ಪತಂಜಲಿ ಫುಡ್ಸ್​ನ ‘ಸೂಪರ್-ಫಾಸ್ಟ್’ ಗಳಿಕೆ! 9 ತಿಂಗಳಲ್ಲಿ ₹29,000 ಕೋಟಿ ಆದಾಯ

Patanjali Foods Q3 results: ಮೂರನೇ ತ್ರೈಮಾಸಿಕದಲ್ಲಿ (2025ರ ಅಕ್ಟೋಬರ್-ಡಿಸೆಂಬರ್) ಕಂಪನಿಯ ಆದಾಯ ₹10,500 ಕೋಟಿಯ ಹತ್ತಿರ ತಲುಪಿದೆ. ಕಂಪನಿಯ ಪ್ರಕಾರ, ಜಾಗತಿಕ ಸರಕುಗಳ ಬೆಲೆಗಳಲ್ಲಿನ ಏರಿಳಿತಗಳು, ರೂಪಾಯಿಯ ಗಮನಾರ್ಹ ಕುಸಿತ ಮತ್ತು ಹಾಲಿ ಜಾಗತಿಕ ಆರ್ಥಿಕ ಸವಾಲುಗಳ ಹೊರತಾಗಿಯೂ, ಕಂಪನಿಯು ಬಲವಾದ ಆದಾಯ ಪ್ರಗತಿ ಸಾಧಿಸಿದೆ.

ಪತಂಜಲಿ ಫುಡ್ಸ್​ನ ಸೂಪರ್-ಫಾಸ್ಟ್ ಗಳಿಕೆ! 9 ತಿಂಗಳಲ್ಲಿ ₹29,000 ಕೋಟಿ ಆದಾಯ
ಪತಂಜಲಿ

Updated on: Feb 13, 2026 | 8:49 PM

ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ, ಬಾಬಾ ರಾಮ್‌ದೇವ್ ಅವರ ಪತಂಜಲಿ ಫುಡ್ಸ್ ಸಂಸ್ಥೆಯು ಗಳಿಕೆಯಲ್ಲಿ ದಾಖಲೆಯನ್ನು ಸ್ಥಾಪಿಸಿದೆ. ಮೊದಲ ಬಾರಿಗೆ, ಒಂಬತ್ತು ತಿಂಗಳ ಆದಾಯವು ₹29,000 ಕೋಟಿಗಳನ್ನು ಮೀರಿದೆ. ಇದು ಹಿಂದೆಂದೂ ನೋಡಿರದ ದಾಖಲೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (2025ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಅವಧಿ), ಕಂಪನಿಯ ಆದಾಯವು ₹10,500 ಕೋಟಿಗಳನ್ನು ತಲುಪಿದೆ. ಕಂಪನಿಯ ಪ್ರಕಾರ, ಜಾಗತಿಕ ಸರಕುಗಳ ಬೆಲೆಗಳಲ್ಲಿನ ಏರಿಳಿತಗಳು, ರೂಪಾಯಿಯ ಗಮನಾರ್ಹ ಅಪಮೌಲ್ಯ ಮತ್ತು ಜಾಗತಿಕ ಆರ್ಥಿಕ ಸವಾಲುಗಳ ಹೊರತಾಗಿಯೂ, ಕಂಪನಿಯು ಅತ್ಯುತ್ತಮ ಆದಾಯ ಪ್ರಗತಿ ತೋರಿದೆ. EBITDA (ಟ್ಯಾಕ್ಸ್ ಕಳೆದ ನಂತರದ ಲಾಭ) ₹500 ಕೋಟಿಗಿಂತ ಕಡಿಮೆ ಇತ್ತು. ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಡುಬಂದ ಅಂಕಿಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.

