ಷೇರುಮಾರುಕಟ್ಟೆಗೆ ಪ್ರವೇಶಿಸುವ ಮುನ್ನ ಓಯೋ ಕಂಪನಿ ಸಿಇಒ ಸೇರಿದಂತೆ ಇಬ್ಬರು ಹಿರಿಯ ಅಧಿಕಾರಿಗಳ ನಿರ್ಗಮನ

Oyo India CEO Resignation: ಆನ್ಲೈನ್ ಹೋಟೆಲ್ ರೂಮುಗಳ ಬುಕಿಂಗ್ ಸರ್ವಿಸ್ ನೀಡುವ ಓಯೋ ಇಂಡಿಯಾ ಕಂಪನಿಯ ಸಿಇಒ ಅಂಕಿತ್ ಗುಪ್ತ ಮತ್ತು ಯೂರೋಪ್ ಬಿಸಿನೆಸ್ ಹೆಡ್ ಮಂದಾರ್ ವೈದ್ಯ ಇಬ್ಬರೂ ರಾಜೀನಾಮೆ ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ಓಯೋದ ಟಾಪ್ ಮ್ಯಾನೇಜ್ಮೆಂಟ್​ನಲ್ಲಿ ಭಾರೀ ಬದಲಾವಣೆಗಳಾಗುತ್ತಾ ಬಂದಿವೆ. ಸದ್ಯ ಓಯೋ ಐಪಿಒ ಆರಂಭಿಸುವ ಪ್ರಯತ್ನದಲ್ಲಿದೆ.

ಷೇರುಮಾರುಕಟ್ಟೆಗೆ ಪ್ರವೇಶಿಸುವ ಮುನ್ನ ಓಯೋ ಕಂಪನಿ ಸಿಇಒ ಸೇರಿದಂತೆ ಇಬ್ಬರು ಹಿರಿಯ ಅಧಿಕಾರಿಗಳ ನಿರ್ಗಮನ
ಓಯೋ
Follow us
|

Updated on:Sep 07, 2023 | 11:34 AM

ನವದೆಹಲಿ, ಸೆಪ್ಟೆಂಬರ್ 7: ಐಪಿಒಗೆ ತೆರೆದುಕೊಳ್ಳುವ ಮುನ್ನ ಭಾರತದ ಪ್ರಮುಖ ಹೋಟೆಲ್ ಬುಕಿಂಗ್ ಪ್ಲಾಟ್​ಫಾರ್ಮ್ ಓಯೋ ಕಂಪನಿಯ (Oyo Rooms) ಟಾಪ್ ಮ್ಯಾನೇಜ್ಮೆಂಟ್​ನಲ್ಲಿ ಭಾರೀ ಬದಲಾವಣೆಗಳಾಗಿವೆ. ಓಯೋ ಇಂಡಿಯಾದ ಸಿಇಒ ಅಂಕಿತ್ ಗುಪ್ತಾ ಮತ್ತು ಅದರ ಯೂರೋಪ್ ಬಿಸಿನೆಸ್ ಮುಖ್ಯಸ್ಥ ಮಂದಾರ್ ವೈದ್ಯ ಇಬ್ಬರೂ ರಾಜೀನಾಮೆ ನೀಡಿರುವುದು ತಿಳಿದುಬಂದಿದೆ. ಇದರೊಂದಿಗೆ ಓಯೋದ ಟಾಪ್ ಮ್ಯಾನೇಜ್ಮೆಂಟ್​ನಲ್ಲಿ ಕಳೆದ ಒಂದು ವರ್ಷದಲ್ಲಿ ರಾಜೀನಾಮೆ ನೀಡಿದವರ ಮತ್ತು ಹುದ್ದೆ ಬದಲಾವಣೆ ಆದವರ ಪಟ್ಟಿ ಇನ್ನಷ್ಟು ಬೆಳೆದಂತಾಗಿದೆ.

ಜೂನ್ ತಿಂಗಳಲ್ಲಿ ಓಯೋದ ಚೀಫ್ ಟೆಕ್ನಾಲಜಿ ಆಫೀಸರ್ (ಸಿಟಿಒ) ಅಂಕಿತ್ ಮಥುರಿಯಾ ರಾಜೀನಾಮೆ ನೀಡಿದ್ದರು. ಬೇರೆ ಕೆಲ ಪ್ರಮುಖ ಹುದ್ದೆಗಳಲ್ಲಿ ಬದಲಾವಣೆಗಳಾಗಿವೆ. ಸಿಒಒ ಆಗಿದ್ದ ಅಭಿನವ್ ಸಿನ್ಹಾ ಅವರನ್ನು ಚೀಫ್ ಪ್ರಾಡಕ್ಟ್ ಅಂಡ್ ಟೆಕ್ನಾಲಜಿ ಆಫೀಸರ್ ಆಗಿ ನಿಯೋಜಿಸಲಾಗಿದೆ. ಬಿಸಿನೆಸ್ ಡೆವಲಪ್ಮೆಂಟ್ ಆಫೀಸರ್ ಆಗಿದ್ದ ಅನುಜ್ ತೇಜಪಾಲ್ ಅವರನ್ನು ಗ್ಲೋಬಲ್ ಚೀಫ್ ಮರ್ಚಂಟ್ ಆಫೀಸರ್ ಆಗಿ ಮರುನೇಮಕ ಮಾಡಲಾಗಿತ್ತು.

