Patanjali Online: ಈ ಪತಂಜಲಿ ಪ್ಲಾಟ್ಫಾರ್ಮ್ಗಳಲ್ಲಿ ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ಖರೀದಿಸುವ ಅವಕಾಶ
Patanjali Ayurveda's online platforms give good discounts and cashback offers: ಪತಂಜಲಿ ಆಯುರ್ವೇದ ಸಂಸ್ಥೆ ತನ್ನ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಮೂಲಕ ಹೋಮ್ ಡೆಲಿವರಿ ನೀಡುತ್ತದೆ. ಅಂದರೆ, ನೀವು ಈಗ ನಿಮ್ಮ ಮನೆಯಲ್ಲೇ ಕೂತು ಪತಂಜಲಿ ಉತ್ಪನ್ನಗಳನ್ನು ಆರ್ಡರ್ ಮಾಡಬಹುದು. ಪತಂಜಲಿಯ ಆನ್‌ಲೈನ್ ಪ್ಲಾಟ್ಫಾರ್ಮ್ಗಳಾದ ಅದರ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ಗಳಲ್ಲಿ ನೀವು ಶಾಪಿಂಗ್ ಮಾಡಿದರೆ ರಿಯಾಯಿತಿ ಬೆಲೆ ಮತ್ತು ಕ್ಯಾಷ್ಬ್ಯಾಕ್ನಂತಹ ಕೊಡುಗೆಗಳು ಇರುತ್ತವೆ.

ಪತಂಜಲಿ ಆಯುರ್ವೇದ (Patanjali Ayurveda) ತನ್ನ ಗ್ರಾಹಕರಿಗೆ ಆನ್‌ಲೈನ್ ಶಾಪಿಂಗ್ ಸೇವೆ ನೀಡುತ್ತಿದೆ. ಸೋಪ್, ಟೂತ್‌ಪೇಸ್ಟ್, ಹಿಟ್ಟು, ತುಪ್ಪ ಮತ್ತು ಆಯುರ್ವೇದ ಔಷಧಿಗಳಿಂದ ಹಿಡಿದು, ಅದರ ಎಲ್ಲಾ ಉತ್ಪನ್ನಗಳನ್ನು ಈಗ ನಿಮ್ಮ ಮನೆಯಿಂದಲೇ ಆನ್‌ಲೈನ್ ಮೂಲಕ ಆರ್ಡರ್ ಮಾಡಬಹುದು. ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಆರ್ಡರ್ ಮಾಡುವಾಗ ಗ್ರಾಹಕರು ಗಮನಾರ್ಹ ರಿಯಾಯಿತಿಗಳನ್ನು ಸಹ ಪಡೆಯುತ್ತಾರೆ. ಪತಂಜಲಿ ಉತ್ಪನ್ನಗಳನ್ನು ಖರೀದಿಸಲು ಅಂಗಡಿಗೆ ಹೋಗಲು ಸಾಧ್ಯವಾಗದವರಿಗೆ ಈ ಫೀಚರ್ ಪ್ರಯೋಜನಕಾರಿಯಾಗಿದೆ. ಅವರು ಈಗ ತಮ್ಮ ಮನೆಯಿಂದಲೇ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು.
ಪತಂಜಲಿ ಆನ್‌ಲೈನ್ ಪ್ಲಾಟ್‌ಫಾರ್ಮ್
ಯೋಗ ಗುರು ಬಾಬಾ ರಾಮದೇವ್ ಅವರ ಕಂಪನಿಯಾದ ಪತಂಜಲಿ, ಗ್ರಾಹಕರ ಅನುಕೂಲಕ್ಕಾಗಿ ತನ್ನ ಅಧಿಕೃತ ಆನ್‌ಲೈನ್ ಪ್ಲಾಟ್‌ಫಾರ್ಮ್ ಸೌಲಭ್ಯ ಕೊಟ್ಟಿದೆ. ಗ್ರಾಹಕರು ಪತಂಜಲಿ ಸ್ಟೋರ್ಗೆ ಹೋಗಿ ಖರೀದಿಸುವ ಅನಿವಾರ್ಯತೆಯನ್ನು ತಪ್ಪಿಸುತ್ತದೆ. ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ ಮೂಲಕ ಉತ್ಪನ್ನಗಳಿಗೆ ಆರ್ಡರ್ ಮಾಡಿ ಮನೆ ಬಾಗಿಲಿಗೆ ಡೆಲಿವರಿ ಪಡೆಯಬಹುದು.
ಇದನ್ನೂ ಓದಿ: Patanjali Model: ಜಾಗತಿಕ ಬ್ರ್ಯಾಂಡ್ಗಳಿಗೆ ಪೈಪೋಟಿ ನೀಡುತ್ತಿರುವ ಪತಂಜಲಿಯ ಯಶಸ್ಸಿನ ಗುಟ್ಟೇನು?
