LIC IPO: ಐಪಿಒದಲ್ಲಿ ಭಾಗವಹಿಸಲು ಎಲ್​ಐಸಿ ಪಾಲಿಸಿದಾರರು ಫೆಬ್ರವರಿ 28ರೊಳಗೆ ಪ್ಯಾನ್ ವಿವರ ಅಪ್​ಡೇಟ್​ ಮಾಡಬೇಕು

ಭಾರತೀಯ ಜೀವ ನಿಗಮದ ಐಪಿಒದಲ್ಲಿ ಭಾಗವಹಿಸಿ, ತಮಗಿರುವ ಪ್ರಯೋಜನದ ಲಾಭವನ್ನು ಪಡೆಯಬೇಕು ಎಂದಾದಲ್ಲಿ ಎಲ್​ಐಸಿ ಪಾಲಿಸಿದಾರರು ಪಾಲಿಸಿಯಲ್ಲಿ ತಮ್ಮ ಪ್ಯಾನ್ ಮಾಹಿತಿಯನ್ನು ಅಪ್​ಡೇಟ್ ಮಾಡಬೇಕು.

LIC IPO: ಐಪಿಒದಲ್ಲಿ ಭಾಗವಹಿಸಲು ಎಲ್​ಐಸಿ ಪಾಲಿಸಿದಾರರು ಫೆಬ್ರವರಿ 28ರೊಳಗೆ ಪ್ಯಾನ್ ವಿವರ ಅಪ್​ಡೇಟ್​ ಮಾಡಬೇಕು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 16, 2022 | 8:12 AM

ಪಾಲಿಸಿ ದಾಖಲೆಯಲ್ಲಿ ತಮ್ಮ ಪರ್ಮನೆಂಟ್ ಅಕೌಂಟ್ ನಂಬರ್ (PAN) ವಿವರಗಳನ್ನು ಅಪ್​ಡೇಟ್​ ಮಾಡುವಂತೆ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ತನ್ನ ಎಲ್ಲ ಪಾಲಿಸಿದಾರರನ್ನು ಕೇಳಿದೆ. ಆ ಮೂಲಕ ಮುಂಬರುವ ಐಪಿಒದಲ್ಲಿ ಭಾಗವಹಿಸಲು ಅರ್ಹರಾಗುವಂತೆ ತಿಳಿಸಿದೆ, ಎಂಬುದು ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (DRHP) ಕರಡು ಪ್ರಕಾರ ಗೊತ್ತಾಗಿದೆ. ಫೆಬ್ರವರಿ 13ನೇ ತಾರೀಕಿನಂದು ಸರ್ಕಾರಿ ಸ್ವಾಮ್ಯದ ಎಲ್​ಐಸಿಯಿಂದ ಅಂದಾಜು 63,000 ಕೋಟಿ ರೂಪಾಯಿಗಳಿಗೆ ಸರ್ಕಾರದ ಶೇಕಡಾ 5ರಷ್ಟು ಪಾಲನ್ನು ಮಾರಾಟ ಮಾಡಲು ಬಂಡವಾಳ ಮಾರುಕಟ್ಟೆ ನಿಯಂತ್ರಕವಾದ ಸೆಬಿಗೆ ಕರಡು ಪತ್ರಗಳನ್ನು ಸಲ್ಲಿಸಲಾಯಿತು. 31.6 ಕೋಟಿಗೂ ಹೆಚ್ಚು ಷೇರುಗಳ ಐಪಿಒ ಅಥವಾ ಶೇಕಡಾ 5ರಷ್ಟು ಸರ್ಕಾರಿ ಪಾಲು ಮಾರ್ಚ್‌ನಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ ಹಾಗೂ ಎಲ್​ಐಸಿಯ ಉದ್ಯೋಗಿಗಳು ಮತ್ತು ಪಾಲಿಸಿದಾರರು ನಿಗದಿತ ಬೆಲೆಯಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.

