Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC IPO: ಎಲ್​ಐಸಿ ಐಪಿಒ ಬಗ್ಗೆ ಪಾಲಿಸಿದಾರರು, ರೀಟೇಲ್ ಹೂಡಿಕೆದಾರರು, ಉದ್ಯೋಗಿಗಳು ತಿಳಿದಿರಬೇಕಾದ 10 ಸಂಗತಿ

ಪಾಲಿಸಿದಾರರು, ರೀಟೇಲ್ ಹೂಡಿಕೆದಾರರು ಮತ್ತು ಉದ್ಯೋಗಿಗಳು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ಎಲ್​ಐಸಿ ಐಪಿಒ ಬಗೆಗಿನ ಹತ್ತು ಮುಖ್ಯ ಸಂಗತಿಗಳಿವು.

LIC IPO: ಎಲ್​ಐಸಿ ಐಪಿಒ ಬಗ್ಗೆ ಪಾಲಿಸಿದಾರರು, ರೀಟೇಲ್ ಹೂಡಿಕೆದಾರರು, ಉದ್ಯೋಗಿಗಳು ತಿಳಿದಿರಬೇಕಾದ 10 ಸಂಗತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Feb 25, 2022 | 1:08 PM

ಭಾರತದ ಜೀವ ವಿಮಾ ನಿಗಮದಿಂದ (LIC) ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (DRHP) ಸಲ್ಲಿಸಿದ ನಂತರ, ಎಲ್​ಐಸಿ ಐಪಿಒ(ಆರಂಭಿಕ ಸಾರ್ವಜನಿಕ ಕೊಡುಗೆ)ಗೆ ಸೆಬಿ (SEBI) ಅನುಮೋದನೆಗಾಗಿ ಮಾರುಕಟ್ಟೆಯು ಕುತೂಹಲದಿಂದ ಕಾಯುತ್ತಿದೆ. ಸಾರ್ವಜನಿಕ ವಿತರಣೆಯಲ್ಲಿ ಶೇ 35ರಷ್ಟನ್ನು ರೀಟೇಲ್ ಹೂಡಿಕೆದಾರರಿಗೆ, ಶೇ 10ರಷ್ಟು ಪಾಲಿಸಿದಾರರಿಗೆ, ಶೇ 5ರಷ್ಟು ಎಲ್ಐಸಿ ಉದ್ಯೋಗಿಗಳಿಗೆ ಮೀಸಲಿಡಲಾಗುತ್ತದೆ. ಆದ್ದರಿಂದ ರೀಟೇಲ್ ಹೂಡಿಕೆದಾರರಲ್ಲದೆ ಜೀವ ವಿಮಾ ಪಾಲಿಸಿದಾರರು ಮತ್ತು ಎಲ್​ಐಸಿ ಉದ್ಯೋಗಿಗಳು ಸಹ ಎಲ್​ಐಸಿ ಐಪಿಒ ಸಬ್​ಸ್ಕ್ರಿಪ್ಷನ್ ಆರಂಭವಾಗಲಿ ಎಂದು ಕಾಯುತ್ತಿದ್ದಾರೆ. ಆದರೆ ಎಲ್​ಐಸಿ ಐಪಿಒ ಸಬ್​ಸ್ಕ್ರಿಪ್ಷನ್ ಆರಂಭಕ್ಕೆ ಮೊದಲು ರೀಟೇಲ್ ಹೂಡಿಕೆದಾರರು, ಪಾಲಿಸಿದಾರರು ಮತ್ತು ಎಲ್​ಐಸಿ ಉದ್ಯೋಗಿಗಳು ತಿಳಿದಿರಬೇಕಾದ ಬಹು ನಿರೀಕ್ಷಿತ ಸಾರ್ವಜನಿಕ ಇಶ್ಯೂಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಮಾಹಿತಿಗಳಿವೆ.

