ಪ್ರಧಾನ್ ಮಂತ್ರಿ ಗ್ರಾಮೀಣ್ ಆವಾಸ್ ಯೋಜನಾ ಮೊದಲ ಕಂತು 700 ಕೋಟಿ ರೂ. ನ.14ಕ್ಕೆ ಪ್ರಧಾನಿ ಮೋದಿಯಿಂದ ಬಿಡುಗಡೆ
ಪ್ರಧಾನಮಂತ್ರಿ ಗ್ರಾಮೀಣ್ ಆವಾಸ ಯೋಜನಾ ಮೊದಲನೇ ಕಂತು 700 ಕೋಟಿ ರೂಪಾಯಿಯನ್ನು ನವೆಂಬರ್ 14ರಂದು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 14ನೇ ತಾರೀಕಿನ ಭಾನುವಾರದಂದು ಮಧ್ಯಾಹ್ನ 1 ಗಂಟೆಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನಾ- ಗ್ರಾಮೀಣ್ (PMAY-G) ಮೊದಲ ಕಂತನ್ನು ತ್ರಿಪುರಾದಲ್ಲಿ 1.47 ಲಕ್ಷ ಫಲಾನುಭವಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯವು ಶನಿವಾರ ಮಾಹಿತಿ ನೀಡಿದೆ.
700 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಈ ಸಂದರ್ಭದಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿದ ನಂತರ ತ್ರಿಪುರಾದ ವಿಶಿಷ್ಟ ಭೌಗೋಳಿಕ ಸನ್ನಿವೇಶವನ್ನು ಗಣನೆಗೆ ತೆಗೆದುಕೊಂಡು, “ಕಚ್ಚಾ” ಮನೆಗಳು ಎಂಬ ವ್ಯಾಖ್ಯಾನವನ್ನು ಈ ನಿರ್ದಿಷ್ಟ ರಾಜ್ಯಕ್ಕೆ ಬದಲಾವಣೆ ಮಾಡಲಾಗಿದೆ.
ಈ ಮೂಲಕವಾಗಿ ದೊಡ್ಡ ಪ್ರಮಾಣದಲ್ಲಿ “ಕಚ್ಚಾ” ಮನೆಗಳಲ್ಲಿ ವಾಸವಾಗಿರುವ ಫಲಾನುಭವಿಗಳು “ಪಕ್ಕಾ” ಮನೆಗಳನ್ನು ನಿರ್ಮಿಸಲು ನೆರವು ದೊರೆಯುತ್ತದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ತ್ರಿಪುರಾದ ಮುಖ್ಯಮಂತ್ರಿ ಈ ಕಾರ್ಯಕ್ರಮದ ವೇಳೆ ಹಾಜರಿರುತ್ತಾರೆ.
ಇದನ್ನೂ ಓದಿ: RBI Retail Direct Scheme: ಸರ್ಕಾರಿ ಸೆಕ್ಯೂರಿಟೀಸ್ಗಳಲ್ಲಿ ಹೂಡಿಕೆ ಮಾಡುವುದು ಸಲೀಸು, ಆದರೆ ಖರೀದಿಸಬೇಕೆ?
Published On - 8:50 pm, Sat, 13 November 21