“ನಮ್ಮ ನಿಗಮದ ಪಾಲಿಸಿದಾರನು ಪ್ಯಾನ್ ವಿವರಗಳನ್ನು ನಮ್ಮ ನಿಗಮದ ಪಾಲಿಸಿ ದಾಖಲೆಗಳಲ್ಲಿ ಸಾಧ್ಯವಾದಷ್ಟು ಬೇಗ ಅಪ್​ಡೇಟ್​ ಮಾಡಲಾಗಿದೆ ಎಂದು ಎಂದು ಖಚಿತಪಡಿಸಿಕೊಳ್ಳಬೇಕು. ಸೆಬಿಗೆ ಈ DRHP ಅನ್ನು ಸಲ್ಲಿಸಿದ ದಿನಾಂಕದಿಂದ ಎರಡು ವಾರಗಳ ಅವಧಿ ಮುಗಿಯುವ ಮೊದಲು (ಅಂದರೆ ಫೆಬ್ರವರಿ 28, 2022ರೊಳಗೆ) ನಮ್ಮ ನಿಗಮದೊಂದಿಗೆ ಪ್ಯಾನ್ ವಿವರಗಳನ್ನು ನವೀಕರಿಸದ ಪಾಲಿಸಿದಾರನನ್ನು ಅರ್ಹ ಪಾಲಿಸಿದಾರ ಎಂದು ಪರಿಗಣಿಸಲಾಗುವುದಿಲ್ಲ,” ಎಂದು DRHP ಪ್ರಕಾರ ತಿಳಿಸಲಾಗಿದೆ. ಎಲ್​ಐಸಿಯ ವೆಬ್‌ಸೈಟ್‌ನಲ್ಲಿ ನೇರವಾಗಿ ಅಥವಾ ಏಜೆಂಟ್‌ಗಳ ಸಹಾಯದಿಂದ ಪ್ಯಾನ್ ಅಪ್​ಡೇಟ್ ಮಾಡಬಹುದು.

DRHP ಮತ್ತು ಬಿಡ್/ಆಫರ್ ಆರಂಭದ ದಿನಾಂಕದಂದು ಎಲ್​ಐಸಿಯ ಒಂದು ಅಥವಾ ಹೆಚ್ಚಿನ ಪಾಲಿಸಿಗಳನ್ನು ಹೊಂದಿರುವ ಪಾಲಿಸಿದಾರರು ಮತ್ತು ಭಾರತದ ನಿವಾಸಿಗಳು ಈ ಆಫರ್‌ನಲ್ಲಿ ಪಾಲಿಸಿದಾರರ ಮೀಸಲಾತಿ ಭಾಗದ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಅದು ಹೇಳಿದೆ. ಅರ್ಹ ಪಾಲಿಸಿದಾರರಿಗೆ ಮೀಸಲಾತಿಯ ಒಟ್ಟು ಮೊತ್ತವು ಒಟ್ಟು ಆಫರ್ ಗಾತ್ರದ ಶೇ 10 ಮೀರಬಾರದು. ಅನುಪಾತದ ಆಧಾರದ ಮೇಲೆ ಅರ್ಹ ಪಾಲಿಸಿದಾರರಿಗೆ ಹಂಚಿಕೆಗಾಗಿ ಲಭ್ಯವಿರುವ ಆಫರ್​ನ ಭಾಗವು ಸರ್ಕಾರದಿಂದ ಅಗತ್ಯ ಅನುಮೋದನೆಗಳ ಸ್ವೀಕೃತಿಗೆ ಒಳಪಟ್ಟಿರುತ್ತದೆ.

