Pakistan: ಪೂರ್ಣಪ್ರಮಾಣದ ಯುದ್ಧವಾದ್ರೆ ಪಾಕಿಸ್ತಾನದ ಬಳಿ ಇರೋ ಮದ್ದುಗುಂಡು 4ನೇ ದಿನದಲ್ಲಿ ಖತಂ

Pakistan's warfighting capabilities limited to 4 days: ಭಾರತದ ಜೊತೆ ಪೂರ್ಣಪ್ರಮಾಣದ ಯುದ್ಧಕ್ಕೆ ನಿಂತರೆ ಪಾಕಿಸ್ತಾನದ ಬಳಿ ಇರುವ ಮದ್ದುಗುಂಡುಗಳು ನಾಲ್ಕೇ ದಿನದಲ್ಲಿ ಖಾಲಿ ಆಗಬಹುದು. 150ಎಂಎಂ ಶೆಲ್​​​ಗಳು ಸೇರಿದಂತೆ ಪ್ರಮುಖ ಮದ್ದುಗುಂಡುಗಳ ಕೊರತೆ ಪಾಕಿಸ್ತಾನಕ್ಕೆ ಕಾಡುತ್ತಿದೆ. ಯುದ್ಧಪೀಡಿತ ಉಕ್ರೇನ್​​​ಗೆ ಪಾಕಿಸ್ತಾನ ಸಾಕಷ್ಟು ಮದ್ದುಗುಂಡುಗಳನ್ನು ಸರಬರಾಜು ಮಾಡಿತ್ತು. ಕೊರತೆ ಸೃಷ್ಟಿಯಾಗಲು ಇದೂ ಒಂದು ಕಾರಣ ಎನ್ನಲಾಗಿದೆ.

Pakistan: ಪೂರ್ಣಪ್ರಮಾಣದ ಯುದ್ಧವಾದ್ರೆ ಪಾಕಿಸ್ತಾನದ ಬಳಿ ಇರೋ ಮದ್ದುಗುಂಡು 4ನೇ ದಿನದಲ್ಲಿ ಖತಂ
ಪಾಕಿಸ್ತಾನ

Updated on: May 04, 2025 | 5:49 PM

ನವದೆಹಲಿ, ಮೇ 4: ಒಂದು ದೇಶದ ಮಿಲಿಟರಿ ಶಕ್ತಿ ಎಷ್ಟೆಂದು ವ್ಯಕ್ತವಾಗುವುದು ದೀರ್ಘಾವಧಿ ಯುದ್ಧದ ವೇಳೆಯೇ. ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಪೂರ್ಣಪ್ರಮಾಣದಲ್ಲಿ ಯುದ್ಧವೇನಾದರೂ (India Pakistan War) ಸಂಭವಿಸಿದಲ್ಲಿ ಏನಾಗಬಹುದು? ಈ ಪ್ರಶ್ನೆಗೆ ನಿಖರ ಉತ್ತರ ಯಾರಿಗೂ ಗೊತ್ತಿಲ್ಲ. ಸೇನೆಗಳ ಬಳಿ ಇರುವ ಶಸ್ತ್ರಾಸ್ತ್ರ, ಮದ್ದುಗುಂಡುಗಳ ಸಂಗ್ರಹ ಎಷ್ಟೆಂಬುದರ ಮೇಲೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬಹುದು. ವರದಿಗಳ ಪ್ರಕಾರ, ಪಾಕಿಸ್ತಾನಕ್ಕೆ ಮದ್ದುಗುಂಡುಗಳ ಭಾರೀ ಕೊರತೆ ಇದೆಯಂತೆ. ಪೂರ್ಣಪ್ರಮಾಣದಲ್ಲಿ ಯುದ್ಧವೇನಾದರೂ ಸಂಭವಿಸಿದಲ್ಲಿ ನಾಲ್ಕೇ ದಿನದಲ್ಲಿ ಪಾಕಿಸ್ತಾನ ಬಳಿ ಇರುವ ಮದ್ದುಗುಂಡುಗಳು ಖಾಲಿ ಆಗುತ್ತವೆ ಎಂದು ಕೆಲ ವರದಿಗಳು ಹೇಳುತ್ತಿವೆ.

ಪಾಕಿಸ್ತಾನದಲ್ಲಿ ಮದ್ದುಗುಂಡುಗಳನ್ನು ತಯಾರಿಸುವ ಆರ್ಡಿನೆನ್ಸ್ ಫ್ಯಾಕ್ಟರಿಗಳು ಅಗತ್ಯ ಪ್ರಮಾಣದಲ್ಲಿ ಇವುಗಳನ್ನು ಪೂರೈಸಲು ಅಶಕ್ಯವಾಗಿವೆ. ಜಾಗತಿಕವಾಗಿ ಮದ್ದುಗುಂಡುಗಳಿಗೆ ಇರುವ ಬೇಡಿಕೆ, ಆಂತರಿಕವಾಗಿ ಇರುವ ಆರ್ಡಿನೆನ್ಸ್ ಫ್ಯಾಕ್ಟರಿಗಳ ಕಡಿಮೆ ಉತ್ಪಾದನಾ ಸಾಮರ್ಥ್ಯ ಇತ್ಯಾದಿಯು ಇದಕ್ಕೆ ಕಾರಣವಾಗಿದೆ. ರಷ್ಯಾ ಜೊತೆ ದೀರ್ಘಾವಧಿ ಯುದ್ಧದಲ್ಲಿರುವ ಉಕ್ರೇನ್ ದೇಶಕ್ಕೆ ಪಾಕಿಸ್ತಾನ ಸಾಕಷ್ಟು ಮದ್ದುಗುಂಡುಗಳನ್ನು ಪೂರೈಸಿದೆ. ಇದರಿಂದಾಗಿ ಪಾಕಿಸ್ತಾನದ ಶಕ್ತಿ ಕಡಿಮೆಗೊಂಡಿದೆ. ತೀವ್ರ ಯುದ್ಧ ನಡೆದಲ್ಲಿ ಪಾಕಿಸ್ತಾನದಲ್ಲಿರುವ ಮದ್ದುಗುಂಡುಗಳು 96 ಗಂಟೆಗಳಲ್ಲಿ ಮುಗಿದುಹೋಗುತ್ತದೆಯಂತೆ.

