮೋಬಿಯಸ್ ಹೇಳಿದ್ದೇನು?
ಮಾರ್ಕ್ ಮೋಬಿಯಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 14, 2023 | 8:07 PM

ಜನವರಿ ತಿಂಗಳಲ್ಲಿ ಹಿಂಡನ್ಬರ್ಗ್ ರಿಸರ್ಚ್ ಕಂಪನಿ (Hindenburg Research) ಅದಾನಿ ಗ್ರೂಪ್ ಬಗ್ಗೆ ತನಿಖಾ ವರದಿ ಬಿಡುಗಡೆ ಮಾಡಿ ಭಾರತೀಯ ಹಣಕಾಸು ಮತ್ತು ಉದ್ಯಮ ವಲಯದಲ್ಲಿ ದೊಡ್ಡ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗುವಂತೆ ಮಾಡಿತ್ತು. ಅದಾನಿ ಗ್ರೂಪ್​ನ ವಿವಿಧ ಕಂಪನಿಗಳ ಷೇರುಗಳು ತೀರಾ ವೇಗದಲ್ಲಿ ದೊಪ್ಪನೆ ಕುಸಿದಿದ್ದವು. ವಿಶ್ವದ 2ನೇ ಅತೀ ಶ್ರೀಮಂತ ಎನಿಸಿದ್ದ ಗೌತಮ್ ಅದಾನಿ (Gautam Adani) ಹಲವು ಲಕ್ಷ ಕೋಟಿ ರೂಗಳಷ್ಟು ಸಂಪತ್ತು ಕಳೆದುಕೊಂಡರು. ಅದಾನಿ ಕಂಪನಿಗಳಲ್ಲಿ ಹಣ ಹಾಕಿದ್ದ ಹೂಡಿಕೆದಾರರು ಕಂಗಾಲಾದರು. ಹಿಂಡನ್ಬರ್ಗ್ ರಿಸರ್ಚ್​ನ ಈ ವರದಿ ವಿಪಕ್ಷಗಳ ಕೈಗೆ ಒಂದು ಪ್ರಮುಖ ಅಸ್ತ್ರವಾಗಿ ಮಾರ್ಪಟ್ಟಿರುವುದು ಹೌದು. ಹಿಂಡನ್ಬರ್ಗ್ ಸಂಸ್ಥೆಯ ಈ ವರದಿಯಲ್ಲಿ ಮಾಡಲಾಗಿರುವ ಆರೋಪಗಳನ್ನು ಅದಾನಿ ಗ್ರೂಪ್ ಸಂಸ್ಥೆ ಸಾರಾಸಗಟಾಗಿ ತಳ್ಳಿಹಾಕಿದೆ. ಅದು ಸಹಜವೇ. ಆದರೆ, ಜರ್ಮನಿಯ ಉದ್ಯಮಿ ಮತ್ತು ಹೂಡಿಕೆದಾರ ಮಾರ್ಕ್ ಮೋಬಿಯಸ್ ಇದೀಗ ಹಿಂಡನ್ಬರ್ಗ್ ರಿಸರ್ಚ್ ವರದಿಯಲ್ಲಿ ಹೊಸದೇನೂ ವಿಚಾರಗಳಿಲ್ಲ. ಸುಮ್ಮನೆ ವರದಿ ಬಿಡುಗಡೆ ಮಾಡಿ ಹುಯಿಲೆಬ್ಬಿಸಲಾಗಿದೆ ಎಂದು ಹೇಳಿದ್ದಾರೆ. ಇಲಿ ಬಂದರೆ ಹುಲಿ ಬಂತು ಎಂದು ಕೂಗೆಬ್ಬಿಸಿದಂತೆ ಅದಾನಿ ವಿಚಾರದಲ್ಲಿ ಹಿಂಡನ್​ಬರ್ಗ್ ಕೇವಲ ಕೂಗೆಬ್ಬಿಸಿತಾ ಎಂಬುದು ಮೋಬಿಯಸ್ ಮಾತುಗಳಲ್ಲಿ ವ್ಯಕ್ತವಾಗುತ್ತದೆ.

