EXPO2020 Dubai: ಎಕ್ಸ್​ಪೋ2020 ದುಬೈನಲ್ಲಿ ಭಾರತದ ಪೆವಿಲಿಯನ್​ಗೆ 43 ದಿನಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಸಂದರ್ಶಕರ ಭೇಟಿ

| Updated By: Srinivas Mata

Updated on: Nov 13, 2021 | 4:49 PM

ದುಬೈ ಎಕ್ಸ್​ಪೋ 2020ರಲ್ಲಿ ಭಾರತ ಪೆವಿಲಿಯನ್​ಗೆ 43 ದಿನಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಸಂದರ್ಶಕರು ಭೇಟಿ ನೀಡಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.

EXPO2020 Dubai: ಎಕ್ಸ್​ಪೋ2020 ದುಬೈನಲ್ಲಿ ಭಾರತದ ಪೆವಿಲಿಯನ್​ಗೆ 43 ದಿನಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಸಂದರ್ಶಕರ ಭೇಟಿ
ದುಬೈ ಎಕ್ಸ್​ಪೋ 2020 (ಸಂಗ್ರಹ ಚಿತ್ರ)
Follow us on

ಎಕ್ಸ್​ಪೋ2020 ದುಬೈ (EXPO2020 Dubai)ನಲ್ಲಿ ಅತಿ ಹೆಚ್ಚು ಜನರಿಂದ ತುಂಬಿದ್ದರಲ್ಲಿ ಭಾರತದ ಪೆವಿಲಿಯನ್ ಕೂಡ ಒಂದು. ನವೆಂಬರ್ 12ನೇ ತಾರೀಕಿನವರೆಗೆ ಕೇವಲ 43 ದಿನಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಸಂದರ್ಶಕರು ಇಲ್ಲಿಗೆ ಭೇಟಿ ನೀಡಿದ್ದಾರೆ. ಈ ಪೆವಿಲಿಯನ್​ ಅನ್ನು ಅಕ್ಟೋಬರ್ 1ರಂದು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಉದ್ಘಾಟಿಸಿದ್ದರು. “ಭಾರತದ ಪೆವಿಲಿಯನ್‌ನಲ್ಲಿ ಸಂದರ್ಶಕರು ಅಪಾರ ಆಸಕ್ತಿಯನ್ನು ತೋರಿರುವುದು ದೇಶದ ಪಾರಮ್ಯ ಮತ್ತು ಅವಕಾಶಗಳ ಮೇಲಿನ ವಿಶ್ವಾಸದ ಸಂಕೇತವಾಗಿದೆ. ಜತೆಗೆ ದೇಶದ ವೈವಿಧ್ಯಮಯ ಸಂಸ್ಕೃತಿಯು ಪೆವಿಲಿಯನ್‌ನಲ್ಲಿ ನಡೆಯುತ್ತಿರುವ ವಿವಿಧ ರಾಜ್ಯ ವಾರಗಳ ಪೂರ್ಣ ಪ್ರದರ್ಶನದಲ್ಲಿದೆ. ಪೆವಿಲಿಯನ್​ಗೆ 31 ದೇಶದ ನಿಯೋಗಗಳು, 175 ಹೈಪ್ರೊಫೈಲ್ ಸಂದರ್ಶಕರು ಭೇಟಿ ನೀಡಿದ್ದಾರೆ. ಇದರೊಂದಿಗೆ 199 G2B ಮತ್ತು B2B ಸಭೆಗಳು ಸ್ಟಾರ್ಟ್ಅಪ್ ಪಿಚಿಂಗ್ ಸೆಷನ್‌ಗಳೊಂದಿಗೆ ಪೆವಿಲಿಯನ್‌ನಲ್ಲಿ ನಡೆದಿವೆ. ಈಗಾಗಲೇ 15 ಎಫ್‌ಐಐಗಳು ಸ್ಟಾರ್ಟ್‌ಅಪ್‌ಗಳಿಗೆ ಧನಸಹಾಯ ನೀಡಲು ಬದ್ಧವಾಗಿವೆ. ಇದು ಸಂತೋಷದ ವಿಷಯವಾಗಿದೆ,” ಎಂದು ದುಬೈನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಮತ್ತು EXPO2020ರಲ್ಲಿ ಭಾರತದ ಡೆಪ್ಯೂಟಿ ಕಮಿಷನರ್ ಜನರಲ್ ಡಾ.ಅಮನ್ ಪುರಿ ಹೇಳಿದ್ದಾರೆ.

