2023ರ ವರ್ಷದಲ್ಲಿ ಭಾರತದ ಮೊದಲ ಯೂನಿಕಾರ್ನ್ ಸಂಸ್ಥೆ ಎನಿಸಿದ ಝೆಪ್ಟೋ; ಯೂನಿಕಾರ್ನ್ ಅಂದರೇನು?

|

Updated on: Aug 25, 2023 | 5:50 PM

Unicorn Company Zepto: ಆನ್​ಲೈನ್ ಗ್ರಾಸರಿ ಡೆಲಿವರಿ ಪ್ಲಾಟ್​ಫಾರ್ಮ್ ಝೆಪ್ಟೋ ಇದೀಗ 1.4 ಬಿಲಿಯನ್ ಡಾಲರ್ ಮೌಲ್ಯದೊಂದಿಗೆ ಯೂನಿಕಾರ್ನ್ ಕಂಪನಿಗಳ ಪಟ್ಟಿ ಸೇರಿದೆ. ಈ ವರ್ಷ ಸಾಕಷ್ಟು ಫಂಡಿಂಗ್ ಕಡಿಮೆಯಾಗಿದ್ದರೂ ಝೆಪ್ಟೋ ಸಾಕಷ್ಟು ಹೂಡಿಕೆಗಳನ್ನು ಆಕರ್ಷಿಸಿದೆ.

2023ರ ವರ್ಷದಲ್ಲಿ ಭಾರತದ ಮೊದಲ ಯೂನಿಕಾರ್ನ್ ಸಂಸ್ಥೆ ಎನಿಸಿದ ಝೆಪ್ಟೋ; ಯೂನಿಕಾರ್ನ್ ಅಂದರೇನು?
ಝೆಪ್ಟೋ
Follow us on

ನವದೆಹಲಿ, ಆಗಸ್ಟ್ 25: ಭಾರತದ ಆನ್​ಲೈನ್ ದಿನಸಿ ಮಾರಾಟ (Grocery sales) ಕಂಪನಿಯಾದ ಝೆಪ್ಟೋ ಈಗ ಯೂನಿಕಾರ್ನ್ ಸಂಸ್ಥೆಗಳ ಪಟ್ಟಿಗೆ ಸೇರಿದೆ. ಸ್ಟೆಪ್​ಸ್ಟೋನ್ ಗ್ರೂಪ್ ಸೇರಿದಂತೆ ವಿವಿಧ ಕಂಪನಿಗಳ ಮೂಲಕ ಝೆಪ್ಟೋ (Zepto) 200 ಮಿಲಿಯನ್ ಡಾಲರ್ (ಸುಮಾರು 1,650 ಕೋಟಿ ರೂ) ಫಂಡಿಂಗ್ ಪಡೆದಿದೆ. ಇದರೊಂದಿಗೆ ಝೆಪ್ಟೋ ಕಂಪನಿಯ ಮೌಲ್ಯ 1.4 ಬಿಲಿಯನ್ ಡಾಲರ್​ಗೆ ಏರಿದೆ. ಅಂದರೆ, 11,500 ಕೋಟಿ ರೂಗೂ ಹೆಚ್ಚು ಮೌಲ್ಯದ ಕಂಪನಿಯಾಗಿದೆ ಝೆಪ್ಟೋ.

ಇತ್ತೀಚಿನ ಕೆಲ ತಿಂಗಳುಗಳಿಂದ ಭಾರತೀಯ ಸ್ಟಾರ್ಟಪ್​ಗಳಿಗೆ ಫಂಡಿಂಗ್ ಸಿಗುವುದೇ ಕಷ್ಟ ಎನ್ನುವ ವಾತಾವರಣದಲ್ಲೂ ಝೆಪ್ಟೋ ಉತ್ತಮ ಎನಿಸುವಷ್ಟು ಪ್ರಮಾಣದಲ್ಲಿ ಹೂಡಿಕೆ ಪಡೆದಿದೆ. ಕುತೂಹಲ ಎಂದರೆ 2023ರ ವರ್ಷದಲ್ಲಿ ಯೂನಿಕಾರ್ನ್ ಮಟ್ಟ ತಲುಪಿದ ಮೊದಲ ಭಾರತೀಯ ಕಂಪನಿ ಝೆಪ್ಟೋ.

2021ರಲ್ಲಿ ಸ್ಥಾಪನೆಯಾದ ಝೆಪ್ಟೋ ಮುಂದಿನ 2-3 ವರ್ಷದಲ್ಲಿ ಷೇರು ಮಾರುಕಟ್ಟೆಗೆ ಲಿಸ್ಟ್ ಆಗುವ ಇರಾದೆಯಲ್ಲಿದೆ.

