ನವದೆಹಲಿ, ಸೆಪ್ಟೆಂಬರ್ 25: ಟೆಲಿಕಾಂ ದರಗಳು ಇತ್ತೀಚೆಗೆ ಬಹಳ ದುಬಾರಿಯಾಗಿವೆ. ಅದರಲ್ಲೂ ಏರ್ಟೆಲ್, ಜಿಯೋ, ವೊಡಾಫೋನ್ ಬಳಕೆದಾರರಿಗೆ ಕೈಸುಟ್ಟುಹೋಗುವಷ್ಟು ಬೆಲೆಗಳಿವೆ. ಇದೇ ಹೊತ್ತಲ್ಲಿ ಹೆಚ್ಚಿನ ಗ್ರಾಹಕರಿಗೆ ತಿಳಿಯದ ಹಣ ಉಳಿಸುವ ಟ್ರಿಕ್ಸ್ ಇವೆ. ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ತಿಂಗಳಿಗೆ ಸಾವಿರ ರೂ ಹಣ ಗಳಿಸುವ ಅವಕಾಶ ಇದೆ. ಏರ್ಟೆಲ್ನ ಮೊಬೈಲ್, ಡಿಟಿಎಚ್, ವೈಫೈ ಇತ್ಯಾದಿ ರೀಚಾರ್ಜ್ಗೆ ಶೇ. 25ರಷ್ಟು ಕ್ಯಾಷ್ಬ್ಯಾಕ್ ಸಿಗುತ್ತದೆ. ಎಲೆಕ್ಟ್ರಿಸಿಟಿ ಬಿಲ್, ನೀರಿನ ಬಿಲ್ ಕಟ್ಟಿದರೆ ಕ್ಯಾಷ್ಬ್ಯಾಕ್ ಸಿಗುತ್ತದೆ. ಸ್ವಿಗ್ಗಿ, ಜೊಮಾಟೊ ಇತ್ಯಾದಿಗೆ ಹಣ ಪಾವತಿಸಿದರೂ ಕ್ಯಾಷ್ಬ್ಯಾಕ್ ಸಿಗುತ್ತದೆ. ಇತರ ಯಾವುದೇ ಪಾವತಿಗೂ ಕ್ಯಾಷ್ಬ್ಯಾಕ್ ಆಫರ್ ಇರುತ್ತದೆ.
ಇದು ಯಾರಿಗಾದರೂ ಅಚ್ಚರಿ ಆಗಬಹುದು. ನೀವು ಭಾವಿಸಿದಂತೆ ಕೆಲ ಷರತ್ತುಗಳೂ ಇಲ್ಲಿ ಅಡಕವಾಗಿವೆ. ಈ ಷರತ್ತಿನ ನಡುವೆಯೂ ಕ್ಯಾಷ್ಬ್ಯಾಕ್ ಆಫರ್ ಮಹತ್ವದ್ದೇ. ನೀವು ಏರ್ಟೆಲ್ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರಬೇಕು. ಈ ಕ್ರೆಡಿಟ್ ಕಾರ್ಡ್ ಇದ್ದು ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ಸಾಕು ಭರಪೂರ ಕ್ಯಾಷ್ಬ್ಯಾಕ್ ಮತ್ತಿತರ ಆಫರ್ ಪಡೆಯಬಹುದು.
ಇದನ್ನೂ ಓದಿ: ವೈಯಕ್ತಿಕ ಸಾಲಕ್ಕೆ ಯಾಕೆ ಬಡ್ಡಿ ಎಷ್ಟು? ತೀರಾ ಹೆಚ್ಚು ಮೊತ್ತದ ಸಾಲ ಯಾಕೆ ಸಿಗಲ್ಲ?
ಏರ್ಟೆಲ್ ಥ್ಯಾಂಕ್ಸ್ ಆ್ಯಪ್ನಲ್ಲಿ ನೀವು ಏರ್ಟೆಲ್ ಎಕ್ಸಿಸ್ ಕ್ರೆಡಿಟ್ ಕಾರ್ಡ್ ಮೂಲಕ ವಿವಿಧ ಸೇವೆಗಳಿಗೆ ಹಣ ಪಾವತಿಸಿದರೆ ಕ್ಯಾಷ್ಬ್ಯಾಕ್, ಕಾಂಪ್ಲಿಮೆಂಟರಿ ವೋಚರ್ಸ್ ಇತ್ಯಾದಿ ಪಡೆಯಬಹುದು. ಯಾವ್ಯಾವುದಕ್ಕೆ ಎಷ್ಟು ಕ್ಯಾಷ್ಬ್ಯಾಕ್ ಸಿಗುತ್ತೆ ಎಂಬುದರ ವಿವರ ಈ ಕೆಳಗಿನ ಪಟ್ಟಿಯಲ್ಲಿದೆ ನೋಡಿ:
ಇಲ್ಲಿ ನೀವು ಏರ್ಟೆಲ್ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಡೆದು 30 ದಿನದೊಳಗೆ ಆ್ಯಕ್ಟಿವೇಶನ್ ಮಾಡಿದರೆ 500 ರೂ ಮೊತ್ತದ ಅಮೇಜಾನ್ ವೋಚರ್ ಅನ್ನು ಗಿಫ್ಟ್ ಆಗಿ ನೀಡಲಾಗುತ್ತದೆ. ನೀವು ಅಮೇಜಾನ್ನಲ್ಲಿ ಮಾಡುವ ಖರೀದಿಗೆ ಈ ವೋಚರ್ ಮೂಲಕ 500 ರೂ ಡಿಸ್ಕೌಂಟ್ ಪಡೆಯಬಹುದು.
ಇದನ್ನೂ ಓದಿ:ಎನ್ಪಿಎಸ್ ವಾತ್ಸಲ್ಯ ಅಕೌಂಟ್ ತೆರೆಯುವ ಮುನ್ನ ಸಾಧಕ, ಬಾಧಕಗಳೇನು ತಿಳಿದಿರಲಿ
ಏರ್ಪೋರ್ಟ್ ಲಾಂಜ್ ಆಫರ್ ಪಡೆಯಬೇಕಾದರೆ ಈ ಏರ್ಟೆಲ್ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನಿಂದ ಕಳೆದ 3 ತಿಂಗಳಲ್ಲಿ ಕನಿಷ್ಠ 50,000 ರೂ ಮೊತ್ತದ ವಹಿವಾಟು ನಡೆಸಿರಬೇಕು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:38 am, Wed, 25 September 24