ಗುಜರಾತ್, ಕರ್ನಾಟಕ ಮತ್ತು ಲಡಾಖ್​ನಿಂದ ಹೂಡಿಕೆ ಅವಕಾಶಗಳಿಗೆ ಸಂಬಂಧಿಸಿದ ಹಲವಾರು ವ್ಯಾಪಾರ ಸೆಷನ್​ಗಳು ಮತ್ತು ಸಮ್ಮೇಳನಗಳನ್ನು ಅಕ್ಟೋಬರ್‌ನಲ್ಲಿ ಆಯೋಜಿಸಲಾಗಿತ್ತು. ಇವುಗಳ ಹೊರತಾಗಿ ಹಬ್ಬದ ಋತುವಿನಲ್ಲಿ ವಿಶೇಷವಾಗಿ ದಸರಾ, ನವರಾತ್ರಿ ಮತ್ತು ದೀಪಾವಳಿ ಆಚರಣೆಗಳಿಗೆ ಸಂಬಂಧಿಸಿದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಭಾರತದ ಪೆವಿಲಿಯನ್ ಸಾಕ್ಷಿಯಾಗಿದೆ. ನವೆಂಬರ್‌ನಲ್ಲಿ, ತೆಲಂಗಾಣ, ರಾಜಸ್ಥಾನ ಮತ್ತು ಮಹಾರಾಷ್ಟ್ರದಿಂದ ಜಾಗತಿಕ ವೇದಿಕೆ ಮೇಲೆ ವ್ಯಾಪಾರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸರಣಿಯನ್ನು ಆಯೋಜಿಸುತ್ತಿದೆ. ಈ ರಾಜ್ಯ-ನಿರ್ದಿಷ್ಟ ವಾರಗಳು ತಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಅಮೋಘ ವ್ಯಾಪಾರ ಅವಕಾಶಗಳನ್ನು ಪ್ರದರ್ಶಿಸುವ ಮೂಲಕ ಅನೇಕ ಚಟುವಟಿಕೆಗಳನ್ನು ನಡೆಸುತ್ತಿವೆ. ನವೀಕರಿಸಬಹುದಾದ ಇಂಧನ, ಬಾಹ್ಯಾಕಾಶ ಮತ್ತು ವಸತಿ ಹಾಗೂ ನಗರ ವ್ಯವಹಾರಗಳ ಕ್ಷೇತ್ರಗಳು ಈಗಾಗಲೇ ನೀತಿ ನಿರೂಪಕರು ಮತ್ತು ಉದ್ಯಮ ನಾಯಕರು ಪೆವಿಲಿಯನ್‌ನಲ್ಲಿ ಇಂಟರ್​ಆಕ್ಟಿವ್ ಸೆಷನ್‌ಗಳಲ್ಲಿ ಭಾಗವಹಿಸಿದ್ದಾರೆ. ತೈಲ ಮತ್ತು ಅನಿಲ ಹಾಗೂ ಜವಳಿ ಈ ಎರಡು ವಲಯಗಳಲ್ಲಿ ನವೆಂಬರ್ ತಿಂಗಳಲ್ಲಿ ಭಾರತದ ಸಾಮರ್ಥ್ಯಗಳನ್ನು ಪ್ರದರ್ಶಿಸಿವೆ.