ಪಾಲಿಸಿದಾರರು, ಉದ್ಯೋಗಿಗಳು ಮತ್ತು ಚಿಲ್ಲರೆ ಹೂಡಿಕೆದಾರರು ತಿಳಿದಿರಬೇಕಾದ 10 ಪ್ರಮುಖ ಎಲ್​ಐಸಿ ಐಪಿಒ ವಿವರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

  1. ಎಲ್​ಐಸಿ ಪಾಲಿಸಿದಾರರು ತಮ್ಮ ಎಲ್​ಐಸಿ ಪಾಲಿಸಿ ಮತ್ತು ಪ್ಯಾನ್ ಅನ್ನು ಜೋಡಣೆ ಮಾಡಿದಾಗ ಮಾತ್ರ ಅವರಿಗೆ ಕಾಯ್ದಿರಿಸಿದ ಶೇ 10ರ ಕೋಟಾವನ್ನು ಕ್ಲೇಮ್ ಮಾಡಬಹುದು. ಅದಕ್ಕಾಗಿ ನೇರ ಎಲ್​ಐಸಿ ಲಿಂಕ್ – linkpan.licindia.in/UIDSeedingWebApp/getPolicyPANStatusನಲ್ಲಿ ಲಾಗ್ ಇನ್ ಮಾಡುವ ಮೂಲಕ ತಮ್ಮ ಪರ್ಮನೆಂಟ್ ಅಕೌಂಟ್ ನಂಬರ್ (PAN) ಮತ್ತು ಎಲ್​ಐಸಿ ಪಾಲಿಸಿ ಜೋಡಣೆ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಒಂದು ವೇಳೆ ಎಲ್​ಐಸಿ ಪಾಲಿಸಿಯು PANನೊಂದಿಗೆ ಜೋಡಣೆ ಮಾಡದಿದ್ದರೆ 28ನೇ ಫೆಬ್ರವರಿ 2022ರ ಮೊದಲು ಇದನ್ನು ಮಾಡಬೇಕಾಗುತ್ತದೆ. ನೇರ ಎಲ್​ಐಸಿ ಲಿಂಕ್ linkpan.licindia.in/UIDSeedingWebAppನಲ್ಲಿ ಲಾಗ್ ಇನ್ ಮಾಡುವ ಮೂಲಕ ಇದನ್ನು ಆನ್‌ಲೈನ್‌ನಲ್ಲಿ ಮಾಡಬಹುದು.
  2. 13ನೇ ಫೆಬ್ರವರಿ 2022ರಂದು ಅಥವಾ ಅದಕ್ಕಿಂತ ಮೊದಲು ಎಲ್​ಐಸಿ ಪಾಲಿಸಿಗಳನ್ನು ಖರೀದಿಸಿದ ಪಾಲಿಸಿದಾರರ ಕೋಟಾದ ಅಡಿಯಲ್ಲಿ ಮಾತ್ರ ಆ ಪಾಲಿಸಿದಾರರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.
  3. ಎಲ್​ಐಸಿ ಆರಂಭಿಕ ಕೊಡುಗೆಯ ಶೇ 35ರಷ್ಟನ್ನು ರೀಟೇಲ್ ಹೂಡಿಕೆದಾರರಿಗೆ ಮೀಸಲಿಡಲಾಗಿದೆ. ಅಂದರೆ ಎಲ್​ಐಸಿಯ ಉದ್ಯೋಗಿ ಅಥವಾ ಎಲ್​ಐಸಿ ಪಾಲಿಸಿದಾರರಲ್ಲದವರು ಈ ವರ್ಗದ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು.
  4. ಎಲ್​ಐಸಿ ಪಾಲಿಸಿದಾರರು ಮತ್ತು ಎಲ್​ಐಸಿ ಉದ್ಯೋಗಿಗಳು ರೀಟೇಲ್ ವರ್ಗದ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
