ಪತಂಜಲಿ ಷೇರುಗಳಲ್ಲಿ ಭಾರಿ ಲಾಭ: ಹೂಡಿಕೆದಾರರ ಸಂತಸ ಮತ್ತು ಭವಿಷ್ಯದ ನಿರೀಕ್ಷೆಯೂ ಉತ್ತಮ

Patanjali Foods Share Price Surge: ಕಳೆದ ಒಂದು ವರ್ಷದಲ್ಲಿ ಪತಂಜಲಿ ಫುಡ್ಸ್‌ನ ಷೇರುಗಳು ಶೇಕಡಾ 29ರಷ್ಟು ಏರಿಕೆ ಕಂಡಿದೆ. ಜೂನ್ 2024ರಿಂದ ಷೇರು ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಹೂಡಿಕೆದಾರರಿಗೆ ಉತ್ತಮ ಲಾಭ ಗಳಿಸಲು ಅವಕಾಶ ಮಾಡಿಕೊಟ್ಟಿದೆ. ಕಂಪನಿಯ ಲಾಭ ಮತ್ತು ಆದಾಯದಲ್ಲಿನ ಹೆಚ್ಚಳವು ಷೇರು ಬೆಲೆಯ ಏರಿಕೆಗೆ ಕಾರಣವಾಗಿದೆ. ತಜ್ಞರು ಮುಂದಿನ ದಿನಗಳಲ್ಲಿಯೂ ಈ ಏರಿಕೆ ಮುಂದುವರೆಯುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ಪತಂಜಲಿ ಷೇರುಗಳಲ್ಲಿ ಭಾರಿ ಲಾಭ: ಹೂಡಿಕೆದಾರರ ಸಂತಸ ಮತ್ತು ಭವಿಷ್ಯದ ನಿರೀಕ್ಷೆಯೂ ಉತ್ತಮ
ಪತಂಜಲಿ ಫುಡ್ಸ್

Updated on: Jun 12, 2025 | 1:56 PM

ಬಾಬಾ ರಾಮದೇವ್ ಅವರ ಪತಂಜಲಿ ಫುಡ್ಸ್ (Patanjali Foods) ಕಂಪನಿಯ ಷೇರುಗಳು ಕಳೆದ ಒಂದು ವರ್ಷದಲ್ಲಿ ಉತ್ತಮ ಏರಿಕೆ ಕಂಡಿವೆ. ಅದರ ಮೇಲೆ ಹಣ ಹಾಕಿದ ಹೂಡಿಕೆದಾರರಿಗೆ ಒಳ್ಳೆಯ ರಿಟರ್ನ್ ಸಿಕ್ಕಿದೆ. ಬಿಎಸ್​​ಇ ದತ್ತಾಂಶದ ಪ್ರಕಾರ, ಷೇರು ಮಾರುಕಟ್ಟೆ ಸಾಕಷ್ಟು ಏರುಪೇರು ಕಂಡರೂ ಪತಂಜಲಿ ಫೂಡ್ಸ್ ಷೇರು ಒಂದು ವರ್ಷದಲ್ಲಿ ಶೇ. 29ರಷ್ಟು ಮೌಲ್ಯ ಹೆಚ್ಚಿಸಿಕೊಂಡಿವೆ. ಮಾರುಕಟ್ಟೆ ವ್ಯತ್ಯಯದಲ್ಲೂ ಇದು ಗಮನಾರ್ಹ ಏರಿಕೆ ಎಂದು ಪರಿಗಣಿಸಬಹುದು. ವರ್ಷದ ಹಿಂದೆ ಜೂನ್ ತಿಂಗಳಲ್ಲಿ (2024ರ ಜೂನ್ 24) ಪತಂಜಲಿ ಫುಡ್ಸ್ ಷೇರುಬೆಲೆ 1,302 ರೂ ಇತ್ತು. ಇವತ್ತು ಬೆಲೆ 1,674 ರೂ ಆಗಿದೆ. ಒಂದು ಹಂತದಲ್ಲಿ 2,011 ರೂ ಗರಿಷ್ಠ ಮಟ್ಟಕ್ಕೆ ಹೋಗಿತ್ತು. ಸದ್ಯ ಗರಿಷ್ಠ ಮಟ್ಟದಿಂದ ಬಹಳ ದೊಡ್ಡ ದೊಡ್ಡ ಕಂಪನಿಗಳಿಗೂ ಈ ಪರಿ ಬೆಳವಣಿಗೆ ಸಿಕ್ಕಿಲ್ಲ.

