AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಆಯುರ್ವೇದ ಪಾತ್ರ ಹೇಗೆ? ಬಾಬಾ ರಾಮದೇವ್ ವಿವರಣೆ ಇದು…

Baba Ramdev explains how Ayurvedic diet and lifestyle can help in cancer treatment: ಕ್ಯಾನ್ಸರ್ ಒಂದು ಅಪಾಯಕಾರಿ ಕಾಯಿಲೆ. ಅಲೋಪತಿ ಚಿಕಿತ್ಸೆಗಳಲ್ಲಿ ಕಿಮೊಥೆರಪಿ ಮತ್ತು ರೇಡಿಯೊಥೆರಪಿಯನ್ನು ಬಳಸಲಾಗುತ್ತದೆ. ಅಲೋಪತಿ ಚಿಕಿತ್ಸೆಗಳ ಜೊತೆಗೆ, ಕೆಲವರು ಆಯುರ್ವೇದದ ಸಹಾಯವನ್ನೂ ಪಡೆಯುತ್ತಾರೆ. ಕ್ಯಾನ್ಸರ್ ಗುಣಪಡಿಸಲು ಆಯುರ್ವೇದ ಹೇಗೆ ಸಹಾಯವಾಗಬಲ್ಲುದು ಎಂಬುದನ್ನು ಬಾಬಾ ರಾಮದೇವ್ ವಿವರಿಸಿದ್ದಾರೆ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಆಯುರ್ವೇದ ಪಾತ್ರ ಹೇಗೆ? ಬಾಬಾ ರಾಮದೇವ್ ವಿವರಣೆ ಇದು...
ಕ್ಯಾನ್ಸರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 11, 2026 | 2:59 PM

Share

ವಿಶ್ವಾದ್ಯಂತ ಕ್ಯಾನ್ಸರ್ (Cancer) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕ್ಯಾನ್ಸರ್​ನಿಂದ ಜೀವ ಉಳಿಸುವುದು ದೊಡ್ಡ ಸವಾಲಿನ ಸಂಗತಿಯಾಗಿದೆ. ಹೆಚ್ಚಿನ ಕ್ಯಾನ್ಸರ್ ರೋಗಿಗಳು ಅಲೋಪತಿ ಚಿಕಿತ್ಸೆಯನ್ನು ಅವಲಂಬಿಸಿದ್ದಾರೆ. ಈಗೀಗ ಕೆಲವರು ಸಪೋರ್ಟಿವ್ ಟ್ರೀಟ್ಮೆಂಟ್​ಗಾಗಿ ಆಯುರ್ವೇದದತ್ತ ಮುಖ ಮಾಡುತ್ತಿದ್ದಾರೆ. ಕ್ಯಾನ್ಸರ್ ಗುಣಪಡಿಸುವ ಚಿಕಿತ್ಸೆಯಲ್ಲಿ ಆಯುರ್ವೇದ ವಿಧಾನಗಳು ಎಷ್ಟು ಉಪಯುಕ್ತ ಎಂಬುದನ್ನು ಬಾಬಾ ರಾಮದೇವ್ (Baba Ramdev) ತಿಳಿಸಿದ್ದಾರೆ.

ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯವಾದರೂ, ರೋಗಿಗಳು ತಮ್ಮ ಆಹಾರ ಮತ್ತು ಜೀವನಶೈಲಿಯ ಬಗ್ಗೆಯೂ ಗಮನ ಹರಿಸಬೇಕು ಎಂದೆನ್ನುತ್ತಾರೆ ಬಾಬಾ ರಾಮದೇವ್. ರೋಗದಿಂದ ಗುಣಮುಖವಾಗಲು ಮತ್ತು ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ಬೇಕಾದ ಚೈತನ್ಯ ಇದರಿಂದ ಸಿಗುತ್ತದೆ. ಆಯುರ್ವೇದ ಶಿಫಾರಸು ಮಾಡುವ ಕೆಲ ಆಹಾರಗಳನ್ನು ಸಪೋರ್ಟಿವ್ ನ್ಯೂಟ್ರಿಯೆಂಟ್​ಗಳಾಗಿ ನೋಡಲಾಗುತ್ತದೆ. ಇವು ಚಿಕಿತ್ಸೆಗೆ ಪರ್ಯಾಯ ಅಲ್ಲವಾದರೂ, ಟ್ರೀಟ್ಮೆಂಟ್ ಸಂದರ್ಭದಲ್ಲಿ ವೈದ್ಯರ ಸಲಹೆ ಮೇರೆಗೆ ಇವನ್ನು ತೆಗೆದುಕೊಳ್ಳುವುದು ಅನುಕೂಲವಾಗುತ್ತದೆ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಪೋರ್ಟಿವ್ ಡಯಟ್ ಯಾಕೆ ಮುಖ್ಯ?