ಪತಂಜಲಿ ಫುಡ್ಸ್ ತ್ರೈಮಾಸಿಕ ವರದಿಯ ಹೈಲೈಟ್ಸ್

  • ಆಪರೇಶನ್​ಗಳಿಂದ ಬಂದ ಆದಾಯ 10,483.71 ಕೋಟಿ ರೂ. ಆಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 16.53 ರಷ್ಟು ಹೆಚ್ಚು. ಮತ್ತು ಹಿಂದಿನ ತ್ರೈಮಾಸಿಕಕ್ಕಿಂತ ಶೇ. 7.23 ರಷ್ಟು ಹೆಚ್ಚಾಗಿದೆ.
  • ಹಣಕಾಸು ವರ್ಷದ ಮೊದಲ 9 ತಿಂಗಳ ಅವಧಿಯ ಆದಾಯ 29,013.98 ಕೋಟಿ ರೂ.ಗಳನ್ನು ತಲುಪಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 16.55 ರಷ್ಟು ಹೆಚ್ಚಾಗಿದೆ.
  • 2026 ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಒಟ್ಟು EBITDA 492.06 ಕೋಟಿ ರೂ.ಗಳಾಗಿದ್ದು, ಶೇ. 4.69 ರಷ್ಟು ಲಾಭಾಂಶವನ್ನು ಹೊಂದಿದೆ.
  • ತ್ರೈಮಾಸಿಕದಲ್ಲಿ ತೆರಿಗೆ ನಂತರದ ಲಾಭ (ಪಿಎಟಿ) 593.76 ಕೋಟಿ ರೂ. ಆಗಿದೆ.

ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಆಯುರ್ವೇದ ಪಾತ್ರ ಹೇಗೆ? ಬಾಬಾ ರಾಮದೇವ್ ವಿವರಣೆ ಇದು…

FMCG ವಿಭಾಗದಿಂದ ಅದ್ಭುತ ಗಳಿಕೆ

ಎಫ್​ಎಂಸಿಜಿ ವಿಭಾಗ: 2026 ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ, ಎಫ್​ಎಂಸಿಜಿ ಸೆಗ್ಮೆಂಟ್ ₹3,248.35 ಕೋಟಿಗಳ ಒಟ್ಟಾರೆ ಮಾರಾಟವನ್ನು ದಾಖಲಿಸಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 38.93% ಹೆಚ್ಚಾಗಿದೆ. ಈ ವಿಭಾಗವು ಒಟ್ಟು ಆದಾಯಕ್ಕೆ 30.68% ಮತ್ತು EBITDA ಗೆ 66.33% ಕೊಡುಗೆ ನೀಡಿದೆ.

ಖಾದ್ಯ ತೈಲ ವಿಭಾಗ: 2026ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ, ಪತಂಜಲಿ ಫುಡ್ಸ್​ನ ಖಾದ್ಯ ತೈಲ ಅಥವಾ ಅಡುಗೆ ಎಣ್ಣೆ ವಿಭಾಗವು ₹7,335.71 ಕೋಟಿ ಆದಾಯವನ್ನು ವರದಿ ಮಾಡಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 8.98 ರಷ್ಟು ಹೆಚ್ಚಾಗಿದೆ. ಒಟ್ಟು ತೈಲ ಮಾರಾಟದಲ್ಲಿ ಬ್ರ್ಯಾಂಡೆಡ್ ಎಣ್ಣೆಗಳ ಪಾಲು ಶೇ. 85ರಷ್ಟಿದೆ. ಸೆಗ್ಮೆಂಟಲ್ EBITDA ಮಾರ್ಜಿನ್ 2.39% ಆಗಿತ್ತು. ಏರ್ ಟರ್ಬೈನ್ ವಿದ್ಯುತ್ ಉತ್ಪಾದನೆಯು ತ್ರೈಮಾಸಿಕದಲ್ಲಿ ₹4.27 ಕೋಟಿ ಆದಾಯವನ್ನು ಗಳಿಸಿದೆ. ಒಟ್ಟಾರೆ, ಪತಂಜಲಿಯ ಮೂರನೇ ತ್ರೈಮಾಸಿಕ ಲಾಭದ ವಿಚಾರದಲ್ಲಿ ಅದರ ಬ್ಯುಸಿನೆಸ್ ಹೆಚ್ಚಿದೆಯಾದರೂ, ಲಾಭ ಕಡಿಮೆಗೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us