‘ಅದಾನಿ ವಿಚಾರವನ್ನು ಹಿಂಡನ್​ಬರ್ಗ್ ಗ್ರೂಪ್ ಸುಮ್ಮನೆ ದೊಡ್ಡದು ಮಾಡಿರುವಂತೆ ನನಗೆ ಭಾಸವಾಗಿದೆ. ಷೇರು ಬೆಲೆ ಕಡಿಮೆಗೊಳಿಸಬೇಕೆಂದು ಹೊರಟಿರುವವರು ಆ ಕಂಪನಿಯ ಕೆಟ್ಟ ವಿಚಾರಗಳನ್ನು ಬಯಲಿಗೆಳೆದು ತೋರಿಸುವುದು ಸಹಜ. ಆದರೆ, ಹಿಂಡನ್ಬರ್ಗ್​ನ ವರದಿ ಪೂರ್ಣ ನಿಖರ ಮತ್ತು ಸತ್ಯದಿಂದ ಕೂಡಿದೆ ಎಂದು ನನಗೆ ಅನಿಸುವುದಿಲ್ಲ’ ಎಂದು ಅಮೆರಿಕ ಮೂಲದ ಮಾರ್ಕ್ ಮೋಬಿಯಸ್ ಬ್ಯುಸಿನೆಸ್ ಟುಡೇ ಸಂದರ್ಶನದಲ್ಲಿ ಹೇಳಿರುವುದು ವರದಿಯಾಗಿದೆ.

ಗೊತ್ತಿರುವ ಸಂಗತಿಗಳನ್ನೇ ಹಿಂಡನ್ಬರ್ಗ್ ವರದಿಯಲ್ಲಿ ಮತ್ತೆ ದೊಡ್ಡದಾಗಿ ಹೇಳಲಾಗಿದೆಯಾ?

ಅದಾನಿ ಗ್ರೂಪ್​ನ ಕಂಪನಿಗಳಲ್ಲಿ ಮತ್ತು ವ್ಯವಹಾರಗಳಲ್ಲಿ ಗೌತಮ್ ಅದಾನಿ ಕುಟುಂಬ ಸದಸ್ಯರು ಭಾಗಿಯಾಗಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ. ಅದರಲ್ಲಿ ರಹಸ್ಯ ಏನೂ ಇಲ್ಲ. ಅದು ಬಹಿರಂಗಪಡಿಸಿರುವ ಇನ್ನೂ ಹಲವು ಸಂಗತಿಗಳು ಅನಾಲಿಸ್ಟ್​ಗಳಿಗೆ ಚೆನ್ನಾಗಿ ಗೊತ್ತಿರುವಂಥವೇ. ಅದಾನಿ ಗ್ರೂಪ್​ನ ಸಾಲ ತೀರಾ ಹೆಚ್ಚು ಇದೆ ಎನ್ನುವ ವಿಚಾರವೂ ಗೊತ್ತಿರುವಂಥದ್ದೇ’ ಎಂದು ಮೋಬಿಯಸ್ ಕ್ಯಾಪಿಟಲ್ ಸಂಸ್ಥೆಯ ಮುಖ್ಯಸ್ಥ ಹೇಳಿದ್ದಾರೆ.

ಇದನ್ನೂ ಓದಿBrightcom Fraud: ಅಕ್ರಮ ಹಣಕಾಸು ವರದಿ ಆರೋಪ: ಬ್ರೈಟ್​ಕಾಮ್ ಗ್ರೂಪ್​ಗೆ ಶೋಕಾಸ್ ನೋಟೀಸ್; ಕುಸಿಯುತ್ತಿರುವ ಷೇರುಬೆಲೆ