  5. ಈ ಎಲ್​ಐಸಿ ಐಪಿಒನಲ್ಲಿ ರೀಟೇಲ್ ಹೂಡಿಕೆದಾರರು ಗರಿಷ್ಠ 2 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು.
  6. ಎಲ್​ಐಸಿ ಪಾಲಿಸಿದಾರರು ಎಲ್​ಐಸಿ ಐಪಿಒನಲ್ಲಿ ಗರಿಷ್ಠ ರೂ. 2 ಲಕ್ಷವನ್ನು ಹೂಡಿಕೆ ಮಾಡಬಹುದು ಮತ್ತು ಎಲ್​ಐಸಿ ಉದ್ಯೋಗಿ ಈ ಐಪಿಒನಲ್ಲಿ ಗರಿಷ್ಠ ರೂ. 2 ಲಕ್ಷವನ್ನು ಹೂಡಿಕೆ ಮಾಡಬಹುದು.
  7. ಎಲ್‌ಐಸಿಯಲ್ಲಿ ಉದ್ಯೋಗಿ ಆಗದ ಎಲ್‌ಐಸಿ ಪಾಲಿಸಿದಾರರಿಗೆ ಗರಿಷ್ಠ ಹೂಡಿಕೆ ರೂ. 4 ಲಕ್ಷ (ಪಾಲಿಸಿದಾರರ ವರ್ಗದಲ್ಲಿ ರೂ. 2 ಲಕ್ಷ, ರೀಟೇಲ್ ವರ್ಗದಲ್ಲಿ ರೂ. 2 ಲಕ್ಷ).
  8. ಈ ಎಲ್​ಐಸಿ ಐಪಿಒನಲ್ಲಿ ಎಲ್​ಐಸಿ ಉದ್ಯೋಗಿಗೆ ಗರಿಷ್ಠ ಹೂಡಿಕೆ, ಅದು ಎಲ್​ಐಸಿ ಪಾಲಿಸಿಯನ್ನು ಹೊಂದಿದ್ದರೆ ರೂ. 6 ಲಕ್ಷ (ಎಲ್​ಐಸಿ ಉದ್ಯೋಗಿ ವರ್ಗದ ಅಡಿಯಲ್ಲಿ 2 ಲಕ್ಷ, ಪಾಲಿಸಿದಾರ ವರ್ಗದ ಅಡಿಯಲ್ಲಿ 2 ಲಕ್ಷ, ಚಿಲ್ಲರೆ ವರ್ಗದ ಅಡಿಯಲ್ಲಿ 2 ಲಕ್ಷ).
  9. ಜಂಟಿ ಡಿಮ್ಯಾಟ್ ಖಾತೆಯ ಸಂದರ್ಭದಲ್ಲಿ ಎಲ್​ಐಸಿ ಪಾಲಿಸಿದಾರರು ಪ್ರಾಥಮಿಕ ಡಿಮ್ಯಾಟ್ ಖಾತೆದಾರರಾಗಿದ್ದಾಗ ಮಾತ್ರ ಕೋಟಾ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಪಾಲಿಸಿದಾರರು ಪ್ರಾಥಮಿಕ ಡಿಮ್ಯಾಟ್ ಖಾತೆದಾರರಾಗಿದ್ದಾಗ ಮಾತ್ರ ಕಾಯ್ದಿರಿಸಿದ ಕೋಟಾದ ಅಡಿಯಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಇಲ್ಲದಿದ್ದರೆ ಅವರ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
  10. ಜಂಟಿ ಪಾಲಿಸಿದಾರರ ಸಂದರ್ಭದಲ್ಲಿ ಇಬ್ಬರೂ ಪ್ರತ್ಯೇಕ ಡಿಮ್ಯಾಟ್ ಖಾತೆಯನ್ನು ಹೊಂದಿದ್ದರೆ ಇಬ್ಬರೂ ಪಾಲಿಸಿದಾರರ ವರ್ಗದ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: LIC IPO Valuation: ಎಲ್​ಐಸಿ ಐಪಿಒಗೆ ಮಾರುಕಟ್ಟೆ ಮೌಲ್ಯದ ಅಂದಾಜು 15 ಲಕ್ಷ ಕೋಟಿ ರೂಪಾಯಿ

Published On - 1:07 pm, Fri, 25 February 22