ಈ ವಾರ ನಡೆದ ಭಾರತ-ಜಿಸಿಸಿ ವ್ಯಾಪಾರ ಸಮ್ಮೇಳನ ಸೇರಿದಂತೆ ದ್ವಿಪಕ್ಷೀಯ ಸಮ್ಮೇಳನಗಳು ಭಾರತದ ಪೆವಿಲಿಯನ್​ನಲ್ಲಿ ನಡೆದ ಚಟುವಟಿಕೆಗಳ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಕೇರಳದಂತಹ ರಾಜ್ಯಗಳು ಭಾಗವಹಿಸಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಇಂಧನ ಸಂರಕ್ಷಣೆ, ಪರಿಸರ ಮತ್ತು ಸುಸ್ಥಿರತೆ, ಉನ್ನತ ಶಿಕ್ಷಣ ಮತ್ತು ಕೌಶಲಗಳು, ಬುಡಕಟ್ಟು ವ್ಯವಹಾರಗಳು, ಮಸಾಲೆಗಳು ಮತ್ತು ಪ್ರವಾಸೋದ್ಯಮದಂತಹ ಪ್ರಮುಖ ಕ್ಷೇತ್ರಗಳ ಭಾಗವಹಿಸುವಿಕೆ ಕಂಡುಬರುತ್ತದೆ. “ರಾಜಸ್ಥಾನ ಸಪ್ತಾಹವು ಪ್ರಸ್ತುತ ಪೆವಿಲಿಯನ್‌ನಲ್ಲಿದೆ ಮತ್ತು ನಂತರ ಮಹಾರಾಷ್ಟ್ರ ವಾರ ನಡೆಯಲಿದೆ. ಸಾಂಸ್ಕೃತಿಕ ವೈವಿಧ್ಯ ಮತ್ತು ಉತ್ಸಾಹದ ಜೊತೆಗೆ ಸ್ಟಾರ್ಟ್​ಅಪ್‌ಗಳ ಮೇಲೆ ವಿಶೇಷ ಗಮನ ಹರಿಸುವುದರೊಂದಿಗೆ ಭಾರತದ ನವೀನ ಸಾಮರ್ಥ್ಯವು ಸಂಪೂರ್ಣ ಪ್ರದರ್ಶನದಲ್ಲಿದೆ – ಕರ್ನಾಟಕ ಮತ್ತು ತೆಲಂಗಾಣ ಸ್ಟಾರ್ಟ್‌ಅಪ್‌ಗಳು ಅಪಾರ ಗಮನ ಸೆಳೆದಿವೆ. ಇದು ಸಂಸ್ಕೃತಿ ಮತ್ತು ವ್ಯಾಪಾರ ಅವಕಾಶಗಳ ಮಿಶ್ರಣವಾಗಿದ್ದು, ಇಂಡಿಯಾ ಪೆವಿಲಿಯನ್‌ಗೆ ಸಂದರ್ಶಕರನ್ನು ಆಕರ್ಷಿಸುತ್ತಿದೆ,” ಎಂದು ಡಾ ಪುರಿ ಹೇಳಿದರು.

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (MoS) ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಸೇರಿದಂತೆ ಹಲವಾರು ಸರ್ಕಾರಿ ಗಣ್ಯರು, ಪ್ರಸಿದ್ಧ ವ್ಯಕ್ತಿಗಳು, ಉದ್ಯಮಿಗಳು ಮತ್ತು ಬ್ಯಾಂಕರ್‌ಗಳು; ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್​ಜಿ, ಎಸ್​ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖರ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ; ಜಾನ್ವಿ ಕಪೂರ್ ಮತ್ತು ಆಕೆಯ ಸಹೋದರಿ ಖುಷಿ ಕಪೂರ್, ಕನಿಕಾ ಕಪೂರ್, ಶಾನ್, ಜಾವೇದ್ ಜಾಫೆರಿ ಮತ್ತು ಮನೀಶ್ ಪಾಲ್ ಕೂಡ ಇತ್ತೀಚೆಗೆ ಭಾರತ ಪೆವಿಲಿಯನ್‌ಗೆ ಭೇಟಿ ನೀಡಿದ್ದಾರೆ. ಈಗಿನ ಟ್ರೆಂಡ್​ ಪ್ರಕಾರ, ಮಾರ್ಚ್ 31, 2022ರಂದು ಎಕ್ಸ್‌ಪೋ 2020 ಮುಕ್ತಾಯಗೊಳ್ಳುವ ವೇಳೆಗೆ, ಭಾರತ ಪೆವಿಲಿಯನ್ ಖಂಡಿತವಾಗಿಯೂ ಅತ್ಯಧಿಕ ಮಂದಿ ಭೇಟಿ ನೀಡಿದ ಪೆವಿಲಿಯನ್‌ಗಳಲ್ಲಿ ಒಂದಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: Dubai Expo 2020: ವಿಶ್ವದ ಅತಿದೊಡ್ಡ ದುಬೈ ಎಕ್ಸ್​ಪೋಗೆ ಕೊರೊನಾ ಲಸಿಕೆ ಬೇಕಿಲ್ಲ, ನೆಗೆಟಿವ್ ರಿಪೋರ್ಟ್ ಕೇಳಲ್ಲ