Stock Market: ಸೆನ್ಸೆಕ್ಸ್ ಸೂಚ್ಯಂಕ 1300ಕ್ಕೂ ಹೆಚ್ಚು ಪಾಯಿಂಟ್ಸ್ ನೆಗೆತ; ಮಿಂಚಿದ ಟಾಟಾ ಮೋಟಾರ್ಸ್ ಷೇರು
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಫೆಬ್ರವರಿ 25ನೇ ತಾರೀಕಿನ ಶುಕ್ರವಾರ ಭಾರೀ ಏರಿಕೆ ಕಂಡಿದೆ. ಪ್ರಮುಖವಾಗಿ ಏರಿಕೆ ಹಾಗೂ ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.
ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಫೆಬ್ರವರಿ 25ನೇ ತಾರೀಕಿನ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಭರ್ಜರಿ ಗಳಿಕೆ ದಾಖಲಿಸಿವೆ. ಬೆಳಗ್ಗೆ 10 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 1333.07 ಪಾಯಿಂಟ್ಸ್ ಅಥವಾ ಶೇ 2.44ರಷ್ಟು ಮೇಲೇರಿ 55,862.98 ತಲುಪಿಕೊಂಡಿದ್ದರೆ, ನಿಫ್ಟಿ 409.80 ಪಾಯಿಂಟ್ಸ್ ಅಥವಾ ಶೇ 2.52ರಷ್ಟು ಹೆಚ್ಚಳವಾಗಿ, 16657.80 ಪಾಯಿಂಟ್ಸ್ನಲ್ಲಿ ವಹಿವಾಟು ನಡೆಸುತ್ತಿತ್ತು. 2371 ಕಂಪೆನಿಯ ಷೇರುಗಳು ಏರಿಕೆಯನ್ನು ಕಂಡಿದ್ದರೆ, 548 ಕಂಪೆನಿ ಷೇರುಗಳು ಇಳಿಕೆ ದಾಖಲಿಸಿದವು. 85 ಕಂಪೆನಿಯ ಷೇರಿನ ದರದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಇನ್ನು ವಲಯವಾರು ನೋಡುವುದಾದರೆ, ಬಿಎಸ್ಇ ವಾಹನ ಸೂಚ್ಯಂಕವು ಶೇ 2.90ರಷ್ಟು, ಬಿಎಸ್ಇ ಬ್ಯಾಂಕ್ಎಕ್ಸ್ ಶೇ 3.15, ಬಿಎಸ್ಇ ಕ್ಯಾಪಿಟಲ್ ಗೂಡ್ಸ್ ಶೇ 2.96, ಲೋಹ ಶೇ 4.64, ರಿಯಾಲ್ಟಿ ಶೇ 4.85, ವಿದ್ಯುತ್ ಶೇ 3.49ರಷ್ಟು ಏರಿಕೆ ಆಗಿದೆ.
ಫೆಬ್ರವರಿ 25ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗದೆ ಉಳಿದಿವೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ರೀಟೇಲ್ ವ್ಯಾಪಾರಿಗಳು ಹೊರಡಿಸಿದ ಅಧಿಸೂಚನೆಯಲ್ಲಿ ತೋರಿಸಿದೆ. ಈಗ 100 ದಿನಗಳಿಗಿಂತ ಹೆಚ್ಚು ದರದಲ್ಲಿ ಯಾವುದೇ ಬದಲಾವಣೆಯಿಲ್ಲ. ಡಿಸೆಂಬರ್ 1ರ ಮಧ್ಯರಾತ್ರಿಯಿಂದ ಪೆಟ್ರೋಲ್ ಮೇಲಿನ ಸ್ಥಳೀಯ ಮಾರಾಟ ತೆರಿಗೆ ಅಥವಾ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) 30ರಿಂದ 19.4 ಕ್ಕೆ ಇಳಿಸಿದಾಗ ದೆಹಲಿಯು ಕೊನೆಯ ದರವನ್ನು ಕಡಿತಗೊಳಿಸಿತು. ಪ್ರತಿ ಲೀಟರ್‌ಗೆ ಸುಮಾರು ರೂ. 8 ಕಡಿತವಾಗಿ ರೂ. 95.41ಕ್ಕೆ ಇಳಿಸಿತು. ದೆಹಲಿಯಲ್ಲಿ ಡೀಸೆಲ್ ಬೆಲೆ ಯಥಾಸ್ಥಿತಿಯಲ್ಲಿದ್ದು, ಲೀಟರ್‌ಗೆ 86.67 ರೂಪಾಯಿ ಇದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಟಾಟಾ ಮೋಟಾರ್ಸ್ ಶೇ 7.96
ಅದಾನಿ ಪೋರ್ಟ್ಸ್ ಶೇ 5.96
ಟಾಟಾ ಸ್ಟೀಲ್ ಶೇ 5.39
ಇಂಡಸ್ಇಂಡ್ ಬ್ಯಾಂಕ್ ಶೇ 5.12
ಕೋಲ್ ಇಂಡಿಯಾ ಶೇ 4.97
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಬ್ರಿಟಾನಿಯಾ ಶೇ -0.73
ನೆಸ್ಟ್ಲೆ ಶೇ -0.29
ಎಚ್ಯುಎಲ್ ಶೇ -0.03