ಇತಿಹಾಸದಲ್ಲೇ ಅತ್ಯಂತ ಕಡಿಮೆ ಮೌಲ್ಯಕ್ಕೆ ಇಳಿದ ರುಪಾಯಿ; ಈ ಪರಿ ಕುಸಿತಕ್ಕೆ ಕಾರಣಗಳೇನು?

Dollar vs Rupee: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರುಪಾಯಿ ಬಲ ಕಳೆದುಕೊಳ್ಳುವುದು ಮುಂದುವರಿದಿದೆ. ಡಾಲರ್ ಎದುರು ರುಪಾಯಿ ಮೌಲ್ಯ ನಿನ್ನೆ 83.14ಕ್ಕೆ ಕುಸಿದಿದೆ. ಇದೂವರೆಗೆ ರುಪಾಯಿ ಕಂಡಿರುವ ಅತ್ಯಂತ ಕೆಳಮಟ್ಟ ಇದು. ಭಾರತದ ಕರೆನ್ಸಿ ಈ ಪರಿ ಕುಸಿಯಲು ಏನು ಕಾರಣ? ತಜ್ಞರ ಪ್ರಕಾರ ಡಾಲರ್ ಬಲವೃದ್ಧಿ, ತೈಲ ಬೆಲೆ ಹೆಚ್ಚಳ, ವ್ಯಾಪಾರ ಅಂತರ, ಏಷ್ಯನ್ ಕರೆನ್ಸಿಗಳ ಕುಸಿತ ಮೊದಲಾದ ಕಾರಣಗಳಿವೆ.

ಇತಿಹಾಸದಲ್ಲೇ ಅತ್ಯಂತ ಕಡಿಮೆ ಮೌಲ್ಯಕ್ಕೆ ಇಳಿದ ರುಪಾಯಿ; ಈ ಪರಿ ಕುಸಿತಕ್ಕೆ ಕಾರಣಗಳೇನು?
ರುಪಾಯಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 07, 2023 | 10:43 AM

ನವದೆಹಲಿ, ಸೆಪ್ಟೆಂಬರ್ 7: ಡಾಲರ್ ಎದುರು ರುಪಾಯಿ ಮೌಲ್ಯ (Rupee vs Dollar) ಇನ್ನಷ್ಟು ಕುಸಿದಿದೆ. ಫಾರೆಕ್ಸ್ ಮಾರುಕಟ್ಟೆಯಲ್ಲಿ ನಿನ್ನೆ ಬುಧವಾರ ಸೆಪ್ಟೆಂಬರ್ 6ರಂದು ಡಾಲರ್ ಎದುರು ರುಪಾಯಿ ಮೌಲ್ಯ 10 ಪೈಸೆ ಕುಸಿದಿದೆ. ಇದರೊಂದಿಗೆ ಪ್ರತೀ ಡಾಲರ್​ಗೆ 83.14 ರುಪಾಯಿ ಆಗಿದೆ. ಇದು ಡಾಲರ್ ಎದುರು ರುಪಾಯಿಯ ಅತ್ಯಂತ ದುರ್ಬಲ ಮಟ್ಟವಾಗಿದೆ. ಕಳೆದ ತಿಂಗಳು, 2023ರ ಆಗಸ್ಟ್ 21ರಂದು ರುಪಾಯಿ ಮೌಲ್ಯ 83.13 ಮಟ್ಟಕ್ಕೆ ಹೋಗಿತ್ತು. ಅದು ಸಾರ್ವಕಾಲಿಕ ಕನಿಷ್ಠ ಮಟ್ಟವೆನಿಸಿತ್ತು. ನಿನ್ನೆ ಆ ಮಟ್ಟಕ್ಕಿಂತಲೂ ಕೆಳಗೆ ಕುಸಿದಿದೆ. ಮೊನ್ನೆ (ಸೆ. 5) ಕೂಡ 33 ಪೈಸೆಯಷ್ಟು ಕುಸಿತವಾಗಿತ್ತು.

ರುಪಾಯಿ ಈ ಪರಿ ಕುಸಿಯಲು ಕಾರಣಗಳೇನು?