ಇದನ್ನೂ ಓದಿ: ಫೆಡ್​ಎಕ್ಸ್ ಹೆಸರಲ್ಲಿ ಫೋನ್ ಕಾಲ್ ಬಂದ್ರೆ ಹುಷಾರ್..! ಲಕ್ಷಾಂತರ ಹಣ ಕಳೆದುಕೊಳ್ತೀರಿ; ಬೆಂಗಳೂರಲ್ಲಿ ಹೆಚ್ಚುತ್ತಿದೆ ಕೊರಿಯರ್ ಸ್ಕ್ಯಾಮ್

ಯೂನಿಕಾರ್ನ್ ಕಂಪನಿ ಎಂದರೇನು?

ಪಬ್ಲಿಕ್ ಲಿಸ್ಟೆಡ್ ಆಗಿಲ್ಲದ, ಇನ್ನೂ ಖಾಸಗಿ ಒಡೆತನದಲ್ಲಿರುವ ಹಾಗೂ 1 ಬಿಲಿಯನ್ ಡಾಲರ್ ಮೌಲ್ಯ ಹೊಂದಿರುವ ಸ್ಟಾರ್ಟಪ್ ಕಂಪನಿಯನ್ನು ಯೂನಿಕಾರ್ನ್ ಎಂದು ಕರೆಯಲಾಗುತ್ತದೆ. ಇದೇ ಕಂಪನಿ ಐಪಿಒಗೆ ತೆರೆದು ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಆದರೆ ಅದನ್ನು ಯೂನಿಕಾರ್ನ್ ಎಂದು ಪರಿಣಿಸಲಾಗುವುದಿಲ್ಲ.

ಭಾರತದಲ್ಲಿ ಸದ್ಯ 100ಕ್ಕೂ ಸ್ಟಾರ್ಟಪ್​ಗಳಿವೆ. ಈಗ ಬಹಳಷ್ಟು ಸ್ಟಾರ್ಟಪ್​ಗಳು ಬಹಳ ದೊಡ್ಡ ಬಂಡವಾಳ ಪಡೆದು ಅವಸಾನಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚಿವೆ. ಹೀಗಾಗಿ, ಫಂಡಿಂಗ್ ವಿಚಾರದಲ್ಲಿ ಹೆಚ್ಚಿನ ಇನ್ವೆಸ್ಟರ್​ಗಳು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇದೆ. 2023ರಲ್ಲಿ ಝೆಪ್ಟೋ ಮಾತ್ರವೇ ಯೂನಿಕಾರ್ನ್ ಎನಿಸಿರುವುದು ಇದಕ್ಕೆ ಸಾಕ್ಷಿ. 2023ರ ಮೊದಲ ಆರು ತಿಂಗಳಲ್ಲಿ ಭಾರತದ ಸ್ಟಾರ್ಟಪ್​ಗಳಿಗೆ ಸಿಕ್ಕ ಬಂಡವಾಳ ಕೇವಲ 5.48 ಡಾಲರ್ ಮಾತ್ರ. ಅದೇ ಹಿಂದಿನ ವರ್ಷದಲ್ಲಿ ಇದೇ ಅವಧಿಯಲ್ಲಿ 19.5 ಬಿಲಿಯನ್ ಡಾಲರ್ ಬಂಡವಾಳ ಸಿಕ್ಕಿತ್ತು.

ಇದನ್ನೂ ಓದಿ: ಬೆಟ್ಟಿಂಗ್ ಜಾಹೀರಾತು ನೇರವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಪ್ರಸಾರ ಮಾಡದಂತೆ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರದಿಂದ ಸೂಚನೆ

ಮುಂಬೈನಲ್ಲಿ ಮುಖ್ಯಕಚೇರಿ ಹೊಂದಿರುವ ಝೆಪ್ಟೋ 6,000 ದಿನಸಿ ವಸ್ತುಗಳನ್ನು ಆನ್​ಲೈನ್​ನಲ್ಲಿ ಬುಕ್ ಮಾಡಿಕೊಂಡು ಗ್ರಾಹಕರಿಗೆ 10 ನಿಮಿಷದಲ್ಲಿ ತಲುಪಿಸುತ್ತದೆ. ದೇಶಾದ್ಯಂತ ಝೆಪ್ಟೋದ ಡೆಲಿವರಿ ಹಬ್​​ಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