ಒಂದು ವರ್ಷದಲ್ಲಿ ಎಷ್ಟು ಬೆಳವಣಿಗೆ ಆಗಿದೆ?

ಕಳೆದ ಒಂದು ವರ್ಷದಲ್ಲಿ ಪತಂಜಲಿ ಷೇರುಗಳು ಸುಮಾರು ಶೇ. 29 ರಷ್ಟು ಏರಿಕೆ ಕಂಡಿವೆ. ವಾಸ್ತವವಾಗಿ, ಜೂನ್ 24, 2024 ರಂದು, ಪತಂಜಲಿ ಷೇರುಗಳು 52 ವಾರಗಳ ಕನಿಷ್ಠ ಮಟ್ಟವಾದ ರೂ. 1,302.2 ಕ್ಕೆ ತಲುಪಿದವು. ಅಂದಿನಿಂದ, ಕಂಪನಿಯ ಷೇರುಗಳು ರೂ. 373.3 ರಷ್ಟು ಏರಿಕೆ ಕಂಡಿವೆ. ಜೂನ್ 11 ರಂದು ಬಿಎಸ್‌ಇಯಲ್ಲಿ ಕಂಪನಿಯ ಷೇರುಗಳು ರೂ. 1,675.50 ಕ್ಕೆ ಮುಕ್ತಾಯಗೊಂಡಿವೆ. ಇದರರ್ಥ ಕಂಪನಿಯ ಷೇರುಗಳು ಕಳೆದ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ ಸುಮಾರು ಶೇ. 289 ರಷ್ಟು ಲಾಭವನ್ನು ನೀಡಿವೆ. ತಜ್ಞರ ಪ್ರಕಾರ, ಮುಂಬರುವ ದಿನಗಳಲ್ಲಿ ಕಂಪನಿಯ ಷೇರುಗಳು ಉತ್ತಮ ಏರಿಕೆ ಕಾಣುವ ಸಾಧ್ಯತೆಯಿದೆ.

ಇದನ್ನೂ ಓದಿ: ರೀಟೇಲ್ ಮಾತ್ರವಲ್ಲ, ಹೋಲ್​​ಸೇಲ್ ಬ್ಯುಸಿನೆಸ್​​ನಲ್ಲೂ ಇವೆ ಈ ಪತಂಜಲಿ ಉತ್ಪನ್ನಗಳು

ಪತಂಜಲಿ ಫೂಡ್ಸ್​ನ ಹೂಡಿಕೆದಾರರಿಗೆ ತೃಪ್ತಿ

ಷೇರು ಮಾರುಕಟ್ಟೆಯಲ್ಲಿ ಪತಂಜಲಿ ಷೇರುಗಳ ಏರಿಕೆಯಿಂದಾಗಿ, ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಿದವರು ಬಹಳಷ್ಟು ಗಳಿಸಿದ್ದಾರೆ. ಒಂದು ವರ್ಷದ ಹಿಂದೆ ಯಾರಾದರೂ ಕಂಪನಿಯ ಷೇರುಗಳಲ್ಲಿ ಸುಮಾರು 1 ಲಕ್ಷ ರೂಪಾಯಿಗಳನ್ನು 1,302.2 ರೂ. ದರದಲ್ಲಿ ಹೂಡಿಕೆ ಮಾಡಿದ್ದರೆ, ಆಗ ಸುಮಾರು 77 ಷೇರುಗಳನ್ನು ಪಡೆಯಬಹುದಿತ್ತು. ಪ್ರಸ್ತುತ ಈ 77 ಷೇರುಗಳ ಮೌಲ್ಯ 1.29 ಲಕ್ಷ ರೂ ಆಗುತ್ತದೆ. ಅಂದರೆ, ಹೂಡಿಕೆದಾರರು ಒಂದು ಲಕ್ಷ ರೂ ಹೂಡಿಕೆಯಿಂದ ಸುಮಾರು 29 ಸಾವಿರ ರೂಪಾಯಿಗಳ ಲಾಭ ಗಳಿಸಿದಂತಾಗುತ್ತದೆ.