ಹಣಕಾಸು ವರ್ಷ 2021ರಲ್ಲಿ ಎಲ್​ಐಸಿ ಸರಿಸುಮಾರು 2.1 ಕೋಟಿ ವೈಯಕ್ತಿಕ ಪಾಲಿಸಿಗಳನ್ನು ಬಿಡುಗಡೆ ಮಾಡಿತು, ಇದು ಹೊಸ ವೈಯಕ್ತಿಕ ಪಾಲಿಸಿ ನೀಡಿಕೆಗಳಲ್ಲಿ ಸುಮಾರು ಶೇ 75ರಷ್ಟು ಹೊಂದಿದೆ. ಈಗಿನ ಐಪಿಒ ಭಾರತ ಸರ್ಕಾರದಿಂದ ಮಾರಾಟದ ಆಫರ್​ ಆಗಿದೆ (Offer For Sale). ಎಲ್​ಐಸಿಯಿಂದ ಯಾವುದೇ ಹೊಸ ಷೇರುಗಳ ವಿತರಣೆ ಇಲ್ಲ. ಎಲ್​ಐಸಿಯಲ್ಲಿ ಸರ್ಕಾರವು ಶೇ 100ರಷ್ಟು ಪಾಲನ್ನು ಅಥವಾ 632.49 ಕೋಟಿ ಷೇರುಗಳನ್ನು ಹೊಂದಿದ್ದು, ಷೇರುಗಳ ಮುಖಬೆಲೆ 10 ರೂಪಾಯಿ ಆಗಿದೆ. ಎಲ್‌ಐಸಿ ಸಾರ್ವಜನಿಕ ವಿತರಣೆ ಭಾರತೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲಿ ಅತಿ ದೊಡ್ಡ ಐಪಿಒ ಆಗಲಿದೆ. ಒಮ್ಮೆ ಲಿಸ್ಟ್​ ಮಾಡಿದರೆ, ಎಲ್​ಐಸಿಯ ಮಾರುಕಟ್ಟೆ ಮೌಲ್ಯವು ರಿಲಯನ್ಸ್​ ಮತ್ತು ಟಿಸಿಎಸ್​ನಂತಹ ಉನ್ನತ ಕಂಪೆನಿಗಳಿಗೆ ಹೋಲಿಸಬಹುದು.

ಮಾರ್ಚ್‌ ವೇಳೆಗೆ ಎಲ್‌ಐಸಿಯ ಐಪಿಒ ನಿರೀಕ್ಷಿಸಲಾಗಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ 78,000 ಕೋಟಿ ರೂಪಾಯಿಗಳ ಪರಿಷ್ಕೃತ ಹೂಡಿಕೆ ಗುರಿಯನ್ನು ಪೂರೈಸಲು ಆದಾಯವು ನಿರ್ಣಾಯಕವಾಗಿದೆ. ಐಪಿಒಗೆ ಅನುಕೂಲವಾಗುವಂತೆ ಎಲ್‌ಐಸಿಯ ಷೇರು ಬಂಡವಾಳವನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 100 ಕೋಟಿ ರೂಪಾಯಿಗಳಿಂದ 6,325 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿತ್ತು. ಕಳೆದ ತಿಂಗಳು ಎಲ್​ಐಸಿಯು 2021-22ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 1,437 ಕೋಟಿ ರೂಪಾಯಿಗಳ ತೆರಿಗೆಯ ನಂತರದ ಲಾಭವನ್ನು ವರದಿ ಮಾಡಿತ್ತು. ಇದು ಹಿಂದಿನ ವರ್ಷದ ಅವಧಿಯಲ್ಲಿ 6.14 ಕೋಟಿ ರೂಪಾಯಿಗಳಷ್ಟಾಗಿತ್ತು. ಅದರ ಹೊಸ ವ್ಯಾಪಾರ ಪ್ರೀಮಿಯಂ ಬೆಳವಣಿಗೆ ದರವು 2021-22 ರ ಮೊದಲಾರ್ಧದಲ್ಲಿ ಶೇ 554.1ರಷ್ಟು ಇತ್ತು, ವರ್ಷದ ಹಿಂದಿನ ಅವಧಿಯಲ್ಲಿ ಶೇ 394.76ರಷ್ಟಿತ್ತು.

ಇದನ್ನೂ ಓದಿ: ಎಲ್ಐಸಿ ಐಪಿಒ ಇಶ್ಯೂ ಗಾತ್ರ ರೂ. 53,500 ಕೋಟಿಯಿಂದ ರೂ. 93,625 ಕೋಟಿ; ಪ್ರತಿ ಷೇರಿನ ಬೆಲೆ ರೂ. 1,693-2,962 ಸಾಧ್ಯತೆ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್