ಐಟಿಆರ್​​​ನಲ್ಲಿ ತಪ್ಪು ಮಾಹಿತಿ ಕೊಟ್ರೆ ಸಿಕ್ಕಿಬೀಳ್ತೀರಿ; ಐಟಿ ಇಲಾಖೆ ಬಳಿ ಇವೆ ಹೊಸ ಎಐ ಟೂಲ್ಸ್

ಹಳೆಯ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ಮರುಪಾವತಿಯನ್ನು ತಪ್ಪಾಗಿ ಕ್ಲೈಮ್ ಮಾಡುವುದರಿಂದ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ. AI ಸಹಾಯದಿಂದ ತಪ್ಪುಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಫಾರ್ಮ್ 12BB ಅನ್ನು ಸರಿಯಾಗಿ ಭರ್ತಿ ಮಾಡುವುದು ಮತ್ತು ಎಲ್ಲಾ ಡಿಡಕ್ಷನ್‌ಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸುವುದು ಮುಖ್ಯ. ತಪ್ಪು ಕ್ಲೈಮ್‌ಗಳಿಗೆ ದಂಡ ಮತ್ತು ಜೈಲು ಶಿಕ್ಷೆಯೂ ಇರಬಹುದು. ಪ್ರಾಮಾಣಿಕವಾಗಿ ಐಟಿಆರ್ ಸಲ್ಲಿಸುವುದು ಅತ್ಯಗತ್ಯ.

ಐಟಿಆರ್​​​ನಲ್ಲಿ ತಪ್ಪು ಮಾಹಿತಿ ಕೊಟ್ರೆ ಸಿಕ್ಕಿಬೀಳ್ತೀರಿ; ಐಟಿ ಇಲಾಖೆ ಬಳಿ ಇವೆ ಹೊಸ ಎಐ ಟೂಲ್ಸ್
ಐಟಿಆರ್

Updated on: Apr 25, 2025 | 4:42 PM

Beware of Penalties for wrong ITR filing: ನೀವು ಹಳೆಯ ತೆರಿಗೆ ಪದ್ಧತಿಯಲ್ಲಿ (Old  tax regime) ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುತ್ತಿದ್ದರೆ ಮತ್ತು ತೆರಿಗೆ ಮರುಪಾವತಿಯನ್ನು ತಪ್ಪಾಗಿ ಕ್ಲೈಮ್ ಮಾಡುತ್ತಿದ್ದರೆ, ಜಾಗರೂಕರಾಗಿರಿ. ಇಂಥ ಪ್ರಕರಣ ಬಗ್ಗೆ ಆದಾಯ ತೆರಿಗೆ ಇಲಾಖೆ ಎಚ್ಚರದಿಂದ ಕಣ್ಣಿಟ್ಟಿದೆ. ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ. ಇಲಾಖೆಯು ಈಗ ಲಭ್ಯ ಇರುವ ಎಐ ಟೂಲ್​​​ಗಳನ್ನು ಬಳಸಿಕೊಂಡು, ಕಾನೂನು ಕಣ್ಣಿಗೆ ಮಣ್ಣೆರಚುವವರನ್ನು ಪತ್ತೆ ಮಾಡಲು ಹೊರಟಿದೆ. ಐಟಿ ರಿಟರ್ನ್ಸ್ ಸಲ್ಲಿಸುವ ವೇಳೆ ರೀಫಂಡ್ ಆಸೆಗೋಸ್ಕರ ತಪ್ಪಾದ ಮಾಹಿತಿ ನೀಡುವುದು ಅಕ್ರಮ ಮಾತ್ರವಲ್ಲ, ಶೇ. 200ರಷ್ಟು ಪೆನಾಲ್ಟಿ ಹಾಗೂ ಬಡ್ಡಿ ವಿಧಿಸಲಾಗುತ್ತದೆ. ಅಷ್ಟೇ ಅಲ್ಲ, ಜೈಲು ಶಿಕ್ಷೆಯೂ ಆಗಬಹುದು.

ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಒಂದು ಅವೇರ್ನೆಸ್ ಬುಕ್​​ಲೆಟ್ ಬಿಡುಗಡೆ ಮಾಡಿತ್ತು. ಕೆಲ ಸಂಬಳದ ನೌಕರರು ಹಳೆಯ ತೆರಿಗೆ ಪದ್ಧತಿಯಲ್ಲಿ ತಪ್ಪು ಡಿಡಕ್ಷನ್ಸ್ ಮತ್ತು ಟ್ಯಾಕ್ಸ್ ಎಕ್ಸೆಂಪ್ಷನ್​​ಗಳನ್ನು ತೋರಿಸುತ್ತಿದ್ದಾರೆ. ಅದಕ್ಕೆ ಯಾವ ಡಾಕ್ಯುಮೆಂಟ್ ಪ್ರೂಫ್ ಅನ್ನು ಸಲ್ಲಿಸಲಾಗುತ್ತಿಲ್ಲ. ಈ ಮೂಲಕ ಅಕ್ರಮವಾಗಿ ರೀಫಂಡ್​​ಗಳನ್ನು ಪಡೆಯಲಾಗುತ್ತಿದೆ ಎಂದು ಈ ಬುಕ್​ಲೆಟ್​​ನಲ್ಲಿ ಹೇಳಲಾಗಿದೆ.

ಫಾರ್ಮ್ 12BB ಅನ್ನು ಹುಷಾರಾಗಿ ಭರ್ತಿ ಮಾಡಿ

ಹಳೆಯ ತೆರಿಗೆ ಪದ್ಧತಿಯಲ್ಲಿ, ಫಾರ್ಮ್ 12BB ಮೂಲಕ ಉದ್ಯೋಗಿಯಿಂದ ಡಿಡಕ್ಷನ್ ಮತ್ತು ಎಕ್ಸೆಂಪ್ಷನ್ ಮಾಹಿತಿಯನ್ನು ಕಂಪನಿಗಳು ಪಡೆಯುತ್ತವೆ. ಆ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇದರ ಆಧಾರದ ಮೇಲೆ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಬಳದಿಂದ ಟಿಡಿಎಸ್ ಕಡಿತಗೊಳಿಸುತ್ತವೆ. ಆದರೆ, ಕೆಲ ಉದ್ಯೋಗಿಗಳು ಐಟಿ ರಿಟರ್ನ್ಸ್ ಸಲ್ಲಿಸುವಾಗ ಹೆಚ್ಚುವರಿ ಡಿಡಕ್ಷನ್ ತೋರಿಸಿ, ಹೆಚ್ಚಿನ ರೀಫಂಡ್ ಪಡೆಯಲು ಯತ್ನಿಸುತ್ತಾರೆ ಎಂಬುದು ಐಟಿ ಇಲಾಖೆಯ ಆರೋಪ.

ಇದನ್ನೂ ಓದಿ
ಅಕ್ಷಯ ತೃತೀಯಕ್ಕೆ ಚಿನ್ನದ ಮೇಲೆ ಭರ್ಜರಿ ಆಫರ್ಸ್
ಈ ಎನ್​​ಬಿಎಫ್​​ಸಿ ಡೆಪಾಸಿಟ್ ಪ್ಲಾನ್​​ನಲ್ಲಿ ಶೇ. 8.4 ಬಡ್ಡಿ
ಐಷಾರಾಮಿ ವಸ್ತುಗಳಿಗೆ ಟಿಸಿಎಸ್ ತೆರಿಗೆ: ಅಧಿಸೂಚನೆ ಪ್ರಕಟ
ಸಾಲ ಉಪಯೋಗಿಸಿ ಶ್ರೀಮಂತರಾಗೋದು ಹೇಗೆ?

ಇದನ್ನೂ ಓದಿ: ಶೇ. 8.4 ಬಡ್ಡಿ ನೀಡುವ ಎಫ್​​ಡಿ ಪ್ಲಾನ್; ಶ್ರೀರಾಮ್ ಫೈನಾನ್ಸ್​​ನಲ್ಲಿ ಭರ್ಜರಿ ಆಫರ್

ಐಟಿಆರ್​​ನಲ್ಲಿ ತಪ್ಪು ಮಾಹಿತಿ ನೀಡಿದರೆ ಏನಾಗುತ್ತದೆ?

