Pakistan forex: ಪಾಕಿಸ್ತಾನಕ್ಕೆ ತಪ್ಪದ ಆರ್ಥಿಕ ಸಂಕಷ್ಟ; ಫಾರೆಕ್ಸ್ ರಿಸರ್ವ್ಸ್ ಕೇವಲ 15 ಬಿಲಿಯನ್ ಡಾಲರ್

Pakistan's forex reserves plunge to 15 billion USD: ಪಾಕಿಸ್ತಾನದ ವಿದೇಶೀ ವಿನಿಮಯ ಮೀಸಲು ನಿಧಿ ಕೇವಲ 15 ಬಿಲಿಯನ್ ಡಾಲರ್​​ನಷ್ಟಿದೆ. ಅದರ ಜಿಡಿಪಿಯ ಶೇ. 4ರಷ್ಟು ಮಾತ್ರವೇ ಫಾರೆಕ್ಸ್ ಇರುವುದು. ಸಾಲದ ಮೇಲೆ ಅವಲಂಬಿತವಾಗಿರುವ ಪಾಕಿಸ್ತಾನದ ಆರ್ಥಿಕತೆಯು ಭಾರತದೊಂದಿಗಿನ ಸಂಘರ್ಷದಿಂದ ಸಾಕಷ್ಟು ಘಾಸಿಯಾಗಲಿರುವುದು ನಿಶ್ಚಿತ ಎನ್ನಲಾಗುತ್ತಿದೆ.

Pakistan forex: ಪಾಕಿಸ್ತಾನಕ್ಕೆ ತಪ್ಪದ ಆರ್ಥಿಕ ಸಂಕಷ್ಟ; ಫಾರೆಕ್ಸ್ ರಿಸರ್ವ್ಸ್ ಕೇವಲ 15 ಬಿಲಿಯನ್ ಡಾಲರ್
ಪಾಕಿಸ್ತಾನ ಆರ್ಥಿಕತೆ

Updated on: May 09, 2025 | 3:38 PM

ಇಸ್ಲಾಮಾಬಾದ್, ಮೇ 9: ಭಾರತದ ಮೇಲೆ ವೀರಾವೇಶದಿಂದ ಎರಗಿ ಬೀಳುತ್ತಿರುವ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ (Pakistan economy) ಅಧಃಪತನದಲ್ಲಿರುವುದು ಮಾರ್ಮಿಕ ಎನಿಸುವ ಸಂಗತಿ. ಆರ್ಥಿಕ ಚಟುವಟಿಕೆ ಉಸಿರಾಡಲು ಸಾಲವನ್ನು ನೆಚ್ಚಿಕೊಂಡಿರಬೇಕಾದ ಅನಿವಾರ್ಯತೆಯಲ್ಲಿರುವ ಪಾಕಿಸ್ತಾನಕ್ಕೆ ಚೇತರಿಕೆಯ ಹಾದಿ ಕ್ಲಿಷ್ಟಕರ. 400 ಬಿಲಿಯನ್ ಡಾಲರ್​​ಗೂ ಕಡಿಮೆ ಮೊತ್ತದ ಜಿಡಿಪಿ ಇರುವ ಪಾಕಿಸ್ತಾನಕ್ಕೆ ಫಾರೆಕ್ಸ್ ರಿಸರ್ವ್ಸ್ (forex reserves) ಕೂಡ 15 ಬಿಲಿಯನ್ ಡಾಲರ್ ಮಾತ್ರವೇ ಇರುವುದು. ಜಿಡಿಪಿಯ ಶೇ. 4ರಷ್ಟು ಭಾಗ ಮಾತ್ರವೇ ವಿದೇಶೀ ವಿನಿಮಯ ಮೀಸಲು ನಿಧಿ ಇರುವುದು.