ಹಿಂಡನ್ಬರ್ಗ್ ರಿಸರ್ಚ್ ಎಂಬುದು ಒಂದು ಶಾರ್ಟ್ ಸೆಲಿಂಗ್ ಕಂಪನಿ. ಅಂದರೆ, ಕೃತಕವಾಗಿ ಷೇರುಬೆಲೆ ಉಬ್ಬಿದ ಕಂಪನಿಗಳನ್ನು ಗುರುತಿಸಿ ಅವುಗಳ ಅಕ್ರಮಗಳನ್ನು ಬಯಲಿಗೆಳೆದು ಷೇರು ಬೆಲೆ ಕುಸಿಯುವಂತೆ ಮಾಡಿ ಆ ಬಳಿಕ ಅದರಿಂದ ಲಾಭ ಮಾಡಿಕೊಳ್ಳುವ ಕಂಪನಿ ಅದು. ಅದಾನಿ ಗ್ರೂಪ್​ನ ಕಂಪನಿಗಳ ವ್ಯವಹಾರಗಳ ಹಣಕಾಸು ಲೆಕ್ಕಗಳನ್ನು ತಿರುಚಿ ಹೂಡಿಕೆದಾರರಿಗೆ ವಂಚಿಸಲಾಗಿದೆ. ಷೇರು ಬೆಲೆ ಉಬ್ಬುವಂತೆ ಮಾಡಲಾಗಿದೆ. ಈ ಸಂಸ್ಥೆ ದೊಡ್ಡ ಪ್ರಮಾಣದಲ್ಲಿ ಸಾಲ ಹೊಂದಿದೆ. ಅದಾನಿ ಗ್ರೂಪ್ ಬಳಿ ನಂಬಲಸಾಧ್ಯವಾದಷ್ಟು ಆಸ್ತಿ ಇದೆ ಎಂದೆಲ್ಲಾ ಹಿಂಡನ್ಬರ್ಗ್ ವರದಿಯಲ್ಲಿ ಆರೋಪಿಸಲಾಗಿದೆ.

ಜನವರಿ ಕೊನೆಯಲ್ಲಿ ಅದಾನಿ ಎಂಟರ್​ಪ್ರೈಸಸ್​ನ ಎಫ್​ಪಿಒ ಆರಂಭಕ್ಕೆ 3 ದಿನ ಮುಂಚೆ ಹಿಂಡನ್ಬರ್ಗ್ ರಿಸರ್ಚ್ ಈ ವರದಿಯನ್ನು ಬಿಡುಗಡೆ ಮಾಡಿತ್ತು. ಅಮೆರಿಕದ ರಾಜೀವ್ ಜೈನ್ ನೇತೃತ್ವದ ಜಿಕ್ಯೂಜಿ ಪಾರ್ಟ್ನರ್ಸ್ ಸಂಸ್ಥೆ ಅದಾನಿ ಗ್ರೂಪ್​ನಲ್ಲಿ 15,000 ಕೋಟಿ ರೂ ಬಂಡವಾಳ ಹಾಕಿದ್ದರ ಬಗ್ಗೆಯೂ ಈ ವರದಿಯಲ್ಲಿ ಸಂಶಯ ವ್ಯಕ್ತಪಡಿಸಿತ್ತು.

ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯ ಈ ವರದಿಯ ಅಂಶಗಳ ಬಗ್ಗೆ ಇನ್ನಷ್ಟು ಪ್ರತಿಕ್ರಿಯೆಗಳನ್ನು ನೀಡಿರುವ ಮಾರ್ಕ್ ಮೋಬಿಯಸ್, ‘ಅದಾನಿ ಗ್ರೂಪ್ ಬಳಿ ಕೆಲವು ಅಸಾಧಾರಣ ಆಸ್ತಿಗಳಿರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಆಸ್ತಿಗಳು ಯಾವತ್ತಿದ್ದರೂ ಬೆಲೆ ಇರುವಂಥವೇ. ಇದೇ ಕಾರಣಕ್ಕೆ ರಾಜೀವ್ ಜೈನ್ ಮೊದಲಾದ ಕೆಲ ಹೂಡಿಕೆದಾರರು ಅದಾನಿ ಕಂಪನಿಗಳಲ್ಲಿ ಸಾಕಷ್ಟು ಹಣ ಹಾಕಿದ್ದಾರೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿNikhil Kamath: ಅಮೆರಿಕ ಬಿಟ್ಟು ಬನ್ನಿ, ಭಾರತದಲ್ಲಿ ಏನಾದರೂ ಮಾಡಿ: ಎನ್​ಆರ್​ಐಗಳಿಗೆ ನಿಖಿಲ್ ಕಾಮತ್ ಕರೆ

ಅದಾನಿ ಗ್ರೂಪ್ ಕೈಹಿಡಿಯುವುದು ಬ್ಯಾಂಕ್​ಗಳಿಗೆ ಅನಿವಾರ್ಯವಾ?