ಇದನ್ನೂ ಓದಿ: ಇತಿಹಾಸದಲ್ಲೇ ಅತ್ಯಂತ ಕಡಿಮೆ ಮೌಲ್ಯಕ್ಕೆ ಇಳಿದ ರುಪಾಯಿ; ಈ ಪರಿ ಕುಸಿತಕ್ಕೆ ಕಾರಣಗಳೇನು?

ಆರು ತಿಂಗಳ ಹಿಂದೆ ವರುಣ್ ಜೈನ್ ಅವರನ್ನು ಸಿಒಒ ಆಗಿಯೂ, ಗೌತಮ್ ಸ್ವರೂಪ್ ಅವರನ್ನು ಓಯೋ ವೆಕೇಶನ್ ಹೋಮ್ಸ್ ಸಂಸ್ಥೆಯ ಸಿಇಒ ಆಗಿ ನೇಮಕ ಮಾಡಲಾಗಿತ್ತು.

ಸಾಫ್ಟ್ ಬ್ಯಾಂಕ್ ಬೆಂಬಲಿತ ಓಯೋ ಇಂಡಿಯಾ ಕಂಪನಿಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವ ಸಿಇಒ ಅಂಕಿತ್ ಗುಪ್ತಾ ಮತ್ತು ಯೂರೋಪ್ ಬಿಸಿನೆಸ್ ಹೆಡ್ ಮಂದಾರ್ ವೈದ್ಯ ಇಬ್ಬರೂ ಕೂಡ 2019ರಲ್ಲಿ ಈ ಸ್ಟಾರ್ಟಪ್​ಗೆ ಸೇರಿದ್ದವರು. ಅಂಕಿತ್ ಗುಪ್ತಾ ಕಳೆದ 1 ವರ್ಷದಿಂದ ಸಿಇಒ ಆಗಿದ್ದರು. ವರದಿ ಪ್ರಕಾರ ಅಂಕಿತ್ ಗುಪ್ತಾ ತಮ್ಮದೇ ಹೊಸ ಉದ್ದಿಮೆಯೊಂದನ್ನು ಆರಂಭಿಸುತ್ತಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಗೇಮಿಂಗ್ ಕಂಪನಿಗಳಿಗೆ ಖುಷಿ ಸುದ್ದಿ; ಸರ್ಕಾರದ ಹೊಸ ಗೇಮಿಂಗ್ ನಿಯಮ ಜಾರಿ ಬಳಿಕ ಗೂಗಲ್ ಪ್ಲೇಸ್ಟೋರ್​ನಲ್ಲಿ ಲಭ್ಯ ಇರಲಿವೆ ಗೇಮಿಂಗ್ ಆ್ಯಪ್​ಗಳು

ಇನ್ನು, ಓಯೋ ಸದ್ಯದಲ್ಲೇ ಐಪಿಒಗೆ ತೆರೆದುಕೊಳ್ಳುವ ಸಾಧ್ಯತೆ ಇದೆ. 2020ರಲ್ಲೇ ಐಪಿಒ ಆಗಬೇಕಿತ್ತು. ಆದರೆ, ಸೆಬಿಯಿಂದ ಸಮ್ಮತಿ ಸಿಕ್ಕಿರಲಿಲ್ಲ. ಇದೀಗ ಐಪಿಒಗೆ ಅನುಮತಿ ಕೋರಿ ಸೆಬಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದೆ. ಐಪಿಒಗೆ ಸೆಬಿ ಒಪ್ಪಿಗೆ ಕೊಡುವ ಸಾಧ್ಯತೆ ಇದೆಯಾದರೂ ಒಟ್ಟು ಮೊತ್ತ ಅರ್ಧದಷ್ಟು ಕಡಿಮೆ ಆಗಿರಬಹುದು. ಬಿಸಿನೆಸ್ ಸ್ಟಾಂಡರ್ಡ್ ಪ್ರಕಟಿಸಿರುವ ವರದಿ ಪ್ರಕಾರ ಓಯೋದ ಐಪಿಒ ಗಾತ್ರ 400 ಮಿಲಿಯನ್​ನಿಂದ 600 ಮಿಲಿಯನ್ ಡಾಲರ್​ನದ್ದಾಗಿರಬಹುದು. ಅಂದರೆ, ಸುಮಾರು 3ರಿಂದ 5 ಸಾವಿರ ಕೋಟಿ ರೂನಷ್ಟು ಮಾತ್ರ ಬಂಡವಾಳವನ್ನು ಐಪಿಒ ಮೂಲಕ ಪಡೆಯಲು ಸಾಧ್ಯವಾಗಬಹುದು. ಆದರೆ, ಐಪಿಒದ ದಿನಾಂಕ ಯಾವಾಗ ಎಂದು ಇನ್ನೂ ನಿಗದಿಯಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:32 am, Thu, 7 September 23

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