ಡಾಲರ್ ಬಲವೃದ್ಧಿ: ರುಪಾಯಿ ಕುಸಿಯಲು ಪ್ರಮುಖವಾಗಿ ಕಾರಣವಾಗಿರುವುದು ಡಾಲರ್​ನ ಮೌಲ್ಯವೃದ್ಧಿ. ವಿಶ್ವದ ಪ್ರಮುಖ ಅಂತಾರಾಷ್ಟ್ರೀಯ ಕರೆನ್ಸಿಯಾದ ಡಾಲರ್ ಕಳೆದ 6 ತಿಂಗಳಲ್ಲೇ ಗರಿಷ್ಠ ಬಲ ಪಡೆದುಕೊಂಡಿದೆ. 104 ಇದ್ದ ಡಾಲರ್ ಇಂಡೆಕ್ಸ್ ನಿನ್ನೆ 104.78ಕ್ಕೆ ಹೋಗಿದೆ. ಇಂದು (ಸೆ. 7) ಇದು ಇನ್ನಷ್ಟು ಕುಸಿದು 104.88ಕ್ಕೆ ಕುಸಿದಿದೆ.

ಇದನ್ನೂ ಓದಿ: ಸರ್ಕಾರಿ ನೌಕರರು ಷೇರು ವಹಿವಾಟು ನಡೆಸಬಹುದೇ? ನಿಯಮಗಳು ಏನು ಹೇಳುತ್ತವೆ?

ಅಮೆರಿಕದ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರ ಏರಿಸುವ ಸಂಭವದಿಂದಲೂ ಅಲ್ಲಿನ ಸರ್ಕಾರಿ ಬಾಂಡ್​ಗಳಿಗೆ ಬೇಡಿಕೆ ಹೆಚ್ಚಾಗಿರುವುದೂ ಒಂದು ಕಾರಣ.

ಕಚ್ಛಾ ತೈಲ ಬೆಲೆ ಹೆಚ್ಚಳ: ಜಾಗತಿಕ ಕಚ್ಚಾ ತೈಲ ಬೆಲೆ ಹೆಚ್ಚಳವೂ ರುಪಾಯಿ ಮೇಲೆ ಪರಿಣಾಮ ಬೀರಿದೆ. ತೈಲ ಬೆಲೆ 90 ಡಾಲರ್ ಮುಟ್ಟಿದ್ದು ಭಾರತದ ವ್ಯಾಪಾರ ಕೊರತೆ ಅಥವಾ ಟ್ರೇಡ್ ಡೆಫಿಸಿಟ್ ಅನ್ನು ಹೆಚ್ಚಿಸಿದೆ. ಆಮದು ಹೆಚ್ಚಾದ್ದರಿಂದ ಡಾಲರ್ ಬೇಡಿಕೆಯೂ ಹೆಚ್ಚಾಗಿದೆ.

ಇದನ್ನೂ ಓದಿ: ಇಂಡಿಯಾ ಹೆಸರು ಭಾರತ್ ಆಗಿ ಬದಲಾಯಿಸಲು 14,000 ಕೋಟಿ ರೂ ವೆಚ್ಚ? ಇದ್ಯಾವ ಲೆಕ್ಕಾಚಾರ?

ಹೊರಹೋದ ಬಂಡವಾಳ: ಫಾರೀನ್ ಪೋರ್ಟ್​ಫೋಲಿಯೋ ಇನ್ವೆಸ್ಟರ್​ಗಳು (ಎಫ್​ಪಿಐ) ಭಾರತದ ಮಾರುಕಟ್ಟೆಯಿಂದ ಬಂಡವಾಳ ಹಿಂತೆಗೆದುಕೊಂಡ ಪ್ರಮಾಣ ಹೆಚ್ಚಾಗಿದೆ. ಸೆಪ್ಟೆಂಬರ್ 4 ಮತ್ತು 5ರಂದು ಎರಡು ದಿನ ಷೇರುಮಾರುಕಟ್ಟೆಗಳಿಂದ 5,000 ಕೋಟಿ ರೂನಷ್ಟು ಎಫ್​ಪಿಐಗಳು ಹೂಡಿಕೆ ಹಿಂಪಡೆದಿವೆ.

ಇತರ ಏಷ್ಯನ್ ಕರೆನ್ಸಿಗಳು ದುರ್ಬಲ: ಅಮೆರಿಕದ ಡಾಲರ್ ಎದುರು ಕುಸಿದಿರುವುದು ರುಪಾಯಿ ಮಾತ್ರವಲ್ಲ, ವಿಶ್ವದ ಇತರ ಬಹುತೇಕ ಕರೆನ್ಸಿಗಳು ಹಿನ್ನಡೆ ಅನುಭವಿಸಿವೆ. ಚೀನಾ ಯುವಾನ್ ಕರೆನ್ಸಿ ಡಾಲರ್ ಎದುರು 7.32ಕ್ಕೆ ಕುಸಿದಿದೆ. ಇದೂ ಕೂಡ ರುಪಾಯಿ ಮೌಲ್ಯ ಕಡಿಮೆ ಆಗಲು ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