Pan Card: ಪ್ಯಾನ್ ಕಾರ್ಡ್ ಕಳೆದು ಹೋಗಿದ್ರೆ ಈ ರೀತಿ ಹೊಸ ಕಾರ್ಡ್ ಪಡೆಯಿರಿ
ಬ್ಯಾಂಕ್ ಅಕೌಂಟ್ ತೆರೆಯಲು, ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಹಾಗೂ ಹಣಕಾಸಿನ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕೆ ಬೇಕು. ಅಗತ್ಯ ದಾಖಲೆಯಲ್ಲಿ ಒಂದಾದ ಈ ಪ್ಯಾನ್ ಕಾರ್ಡ್ ಕಳೆದು ಹೋದ್ರೆ ಮತ್ತೆ ಕಾರ್ಡ್ ಪಡೆಯಲು ಸಾಧ್ಯವಿಲ್ಲ ಅಂದುಕೊಳ್ಳುವವರೇ ಹೆಚ್ಚು. ಆದರೆ ಈ ದಾಖಲೆ ಕಳೆದು ಹೋದರೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ತಕ್ಷಣ ಸ್ಥಳೀಯ ಪೊಲೀಸ್ ಠಾಣಿಯಲ್ಲಿ ದೂರು ದಾಖಲಿಸಿ, ಆ ಬಳಿಕ ಆದಾಯ ತೆರಿಗೆ ಇಲಾಖೆಯಲ್ಲಿ ಮರುಮುದ್ರಣಕ್ಕೆ ಅರ್ಜಿ ಸಲ್ಲಿಸಬಹುದು.

ಮುಖ್ಯಾಂಶಗಳು
- ಪ್ಯಾನ್ ಕಾರ್ಡ್ ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ನೀಡುವ 10 ಅಕ್ಷರಗಳ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ
- ಪ್ಯಾನ್ ಕಾರ್ಡ್ ಕಳೆದು ಹೋದರೆ ಮರುಮುದ್ರಣಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ
- ಪ್ಯಾನ್ ಕಾರ್ಡ್ ಕಳೆದು ಹೋದ್ರೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ.
ಪ್ಯಾನ್ ಕಾರ್ಡ್ (Pan Card) ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ನೀಡಲ್ಪಡುವ 10 ಅಕ್ಷರಗಳ ವಿಶಿಷ್ಟ ಗುರುತಿನ ಸಂಖ್ಯೆ ಇದಾಗಿದೆ. ಹಣಕಾಸಿನ ವಹಿವಾಟು, ತೆರಿಗೆ ಪಾವತಿ ಮತ್ತು ಬ್ಯಾಂಕ್ ಖಾತೆ ತೆರೆಯಲು ಇದು ಅವಶ್ಯಕ ದಾಖಲೆಯಾಗಿದೆ. ಆದರೆ ಈ ಪ್ಯಾನ್ ಕಾರ್ಡ್ ಕಳೆದುಕೊಂಡರೆ ಚಿಂತಿಸುವ ಅಗತ್ಯವಿಲ್ಲ, ಮರುಮುದ್ರಣಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ ಪ್ಯಾನ್ ಕಾರ್ಡ್ ಕಳೆದು ಹೋದರೆ ಮರು ಪಡೆಯುವುದು ಹೇಗೆ? ಎನ್ನುವ ಕುರಿತಾದ ಸ್ಟೋರಿ ಇಲ್ಲಿದೆ.
ಪ್ಯಾನ್ ಕಾರ್ಡ್ ಕಳೆದು ಹೋದರೆ ಏನು ಮಾಡ್ಬೇಕು?