ಇದನ್ನೂ ಓದಿ: ಆಮದು, ಬಂದರು, ಅಂಚೆ ನಿರ್ಬಂಧ… ಪಾಕಿಸ್ತಾನ ವಿರುದ್ಧ ಒಂದೇ ದಿನ ಭಾರತದಿಂದ 3 ಕ್ರಮ

ಇದನ್ನೂ ಓದಿ
ಪಾಕಿಸ್ತಾನ ವಿರುದ್ಧ ಒಂದೇ ದಿನ 3 ಅಸ್ತ್ರ ಬಿಟ್ಟ ಭಾರತ
ಭಾರತದ ಬಗ್ಗೆ ಸಾಲು ಸಾಲು ಸುಳ್ಳು ಆರೋಪಗಳ ಮಾಡಿದ ಪಾಕ್
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ಭಾರತದ ಬಂದರುಗಳಲ್ಲಿ ಪಾಕಿಸ್ತಾನದ ಹಡಗುಗಳಿಗೆ ನಿಷೇಧ

ಯುದ್ಧದಲ್ಲಿ ಯುದ್ಧವಿಮಾನ, ಕ್ಷಿಪಣಿಗಳಂತೆ ಮದ್ದುಗುಂಡುಗಳು ಬಹಳ ಮುಖ್ಯ. ಅದರಲ್ಲೂ ಭೂ ಯುದ್ಧದಲ್ಲಿ ಇವು ಅತ್ಯಗತ್ಯ. ಪಾಕಿಸ್ತಾನದ ಎಂ109 ಹೋವಿಟ್ಜರ್ ಗನ್​​​ಗಳಿಗೆ ಬೇಕಾದ 155 ಎಂಎಂ ಶೆಲ್​​ಗಳು, ಹಾಗು ಬಿಎಂ-21 ಸಿಸ್ಟಮ್ಸ್​​ಗೆ ಬೇಕಾದ 122 ಎಂಎಂ ರಾಕೆಟ್​​​ಗಳು ಪಾಕಿಸ್ತಾನದ ಬಳಿ ಸಾಕಷ್ಟು ಇಲ್ಲ. ಈ ಕೊರತೆಯು ಪಾಕಿಸ್ತಾನದ ಹೋರಾಟದ ಸಾಮರ್ಥ್ಯವನ್ನು ಕ್ಷೀಣಿಸಬಹುದು ಎನ್ನುವ ಅನಿಸಿಕೆ ಇದೆ.

ಪಾಕಿಸ್ತಾನದ ಮಿಲಿಟರಿಯ ಪ್ರಮುಖ ಶಕ್ತಿಯೇ ಮದ್ದುಗುಂಡುಗಳು ಎನ್ನಲಾಗಿದೆ. ಅದರಲ್ಲೂ 150 ಎಂಎಂ ಶೆಲ್​​​ಗಳು ಪಾಕಿಸ್ತಾನಕ್ಕೆ ಬಹಳ ಅವಶ್ಯಕ ಇವೆ. ಉಕ್ರೇನ್​​ಗೆ ಈ ಶೆಲ್​​ಗಳನ್ನು ಪಾಕಿಸ್ತಾನ ಸರಬರಾಜು ಮಾಡಿದ್ದು, ಅದರ ಕೊರತೆ ಈಗ ಎದುರಾಗಿದೆ. ಅದರ ಆರ್ಡಿನೆನ್ಸ್ ಫ್ಯಾಕ್ಟರಿಗಳು ಕ್ಷಿಪ್ರ ಅವಧಿಯಲ್ಲಿ ಈ ಶೆಲ್​​​ಗಳನ್ನು ತಯಾರಿಸಲು ಅಸಮರ್ಥವಾಗಿವೆ.

ಇದನ್ನೂ ಓದಿ: ಭಾರತ ಬಿಟ್ಟು ಶ್ರೀಲಂಕಾಕ್ಕೆ ಪರಾರಿಯಾದರಾ ಪಹಲ್ಗಾಮ್ ದಾಳಿಯ ಉಗ್ರರು? ಕೊಲಂಬೋ ವಿಮಾನ ನಿಲ್ದಾಣದಲ್ಲಿ ಶೋಧ

ಈ ಹಿನ್ನೆಲೆಯಲ್ಲಿ ಭಾರತದೊಂದಿಗೆ ಯುದ್ಧ ಕಾರ್ಮೋಡದಲ್ಲಿರುವ ಪಾಕಿಸ್ತಾನಕ್ಕೆ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಯುದ್ಧ ಸಂಭವಿಸಿದಲ್ಲಿ ಟರ್ಕಿ ಮತ್ತು ಚೀನಾದಿಂದ ನಿರೀಕ್ಷಿತ ನೆರವು ಬರದೇ ಹೋದಲ್ಲಿ ಪಾಕಿಸ್ತಾನ ನಿಜಕ್ಕೂ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ ಪರಿಣಿತರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