ಕಂಪನಿಯ ವ್ಯಾಲ್ಯುಯೇಶನ್ ಹೆಚ್ಚಳ

ಕಂಪನಿಯ ವ್ಯಾಲ್ಯುಯೇಶನ್ ಅಥವಾ ಮೌಲ್ಯದ ಬಗ್ಗೆ ಹೇಳುವುದಾದರೆ, ಅದು ಕೂಡ ಬಹಳಷ್ಟು ಹೆಚ್ಚಾಗಿದೆ. ಕಳೆದ ವರ್ಷ ಕಂಪನಿಯ ಷೇರುಗಳು 52 ವಾರಗಳ ಕನಿಷ್ಠ ಮಟ್ಟದಲ್ಲಿದ್ದಾಗ, ಕಂಪನಿಯ ಮಾರುಕಟ್ಟೆ ಬಂಡವಾಳವು 47,205.56 ಕೋಟಿ ರೂ.ಗೆ ಇಳಿದಿತ್ತು. ಅಂದಿನಿಂದ, ಕಂಪನಿಯ ಮಾರ್ಕೆಟ್ ಕ್ಯಾಪಿಟಲ್ 13,532.37 ಕೋಟಿ ರೂಗಳಷ್ಟು ಹೆಚ್ಚಳವನ್ನು ಕಂಡಿದೆ. ಪ್ರಸ್ತುತ, ಕಂಪನಿಯ ಮೌಲ್ಯವು 60,737.93 ಕೋಟಿ ರೂ ತಲುಪಿದೆ.

ಇದನ್ನೂ ಓದಿ: ಹಠಯೋಗ, ರಾಜಯೋಗ ಇನ್ನೂ ಹಲವು ಯೋಗಪ್ರಾಕಾರಗಳ ಬಗ್ಗೆ ಬಾಬಾ ರಾಮದೇವ್​ರೀಂದ ತಿಳಿಯಿರಿ

ಪತಂಜಲಿ ಷೇರು ಬೆಲೆ ಮತ್ತಷ್ಟು ವೇಗದಲ್ಲಿ ಹೆಚ್ಚುವ ನಿರೀಕ್ಷೆ

ಪತಂಜಲಿ ಫೂಡ್ಸ್​​ನ ಷೇರು ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಕಂಪನಿಯ ಲಾಭವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣ. ಕಳೆದ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ, ಕಂಪನಿಯ ಲಾಭದಲ್ಲಿ ಅಗಾಧ ಜಿಗಿತ ಕಂಡುಬಂದಿದೆ. ಪತಂಜಲಿ ಫುಡ್ಸ್ ಲಿಮಿಟೆಡ್ ಮಾರ್ಚ್ 2025 ರ ಕ್ವಾರ್ಟರ್​​ನಲ್ಲಿ 358.53 ಕೋಟಿ ರೂ ಲಾಭ ಕಂಡಿದೆ. ವರ್ಷದ ಹಿಂದಿನ ಇದೇ ಕ್ವಾರ್ಟರ್​​ನಲ್ಲಿ ಅದು ಗಳಿಸಿದ ನಿವ್ವಳ ಲಾಭ 206.31 ಕೋಟಿ ರೂ. ಅಂದರೆ, ಈ ಬಾರಿ ಪತಂಜಲಿ ಫುಡ್ಸ್​​ನ ನಿವ್ವಳ ಲಾಭದಲ್ಲಿ ಶೇ. 74 ರಷ್ಟು ಏರಿಕೆ ಕಂಡಿದೆ.

ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ (ಮಾರ್ಚ್ ಕ್ವಾರ್ಟರ್) ಒಟ್ಟು ಆದಾಯವು 9,744.73 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಕಂಪನಿಯು ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 8,348.02 ಕೋಟಿ ರೂ.ಗಳಷ್ಟಿತ್ತು. ಈ ಆದಾಯದಲ್ಲೂ ಕೂಡ ಗಮನಾರ್ಹ ಹೆಚ್ಚಳವಾಗಿದೆ. ಇದು ಕಂಪನಿಯ ಆರೋಗ್ಯದ ಸಂಕೇತವಾಗಿದ್ದು, ಷೇರುಗಳಿಗೆ ಮುಂದಿನ ದಿನಗಳಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಂತೂ ದಟ್ಟವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