ನಿಮ್ಮ ಅಗತ್ಯ ದಾಖಲೆಯಲ್ಲಿ ಒಂದಾದ ಪ್ಯಾನ್ ಕಾರ್ಡ್ ಕಳೆದುಹೋದ್ರೆ ಮೊದಲು ನೀವು ತೆರಿಗೆ ಇಲಾಖೆಗೆ ಮಾಹಿತಿ ನೀಡುವುದು ಅಗತ್ಯ. ಹೀಗಾಗಿ ನೀವು ಹತ್ತಿರದ ಆದಾಯ ತೆರಿಗೆ ಕಚೇರಿಯನ್ನು ಸಂಪರ್ಕ ಮಾಡಿ. ಇಲ್ಲವಾದರೆ ಎನ್‌ಎಸ್ ಡಿಎಲ್ ಅಥವಾ ಯುಟಿಐಐಟಿಎಸ್‌ಎಲ್ ವೆಬ್‌ಸೈಟ್‌ನ ಮೂಲಕ ಆನ್‌ಲೈನ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಬಹುದು.
ಪ್ಯಾನ್ ಕಾರ್ಡ್ ಮರು ಪಡೆಯುವುದು ಹೇಗೆ?
ಹಂತ 1: Protean ಅಥವಾ UTIITSL ವೆಬ್‌ಸೈಟ್‌ಗೆ ಭೇಟಿ ನೀಡಿ, ರೀಪ್ರಿಂಟ್ ಆಫ್ ಪ್ಯಾನ್ ಕಾರ್ಡ್ ಆಯ್ಕೆಯನ್ನು ಆರಿಸಿಕೊಳ್ಳಿ
ಹಂತ 2: ನಿಮ್ಮ ಆಧಾರ್ ಸಂಖ್ಯೆ, ಜನ್ಮದಿನಾಂಕ ನಮೂದಿಸಿ.
ಹಂತ 3: ಈ ಪ್ರಕ್ರಿಯೆ ಮುಗಿದ ಬಳಿಕ ಇಂತಿಷ್ಟು ಶುಲ್ಕ ಪಾವತಿಸಿ.
ಹಂತ 4: ಆಧಾರ್ ಮೂಲಕ ಒಟಿಪಿ (OTP) ಪರಿಶೀಲನೆ ಮಾಡಬಹುದು.
ಹಂತ 5: ಈ ಪ್ರಕ್ರಿಯೆ ಮುಗಿದ ನಂತರ ಆದಾಯ ತೆರಿಗೆ ಇಲಾಖೆಯ ಇನ್ಕಮ್ ಟ್ಯಾಕ್ಸ್ ಇ ಫೀಲಿಂಗ್ ಪೋರ್ಟಲ್‌ನಿಂದ ನಿಮ್ಮ ಇ-ಪ್ಯಾನ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)
ಪ್ರಶ್ನೆ: ಪ್ಯಾನ್ ಕಾರ್ಡ್ ಯಾಕೆ ಅಷ್ಟೊಂದು ಅವಶ್ಯಕ?
ಉತ್ತರ: ಹಣಕಾಸಿನ ವಹಿವಾಟು, ತೆರಿಗೆ ಪಾವತಿ ಮತ್ತು ಬ್ಯಾಂಕ್ ಖಾತೆ ತೆರೆಯಲು ಇದು ಅವಶ್ಯಕ ದಾಖಲೆಯಾಗಿದೆ.
ಪ್ರಶ್ನೆ: ಪ್ಯಾನ್ ಕಾರ್ಡ್ ಕಳೆದು ಹೋದ್ರೆ ಏನು ಮಾಡ್ಬೇಕು?
ಉತ್ತರ: ಪ್ಯಾನ್ ಕಾರ್ಡ್ ಕಳೆದು ಹೋದ್ರೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಳೆದುಹೋದ ದಾಖಲೆಯ ಕುರಿತು ದೂರು ದಾಖಲಿಸಿ.
ಪ್ರಶ್ನೆ: ಪ್ಯಾನ್ ಕಾರ್ಡ್ ಮರು ಪಡೆಯುವುದು ಹೇಗೆ?
ಉತ್ತರ: ಪ್ಯಾನ್ ಕಾರ್ಡ್ ಮರು ಪಡೆಯಲು ಆದಾಯ ತೆರಿಗೆ ಇಲಾಖೆಯಲ್ಲಿ ಮರುಮುದ್ರಣಕ್ಕೆ ಅರ್ಜಿ ಸಲ್ಲಿಸಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:44 pm, Wed, 22 July 26