ಒಂದು ಕ್ಲಿಕ್ಗೆ ಸಿಗುತ್ತವೆ ಪತಂಜಲಿ ಉತ್ಪನ್ನಗಳು
ಪತಂಜಲಿಯ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಯುರ್ವೇದ ಔಷಧಿಗಳ ಜೊತೆಗೆ ದಿನನಿತ್ಯದ ಉತ್ಪನ್ನಗಳನ್ನು ನೀಡುತ್ತದೆ. ಗ್ರಾಹಕರು ತಮ್ಮ ಮನೆಗಳಿಂದಲೇ ಸೋಪ್, ಶಾಂಪೂ, ಟೂತ್‌ಪೇಸ್ಟ್, ಬಿಸ್ಕತ್ತು, ತುಪ್ಪ, ಹಿಟ್ಟು ಮತ್ತು ಹರ್ಬಲ್ ಜ್ಯೂಸ್ ಸೇರಿದಂತೆ ನೂರಾರು ಉತ್ಪನ್ನಗಳನ್ನು ಆರ್ಡರ್ ಮಾಡಬಹುದು. ಇದು ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೂ ಸುಲಭವಾಗಿ ಶುದ್ಧ ಹಾಗೂ ದೇಶೀಯ ಉತ್ಪನ್ನಗಳು ಸಿಗುವಂತಾಗುತ್ತದೆ.
ಆನ್‌ಲೈನ್ ಶಾಪಿಂಗ್‌ನಲ್ಲಿ ರಿಯಾಯಿತಿ
ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಗ್ರಾಹಕರು ಅನೇಕ ಉತ್ಪನ್ನಗಳ ಮೇಲೆ 3% ರಿಂದ 10% ವರೆಗಿನ ರಿಯಾಯಿತಿಗಳನ್ನು ಪಡೆಯುತ್ತಾರೆ. ವಿಶೇಷವಾಗಿ PNB-Patanjali ಮತ್ತು RBL ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಪಾವತಿಸುವಾಗ ಕ್ಯಾಶ್‌ಬ್ಯಾಕ್ ಪ್ರಯೋಜನಗಳು ಸಹ ಲಭ್ಯವಿದೆ. ಆಯ್ದ ಉತ್ಪನ್ನಗಳಿಗೆ ಉಚಿತ ಡೆಲಿವರಿ ಸಹ ನೀಡಲಾಗುತ್ತದೆ. ಇದು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಂತೆ ಗ್ರಾಹಕರಿಗೆ ಅನುಕೂಲಗಳನ್ನು ಒದಗಿಸುತ್ತದೆ.
ಇದನ್ನೂ ಓದಿ: ನರನೋವು ಶಮನ ಮಾಡಬಲ್ಲ ‘ಪೀಡಾನಿಲ್ ಗೋಲ್ಡ್’; ಇದು ಪತಂಜಲಿ ಆಯುರ್ವೇದದ ಕೊಡುಗೆ
ಮನೆಯಲ್ಲಿ ಕುಳಿತು ಪತಂಜಲಿಯಿಂದ ಆರ್ಡರ್ ಮಾಡುವುದು ಹೇಗೆ?
- ಪತಂಜಲಿಯಿಂದ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು, ಗ್ರಾಹಕರು patanjaliayurved.net ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
- ಇಲ್ಲಿ ನಿಮ್ಮ ಅಕೌಂಟ್ ತೆರೆಯಬೇಕು.
- ಅಕೌಂಟ್ ಇದ್ದರೆ, ಲಾಗಿನ್ ಆಗಿರಿ.
- ನಿಮಗೆ ಬೇಕಾದ ಉತ್ಪನ್ನಗಳನ್ನು ಹುಡುಕಿ ಆಯ್ಕೆ ಮಾಡಿಕೊಂಡು ಕಾರ್ಟ್ಗೆ ಸೇರಿಸಬೇಕು
- ಕಾರ್ಟ್ಗೆ ಹೋಗಿ ನಿಮ್ಮ ವಸ್ತುಗಳಿಗೆ ಆನ್‌ಲೈನ್ ಪಾವತಿಯನ್ನು ಮಾಡಿದ ನಂತರ ಆರ್ಡರ್ ಅನ್ನು ದೃಢೀಕರಿಸಬಹುದು.
- ಸರಕುಗಳು ಕೆಲವೇ ದಿನಗಳಲ್ಲಿ ನೇರವಾಗಿ ಗ್ರಾಹಕರ ಮನೆಗೆ ತಲುಪುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