ಅದಾನಿ ಗ್ರೂಪ್​ನ ಕಂಪನಿಗಳಿಗೆ ಸಾಲ ಕೊಟ್ಟಿರುವ ಬ್ಯಾಂಕುಗಳು ಯಾಕೆ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಪ್ರಶ್ನೆ ಕೆಲ ವಲಯಗಳಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹೂಡಿಕೆದಾರ ಮಾರ್ಕ್ ಮೋಬಿಯಸ್, ‘ಅದಾನಿ ಗ್ರೂಪ್​ಗೆ ಸಾಲ ಕೊಟ್ಟ ಬ್ಯಾಂಕುಗಳು ಕಷ್ಟಕ್ಕೆ ಸಿಲುಕಿವೆ. ತಮ್ಮ ಹಣ ವಾಪಸ್ ಬರಬೇಕಾದರೆ ಅವು ಅದಾನಿಗೆ ಬೆಂಬಲ ಕೊಡಲೇಬೇಕಾದ ಸ್ಥಿತಿ ಇದೆ’ ಎಂದು ವಿಶ್ಲೇಷಿಸಿದ್ದಾರೆ.

ಮೋಬಿಯಸ್ ಕ್ಯಾಪಿಟಲ್ ಸಂಸ್ಥೆ ಅದಾನಿ ಗ್ರೂಪ್​ನಲ್ಲಿ ಯಾಕೆ ಹೂಡಿಕೆ ಮಾಡಿಲ್ಲ?

ಹಿಂಡನ್ಬರ್ಗ್ ರಿಸರ್ಚ್ ವರದಿಯ ಅಂಶಗಳ ಬಗ್ಗೆ ಚಕಾರ ಎತ್ತಿರುವ ಮಾರ್ಕ್ ಮೋಬಿಯಸ್ ಅವರ ಮೋಬಿಯಸ್ ಕ್ಯಾಪಿಟಲ್ ಸಂಸ್ಥೆ ಅದಾನಿ ಗ್ರೂಪ್​ನಲ್ಲಿ ಯಾಕೆ ಹೂಡಿಕೆ ಮಾಡಿಲ್ಲ ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಈ ಬಗ್ಗೆ ಕಡ್ಡಿ ತುಂಡು ಮಾಡುವಂತೆ ತಮ್ಮ ಸಂದರ್ಶನದಲ್ಲಿ ಹೇಳಿರುವ ಮಾರ್ಕ್ ಮೋಬಿಯಸ್, ಅದಾನಿ ಗ್ರೂಪ್ ಕಂಪನಿಯ ಸಾಲ ವಿಪರೀತ ಇದೆ. ಹೀಗಾಗಿ ಆ ಸಂಸ್ಥೆಯಿಂದ ದೂರ ಉಳಿದೆವು ಎಂದಿದ್ದಾರೆ.

ಇದನ್ನೂ ಓದಿProfitable Shares: ಬ್ರೋಕರ್​ಗಳ ಟಾಪ್ ಫೇವರಿಟ್; ಒಂದೂವರೆ ವರ್ಷಕ್ಕೆ ಹಣ ಡಬಲ್ ಮಾಡುವ ಷೇರು; 5 ವರ್ಷದೊಳಗೆ 2 ಪಟ್ಟು ಹೆಚ್ಚು ರಿಟರ್ನ್ಸ್ ಕೊಡುವ ಷೇರುಗಳು

‘ಅಷ್ಟೇ ಅಲ್ಲ, ಅದಾನಿ ಗ್ರೂಪ್ ನಮಗೆ ತೀರಾ ದೊಡ್ಡದಾಯಿತು. ನಾವು ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳತ್ತ ಗಮನ ಹರಿಸುತ್ತೇವೆ. ಹೆಚ್ಚು ಸಾಲ ಇರುವ ಕಂಪನಿಗಳು ಬೇಡ ಎನ್ನುವ ಕಟ್ಟುನಿಟ್ಟಿನ ನಿಯಮ ನಮ್ಮಲ್ಲಿದೆ. ಅದರ ಸಾಲದ ಅನುಪಾತ ಶೇ. 50ಕ್ಕಿಂತಲೂ ಹೆಚ್ಚಿದ್ದರೆ ನಾವು ಹೂಡಿಕೆ ಮಾಡುವುದಿಲ್ಲ’ ಎಂದು ಮಾರ್ಕ್ ಮೋಬಿಯಸ್ ಸ್ಪಷ್ಪಪಡಿಸಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:07 pm, Fri, 14 April 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?