ಇತ್ತ, ಭಾರತದ ಫಾರೆಕ್ಸ್ ರಿಸರ್ವ್ಸ್ ಇತ್ತೀಚಿನ ವಾರಗಳಿಂದ ನಿರಂತರವಾಗಿ ಏರಿಕೆ ಆಗುತ್ತಾ ಬಂದಿದೆ. ಕೆಲ ತಿಂಗಳ ಹಿಂದೆ 700 ಬಿಲಿಯನ್ ಡಾಲರ್ ಮಟ್ಟ ದಾಟಿದ್ದ ಫಾರೀನ್ ಎಕ್ಸ್​​ಚೇಂಜ್ ರಿಸರ್ವ್ಸ್ ಈಗ ಮತ್ತೆ ಆ ಮಟ್ಟಕ್ಕೆ ಸಮೀಪಿಸುತ್ತಿದೆ. ಕಳೆದ ವಾರ ಭಾರತದ ಫಾರೆಕ್ಸ್ ರಿಸರ್ವ್ಸ್ 688 ಬಿಲಿಯನ್ ಡಾಲರ್ ಮೊತ್ತ ತಲುಪಿತ್ತು. ನಾಲ್ಕು ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ಭಾರತಕ್ಕೆ ಜಿಡಿಪಿ ಮತ್ತು ಫಾರೆಕ್ಸ್ ರಿಸರ್ವ್ಸ್ ಅನುಪಾತ ಶೇ. 17ರಷ್ಟಿದೆ. ಅಂದರೆ, ಜಿಡಿಪಿಯ ಶೇ. 17ರಷ್ಟು ಮೊತ್ತದಷ್ಟು ಫಾರೆಕ್ಸ್ ರಿಸರ್​ಸ್ ಇದೆ.

ಆದರೆ, ಪಾಕಿಸ್ತಾನದ ಫಾರೆಕ್ಸ್ ರಿಸರ್ವ್ಸ್ ಅದರ ಜಿಡಿಪಿಯ ಶೇ. 4ರಷ್ಟು ಮಾತ್ರವೇ ಇರುವುದು. ಕರೆನ್ಸಿ ಮೌಲ್ಯ ಕಾಪಾಡಲು, ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟು ರಕ್ಷಿಸಲು ಫಾರೆಕ್ಸ್ ರಿಸರ್ವ್ಸ್ ಮುಖ್ಯ ಎನಿಸುತ್ತದೆ.

ಇದನ್ನೂ ಓದಿ: ಟರ್ಕಿ ಏರ್​​ಲೈನ್ಸ್ ಜೊತೆ ಪಾರ್ಟ್ನರ್​ಶಿಪ್ ಮುರಿದುಕೊಂಡಿದ್ದೇವೆ: ಭಾರತದ ಗೋ ಹೋಮ್​​ಸ್ಟೇಸ್ ಘೋಷಣೆ

ಪಾಕಿಸ್ತಾನ ಸದ್ಯ ತನ್ನ ಆರ್ಥಿಕ ಸಂಕಷ್ಟದಿಂದ ಪಾರಾಗಲು ಐಎಂಎಫ್, ವಿಶ್ವಬ್ಯಾಂಕ್​​ಗಳ ಸಾಲವನ್ನು ನೆಚ್ಚಿಕೊಂಡಿದೆ. ಆದರೆ, ಭಾರತದೊಂದಿಗೆ ಸಂಘರ್ಷಕ್ಕಿಳಿದಿರುವ ಪಾಕಿಸ್ತಾನಕ್ಕೆ ಈ ದುಸ್ಸಾಹಸವು ಆರ್ಥಿಕವಾಗಿ ಬಲವಾದ ಪೆಟ್ಟು ಕೊಡುವ ನಿರೀಕ್ಷೆ ಇದೆ. ಪಹಲ್ಗಾಂ ಘಟನೆ ಬಳಿಕ ಪಾಕಿಸ್ತಾನದ ವಾಯು ಪ್ರದೇಶವನ್ನು ಬಳಸಲು ಹೆಚ್ಚಿನ ಇಂಟರ್​​ನ್ಯಾಷನಲ್ ಫ್ಲೈಟ್​​​ಗಳು ಹಿಂದೇಟು ಹಾಕಿವೆ. ಮೇ 7ಕ್ಕೆ ಮುಂಚೆ ಪಾಕಿಸ್ತಾನದ ಏರ್​​ಸ್ಪೇಸ್ ಬಳಸುತ್ತಿದ್ದ ಫ್ಲೈಟ್​​ಗಳ ಸಂಖ್ಯೆ 15 ಮಾತ್ರವೇ. ಇದರಿಂದ ಪಾಕಿಸ್ತಾನಕ್ಕೆ ಓವರ್​​​​ಫ್ಲೈಟ್ ಶುಲ್ಕದಿಂದ ಸಿಗುತ್ತಿದ್ದ ಸಾಕಷ್ಟು ಆದಾಯ ಕೈತಪ್ಪಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