ಐಟಿ ರಿಟರ್ನ್ ವೇಳೆ ತಪ್ಪು ರೀಫಂಡ್ ಕ್ಲೇಮ್ ಸಲ್ಲಿಸುವುದರಿಂದ ಹಲವು ಗಂಭೀರ ಪರಿಣಾಮಗಳು ಉಂಟಾಗಬಹುದು:

  • ಐಟಿಆರ್​​​ಗಳ ಸ್ಕ್ರೂಟಿನಿಯ ವೇಳೆ ಇಂಥ ಪ್ರಕರಣಗಳನ್ನು ಪತ್ತೆ ಮಾಡಬಹುದು.
  • ಟ್ಯಾಕ್ಸ್ ಡಿಡಕ್ಷನ್​​ಗೆ ಸೂಕ್ತ ದಾಖಲಾತಿ ಇಲ್ಲದಿದ್ದರೆ ಕ್ಲೇಮ್ ತಿರಸ್ಕೃತಗೊಳ್ಳಬಹುದು.
  • ಸೆಕ್ಷನ್ 270A ಅಡಿಯಲ್ಲಿ ಶೇ. 200 ದಂಡ ವಿಧಿಸಬಹುದು.
  • 25 ಲಕ್ಷ ರೂ.ಗಿಂತ ಹೆಚ್ಚು ತೆರಿಗೆ ವಂಚನೆ ಮಾಡಿದರೆ 6 ತಿಂಗಳಿಂದ 7 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು.
  • ಇತರ ಪ್ರಕರಣಗಳಲ್ಲಿ ಶಿಕ್ಷೆಯು 3 ತಿಂಗಳಿಂದ 2 ವರ್ಷಗಳವರೆಗೆ ಇರಬಹುದು.

AI ಸಹಾಯದಿಂದ ಟ್ರ್ಯಾಕಿಂಗ್

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಡಾಟಾ ಅನಾಲಿಟಿಕ್ಸ್​​ನಂತಹ ಆಧುನಿಕ ಪರಿಕರಗಳನ್ನು ಬಳಸಿ ತಪ್ಪು ಐಟಿ ರೀಫಂಡ್ ಕ್ಲೇಮ್​​ಗಳನ್ನು ಗುರುತಿಸಲಾಗುತ್ತಿದೆ. ಇದರಿಂದ ವಂಚನೆಗಳನ್ನು ಪತ್ತೆ ಮಾಡುವುದು ಸುಲಭವಾಗಿದೆ ಎಂದು ಐಟಿ ಇಲಾಖೆ ಹೇಳಿದೆ.

ಇದನ್ನೂ ಓದಿ: ಲಕ್ಷುರಿ ವಸ್ತುಗಳಿಗೆ ಟಿಸಿಎಸ್: ಅಧಿಸೂಚನೆ ಪ್ರಕಟ; ಇಲ್ಲಿದೆ ಐಷಾರಾಮಿ ವಸ್ತುಗಳ ಪಟ್ಟಿ

ಉದ್ಯೋಗಿಗಳು ಏನು ಮಾಡಬೇಕು?

ಉದ್ಯೋಗಿಗಳು ಐಟಿಆರ್ ಸಲ್ಲಿಸುವಾಗ ಪ್ರಮಾಣಿಕವಾಗಿ ನೈಜ ಮಾಹಿತಿ ಸಲ್ಲಿಸಬೇಕು. ಯಾವುದೇ ಡಿಡಕ್ಷನ್​​ಗಳಿಗೆ ಕ್ಲೇಮ್ ಮಾಡುತ್ತಿದ್ದರೆ, ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಜೊತೆಗೆ ಸೇರಿಸಬೇಕಾಗುತ್ತದೆ. ಉದಾಹರಣೆಗೆ, ನೀವು ಒಂದೂವರೆ ಲಕ್ಷ ರೂವರೆಗೆ ಡಿಡಕ್ಷನ್ ನೀಡಬಲ್ಲ ಪಿಪಿಎಫ್ ಇತ್ಯಾದಿಯಲ್ಲಿ ಹೂಡಿಕೆ ಮಾಡಿದ್ದರೆ, ಅದರ ದಾಖಲೆಯನ್ನು ನೀಡಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Fri, 25 April 25