ಕ್ಯಾನ್ಸರ್ ಚಿಕಿತ್ಸೆಯು ರೋಗಿಯ ರೋಗನಿರೋಧಕ ಶಕ್ತಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹಲವಾರು ಅಡ್ಡಪರಿಣಾಮಗಳನ್ನು ಸಹ ಗಮನಿಸಬಹುದು. ಅಂತಹ ಸಂದರ್ಭಗಳಲ್ಲಿ, ಆಯುರ್ವೇದವು ಈ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅನೇಕ ರೋಗಿಗಳಿಗೆ ಅಜೀರ್ಣತೆ, ಹಸಿವಿನ ಕೊರತೆ, ಸುಸ್ತು ಇತ್ಯಾದಿ ಸಮಸ್ಯೆಗಳು ಅನುಭವವಾಗುತ್ತವೆ. ಆದ್ದರಿಂದ, ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಸೇವಿಸಿದರೆ ಪ್ರಯೋಜನಕಾರಿಯಾಗಬಹುದಾದ ಕೆಲವು ಆಯುರ್ವೇದೀಯ ಆಹಾರಗಳಿವೆ. ಇವನ್ನು ಸೇವಿಸುವುದರಿಂದ ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಅಡ್ಡಪರಿಣಾಮಗಳು ಕಾಣಿಸುವುದಿಲ್ಲ. ಈ ಆಹಾರಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ದೌರ್ಬಲ್ಯವನ್ನು ನಿವಾರಿಸಲು ನೆರವಾಗುತ್ತದೆ.

ಇದನ್ನೂ ಓದಿ: ಕಿಡ್ನಿ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲ ಮನೆಮದ್ದುಗಳು; ಬಾಬಾ ರಾಮದೇವ್ ಸಲಹೆ ಇದು

ಆಯುರ್ವೇದದಲ್ಲಿ ಈ ವಿಷಯಗಳು ಪ್ರಯೋಜನಕಾರಿ

ಆಯುರ್ವೇದ ಮತ್ತು ನ್ಯೂಟ್ರಿಶನ್ ಎಕ್ಸ್​ಪರ್ಟ್​ಗಳ ಪ್ರಕಾರ, ಈ ಕೆಳಕಾಣಿಸಿರುವ ಆಹಾರಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತವೆ:

  • ಬಾರ್ಲಿ ರಸ
  • ಗಿಲೋಯ್ ರಸ
  • ಮಸೂರ ಮತ್ತು ದ್ವಿದಳ ಧಾನ್ಯಗಳು
  • ಹಸಿರು ತರಕಾರಿಗಳು
  • ವೀಟ್ ಗ್ರಾಸ್ ಪೌಡರ್
  • ಬೇವಿನ ರಸ

ಈ ವಸ್ತುಗಳನ್ನು ತಿನ್ನಬಾರದು

  • ಸಕ್ಕರೆ
  • ಹುರಿದ ಆಹಾರ
  • ಕೆಂಪು ಮಾಂಸ
  • ಅಧಿಕ ಉಪ್ಪು ಸೇವನೆ

ಇದನ್ನೂ ಓದಿ: Hair Fall Treatment: ಕೂದಲು ಉದುರುವಿಕೆ ನಿಲ್ಲಿಸಲು ಮನೆಮದ್ದುಗಳು: ಸರಳ ಪರಿಹಾರ ಸೂಚಿಸುವ ಬಾಬಾ ರಾಮದೇವ್

ಮುಂಚಿತವಾಗಿ ವೈದ್ಯರನ್ನು ಸಂಪರ್ಕಿಸಿ

ಆಯುರ್ವೇದದಲ್ಲಿ ಉಲ್ಲೇಖಿಸಲಾದ ಈ ಪದಾರ್ಥಗಳು ಕ್ಯಾನ್ಸರ್ ಚಿಕಿತ್ಸೆಗೆ ಪರ್ಯಾಯವಲ್ಲ. ಅವುಗಳನ್ನು ನಿಮ್ಮ ಆಹಾರದಲ್ಲಿ ಸಪೋರ್ಟಿವ್ ಕೇರ್ ಆಗಿ ಮಾತ್ರ ಸೇರಿಸಿಕೊಳ್ಳಬಹುದು. ಆದಾಗ್ಯೂ, ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು